Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Photo: ಬಿರುಗಾಳಿಗೆ ಭಯಗೊಂಡ ಬೆಕ್ಕುಗಳಿಗೆ ತನ್ನ ರೆಕ್ಕೆಗಳಡಿ ಆಶ್ರಯ ನೀಡಿದ ಕೋಳಿಯ ಫೋಟೋ ವೈರಲ್

ಬಿರುಗಾಳಿಯಲ್ಲಿ ತೊಂದರೆಯಾಗಬಾರದು ಎಂದು ಕೋಳಿಯೊಂದು ತನ್ನ ರೆಕ್ಕೆಗಳ ಅಡಿಯಲ್ಲಿ ಬೆಕ್ಕುಗಳಿಗೆ ಆಶ್ರಯ ನೀಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Viral Photo: ಬಿರುಗಾಳಿಗೆ ಭಯಗೊಂಡ ಬೆಕ್ಕುಗಳಿಗೆ ತನ್ನ ರೆಕ್ಕೆಗಳಡಿ ಆಶ್ರಯ ನೀಡಿದ ಕೋಳಿಯ ಫೋಟೋ ವೈರಲ್
ವೈರಲ್ ಆದ ಕೋಳಿ ಮತ್ತು ಬೆಕ್ಕುಗಳ ಫೋಟೋ
Follow us
TV9 Web
| Updated By: Rakesh Nayak Manchi

Updated on:Jun 02, 2022 | 6:00 PM

ದನಗಳು ಇತರೆ ಪ್ರಾಣಿಗಳಿಗೆ ಹಾಲುಣಿಸುವುದನ್ನು ಕಂಡಿದ್ದೇವೆ. ಅದೇ ರೀತಿ ಪ್ರಾಣಿ ಅಥವಾ ಪಕ್ಷಿಯೊಂದು ಬೇರೆ ಜಾತಿಯ ಪ್ರಾಣಿಗಳಿಗೆ ಅಥವಾ ಹಕ್ಕಿಗಳಿಗೆ ಆಶ್ರಯ ನೀಡಿದ ಫೋಟೋಗಳನ್ನೂ ಕಂಡಿದ್ದೇವೆ. ಇದೀಗ ಕೋಳಿ (Hen)ಯೊಂದು ಬೆಕ್ಕು (Cat)ಗಳಿಗೆ ಆಶ್ರಯ ನೀಡಿದ ಮುಗ್ದ ಫೋಟೋ (Photo)ವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ (Viral) ಆಗುತ್ತಿದ್ದು, ಕೋಳಿಯ ಅಮ್ಮನಂಥ ಪ್ರೀತಿಗೆ ನೆಟ್ಟಿಜನ್​ಗಳು ಮನಸೋತಿದ್ದಾರೆ. ಕೋಳಿ ಬೆಕ್ಕಿನ ಮರಿಗಳಿಗೆ ಆಶ್ರಯ ನೀಡಿದ್ದರ ಹಿಂದೆಯೊಂದು ಸಣ್ಣ ಘಟನೆಯೊಂದು ಇದೆ. ಅದೇನೆಂದು ಮುಂದಕ್ಕೆ ಹೇಳುತ್ತೇವೆ ಓದಿ.

Buitengebieden ಎಂಬವರು ಟ್ವಿಟರ್​ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಫೋಟೋದಲ್ಲಿ ಇರುವಂತೆ, ಕೋಳಿಯೊಂದು ಎರಡು ಬೆಕ್ಕಿನ ಮರಿಗಳನ್ನು ತನ್ನ ಮರಿಗಳಿಗೆ ಕಾವು ನೀಡಿದಂತೆ ರೆಕ್ಕೆಗಳ ಅಡಿಯಲ್ಲಿ ಇರಿಸಿ ಕುಳಿತುಕೊಂಡಿರುವುದನ್ನು ಕಾಣಬಹುದು. ಅಷ್ಟಕ್ಕೂ ಕೋಳಿ ಬೆಕ್ಕುಗಳಿಗೆ ಆಶ್ರಯ ನೀಡಲು ಕಾರಣವೆಂದರೆ, ಬಿರುಗಾಳಿಯಲ್ಲಿ ಬೆಕ್ಕುಗಳಿಗೆ ತೊಂದರೆಯಾಗಬಾರದು ಎಂದು ಕೋಳಿ ತನ್ನ ರೆಕ್ಕೆಗಳ ಅಡಿಯಲ್ಲಿ ಆಶ್ರಯ ನೀಡಿದೆ.

