ಎಲ್ಲವನ್ನೂ ಕಳೆದುಕೊಂಡು ಜೀರೋಗೆ ಹೋಗಿದ್ದ ಅಮಿತಾಭ್ ಕಂಬ್ಯಾಕ್ ಮಾಡಿದ್ದೇ ಅನೇಕರಿಗೆ ಸ್ಫೂರ್ತಿ

1999ಕ್ಕೂ ಮೊದಲು ಎಲ್ಲವೂ ಚೆನ್ನಾಗಿಯೇ ಇತ್ತು. ಆ ವರ್ಷ ಬಿಸ್ನೆಸ್​ನಲ್ಲಿ ಅಮಿತಾಭ್​ ಬಚ್ಚನ್​ ಕೈ ಸುಟ್ಟುಕೊಂಡರು. ‘ಅಮಿತಾಭ್​ ಬಚ್ಚನ್​ ಕಾರ್ಪೊರೇಷನ್​ ಲಿಮಿಟೆಡ್​’ ಸಂಸ್ಥೆ ದೊಡ್ಡ ನಷ್ಟ ಅನುಭವಿಸಿತು. ಸಾಲ ಕೊಟ್ಟವರು ಮನೆ ಎದುರು ಬಂದರು.

ಎಲ್ಲವನ್ನೂ ಕಳೆದುಕೊಂಡು ಜೀರೋಗೆ ಹೋಗಿದ್ದ ಅಮಿತಾಭ್ ಕಂಬ್ಯಾಕ್ ಮಾಡಿದ್ದೇ ಅನೇಕರಿಗೆ ಸ್ಫೂರ್ತಿ
ಅಮಿತಾಬ್ ಬಚ್ಚನ್
Follow us
|

Updated on: Oct 11, 2023 | 7:03 AM

ಅಮಿತಾಭ್​ ಬಚ್ಚನ್ (Amitabh Bachchan) ಅವರಿಗೆ ಇಂದು (ಅಕ್ಟೋಬರ್ 11) ಜನ್ಮದಿನದ ಸಂಭ್ರಮ. ಅವರು 81ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವಯಸ್ಸಿನಲ್ಲೂ ಅವರು ದಣಿವರಿಯದೆ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಅನೇಕರಿಗೆ ಸ್ಫೂರ್ತಿ ಆಗಿದ್ದಾರೆ. ಹಲವು ದಶಕಗಳಿಂದ ಅವರು ಕಲಾ ಸೇವೆ ಮಾಡುತ್ತಾ ಬರುತ್ತಿದ್ದಾರೆ. ಅವರ ನಟನೆಗೆ ಮನಸೋಲದವರೇ ಇಲ್ಲ ಎಂದರೂ ತಪ್ಪಾಗಲಾರದು. ಅಮಿತಾಭ್ ಬಚ್ಚನ್ ಅವರು ಸಾಗಿ ಬಂದ ಹಾದಿ ಸುಲಭದ್ದಾಗಿರಲಿಲ್ಲ. ಅವರು ಒಮ್ಮೆ ಎಲ್ಲವನ್ನೂ ಕಳೆದುಕೊಂಡಿದ್ದರು. ಆದರೆ ಅವರು ಕುಗ್ಗಲಿಲ್ಲ. ಮತ್ತೆ ಗೆದ್ದು ತೋರಿಸಿದರು.

1999ಕ್ಕೂ ಮೊದಲು ಎಲ್ಲವೂ ಚೆನ್ನಾಗಿಯೇ ಇತ್ತು. ಆ ವರ್ಷ ಬಿಸ್ನೆಸ್​ನಲ್ಲಿ ಅಮಿತಾಭ್​ ಬಚ್ಚನ್​ ಕೈ ಸುಟ್ಟುಕೊಂಡರು. ‘ಅಮಿತಾಭ್​ ಬಚ್ಚನ್​ ಕಾರ್ಪೊರೇಷನ್​ ಲಿಮಿಟೆಡ್​’ ಸಂಸ್ಥೆ ದೊಡ್ಡ ನಷ್ಟ ಅನುಭವಿಸಿತು. ಸಾಲ ಕೊಟ್ಟವರು ಮನೆ ಎದುರು ಬಂದರು. ಕುಟುಂಬದ ಸದಸ್ಯರಿಗೆ ಕೊಲೆ ಬೆದರಿಕೆ ಬಂತು. ಆದರೆ, ಅಮಿತಾಭ್​ ಅವರು ಇದಕ್ಕೆ ಅಂಜಲಿಲ್ಲ. ನಟನೆಯ ಮೂಲಕ ಮತ್ತೆ ಗೆದ್ದು ತೋರಿಸಿದರು.

