Raj Kundra: ಮಗಳ ಜತೆ ಮುಖ ತೋರಿಸಲಾಗದೇ ಓಡಿ ಹೋದ ರಾಜ್ ಕುಂದ್ರಾ; ಹಣೆ ಚಚ್ಚಿಕೊಂಡ ಶಿಲ್ಪಾ ಶೆಟ್ಟಿ
Shilpa Shetty Family: ಗಂಡನ ವರ್ತನೆ ನೋಡಿ ಶಿಲ್ಪಾ ಶೆಟ್ಟಿಗೆ ಮುಜುಗರ ಆಗಿದೆ. ಎಲ್ಲರ ಎದುರು ಅವರು ತಲೆ ಚಚ್ಚಿಕೊಂಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.
ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರು ಬಾಲಿವುಡ್ನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಆದರೆ ಅವರ ಪತಿ ರಾಜ್ ಕುಂದ್ರಾ ಮಾಡಿದ ಎಡವಟ್ಟಿನಿಂದಾಗಿ ಇಡೀ ಕುಟುಂಬಕ್ಕೆ (Shilpa Shetty Family) ಮುಜುಗರ ಉಂಟಾಗಿತ್ತು. ಅಶ್ಲೀಲ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡ ಆರೋಪ ರಾಜ್ ಕುಂದ್ರಾ ಮೇಲಿದೆ. ಆ ಕೇಸ್ನಲ್ಲಿ ಅವರು ಈಗಾಗಲೇ ಜೈಲು ಸೇರಿಬಂದಿದ್ದಾರೆ. ಜೈಲಿನಿಂದ ಆಚೆ ಬಂದ ಬಳಿಕ ಅವರು ಸರಿಯಾಗಿ ಮುಖ ತೋರಿಸುತ್ತಿಲ್ಲ. ಬಹುತೇಕ ಸಂದರ್ಭದಲ್ಲಿ ಮಾಸ್ಕ್ ಹಾಕಿಕೊಂಡು ತಿರುಗಾಡುತ್ತಿದ್ದಾರೆ. ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಅವರು ಕಾಣಿಸಿಕೊಂಡರು. ಅವರ ಜೊತೆ ಪತ್ನಿ ಶಿಲ್ಪಾ ಶೆಟ್ಟಿ, ನಾದಿನಿ ಶಮಿತಾ ಶೆಟ್ಟಿ, ಮಕ್ಕಳಾದ ವಿಯಾನ್ ಮತ್ತು ಸಮೀಶಾ ಕೂಡ ಇದ್ದರು. ಈ ವೇಳೆ ಫೋಟೋಗೆ ಪೋಸ್ ನೀಡುವಂತೆ ಪಾಪರಾಜಿಗಳು ಕೋರಿಕೊಂಡರು. ಆದರೆ ರಾಜ್ ಕುಂದ್ರಾ (Raj Kundra) ತಪ್ಪಿಸಿಕೊಂಡು ಓಡಿಹೋದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ಶಿಲ್ಪಾ ಶೆಟ್ಟಿ ಅವರು ಕುಟುಂಬ ಸಮೇತರಾಗಿ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಲ್ಲಿಂದ ವಾಪಸ್ ಮುಂಬೈಗೆ ತೆರಳಿದ ಅವರು ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ಕಣ್ಣಿಗೆ ಬಿದ್ದರು. ಮೂರು ವರ್ಷದ ಮಗಳು ಸಮೀಶಾಳನ್ನು ಕರೆದುಕೊಂಡು ರಾಜ್ ಕುಂದ್ರಾ ಹೋಗುತ್ತಿದ್ದರು. ಪಾಪರಾಜಿಗಳನ್ನು ನೋಡುತ್ತಿದ್ದಂತೆಯೇ ಅವರು ಓಡಲು ಆರಂಭಿಸಿದರು.
View this post on Instagram
ಗಂಡನ ಈ ವರ್ತನೆ ನೋಡಿ ಶಿಲ್ಪಾ ಶೆಟ್ಟಿಗೆ ಮುಜುಗರ ಆಗಿದೆ. ಎಲ್ಲರ ಎದುರು ಅವರು ತಲೆ ಚಚ್ಚಿಕೊಂಡಿದ್ದಾರೆ. ಇಂಥ ಘಟನೆಗಳು ಈ ಹಿಂದೆ ಕೂಡ ನಡೆದಿದ್ದವು. ಮುಂಬೈನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಫೋಟೋಗೆ ಪೋಸ್ ನೀಡುವಂತೆ ಪಾಪರಾಜಿಗಳು ಮನವಿ ಮಾಡಿದ್ದರು. ಆಗ ರಾಜ್ ಕುಂದ್ರಾ ಅವರು ಕೋಪ ಮಾಡಿಕೊಂಡು ಎಸ್ಕೇಪ್ ಆಗಿದ್ದರು. ಆಗಲೂ ಕೂಡ ಗಂಡನ ವರ್ತನೆಯಿಂದ ಶಿಲ್ಪಾ ಶೆಟ್ಟಿಗೆ ಇರಿಸುಮುರಿಸು ಆಗಿತ್ತು.
ಅಶ್ಲೀಲ ಸಿನಿಮಾ ನಿರ್ಮಾಣದ ಕೇಸ್ನಲ್ಲಿ ಸಿಕ್ಕಿಬೀಳುವ ಮುನ್ನ ರಾಜ್ ಕುಂದ್ರಾ ಅವರು ಹೀಗೆ ಇರಲಿಲ್ಲ. ಸಾರ್ವಜನಿಕವಾಗಿ ಅವರು ಬೆರೆಯುತ್ತಿದ್ದರು. ಪಾಪರಾಜಿಗಳಿಗೆ ಖುಷಿಯಿಂದ ಪೋಸ್ ನೀಡುತ್ತಿದ್ದರು. ಆದರೆ ಜೈಲಿಗೆ ಹೋಗಿ ಬಂದ ಬಳಿಕ ಅವರ ವರ್ತನೆಯಲ್ಲಿ ಸಾಕಷ್ಟು ಬದಲಾವಣೆ ಆಯಿತು. ಮುಖ ತೋರಿಸಲು ಅವರು ಅಂಜಿಕೊಳ್ಳಲು ಆರಂಭಿಸಿದರು. ಸಂಪೂರ್ಣ ಮುಖ ಮುಚ್ಚುವ ರೀತಿಯಲ್ಲಿ ಮಾಸ್ಕ್ ಧರಿಸುವುದನ್ನು ಅವರು ರೂಢಿ ಮಾಡಿಕೊಂಡರು. ಆದರೆ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಎಂಟ್ರಿ ನೀಡುವಾಗ ಅವರು ಮಾಸ್ಕ್ ಧರಿಸಿರಲಿಲ್ಲ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:04 pm, Mon, 24 April 23