Rashmika Mandanna: ರಶ್ಮಿಕಾ ಮಂದಣ್ಣ-ರಣಬೀರ್ ಕಪೂರ್ ಲಿಪ್ ಲಾಕ್; ಸಿಕ್ಕಾಪಟ್ಟೆ ವೈರಲ್ ಆಗಿದೆ ಫೋಟೋ
Animal Movie: ರಶ್ಮಿಕಾ ಮಂದಣ್ಣ ಅವರಿಗೆ ಕಿಸ್ಸಿಂಗ್ ಸೀನ್ಗಳು ಹೊಸದೇನೂ ಅಲ್ಲ. ಈ ಮೊದಲು ಅವರು ‘ಗೀತ ಗೋವಿಂದಂ’, ‘ಡಿಯರ್ ಕಾಮ್ರೇಡ್’ ಸಿನಿಮಾಗಳಲ್ಲಿ ವಿಜಯ್ ದೇವರಕೊಂಡ ಜೊತೆ ಚುಂಬನದ ದೃಶ್ಯಗಳಲ್ಲಿ ನಟಿಸಿದ್ದರು. ಈಗ ರಣಬೀರ್ ಕಪೂರ್ ಜೊತೆ ‘ಅನಿಮಲ್’ ಸಿನಿಮಾಗಾಗಿ ಲಿಪ್ ಕಿಸ್ ಮಾಡಿ ಸುದ್ದಿ ಆಗಿದ್ದಾರೆ.
ಹಲವು ಬಹುನಿರೀಕ್ಷಿತ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ನಟಿಸುತ್ತಿದ್ದಾರೆ. ರಣಬೀರ್ ಕಪೂರ್ ನಟನೆಯ ‘ಅನಿಮಲ್’ (Animal Movie) ಸಿನಿಮಾಗೂ ಅವರೇ ನಾಯಕಿ. ಈ ಸಿನಿಮಾ ಮೂಲಕ ಅವರು ಬಾಲಿವುಡ್ನಲ್ಲಿ ದೊಡ್ಡ ಯಶಸ್ಸು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಡಿಸೆಂಬರ್ 1ರಂದು ‘ಅನಿಮಲ್’ ಸಿನಿಮಾ ಬಿಡುಗಡೆ ಆಗಲಿದೆ. ಈಗಾಗಲೇ ಚಿತ್ರದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ಮೊದಲು ರಿಲೀಸ್ ಆಗಿದ್ದ ಟೀಸರ್ ಗಮನ ಸೆಳೆದಿತ್ತು. ಈಗ ಹಾಡಿನ ಬಿಡುಗಡೆಗೆ ಸಮಯ ನಿಗದಿ ಆಗಿದೆ. ಅದನ್ನು ತಿಳಿಸುವ ಸಲುವಾಗಿ ಒಂದು ಹೊಸ ಪೋಸ್ಟರ್ ಹಂಚಿಕೊಳ್ಳಲಾಗಿದ್ದು, ಅದರಲ್ಲಿ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅವರು ಲಿಪ್ ಲಾಕ್ (Lip Lock) ಮಾಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
‘ಅರ್ಜುನ್ ರೆಡ್ಡಿ’ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ‘ಅನಿಮಲ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ‘ಕಬೀರ್ ಸಿಂಗ್’ ಬಳಿಕ ಬಾಲಿವುಡ್ನಲ್ಲಿ ಅವರಿಗೆ ಇದು ಎರಡನೇ ಸಿನಿಮಾ. ಸಂದೀಪ್ ನಿರ್ದೇಶನದ ಸಿನಿಮಾಗಳಲ್ಲಿ ಬೋಲ್ಡ್ ದೃಶ್ಯಗಳು ಇರುತ್ತವೆ. ‘ಅನಿಮಲ್’ ಸಿನಿಮಾದಲ್ಲೂ ಅದು ಮುಂದುವರಿದಂತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಈ ಫೋಟೋ ಹೊರಬಿದ್ದಿದೆ. ರಶ್ಮಿಕಾ ಮಂದಣ್ಣ ಮತ್ತು ರಣಬೀರ್ ಕಪೂರ್ ಅವರು ಲಿಪ್ ಲಾಕ್ ಮಾಡಿ ಗಮನ ಸೆಳೆದಿದ್ದಾರೆ.
Hua main ❤️ Out tomorrow.. this song is 🔥🔥🔥🔥 And I personally love it in all the versions.. Hindi Kannada telugu tamil and Malayalam .. 💃🏻🥳#HuaMain #Ammayi #Neevaadi #OhBhaale #Pennaale#AnimalTheFilm@AnimalTheFilm @AnilKapoor #RanbirKapoor @thedeol @tripti_dimri23… pic.twitter.com/JH7eADNoDs
— Rashmika Mandanna (@iamRashmika) October 10, 2023
ರಶ್ಮಿಕಾ ಮಂದಣ್ಣ ಅವರಿಗೆ ಕಿಸ್ಸಿಂಗ್ ಸೀನ್ಗಳು ಹೊಸದೇನೂ ಅಲ್ಲ. ಈ ಮೊದಲು ಅವರು ‘ಗೀತ ಗೋವಿಂದಂ’, ‘ಡಿಯರ್ ಕಾಮ್ರೇಡ್’ ಸಿನಿಮಾಗಳಲ್ಲಿ ವಿಜಯ್ ದೇವರಕೊಂಡ ಜೊತೆ ಚುಂಬನದ ದೃಶ್ಯಗಳಲ್ಲಿ ನಟಿಸಿದ್ದರು. ಈಗ ರಣಬೀರ್ ಕಪೂರ್ ಜೊತೆ ‘ಅನಿಮಲ್’ ಸಿನಿಮಾಗಾಗಿ ಲಿಪ್ ಕಿಸ್ ಮಾಡಿದ್ದಾರೆ. ಅಕ್ಟೋಬರ್ 11ರಂದು ಈ ಸಿನಿಮಾದ ಹಾಡು ಬಿಡುಗಡೆ ಆಗಲಿದೆ. ಇದೇ ಹಾಡಿನಲ್ಲಿ ಲಿಪ್ ಲಾಕ್ ದೃಶ್ಯ ಇರಲಿದೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಡಯಟ್ ಪ್ಲ್ಯಾನ್ ಗೊತ್ತೆ? ಫಿಟ್ನೆಸ್ಗಾಗಿ ಯಾವ ಆಹಾರ ಸೇವಿಸುತ್ತಾರೆ ನಟಿ?
ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಅನಿಮಲ್’ ಸಿನಿಮಾ ಬಿಡುಗಡೆ ಆಗುತ್ತಿದೆ. ಹಿಂದಿ, ತಮಿಳು, ಮಲಯಾಳಂ, ತೆಲುಗು ಹಾಗೂ ಕನ್ನಡದಲ್ಲಿ ಈ ಚಿತ್ರ ತೆರೆಕಾಣಲಿದೆ. ಈ ಎಲ್ಲ ಭಾಷೆಯಲ್ಲೂ ಅ.11ರಂದು ಹಾಡು ಬಿಡುಗಡೆ ಆಗಲಿದೆ. ಕನ್ನಡದಲ್ಲಿ ‘ಓಹ್ ಬಾಲೆ..’ ಎಂಬ ಈ ಗೀತೆಯನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ರಣಬೀರ್ ಕಪೂರ್ ಜೊತೆ ಅನಿಲ್ ಕಪೂರ್, ಬಾಬಿ ಡಿಯೋಲ್, ತೃಪ್ತಿ ದಿಮ್ರಿ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.