ಇದನ್ನೂ ಓದಿ: Trending: ಕೆಂಪು ತೋಳಕ್ಕೆ ಜನ್ಮ ನೀಡಿದ ‘ಬ್ರೇವ್’, ಅಪರೂಪದ ಘಟನೆಗೆ ಸಾಕ್ಷಿಯಾಯ್ತು ಯುಎಸ್​ನ ಮೃಗಾಲಯ

”ಬಿರುಗಾಳಿ ಸಮಯದಲ್ಲಿ ಭಯಭೀತವಾದ ಬೆಕ್ಕಿನ ಮರಿಗಳನ್ನು ಕೋಳಿ ಆರೈಕೆ ಮಾಡುತ್ತಿರುವುದು” ಎಂದು Buitengebieden ಫೋಟೋ ಹಂಚಿಕೊಳ್ಳುವಾಗ ಶೀರ್ಷಿಕೆ ಬರೆದುಕೊಂಡಿದ್ದಾರೆ. ನೋಡಿದರೆ ಸಾಕು ಕೋಳಿಯನ್ನು ಹಿಡಿಯಲು ಹೋಗುವ ಬೆಕ್ಕು ಮತ್ತು ಕೋಳಿಯ ಸೌಹಾರ್ದತೆಗೆ ನೆಟ್ಟಿಜನ್ ವಿಸ್ಮಯಗೊಂಡಿದ್ದು, ಕಮೆಂಟ್ ಬಾಕ್ಸ್​ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

“ಬಲವಂತರು ದುರ್ಬಲರನ್ನು ರಕ್ಷಿಸುತ್ತಾರೆ. ಸುಂದರವಾದ ಪ್ರಾಣಿಗಳಿಂದ ಮನುಷ್ಯರು ತುಂಬಾ ಕಲಿಯಬಹುದು” ಎಂದು ಬಳಕೆದಾರರೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು, “ದಯವಿಟ್ಟು ನಮಗೆ ಇದು ಹೆಚ್ಚು ಅಗತ್ಯವಿದೆ” ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Viral Story: ಅಚ್ಚರಿಯಾದರೂ ಇದು ಸತ್ಯ: ಭಾರತದ ಈ ಹಳ್ಳಿಗಳಲ್ಲಿ ಇರುವೆಗಳ ಬಾಯಲ್ಲೂ ಚಿನ್ನ..!

ಇದನ್ನೂ ಓದಿ: Viral News: ತನ್ನನ್ನು ತಾನೇ ಮದುವೆಯಾಗಲಿದ್ದಾಳೆ ಈ ಯುವತಿ; ಗೋವಾದಲ್ಲಿ ಒಬ್ಬಳೇ ಹನಿಮೂನ್ ಮಾಡ್ತಾಳಂತೆ!

