AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2 ತಿಂಗಳಿನಿಂದ ಬೆಂಗಳೂರು ಕಸ್ಟಮ್ಸ್​​ನಲ್ಲಿ ಸಿಲುಕಿದ್ದ ರಿಕಿ ಕೇಜ್ ಗ್ರ್ಯಾಮಿ ಪದಕ; ಒಂದೇ ಒಂದು ಟ್ವೀಟ್​ನಿಂದ ಸಮಸ್ಯೆಗೆ ಪರಿಹಾರ

Bengaluru Customs: ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ರಿಕಿ ಕೇಜ್ ಅವರ ಗ್ರ್ಯಾಮಿ ಪದಕ ಕಳೆದ ಎರಡು ತಿಂಗಳಿನಿಂದ ಬೆಂಗಳೂರು ಕಸ್ಟಮ್ಸ್​​ನಲ್ಲೇ ಉಳಿದಿತ್ತು. ಇದಕ್ಕೆ ಒಂದೇ ಒಂದು ಟ್ವೀಟ್ ಮೂಲಕ ಪರಿಹಾರ ಲಭಿಸಿದೆ.

2 ತಿಂಗಳಿನಿಂದ ಬೆಂಗಳೂರು ಕಸ್ಟಮ್ಸ್​​ನಲ್ಲಿ ಸಿಲುಕಿದ್ದ ರಿಕಿ ಕೇಜ್ ಗ್ರ್ಯಾಮಿ ಪದಕ; ಒಂದೇ ಒಂದು ಟ್ವೀಟ್​ನಿಂದ ಸಮಸ್ಯೆಗೆ ಪರಿಹಾರ
ಪ್ರಧಾನಿ ಮೋದಿಯವರೊಂದಿಗೆ ರಿಕ್ಕಿ ಕೇಜ್ (ಸಂಗ್ರಹ ಚಿತ್ರ)
TV9 Web
| Updated By: shivaprasad.hs|

Updated on: Jun 07, 2022 | 3:52 PM

Share

ಖ್ಯಾತ ಸಂಗೀತ ನಿರ್ದೇಶಕ ರಿಕಿ ಕೇಜ್ (Ricky Kej) ಅವರ ಒಂದು ಟ್ವೀಟ್ ಅವರ ಸಮಸ್ಯೆಗೆ ಪರಿಹಾರ ದೊರಕಿಸಿದೆ. ಹೌದು, ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ರಿಕಿ ಕೇಜ್ ಅವರು ಈ ವರ್ಷ ಗೆದ್ದ ಪ್ರಶಸ್ತಿಯ ಪದಕವು 2 ತಿಂಗಳಿಗೂ ಹೆಚ್ಚು ಸಮಯದಿಂದ ಬೆಂಗಳೂರಿನ ಕಸ್ಟಮ್ಸ್​ ಇಲಾಖೆಯಲ್ಲಿ ಸಿಲುಕಿಕೊಂಡಿತ್ತು. ಅದು ತಮಗಿನ್ನೂ ತಲುಪಿಲ್ಲ ಎಂದು ಅವರು ಇಂದು (ಜೂ.7) ಟ್ವೀಟ್​ ಮಾಡಿದ್ದರು. ರಿಕಿ ಕೇಜ್​ ಟ್ವೀಟ್ ಮಾಡಿದ ಬೆನ್ನಲ್ಲೇ ಕೆಲವೇ ಗಂಟೆಗಳ ಅವಧಿಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಈ ಬಗ್ಗೆ ರಿಕಿ ಕೇಜ್ ಮತ್ತೊಂದು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಇತ್ತೀಚಿನ ಟ್ವೀಟ್​ನಲ್ಲಿ ರಿಕಿ ಕೇಜ್ ಅವರು ‘‘ಕಸ್ಟಮ್ಸ್​ ನಿಯಮಗಳ ಅನುಸಾರ ಇದೀಗ ಎಲ್ಲ ಪ್ರಕ್ರಿಯೆ ಮುಗಿದಿದ್ದು, ನಾಳೆ ಪದಕ ನನ್ನ ಕೈಸೇರಲಿದೆ. ಕಸ್ಟಮ್ಸ್​​ ಅಧಿಕಾರಿಗಳ ನೆರವಿಲ್ಲದೇ ಇದು ಸಾಧ್ಯವಾಗುತ್ತಿರಲಿಲ್ಲ’’ ಎಂದು ಅವರು ಧನ್ಯವಾದ ಹೇಳಿದ್ದಾರೆ.

ಇಂದು ಮುಂಜಾನೆ ರಿಕಿ ಕೇಜ್ ಅವರು ಆದಷ್ಟು ಬೇಗ ಕಸ್ಟಮ್ಸ್​ ಪ್ರಕ್ರಿಯೆಯನ್ನು ಪೂರೈಸುವಂತೆ ಟ್ವೀಟ್ ಮೂಲಕ ಮನವಿ ಮಾಡಿದ್ದರು. ಅದರಲ್ಲಿ ಅವರು ‘‘ಇತ್ತೀಚೆಗೆ ನನಗೆ ಗ್ರ್ಯಾಮಿ ಪ್ರಶಸ್ತಿ ಲಭಿಸಿತ್ತು. ಆದರೆ ಮೆಡಲ್​ 2 ತಿಂಗಳ ಕಾಲದಿಂದ ಬೆಂಗಳೂರು ಕಸ್ಟಮ್ಸ್​​​ನಲ್ಲಿದೆ. ಸಂಬಂಧಪಟ್ಟವರು ಪ್ರತಿಕ್ರಿಯೆ ನೀಡುತ್ತಿಲ್ಲ. ನೀವು ನನಗೆ ಸಹಾಯ ಮಾಡುತ್ತೀರಾ?’’ ಎಂದು ಅವರು ಸಂಬಂಧಪಟ್ಟ ಸಂಸ್ಥೆಗಳನ್ನು ಟ್ಯಾಗ್ ಮಾಡಿದ್ದರು.

