International Sex Workers Day 2022: ಇವರು ಮಾರಿಕೊಂಡವರಾ ಅಥವಾ ಮಾರಾಟಗೊಂಡವರಾ?

ಅಂತಾರಾಷ್ಟ್ರೀಯ ಲೈಂಗಿಕ ಕಾರ್ಯಕರ್ತರ ದಿನ: ಮುಪ್ಪಾಗುವವರೆಗೂ ಲೈಂಗಿಕ ವೃತ್ತಿ, ಆನಂತರ ಭಿಕ್ಷಾಟನೆ. ಈ ರೂಢಿಯನ್ನು ಮುರಿಯಲು ಬೆಂಗಳೂರಿನ ‘ನಮ್ಮ ಮೆಟ್ರೋ’ ಸಂಸ್ಥೆಯವರ ಸಹಯೋಗದೊಂದಿಗೆ 250 ಲೈಂಗಿಕ ಕಾರ್ತಕರ್ತೆಯರ ಉದ್ಯೋಗಾವಕಾಶಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ...

International Sex Workers Day 2022: ಇವರು ಮಾರಿಕೊಂಡವರಾ ಅಥವಾ ಮಾರಾಟಗೊಂಡವರಾ?
ಲೇಖಕ ಡೇವಿಡ್ ಕುಮಾರ್ ಎ
Follow us
ಶ್ರೀದೇವಿ ಕಳಸದ
|

Updated on:Jun 02, 2022 | 1:19 PM

International Sex Workers Day 2022 : “ಹದಿನೈದನೇ ವಯಸ್ಸಿನಲ್ಲಿ ನನ್ನನ್ನು ನನ್ನ ಸೋದರಮಾವನಿಗೆ ಮದುವೆ ಮಾಡಿಕೊಟ್ಟರು. ಕೆಲವೇ ದಿನಗಳಲ್ಲಿ ಆತ ನನ್ನನ್ನು ಇಲ್ಲಿ ತಂದು ಆಂಟಿಯ (ಘರ್​ವಾಲಿ) ಬಳಿ ಬಿಟ್ಟು ಹೋದ” ಸುಮಾರು 40ರ ರೂಪಾ (ಹೆಸರು ಬದಲಾಯಿಸಿದೆ)ಳೊಂದಿಗೆ ಮಾತುಕತೆಗೆ ಇಳಿದಾಗ ನನ್ನೊಂದಿಗೆ ಮಂಗಳೂರು ವಿಶ್ವವಿದ್ಯಾಲಯದ ಸಂತ ಅಲೋಶಿಯಸ್ ಕಾಲೇಜಿನ ಎಂ.ಎಸ್.ಡಬ್ಲ್ಯೂ. ಸ್ನಾತಕ್ಕೋತ್ತರ ಪದವಿಯ ಇತರ ವಿದ್ಯಾರ್ಥಿಗಳೂ ಇದ್ದರು. ಪುಣೆ ಮತ್ತು ಮಹಾರಾಷ್ಟ್ರದ ಭಾಗಗಳಲ್ಲಿ ನಡೆಯುತ್ತಿದ್ದ ಸಾಮಾಜಿಕ ಕಾರ್ಯಗಳ ಅಧ್ಯಯನಕ್ಕಾಗಿ ನಾವು ತೆರಳಿದ್ದೆವು. ರೂಪಾಳನ್ನು ಖರೀದಿಸಿದ್ದ ಘರ್​ವಾಲಿ ಮೊದಲ ದಿನವೇ 25ಕ್ಕಿಂತ ಹೆಚ್ಚು ‘ಪ್ರಭಾವಿತ’ ಗಿರಾಕಿಗಳನ್ನು ಪಾಳೆ ಹಚ್ಚಿಸಿದ್ದಳು. ಅವತ್ತಿನಿಂದಲೇ ರೂಪಾಳ ಬಾಳು ವಿರೂಪ ಗೊಂಡಿದ್ದು, ಪುರುಷರ ರಾಕ್ಷಸತನಕ್ಕೆ ತನ್ನ ದೇಹ-ಮನಸ್ಸುಗಳನ್ನು ಒತ್ತಾಯಪೂರ್ವಕವಾಗಿ ಒತ್ತೆಇಟ್ಟಿದ್ದು, ಮನುಷ್ಯರೂಪದ ಕ್ರೂರ ಪ್ರಾಣಿಗಳ ಮೇಲೆ ಸಂಪೂರ್ಣ ನಂಬಿಕೆ ಕಳೆದುಕೊಂಡಿದ್ದು. ಡೇವಿಡ್ ಕುಮಾರ್. ಏ (David Kumar A)

