Updated on: Apr 21, 2023 | 9:45 AM
ಸದಾ ವಿವಾದಗಳ ಮೂಲಕ ‘ಕಾಫಿ ವಿತ್ ಕರಣ್’ ಶೋ ಸುದ್ದಿ ಆಗುತ್ತದೆ. ಈಗಾಗಲೇ ಯಶಸ್ವಿಯಾಗಿ 7 ಸೀಸನ್ಗಳು ಪೂರ್ಣಗೊಂಡಿದ್ದು, 8ನೇ ಸೀಸನ್ಗೆ ತಯಾರಿ ನಡೆಯುತ್ತಿದೆ. ಕರಣ್ ಜೋಹರ್ ಈ ಶೋನ ನಡೆಸಿಕೊಡಲಿದ್ದಾರೆ.
ಸೆಪ್ಟೆಂಬರ್ ವೇಳೆಗೆ ಹೊಸ ಸೀಸನ್ ಆರಂಭ ಆಗಲಿದೆ. ಕಳೆದ ವರ್ಷ ಟಿವಿ ಬದಲು ಈ ಶೋ ಒಟಿಟಿಯಲ್ಲಿ ಪ್ರಸಾರ ಕಂಡಿತ್ತು. ಈ ವರ್ಷವೂ ಹಾಗೆಯೇ ಮುಂದುವರಿಯಲಿದೆ ಎನ್ನಲಾಗುತ್ತಿದೆ.
ಈ ಬಾರಿ ‘ಕಾಫಿ ವಿತ್ ಕರಣ್’ ಶೋಗೆ ಮೊದಲ ಅತಿಥಿಯಾಗಿ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಬರಲಿದ್ದಾರೆ ಎನ್ನಲಾಗುತ್ತಿದೆ.
ರಣಬೀರ್ ಸದಾ ವಿವಾದಗಳಿಂದ ದೂರ ಉಳಿಯಲು ಬಯಸುತ್ತಾರೆ. ಕಳೆದ ವರ್ಷ ಅವರು ಈ ಶೋಗೆ ಬರದೇ ಇರಲು ಇದೇ ಕಾರಣ ಎನ್ನಲಾಗಿತ್ತು. ಈಗ ಅವರು ಮನಸ್ಸು ಬದಲಿಸಿದ್ದಾರೆ.
ಆಲಿಯಾ ಭಟ್ ಹಾಗೂ ಕರಣ್ ಜೋಹರ್ ಮಧ್ಯೆ ಆಪ್ತತೆ ಇದೆ. ಆಲಿಯಾನ ಚಿತ್ರರಂಗಕ್ಕೆ ಪರಿಚಯಿಸಿದ್ದು ಕರಣ್. ಹೀಗಾಗಿ, ಅವರು ಈ ಶೋಗೆ ಬರೋಕೆ ಒಕೆ ಎಂದಿದ್ದಾರೆ.