ಇದನ್ನೂ ಓದಿ
Image
Vikram Box Office Collection: ಕರ್ನಾಟಕ ಬಾಕ್ಸ್ ಆಫೀಸ್​ನಲ್ಲಿ ದಾಖಲೆ ಬರೆದ ತಮಿಳು ಸಿನಿಮಾ ‘ವಿಕ್ರಮ್​’
Image
ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾ ನೋಡಿ ಮೆಚ್ಚಿಕೊಂಡ ನಟಿ ರಮ್ಯಾ ಹೇಳಿದ್ದೇನು?
Image
ಬಡ ಮಕ್ಕಳ ಕಲಿಕೆಗಾಗಿ ‘ಕೇರ್ ಮೋರ್’ ಫೌಂಡೇಷನ್​ನಿಂದ ವಿನೂತನ ಅಭಿಯಾನ; ಮರು ಬಳಕೆ ಮರು ಉಪಯೋಗದಡಿ ನೆರವಾಗುತ್ತಿದೆ ಸಂಸ್ಥೆ
Image
Meghana Raj: ಚಿರು ಅಗಲಿ ಎರಡು ವರ್ಷ; ಭಾವನಾತ್ಮಕ ಪೋಸ್ಟ್ ಮೂಲಕ ಪತಿಯನ್ನು ಸ್ಮರಿಸಿದ ಮೇಘನಾ​

ರಿಕಿ ಕೇಜ್ ಟ್ವೀಟ್ ಬೆನ್ನಲ್ಲೇ ಕೆಲ ನೆಟ್ಟಿಗರು ಕಸ್ಟಮ್ಸ್​ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ನಂತರ ಸ್ಪಷ್ಟನೆ ನೀಡಿರುವ ರಿಕಿ ಕೇಜ್, ಅವರಿಗೆ ಮೆಡಲ್ ಇರುವುದು ತಿಳಿದಿಲ್ಲ. ಹಾಗೆಯೇ ತಮ್ಮ ನಿಯಮಗಳನ್ನು ಅವರು ಅನುಸರಿಸುತ್ತಿದ್ದಾರೆ. ಆದರೆ ಆದಷ್ಟು ಶೀಘ್ರವಾಗಿ ಅದು ತಮ್ಮ ಕೈಸೇರಲಿ ಎಂದು ಸ್ಪಷ್ಟನೆ ನೀಡಿದ್ದರು. ಈ ಟ್ವೀಟ್​ಗಳ ಬೆನ್ನಲ್ಲೇ ಅವರ ಸಮಸ್ಯೆಯನ್ನು ಪರಿಹರಿಸಲಾಗಿದೆ.

ರಿಕ್ಕಿ ಕೇಜ್ ಹಂಚಿಕೊಂಡ ಟ್ವೀಟ್ ಇಲ್ಲಿದೆ:

ರಿಕಿ ಕೇಜ್ ಅವರು ತಮ್ಮ ಆಲ್ಬಂ ‘ಡಿವೈನ್ ಟೈಡ್ಸ್​​’ಗಾಗಿ ಗ್ರ್ಯಾಮಿ ಪ್ರಶಸ್ತಿಯನ್ನು ಸ್ಟೆವರ್ಟ್​ ಕೋಪ್​ಲ್ಯಾಂಡ್​ ಅವರೊಂದಿಗೆ ಹಂಚಿಕೊಂಡಿದ್ದರು.

ಮತ್ತಷ್ಟು ಸಿನಿಮಾ ಸಂಬಂಧಿತ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು
ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ಫೋನ್ ರಿಸೀವ್ ಮಾಡುತ್ತಾರೆ: ಲಕ್ಷ್ಮಣ ಸವದಿ
ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ಫೋನ್ ರಿಸೀವ್ ಮಾಡುತ್ತಾರೆ: ಲಕ್ಷ್ಮಣ ಸವದಿ
ಕವಡೆ ಶಾಸ್ತ್ರವೇ ನಿಜವಾದರೆ ಕಾಂಗ್ರೆಸ್ ನಾಯಕರು ಆಗೇನು ಹೇಳುತ್ತಾರೆ? ಅಶೋಕ
ಕವಡೆ ಶಾಸ್ತ್ರವೇ ನಿಜವಾದರೆ ಕಾಂಗ್ರೆಸ್ ನಾಯಕರು ಆಗೇನು ಹೇಳುತ್ತಾರೆ? ಅಶೋಕ
ಗಣ್ಯರಿಗೆ ಖಾಸಗಿ ಆಸ್ಪತ್ರೆಗಳೇ ಯಾಕೆ? ಸರ್ಕಾರೀ ಆಸ್ಪತ್ರೆ ಯಾಕೆ ಬೇಡ?
ಗಣ್ಯರಿಗೆ ಖಾಸಗಿ ಆಸ್ಪತ್ರೆಗಳೇ ಯಾಕೆ? ಸರ್ಕಾರೀ ಆಸ್ಪತ್ರೆ ಯಾಕೆ ಬೇಡ?