ಕಡೆಗೊಂದು ದಿನ ಕೊಳೆತ ಬುಧುವಾರ ಪೇಟೆಯ ಮಧ್ಯದಲ್ಲಿಯೇ ‘ಸಹೇಲಿ’ (ಸಂಗಾತಿ) ಎಂಬ ಸಂಸ್ಥೆ ಕಟ್ಟಿ, ಮಾರಾಟಕ್ಕೆ ಒಳಗಾಗಿದ್ದ ಸಾವಿರಾರು ಹೆಣ್ಣು ಮಕ್ಕಳಿಗೆ ಆಸರೆಯಾಗಿಯೂ  ನಿಂತಿದ್ದು. ಆ ದಿನ ರೂಪಾ ಭಯ, ನಾಚಿಕೆಯಿಂದ ಕುಳಿತಿದ್ದ ನಮ್ಮನ್ನು ಕಂಡು ತನ್ನ ಆಶಾಭಾವದ ನಗುವಿನಿಂದಲೇ ಛೇಡಿಸಿ ಹುರಿದುಂಬಿಸಿದ್ದಳು. ಕ್ರಮೇಣ ನಮ್ಮೆಲ್ಲರ ಕಣ್ಣಿಗೆ ಆಕೆ ಅಸಾಮಾನ್ಯ ಮನುಷ್ಯ-ಚೇತನದ ರೂಪವಾಗಿ ಕಾಣತೊಡಗಿದಳು.

ಮುಂದೆ ಲೈಂಗಿಕ ಕಾರ್ಯಕರ್ತೆಯರಿಗೆ ಪರ್ಯಾಯ ಉದ್ಯೋಗವನ್ನು ಸೃಷ್ಟಿಸಲು ಕಾರ್ಯಕ್ರಮವನ್ನು ರೂಪಿಸುವ ಸಭೆಯಲ್ಲಿ ಸಿಕ್ಕ ಹಶ್ಮಿನಾ ಸಿಕ್ಕರು. “ನನ್ನದೊಂದು ಬಾಳಾ? ಮುದಿನಾಯಿಗೆ ಸಿಗುವ ಚಿಕ್ಕ ಗೌರವವೂ ನನಗೆ ಸಿಗುತ್ತಿಲ್ಲ, ನೆಮ್ಮದಿಯ ಸಾವನ್ನಾದರೂ ಆ ದೇವರು ನನಗೆ ಕೊಡಲಿ ” 68ರ ಹಶ್ಮಿನಾ ( ಹೆಸರು ಬದಲಾಗಿಸಿದೆ) ಸುಮಾರು 35 ವರ್ಷ ಬೆಂಗಳೂರಿನ ಎಂ. ಜಿ. ರಸ್ತೆಯ ‘ದಂಧೆಗಾರ್ತಿ’ಯಾಗಿದ್ದವರು. ಬೆಂಗಳೂರಿನ ಎಲ್ಲಾ ರೀತಿಯ ವಿಕೃತ ಮುಖಗಳನ್ನು ಖುದ್ದಾಗಿ ಕಂಡಿದ್ದಳು. ಸದ್ದ್ಯಕ್ಕೆ ಲೈಂಗಿಕ ಕಾರ್ಯಕರ್ತೆಯರಿಗೆ ಆರೋಗ್ಯದ ಅರಿವು ಹಾಗೂ ಸರ್ಕಾರಿ ಸೌಲಭ್ಯಗಳನ್ನೂ ಮುಟ್ಟಿಸುವ ನಿಟ್ಟಿನಲ್ಲಿ ಪಣ ತೊಟ್ಟಿದ್ದಾರೆ. ಅವರ ಮಾತು ಕೇಳುತ್ತಾ, ನಮ್ಮ ಮುಂದೆ ಇದ್ದ ಬಿಸಿ ಕಾಫಿ ತಣ್ಣಗಾಗಿತ್ತು. ಅದನ್ನು ಚೆಲ್ಲುತ್ತ “ನಾನೀಗ ತಣ್ಣಗಾದ ಕಾಫಿಯಂತೆ. ಗಿರಾಕಿಗಳು ನನ್ನ ಹತ್ತಿರವೂ ಸುಳಿಯರು” ಎಂದಿದ್ದರು.

