Rashmika Mandanna: ಪ್ರೈವೇಟ್​ ಜೆಟ್​ನಲ್ಲಿ ರಶ್ಮಿಕಾ-ರಣಬೀರ್​ ಕಿಸ್​; ಪದೇ ಪದೇ ಲಿಪ್​ ಲಾಕ್​

‘ಅನಿಮಲ್​’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಣಬೀರ್​ ಕಪೂರ್​ ಅವರ ಪಾತ್ರಗಳು ತುಂಬ ಬೋಲ್ಡ್​ ಆಗಿ ಮೂಡಿಬಂದಿವೆ ಎಂಬುದಕ್ಕೆ ಇದೇ ಸಾಕ್ಷಿ. ಇಲ್ಲಿ ಚುಂಬನದ ದೃಶ್ಯಗಳು ಹೇರಳವಾಗಿವೆ. ಪ್ರೈವೇಟ್ ಜೆಟ್​ನಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಣಬೀರ್​ ಕಪೂರ್​ ಅವರು ಲಿಪ್​ ಲಾಕ್​ ಮಾಡಿದ್ದಾರೆ.

Rashmika Mandanna: ಪ್ರೈವೇಟ್​ ಜೆಟ್​ನಲ್ಲಿ ರಶ್ಮಿಕಾ-ರಣಬೀರ್​ ಕಿಸ್​; ಪದೇ ಪದೇ ಲಿಪ್​ ಲಾಕ್​
ರಶ್ಮಿಕಾ ಮಂದಣ್ಣ, ರಣಬೀರ್​ ಕಪೂರ್​
Follow us
ಮದನ್​ ಕುಮಾರ್​
|

Updated on: Oct 11, 2023 | 11:59 AM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಬಾಲಿವುಡ್​ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದ್ದಾರೆ. ಅಲ್ಲಿನ ಸ್ಟಾರ್​ ಹೀರೋಗಳ ಜೊತೆ ನಟಿಸುವ ಅವಕಾಶ ಅವರಿಗೆ ಸಿಗುತ್ತಿದೆ. ಪಾತ್ರಗಳ ವಿಚಾರದಲ್ಲಿ ರಶ್ಮಿಕಾ ಎಂದಿಗೂ ಮಡಿವಂತಿಕೆ ತೋರಿಸಿಲ್ಲ. ಕಥೆಗೆ ಅಗತ್ಯವಿದ್ದರೆ ಅವರು ಬೋಲ್ಡ್​ ಆಗಿ ಕಾಣಿಸಿಕೊಳ್ಳುತ್ತಾರೆ. ಕಿಸ್​ ಕೂಡ ಮಾಡುತ್ತಾರೆ. ಈಗ ಅವರು ‘ಅನಿಮಲ್​’ ಸಿನಿಮಾದಲ್ಲಿ ಲಿಪ್​ ಲಾಕ್​ ಮಾಡಿ ಸುದ್ದಿ ಆಗುತ್ತಿದ್ದಾರೆ. ಈ ಸಿನಿಮಾಗೆ ರಣಬೀರ್​ ಕಪೂರ್​ (Ranbir Kapoor) ಹೀರೋ. ಈ ಸಿನಿಮಾದ ಮೊದಲ ಹಾಡು ಬಿಡುಗಡೆ ಆಗಿದೆ. ಇದರಲ್ಲಿ ಚುಂಬನದ ದೃಶ್ಯಗಳು ಹೇರಳವಾಗಿವೆ. ಪ್ರೈವೇಟ್ ಜೆಟ್​ನಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಣಬೀರ್​ ಕಪೂರ್​ ಅವರು ಲಿಪ್​ ಲಾಕ್​ (Lip lock) ಮಾಡಿದ್ದಾರೆ.

