Shocking Video: ರೈಲ್ವೆ ಹಳಿ ದಾಟುವಾಗ ವೇಗವಾಗಿ ಬಂದ ರೈಲು; 3 ಮಕ್ಕಳ ಪ್ರಾಣ ಉಳಿದಿದ್ದೇ ಅಚ್ಚರಿ!
Viral Video: ಚಿಕ್ಕ ಮಕ್ಕಳ ಗುಂಪು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಶಾಕಿಂಗ್ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಮೂವರು ಮಕ್ಕಳು ರೈಲ್ವೆ ಹಳಿಯನ್ನು ದಾಟುವಾಗ ರೈಲು ಸಂಪೂರ್ಣ ವೇಗವಾಗಿ ಬಂದಿದ್ದರಿಂದ ಆ ಮೂವರ ಪ್ರಾಣಪಕ್ಷಿಯೂ ಇನ್ನೇನು ಹಾರಿಹೋಗಬೇಕಿತ್ತು. ಆದರೆ, ಅದೃಷ್ಟವಶಾತ್ ಅವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ರೈಲ್ವೆ ಹಳಿ ದಾಟುತ್ತಿದ್ದ ಮೂವರು ಮಕ್ಕಳು ರೈಲಿನ ಅಡಿ ಸಿಲುಕಿ ಸಾಯಬೇಕಾಗಿತ್ತು. ಆದರೆ, ಅಷ್ಟರಲ್ಲಿ ಅವರು ಪಕ್ಕದ ಹಳಿಯ ಕಡೆಗೆ ಓಡಿಹೋಗಿದ್ದರಿಂದ ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾಗಿದ್ದಾರೆ.
ಚಿಕ್ಕ ಮಕ್ಕಳ ಗುಂಪು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಶಾಕಿಂಗ್ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಮೇ 20ರಂದು ಟೊರೊಂಟೊದ ಹಂಬರ್ ನದಿಯ ರೈಲು ಸೇತುವೆಯ ಮೇಲೆ ಮಕ್ಕಳ ಗುಂಪೊಂದು ಅನುಮತಿಯಿಲ್ಲದೆ ನಡೆದುಕೊಂಡು ಹೋಗುವಾಗ ಈ ಘಟನೆ ಸಂಭವಿಸಿದೆ. ಈ ಘಟನೆಯ ಸಿಸಿಟಿವಿ ವಿಡಿಯೋದಲ್ಲಿ ಆ ಮೂವರು ಮಕ್ಕಳಲ್ಲಿ ಒಬ್ಬರು ಚಲಿಸುವ ರೈಲಿನ ಮುಂದೆ ಹಳಿಗಳನ್ನು ದಾಟುತ್ತಿರುವುದನ್ನು ನೋಡಬಹುದು.
⚠️ This heart-stopping video shows the dangers of walking on railways. Watch as young people come within a foot of serious injury or death while trespassing on a rail bridge in Toronto.
Talk to your kids about rail safety. Resources here: https://t.co/X5uS2ewqui #MetrolinxFYI pic.twitter.com/R8P6dmDFdW
— Metrolinx (@Metrolinx) May 30, 2022
ರೈಲ್ವೆ ಹಳಿ ದಾಟುತ್ತಿದ್ದ ಇನ್ನೊಬ್ಬ ಬಾಲಕ ಆ ರೈಲ್ವೆ ಹಳಿಯ ದಾರಿಯಿಂದ ಹೊರಬರಲು ಇತರ ರೈಲ್ವೆ ಹಳಿಗಳ ಕಡೆಗೆ ಓಡಿದ್ದಾರೆ. ಮೆಟ್ರೋಲಿಂಕ್ಸ್ ಎಂಬ ಖಾತೆಯಿಂದ ಟ್ವಿಟರ್‌ನಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಯಾವುದೇ ಅನುಮತಿ ಪಡೆಯದೆ ಆ ಮೂವರು ಮೇಲ್ಸೇತುವೆಯ ಮೇಲೆ ಪ್ರಯಾಣಿಸುತ್ತಿದ್ದಾಗ ಸೇತುವೆಯ ಅಂಚಿನಲ್ಲಿ ಬೇಲಿಗೆ ಅಂಟಿಕೊಂಡಿರುವ ಬಾಲಕನನ್ನು ಸಿಬ್ಬಂದಿ ಗಮನಿಸಿದ್ದರು. ಇನ್ನೂ ಇಬ್ಬರು ಯುವಕರು ರೈಲಿಗಿಂತ ಸ್ಪೀಡಾಗಿ ಹಳಿಯ ಮೇಲೆ ಓಡಲು ಪ್ರಯತ್ನಿಸಿರುವುದನ್ನು ಕೂಡ ವಿಡಿಯೋದಲ್ಲಿ ನೋಡಬಹುದು.
ಇದನ್ನೂ ಓದಿ: Viral Video: ಚಲಿಸುತ್ತಿರುವ ರೈಲು ಹತ್ತಲು ಹೋಗಿ ಜಾರಿ ಬಿದ್ದ ಮಹಿಳೆ; ಅಚ್ಚರಿಯಂತೆ ಬಚಾವಾದ ವಿಡಿಯೋ ವೈರಲ್
ಅದೃಷ್ಟವಶಾತ್, ಈ ಘಟನೆಯ ಪರಿಣಾಮವಾಗಿ ಯಾರಿಗೂ ಗಾಯವಾಗಿಲ್ಲ. ಆದರೆ, ರೈಲ್ವೆ ಅಧಿಕಾರಿಗಳು ಟ್ರೆಸ್‌ಪಾಸರ್‌ಗಳ ಗುರುತನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನೀವು ಈ ಯುವಕರನ್ನು ಗುರುತಿಸಿದರೆ ದಯವಿಟ್ಟು ನಮ್ಮೊಂದಿಗೆ ಸಂಪರ್ಕದಲ್ಲಿರಿ ಎಂದು ಮೆಟ್ರೋಲಿಂಕ್ಸ್ ಗ್ರಾಹಕ ರಕ್ಷಣಾ ಸೇವೆಗಳ ವ್ಯವಸ್ಥಾಪಕ ಸ್ಟೀವ್ ವೀರ್ ಹೇಳಿದ್ದಾರೆ. ಆಪರೇಷನ್ ಲೈಫ್ ಸೇವರ್ ಪ್ರಕಾರ, ರೈಲ್ವೆ ಕ್ರಾಸಿಂಗ್ ಘಟನೆಗಳಲ್ಲಿ ಪ್ರತಿ ವರ್ಷ 100ಕ್ಕೂ ಹೆಚ್ಚು ಕೆನಡಿಯನ್ನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಲವರು ಸಾವನ್ನಪ್ಪಿದ್ದಾರೆ.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