ಇದನ್ನೂ ಓದಿ
Image
International Sex Workers Day 2022: ಅಂತಾರಾಷ್ಟ್ರೀಯ ಲೈಂಗಿಕ ಕಾರ್ಯಕರ್ತರ ದಿನದ ಇತಿಹಾಸ ಹಾಗೂ ಮಹತ್ವ
Image
ಲೈಂಗಿಕ ಕಾರ್ಯಕರ್ತರಿಗೂ ಆಧಾರ್ ಕಾರ್ಡ್ ನೀಡಲು ಸುಪ್ರೀಂ ಕೋರ್ಟ್​ ಆದೇಶ
Image
Transgender: ಹಾದಿಯೇ ತೋರಿದ ಹಾದಿ; ಆ ದಿನ ಸೆಕ್ಸ್​ ವರ್ಕ್​ಗೆ ಹೊರಟಾಗ…
Image
Transgender: ಹಾದಿಯೇ ತೋರಿದ ಹಾದಿ; ‘ನಾಲ್ಕನೇ ತರಗತಿಗೇ ನಾನು ಗಂಡು ಅಲ್ಲ ಎನ್ನಿಸಿತು’

ಇದನ್ನೂ ಓದಿ : New Book: ಶೆಲ್ಫಿಗೇರುವ ಮುನ್ನ; ಡಾ. ವಿನತೆ ಶರ್ಮ ಸಂಪಾದಿತ ‘ಭಾರತೀಯ ಮಹಿಳೆ ಮತ್ತು ವಿರಾಮ‘ ಕೃತಿ ಸದ್ಯದಲ್ಲೇ ಓದಿಗೆ

ಲಿಂಗ ಪರಿವರ್ತನೆಯಾದ ಮಂಗಳಮುಖಿಯರ ಪ್ರಮುಖ ಆದಾಯ ಮೂಲವೆಂದರೆ ಲೈಂಗಿಕ ವೃತ್ತಿ ತದನಂತರ ಭಿಕ್ಷಾಟನೆ; ಅರ್ಥಾತ್ ದೇಹ ಮುಪ್ಪಾಗುವವರೆಗೂ ಲೈಂಗಿಕ ವೃತ್ತಿ, ದೇಹ ವಯೋಸಹಜ ಮುಪ್ಪಿನತ್ತ ತಿರುಗಿದಾಗ ಭಿಕ್ಷಾಟನೆ. ಈ ರೂಢಿಯನ್ನು ಮುರಿಯಲು ಬೆಂಗಳೂರಿನ ನಮ್ಮ ಮೆಟ್ರೋ ಸಂಸ್ಥೆಯವರ ಸಹಯೋಗದೊಂದಿಗೆ ಸುಮಾರು 250 ಮಂಗಳಮುಖಿಯರಿಗೆ ತರಬೇತಿ ನೀಡಿ ಮೆಟ್ರೋ ಸ್ಟೇಷನ್​ಗಳಲ್ಲಿ ಉದ್ಯೋಗವನ್ನು ನೀಡುವ ಆಕಾಂಕ್ಷೆಯನ್ನು ಹೊಂದಲಾಗಿತ್ತು. ಆರಂಭದಲ್ಲಿ ಅವರು ತೋರಿದ ಉತ್ಸಾಹಕ್ಕೆ ಪಾರವೇ ಇರಲಿಲ್ಲ. ನಂತರ ಅವರಲ್ಲಿಯೇ ಭುಗಿಲೆದ್ದ ಭಿನ್ನಮತ, ಮುಖ್ಯವಾಹಿನಿ ಸಮಾಜದ ನಿಯಮ ಪಾಲನೆಯನ್ನು ಒಪ್ಪದ ಅವರ ಮನಸ್ಥಿತಿ, ಭೀತಿಯಿಂದಾಗಿ ಆರಂಭದಲ್ಲಿಯೇ ಈ ಯೋಜನೆ ಮುಗ್ಗರಿಸುವಂತಾಗಿ ನಮ್ಮ ಕನಸಿನ ಹೊಸ ಪ್ರಯಾಣ ಅಂತ್ಯಗೊಂಡಿತ್ತು.