‘ಅನಿಮಲ್​’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಣಬೀರ್​ ಕಪೂರ್​ ಅವರ ಪಾತ್ರಗಳು ತುಂಬ ಬೋಲ್ಡ್​ ಆಗಿ ಮೂಡಿಬಂದಿವೆ ಎಂಬುದಕ್ಕೆ ಈ ಹಾಡು ಸಾಕ್ಷಿ. ಇದು ಪ್ಯಾನ್​ ಇಂಡಿಯಾ ಸಿನಿಮಾ ಆದ್ದರಿಂದ ಕನ್ನಡ, ತೆಲುಗು, ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲಿ ಹಾಡನ್ನು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: ‘ದೇವರಕೊಂಡ ಜತೆ ಲಿಪ್​ ಲಾಕ್​ ಮಾಡಿ ಟ್ರೋಲ್​ ಆದಾಗ ಹಗಲು-ರಾತ್ರಿ ಕಣ್ಣೀರು ಸುರಿಸಿದ್ದೆ’: ರಶ್ಮಿಕಾ

‘ಓ ಬಾಲೆ’ ಎಂಬ ಈ ಗೀತೆಯಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಣಬೀರ್​ ಕಪೂರ್​ ನಡುವಿನ ಕೆಮಿಸ್ಟ್ರಿ ನೋಡಿ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಒಂದು ಗಾಢವಾದ ಲವ್​ ಸ್ಟೋರಿ ಈ ಸಿನಿಮಾದಲ್ಲಿ ಇರಲಿದೆ ಎಂದು ಫ್ಯಾನ್ಸ್​ ಊಹಿಸುತ್ತಿದ್ದಾರೆ.

‘ಅನಿಮಲ್​’ ಸಿನಿಮಾದ ಹಾಡು ಇಲ್ಲಿದೆ:

ಈ ಹಿಂದೆ ರಶ್ಮಿಕಾ ಮಂದಣ್ಣ ಅವರು ಹಿಂದಿಯ ‘ಗುಡ್​ಬೈ’ ಹಾಗೂ ‘ಮಿಷನ್​ ಮಜ್ನು’ ಸಿನಿಮಾದಲ್ಲಿ ನಟಿಸಿದ್ದರು. ಅಮಿತಾಭ್​ ಬಚ್ಚನ್​, ಸಿದ್ದಾರ್ಥ್​ ಮಲ್ಹೋತ್ರ ಅವರಂತಹ ಸ್ಟಾರ್​ ನಟರ ಜೊತೆ ಅಭಿನಯಿಸಿದ ಅನುಭವ ಅವರಿಗೆ ಇದೆ. ಈಗ ‘ಅನಿಮಲ್​’ ಚಿತ್ರದಲ್ಲಿ ರಣಬೀರ್​ ಕಪೂರ್​ಗೆ ಜೋಡಿಯಾಗಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಬಿಡುಗಡೆ ಆದ ಬಳಿಕ ರಶ್ಮಿಕಾ ಅವರ ಚಾರ್ಮ್​ ಹೆಚ್ಚಲಿದೆ. ಈ ಸಿನಿಮಾದ ಕನ್ನಡ ವರ್ಷನ್​ಗೆ ಯಾವ ರೀತಿ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ಕಾದುನೋಡಬೇಕು.

ಡಿಸೆಂಬರ್​ 1ರಂದು ‘ಅನಿಮಲ್​’ ಸಿನಿಮಾ ಬಿಡುಗಡೆ ಆಗಲಿದೆ. ಸಂದೀಪ್​ ರೆಡ್ಡಿ ವಂಗಾ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಅರ್ಜುನ್​ ರೆಡ್ಡಿ’, ‘ಕಬೀರ್​ ಸಿಂಗ್​’ ಸಿನಿಮಾಗಳ ಯಶಸ್ಸಿನ ಬಳಿಕ ಅವರು ಈ ಸಿನಿಮಾವನ್ನು ಜನರ ಎದುರು ತರುತ್ತಿದ್ದಾರೆ. ಬಾಬಿ ಡಿಯೋಲ್​ ಅವರು ‘ಅನಿಮಲ್​’ ಚಿತ್ರದಲ್ಲಿ ಒಂದು ಖಡಕ್​ ಆದಂತಹ ಪಾತ್ರ ಮಾಡಿದ್ದಾರೆ. ಕೆಲವೇ ದಿನಗಳ ಹಿಂದೆ ಬಿಡುಗಡೆ ಆದ ಟೀಸರ್​ನಲ್ಲಿ ಅದರ ಝಲಕ್​ ಕಾಣಿಸಿದೆ. ಈ ಸಿನಿಮಾದಲ್ಲಿ ಅನಿಲ್​ ಕಪೂರ್​ ಕೂಡ ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