Viral Video: ಅದ್ಭುತ ಕ್ಯಾಚ್ ಹಿಡಿದು ಎಲ್ಲರನ್ನೂ ನಿಬ್ಬೆರಗಾಗಿಸಿದ ರಾಬ್
T20 Blast: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನಾರ್ಥಾಂಪ್ಟನ್ ಶೈರ್ ಕ್ರಿಸ್ ಲಿನ್ ಅವರ ಶತಕದ ನೆರವಿನಿಂದ 228 ರನ್ ಗಳ ಗುರಿ ನೀಡಿತ್ತು.
ಕ್ರಿಕೆಟ್ನಲ್ಲಿ ಕ್ಯಾಚಸ್ ವಿನ್ ಮ್ಯಾಚಸ್ ಎಂಬ ಮಾತಿದೆ. ಈ ಮಾತು ಅಕ್ಷರಶಃ ನಿಜ ಎನ್ನಲು ಐಪಿಎಲ್ನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಕೆಕೆಆರ್ ನಡುವಣ ಪಂದ್ಯವೇ ಸಾಕ್ಷಿ. ಏಕೆಂದರೆ ಆ ಪಂದ್ಯದಲ್ಲಿ ಎವಿನ್ ಲೂಯಿಸ್ ಹಿಡಿದ ಅಧ್ಬುತ ಕ್ಯಾಚ್ ಇಡೀ ಪಂದ್ಯದ ಚಿತ್ರಣ ಬದಲಿಸಿತ್ತು. ಅಷ್ಟೇ ಅಲ್ಲದೆ ಅದೇ ಕ್ಯಾಚ್ಗೆ ಐಪಿಎಲ್ 15 ಬೆಸ್ಟ್ ಕ್ಯಾಚ್ ಅವಾರ್ಡ್ ಕೂಡ ಒಲಿದಿತ್ತು. ಇದೀಗ ಮತ್ತೊಂದು ಅದ್ಭುತ ಕ್ಯಾಚ್ಗೆ ಕ್ರಿಕೆಟ್ ಪ್ರೇಮಿಗಳು ಸಾಕ್ಷಿಯಾಗಿದ್ದಾರೆ. ಈ ಕ್ಯಾಚ್ ಮೂಡಿಬಂದಿರುವುದು ಇಂಗ್ಲೆಂಡ್ನ ಟಿ20 ಬ್ಲಾಸ್ಟ್ ಲೀಗ್ನಲ್ಲಿ.
ಈ ಪಂದ್ಯದಲ್ಲಿ ಲೀಸೆಸ್ಟರ್ ಹಾಗೂ ನಾರ್ಥಾಂಪ್ಟನ್‌ಶೈರ್ ತಂಡಗಳು ಮುಖಾಮುಖಿಯಾಗಿತ್ತು. ಲೀಸೆಸ್ಟರ್‌ಶೈರ್‌ನ ಇನಿಂಗ್ಸ್‌ನ 12ನೇ ಓವರ್ನಲ್ಲಿ ನಾರ್ಥಾಂಪ್ಟನ್‌ಶೈರ್ ಆಟಗಾರ ರಾಬ್ ಕಿಯೋಫ್ ಈ ಕ್ಯಾಚ್ ಹಿಡಿದ ಅದ್ಭುತ ಕ್ಯಾಚ್ ನೋಡಿ ಎಲ್ಲರೂ ಹುಬ್ಬೇರಿಸಿದರು. ಲೀಸೆಸ್ಟರ್‌ಶೈರ್ ಬ್ಯಾಟ್ಸ್‌ಮನ್ ರಿಷಿ ಪಟೇಲ್ ಬಾರಿಸಿದ ಚೆಂಡು ಇನ್ನೇನು ಬೌಂಡರಿ ಲೈನ್ ದಾಟಲಿದೆ ಅನ್ನುವಷ್ಟರಲ್ಲಿ ರಾಬ್ ಕಿಯೋಫ್ ಅದ್ಭುತವಾಗಿ ಗಾಳಿಯಲ್ಲಿ ಹಿಂದಕ್ಕೆ ಜಿಗಿದರು. ಅಷ್ಟೇ ಅಲ್ಲದೆ ಚೆಂಡನ್ನು ಹಿಡಿದು ಅತ್ಯುತ್ತಮ ನಿಯಂತ್ರಣ ಸಾಧಿಸಿದರು. ಈ ಮೂಲಕ ರಿಷಿ ಧವನ್ ಔಟ್ಗೆ ಕಾರಣರಾದರು. ಇದೀಗ ಈ ಅಧ್ಭುತ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲೂ ಬೌಂಡರಿ ಲೈನ್ನಲ್ಲಿ ನಿಯಂತ್ರಣ ಸಾಧಿಸಿದ್ದ ರಾಬ್ ಕಿಯೋಫ್ ಅವರ ಫೀಲ್ಡಿಂಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
No way. No way. You cannot do that ??? ?????! ? https://t.co/ns49URWb9N pic.twitter.com/MVd7EynjiK
— Northamptonshire Steelbacks (@NorthantsCCC) June 1, 2022
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನಾರ್ಥಾಂಪ್ಟನ್ ಶೈರ್ ಕ್ರಿಸ್ ಲಿನ್ ಅವರ ಶತಕದ ನೆರವಿನಿಂದ 228 ರನ್ ಗಳ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಲೀಸೆಸ್ಟರ್‌ಶೈರ್ ತಂಡವು 189 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ನಾರ್ಥಾಂಪ್ಟನ್‌ಶೈರ್ ತಂಡವು 42 ರನ್‌ಗಳ ಭರ್ಜರಿ ಜಯ ಸಾಧಿಸಿತು.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.