ಪುರುಷ ಪ್ರಧಾನ ಸಮಾಜದ ಫಲಿತಾಂಶವಾದ ‘ವೇಶ್ಯಾವಾಟಿಕೆ’ ಅತೀ ಪುರಾತನ ಕಸುಬು ಎಂದು ಎಲ್ಲ ಸಮಾಜದ ದಾಖಲೆಗಳು ಸಾರಿ ಹೇಳುತ್ತವೆ. ಗಂಡು ತನ್ನ ಪ್ರಾಬಲ್ಯವನ್ನು ಮತ್ತೆಮತ್ತೆ ಪುನರುಚ್ಛರಿಸಲು ‘ಬಳಸುವ’ ಸಾಧನ ಲೈಂಗಿಕತೆಯೇ; ಅದು ಮದುವೆಯ ರೂಪದಲ್ಲಿ ಇರಬಹುದು, ಅತ್ಯಾಚಾರವಾಗಿರಬಹುದು ಅಥವಾ ಹಣಕೊಟ್ಟು (ಕೊಡದೆಯೂ) ಪಡೆಯುವ ಲೈಂಗಿಕ ಸುಖವೂ ಇರಬಹುದು. ಇದರಲ್ಲಿ ಲೈಂಗಿಕವ್ಯಸನಕ್ಕೆ ಒಳಗಾದ ಅಸಂಖ್ಯಾತ ಪುರುಷರ ತೆವಲು, ಹುಚ್ಚಾಟಕ್ಕೆ ಮಾರಲ್ಪಡುವ ದೇಹಗಳು ಯಾವತ್ತೂ ಬಡತನದ ವಿಷವರ್ತುಲಕ್ಕೆ ಸಿಕ್ಕ ಕೆಳವರ್ಗದ ಹೆಣ್ಣುಮಕ್ಕಳೇ ಆಗಿರುತ್ತಾರೆ.

ಇದನ್ನೂ ಓದಿ : ಹಾದಿಯೇ ತೋರಿದ ಹಾದಿ: ಸೃಷ್ಟಿಯಲ್ಲಿ ಗಂಡಿಗೆಷ್ಟು ಅವಕಾಶವಿದೆಯೋ ಹೆಣ್ಣಿಗೂ ಅಷ್ಟೇ ಇದೆ

