- Kannada News Photo gallery Cricket photos Virat Kohli said former RCB star Shane Watson is the greatest all-rounder in IPL history Kannada News
Virat Kohli: ಬ್ರಾವೋ, ಪೊಲಾರ್ಡ್ ಅಲ್ಲ: ಐಪಿಎಲ್ನ ಗ್ರೇಟ್ ಆಲ್ರೌಂಡರ್ ಯಾರು ಕೇಳಿದ್ದಕ್ಕೆ ಕೊಹ್ಲಿಯ ಉತ್ತರವೇನು ನೋಡಿ
ಐಪಿಎಲ್ನಲ್ಲಿ ಅನೇಕ ಆಲ್ರೌಂಡರ್ಗಳು ಕಾಣಿಸಿಕೊಂಡಿದ್ದಾರೆ. ಕಿರೋನ್ ಪೊಲಾರ್ಡ್, ಆಂಡ್ರೊ ರಸೆಲ್, ಸುನಿಲ್ ನರೈನ್, ಬ್ರಾವೋ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಹೀಗೆ ಅನೇಕ ಆಲ್ರೌಂಡರ್ಗಳು ಐಪಿಎಲ್ನಲ್ಲಿ ಖ್ಯಾತಿ ಗಳಿಸಿದ್ದಾರೆ. ಆದರೆ, ಇವರಲ್ಲಿ ವಿರಾಟ್ ಕೊಹ್ಲಿ ಮನಗೆದ್ದಿದ್ದು ಯಾರು ಗೊತ್ತೇ?.
Updated on:Apr 21, 2023 | 12:12 PM

ಟಿ20 ಕ್ರಿಕೆಟ್ನ ಅತ್ಯಂತ ಪ್ರಸಿದ್ಧ ಟೂರ್ನಿ ಎಂದರೆ ಅದು ಇಂಡಿಯನ್ ಪ್ರೀಮಿಯರ್ ಲೀಗ್. ಈಗಾಗಲೇ 15 ಆವೃತ್ತಿಗಳು ಯಶಸ್ವಿಯಾಗಿ ನಡೆದಿದ್ದು ಸದ್ಯ ಐಪಿಎಲ್ 2023 ಸಾಗುತ್ತಿದೆ. ಅನೇಕ ಕ್ರಿಕೆಟ್ ದಿಗ್ಗಜರು ಈ ಟೂರ್ನಿಯಲ್ಲಿ ಕಣಕ್ಕಿಳಿದಿದ್ದಾರೆ.

ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ಗ್ಲೆನ್ ಮೆಘ್ರಾತ್, ಶೇನ್ ವಾರ್ನ್, ಆ್ಯಡಂ ಗಿಲ್ಕ್ರಿಸ್ಟ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಹೀಗೆ ಅನೇಕ ಹೆಸರಾಂತ ಪ್ಲೇಯರ್ಗಳು ಐಪಿಎಲ್ನಲ್ಲಿ ಆಡಿದ್ದಾರೆ.

ಐಪಿಎಲ್ನಲ್ಲಿ ಅನೇಕ ಆಲ್ರೌಂಡರ್ಗಳು ಕಾಣಿಸಿಕೊಂಡಿದ್ದಾರೆ. ಕಿರೋನ್ ಪೊಲಾರ್ಡ್, ಆಂಡ್ರೊ ರಸೆಲ್, ಸುನಿಲ್ ನರೈನ್, ಬ್ರಾವೋ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಹೀಗೆ ಅನೇಕ ಆಲ್ರೌಂಡರ್ಗಳು ಐಪಿಎಲ್ನಲ್ಲಿ ಖ್ಯಾತಿ ಗಳಿಸಿದ್ದಾರೆ. ಆದರೆ, ಇವರಲ್ಲಿ ವಿರಾಟ್ ಕೊಹ್ಲಿ ಮನಗೆದ್ದಿದ್ದು ಯಾರು ಗೊತ್ತೇ?.

ನಿಮ್ಮ ಪ್ರಕಾರ ಐಪಿಎಲ್ ಇತಿಹಾಸದಲ್ಲಿ ಅತ್ಯುತ್ತಮ ಆಲ್ರೌಂಡರ್ ಯಾರು? ಎಂಬ ಪ್ರಶ್ನೆ ವಿರಾಟ್ ಕೊಹ್ಲಿ ಅವರಿಗೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ಅವರು ನನ್ನ ಪ್ರಕಾರ ಆರ್ಸಿಬಿಯ ಮಾಜಿ ಆಟಗಾರ ಶೇನ್ ವಾಟ್ಸನ್ ಐಪಿಎಲ್ನ ಗ್ರೆಟೆಸ್ಟ್ ಆಲ್ರೌಂಡರ್ ಎಂದು ಹೇಳಿದ್ದಾರೆ.

ಶೇನ್ ವಾಟ್ಸನ್ 2016 ಮತ್ತಯ 2017ರ ಐಪಿಎಲ್ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. 2020 ರಲ್ಲಿ ಇವರು ಐಪಿಎಲ್ನಿಂದ ಹಿಂದೆ ಸರಿದರು.

ಅಂತೆಯೆ ಸುನಿಲ್ ನರೈನ್ ಮತ್ತು ರಶೀದ್ ಖಾನ್ ಪೈಕಿ ಬೆಸ್ಟ್ ಸ್ಪಿನ್ನರ್ ರಶೀದ್ ಎಂದು ಉತ್ತರಿಸಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ನನಗೆ ಪುಲ್ ಶಾಟ್ ಎಂದರೆ ಇಷ್ಟ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡುವುದು ಎಂದರೆ ನಾನು ಹೆಚ್ಚು ಉತ್ಸಕನಾಗಿರುತ್ತೇನೆ ಎಂಬುದು ಕೊಹ್ಲಿ ಮಾತು.
Published On - 12:12 pm, Fri, 21 April 23
