38 ಕೋಟಿ ರೂಪಾಯಿ ಕೊಟ್ಟು ಮನೆ ಖರೀದಿಸಿದ ಆಲಿಯಾ ಭಟ್; ಅಕ್ಕನಿಗೂ ಗಿಫ್ಟ್ ಕೊಟ್ಟ ನಟಿ
Alia Bhatt: ಆಲಿಯಾ ಭಟ್ ಅವರು ಮುಂಬೈನ ಅಪಾರ್ಟ್ಮೆಂಟ್ನಲ್ಲಿ ಮನೆ ಖರೀದಿ ಮಾಡಿದ್ದಾರೆ. ಇದರ ಬೆಲೆ 37.80 ಕೋಟಿ ರೂಪಾಯಿ.
ಆಲಿಯಾ ಭಟ್ (Alia Bhatt) ಅವರು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಇತರ ಸ್ಟಾರ್ ಕಿಡ್ಗಳಿಗಿಂತ ಅವರ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ನಟನೆ ಮೂಲಕ ತಮ್ಮ ತನವನ್ನು ತೋರಿಸಿದ್ದಾರೆ. ಇದರ ಜೊತೆಗೆ ಹಲವು ಬ್ರ್ಯಾಂಡ್ಗಳಿಗೆ ಅವರು ಅಂಬಾಸಿಡರ್ ಆಗಿದ್ದಾರೆ. ಹಲವು ಉದ್ಯಮಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಈ ಎಲ್ಲಾ ಕಾರಣದಿಂದ ಆಲಿಯಾ ಭಟ್ ಅವರಿಗೆ ಸಾಕಷ್ಟು ಹಣ ಬರುತ್ತಿದೆ. ಈಗ ಆಲಿಯಾ ಭಟ್ ಅವರು ತಮ್ಮ ಸೇವಿಂಗ್ಸ್ ಹಣದಲ್ಲಿ ಐಷಾರಾಮಿ ಮನೆ ಖರೀದಿ ಮಾಡಿದ್ದಾರೆ. ಇದರ ಬೆಲೆ ಬರೋಬ್ಬರಿ 38 ಕೋಟಿ ರೂಪಾಯಿ.
ಆಲಿಯಾ ಭಟ್ ಅವರು ಬಾಂದ್ರಾ ವೆಸ್ಟ್ನ ಪಲಿ ಹಿಲ್ ಭಾಗದ ಅಪಾರ್ಟ್ಮೆಂಟ್ನಲ್ಲಿ ಮನೆ ಖರೀದಿ ಮಾಡಿದ್ದಾರೆ. ಇದರ ಬೆಲೆ 37.80 ಕೋಟಿ ರೂಪಾಯಿ. ಮತ್ತೊಂದು ಮನೆ ಖರೀದಿಸಿ ಸಹೋದರಿ ಶಹೀನ್ ಭಟ್ಗೆ ಅವರು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿ ಆಗಿದೆ. ಈ ಬಗ್ಗೆ ಆಲಿಯಾ ಭಟ್ ಅವರ ಕಡೆಯಿಂದ ಅಧಿಕೃತ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಸಾಮಾನ್ಯವಾಗಿ ಪ್ರಾಪರ್ಟಿ ಖರೀದಿ ಮಾಡಿದ ವಿಚಾರವನ್ನು ಸೆಲೆಬ್ರಿಟಿಗಳು ರಿವೀಲ್ ಮಾಡುವುದಿಲ್ಲ. ಹೀಗಾಗಿ, ಈ ವಿಚಾರದಲ್ಲಿ ಅವರ ಕಡೆಯಿಂದ ಸ್ಪಷ್ಟನೆ ಸಿಗೋದು ಅನುಮಾನ.
ಮನಿಕಂಟ್ರೋಲ್ ವರದಿ ಮಾಡಿರುವ ಪ್ರಕಾರ, ಆಲಿಯಾ ಖರೀದಿಸಿರುವ ಫ್ಲಾಟ್ 2,497 ಚದರ ಅಡಿ ಇದೆ. ಏಪ್ರಿಲ್ 10ರಂದು ಈ ಡೀಲ್ ನಡೆದಿದೆ. ಆಲಿಯಾ ಭಟ್ ಅವರು 2.26 ಕೋಟಿ ರೂಪಾಯಿ ಸ್ಟಾಂಪ್ ಡ್ಯೂಟಿ ಪಾವತಿಸಿದ್ದಾರೆ. ಇನ್ನು ಆಲಿಯಾ ಭಟ್ ಅವರು ಎರಡು ಫ್ಲಾಟ್ಗಳನ್ನು ಶಹೀನ್ ಭಟ್ಗೆ ನೀಡಿದ್ದಾರೆ. ಇದರ ಬೆಲೆ 7.86 ಕೋಟಿ ರೂಪಾಯಿ ಎನ್ನಲಾಗಿದೆ. ಈ ಅಪಾರ್ಟ್ಮೆಂಟ್ ಮುಂಬೈನ ಜುಹು ಭಾಗದಲ್ಲಿದೆ. ಇದಕ್ಕೆ 30 ಲಕ್ಷ ರೂಪಾಯಿ ಸ್ಟಾಂಪ್ಡ್ಯೂಟಿ ಪಾವತಿಸಲಾಗಿದೆ.
ಇದನ್ನೂ ಓದಿ: ಕಾಫಿ ವಿತ್ ಕರಣ್ ಹೊಸ ಸೀಸನ್ಗೆ ಆಲಿಯಾ ಭಟ್ ರಣಬೀರ್ ಕಪೂರ್ ಮೊದಲ ಅತಿಥಿ?
ಸಿನಿಮಾ ವಿಚಾರಕ್ಕೆ ಬರೋದಾದರೆ ಆಲಿಯಾ ಭಟ್ ನಟನೆಯ ಹಾಲಿವುಡ್ನ ‘ಹಾರ್ಟ್ ಆಫ್ ಸ್ಟೋನ್’ ಸಿನಿಮಾ ರಿಲೀಸ್ಗೆ ರೆಡಿ ಇದೆ. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಜುಲೈ 28ರಂದು ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ರಣವೀರ್ ಸಿಂಗ್ ಕೂಡ ನಟಿಸಿದ್ದಾರೆ. ಕರಣ್ ಜೋಹರ್ ಅವರ ನಿರ್ದೇಶನ ಈ ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