ತೈವಾನ್ ದೇಶವು ಸಾಲದ ಸುಳಿಯಲ್ಲಿ ಸಿಕ್ಕಾಗ ವೇಶ್ಯಾವಾಟಿಕೆಯನ್ನು ಕಾನೂನಾತ್ಮಕವಾಗಿ ಅಧಿಕೃತಗೊಳಿಸಿ ಅದರಿಂದ ಬಂದ ಆದಾಯದಲ್ಲಿ ಸಾಲ ತೀರಿಸಿದ ಉದಾಹರಣೆ ಇದೆ. ಇದೊಂದು ವಾಮಮಾರ್ಗದ ಆರ್ಥಿಕ ನೀತಿ ಎಂದರೆ ತಪ್ಪಾಗಲಾರದು. ಈ ಸಾಲಿನಲ್ಲಿ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಹಲವಾರು ದೇಶಗಳು ಇವೆ. ಅಂದರೆ ಒಂದು ದೇಶದ ಆರ್ಥಿಕತೆ ಸರಾಗವಾಗಿ ನಡೆಯಲು ಅಮಲು ಪದಾರ್ಥಗಳ (ಡ್ರಗ್ಸ್, ಆಲ್ಕೋಹಾಲ್/ವ್ಯಸನ ಪದಾರ್ಥಗಳು) ಲೀಲಾಜಾಲ ಸಾಗಾಟ, ಮಾರಾಟ ಅಥವಾ ಹೆಣ್ಣುಮಕ್ಕಳ ಮಾರಾಟ (ನಾನಾ ರೂಪಗಳಲ್ಲಿ) ನಡೆಯಬೇಕೇ? ಸಮಸ್ಯೆಯ ಮೂಲಗಳನ್ನು ಹುಡುಕಿ ಒಂದು ದೇಶದ ನೀತಿಗಳಲ್ಲಿ ಬದಲಾವಣೆಯಾಗದಿದ್ದರೆ ‘ವೇಶ್ಯಾವಾಟಿಕೆ’ (ಪುರುಷ ಪ್ರಾಧಾನ್ಯದ ಕನ್ನಡಿ ಪ್ರತಿಬಿಂಬ) ಎಂಬ ವಾಸ್ತವತೆ ಹಾಗೆಯೇ ಮುಂದುವರೆಯುತ್ತದೆ.

ಕೆಲವು ವರ್ಷಗಳ ಹಿಂದೆ ರಸ್ತೆಬದಿಯಲ್ಲಿ ನಿಂತು ವ್ಯವಹಾರಕ್ಕೆ ಇಳಿಯುತ್ತಿದ್ದ ಅಮಾಯಕ ಹೆಣ್ಣುಮಕ್ಕಳು ಈಗ ಮೊಬೈಲ್ ಮಾಯಾಂಗನೆಯಲ್ಲಿ ಕೈಗೆಟುಕುವಷ್ಟು ತಾಂತ್ರಿಕವಾಗಿ ಅಪ್ಡೇಟ್ ಆಗುತ್ತಿದ್ದಾರೆ. ಇದು ಆಧುನಿಕ ವಿಲಕ್ಷಣ! ಹೆದ್ದಾರಿಯಲ್ಲಿ ಸಾಗುವ ಲಾರಿ ಡ್ರೈವರ್​ಗಳಾಗಲಿ, ಹೈಟೆಕ್ ಕಂಪನಿಯಲ್ಲಿ ಲಕ್ಷ ಸಂಪಾದಿಸುವ ಹಣವಂತರಿಗೆ, ರಾಜಕೀಯ ಪುಢಾರಿಗಳಿಗೆ, ಪುಡಿರೌಡಿಗಳಿಗೆ, ಬೀದಿಪೋರರಿಗೆ, ಮುದುಕರಿಗೆ, ವಿಕೃತರಿಗೆ, ವ್ಯಸನಿಗಳಿಗೆ ಮಾರಾಟವಾಗಿ ಪ್ರಾಣಿಯಂತೆ ಬಲಿಯಾಗುತ್ತಿರುವುದು ಅಮಾಯಕ ಹೆಣ್ಣುಗಳೇ, ಮನುಷ್ಯರೇ. ಇನ್ನಾದರೂ ಯೋಚಿಸಿ.

ಪ್ರತಿಕ್ರಿಯೆಗಾಗಿ : tv9kannadadigital@gmail.com

Published On - 1:14 pm, Thu, 2 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