ಇದನ್ನೂ ಓದಿ: ಟ್ರಾಕ್ಟರ್ ಓಡಿಸುತ್ತಿರುವ ಸಾಯಿ ಪಲ್ಲವಿ; ಹಳೆಯ ವಿಡಿಯೋ ವೈರಲ್​

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:00 pm, Thu, 2 June 22

ಫ್ರೀಡ್​​ಮ್ಯಾನ್ ಪೋಡ್​ಕ್ಯಾಸ್ಟ್​​​: ಆಡಳಿತ ಸುಧಾರಣೆ ಬಗ್ಗೆ ಮೋದಿ ಮಾತು
ಫ್ರೀಡ್​​ಮ್ಯಾನ್ ಪೋಡ್​ಕ್ಯಾಸ್ಟ್​​​: ಆಡಳಿತ ಸುಧಾರಣೆ ಬಗ್ಗೆ ಮೋದಿ ಮಾತು
ಹೊಸ ನಟರು ಬಂದರೂ ಪುನೀತ್ ಫ್ಯಾನ್ಸ್ ನಿಯತ್ತು ಬದಲಾಗಲ್ಲ: ರಮ್ಯಾ ಮೆಚ್ಚುಗೆ
ಹೊಸ ನಟರು ಬಂದರೂ ಪುನೀತ್ ಫ್ಯಾನ್ಸ್ ನಿಯತ್ತು ಬದಲಾಗಲ್ಲ: ರಮ್ಯಾ ಮೆಚ್ಚುಗೆ
ಹಾಸನ: ಸತತ ನಾಲ್ಕು ಗಂಟೆಗಳ ಬಳಿಕ ಕಾಡಾನೆ ಸೆರೆ
ಹಾಸನ: ಸತತ ನಾಲ್ಕು ಗಂಟೆಗಳ ಬಳಿಕ ಕಾಡಾನೆ ಸೆರೆ
ಅಂಬಿ ಮೊಮ್ಮಗನ ನಾಮಕರಣ: ವಿಶೇಷ ಗಿಫ್ಟ್ ನೀಡಿದ ಕಿಚ್ಚ ಸುದೀಪ್
ಅಂಬಿ ಮೊಮ್ಮಗನ ನಾಮಕರಣ: ವಿಶೇಷ ಗಿಫ್ಟ್ ನೀಡಿದ ಕಿಚ್ಚ ಸುದೀಪ್
ಮಹಾರಾಷ್ಟ್ರ: ಚಾಲಕನಿಗೆ ಹೃದಯಾಘಾತ, 10 ವಾಹನಗಳಿಗೆ ಡಿಕ್ಕಿ ಹೊಡೆದ ಕಾರು
ಮಹಾರಾಷ್ಟ್ರ: ಚಾಲಕನಿಗೆ ಹೃದಯಾಘಾತ, 10 ವಾಹನಗಳಿಗೆ ಡಿಕ್ಕಿ ಹೊಡೆದ ಕಾರು
ಮಲ್ಲಿಕಾರ್ಜುನ ಖರ್ಗೆ ಜತೆ ಡಿಕೆ ಶಿವಕುಮಾರ್ ದಿಢೀರ್ ಪಯಣ!
ಮಲ್ಲಿಕಾರ್ಜುನ ಖರ್ಗೆ ಜತೆ ಡಿಕೆ ಶಿವಕುಮಾರ್ ದಿಢೀರ್ ಪಯಣ!
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಬಗ್ಗೆ ಗಣೇಶ್ ಆಚಾರ್ಯ ಮಾತು
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಬಗ್ಗೆ ಗಣೇಶ್ ಆಚಾರ್ಯ ಮಾತು
ಮಧ್ಯಪ್ರದೇಶದ ಸರ್ಕಾರಿ ಆಸ್ಪತ್ರೆಯ ಹೆರಿಗೆ ವಾರ್ಡ್​ನಲ್ಲಿ ಅಗ್ನಿ ಅವಘಡ
ಮಧ್ಯಪ್ರದೇಶದ ಸರ್ಕಾರಿ ಆಸ್ಪತ್ರೆಯ ಹೆರಿಗೆ ವಾರ್ಡ್​ನಲ್ಲಿ ಅಗ್ನಿ ಅವಘಡ
ಒಂದೇ ಓವರ್​ನಲ್ಲಿ 6 ಸಿಕ್ಸ್​: ಏಕದಿನ ಕ್ರಿಕೆಟ್​ನ ಮೊದಲ ವಿಶ್ವ ದಾಖಲೆ
ಒಂದೇ ಓವರ್​ನಲ್ಲಿ 6 ಸಿಕ್ಸ್​: ಏಕದಿನ ಕ್ರಿಕೆಟ್​ನ ಮೊದಲ ವಿಶ್ವ ದಾಖಲೆ
Video: ಮಹಾರಾಷ್ಟ್ರದ ಸೆಂಟ್ರಲ್​ ಬ್ಯಾಂಕ್​ನಲ್ಲಿ ಭಾರಿ ಅಗ್ನಿ ಅವಘಡ
Video: ಮಹಾರಾಷ್ಟ್ರದ ಸೆಂಟ್ರಲ್​ ಬ್ಯಾಂಕ್​ನಲ್ಲಿ ಭಾರಿ ಅಗ್ನಿ ಅವಘಡ