1999ರ ವೇಳೆಗೆ ಅಮಿತಾಭ್ ಅವರು ವೃತ್ತಿ ಜೀವನದಲ್ಲಿ 44 ವರ್ಷ ಕಳೆದಿದ್ದರು. ಆದರೆ, ಅವರಿಗೆ ಎಂದಿಗೂ ಆ ರೀತಿಯ ಕಷ್ಟ ಬಂದಿರಲೇ ಇಲ್ಲ. ಈ ಕಷ್ಟದಿಂದ ಹೊರ ಬರಲು ಅವರು ನಿರ್ಧರಿಸಿದರು. ನಿರ್ಮಾಪಕ ಯಶ್ ಚೋಪ್ರಾ ಮನೆಗೆ ಹೋದರು. ಅವಕಾಶಕ್ಕಾಗಿ ಅಂಗಲಾಚಿದರು. ಶಾರುಖ್ ಅಭಿನಯದ ‘ಮೊಹಬ್ಬತೇ’ (2000ರಲ್ಲಿ ರಿಲೀಸ್ ಆಯಿತು) ಚಿತ್ರದಲ್ಲಿ ಅಮಿತಾಭ್​ಗೆ ಒಂದು ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಈ ಚಿತ್ರದ ಮೂಲಕ ಅಮಿತಾಭ್ ಅವರು ಕಂಬ್ಯಾಕ್ ಮಾಡಿದರು. ಅವರ ಬದುಕು ಮತ್ತೆ ಬದಲಾಯಿತು.

ಇದನ್ನೂ ಓದಿ: ಪುರುಷತ್ವದ ಸಂಕೇತಕ್ಕೆ ಹೇಳಿಮಾಡಿಸಿದ ವ್ಯಕ್ತಿ ಅಮಿತಾಭ್ ಎಂದು ಟ್ವೀಟ್ ಮಾಡಿದ ತಾಲಿಬಾನ್

ಸಿಕ್ಕ ಎಲ್ಲಾ ಪಾತ್ರಗಳನ್ನು ಒಪ್ಪಿ ನಟಿಸಿದರು ಅಮಿತಾಭ್. ಇದರಿಂದ ಅವರಿಗೆ ಹಣ ಸಿಗುತ್ತಾ ಹೋಯಿತು. ಒಂದೊಂದೇ ಸಾಲವನ್ನು ಅವರು ತೀರಿಸುತ್ತಾ ಬಂದರು. ಮತ್ತೆ ಬೇಡಿಕೆ ಹೆಚ್ಚಿಸಿಕೊಂಡರು. ಈಗ 81ರ ವಯಸ್ಸಲ್ಲೂ ಅವರು ಚಾರ್ಮ್ ಉಳಿಸಿಕೊಂಡಿದ್ದಾರೆ. ‘ಕೌನ್​ ಬನೇಗಾ ಕರೋಡ್ಪತಿ’ ಶೋನ ಅವರು ನಡೆಸಿಕೊಡುತ್ತಿದ್ದಾರೆ. ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಅವರು ಮುಖ್ಯ ಪಾತ್ರ ಒಂದನ್ನು ನಿರ್ವಹಿಸುತ್ತಿದ್ದಾರೆ. ಇನ್ನೂ ಕೆಲವು ಸಿನಿಮಾಗಳು ಅವರ ಕೈಯಲ್ಲಿವೆ. ಅಮಿತಾಭ್ ಜನ್ಮದಿನಕ್ಕೆ ಅನೇಕ ಸೆಲೆಬ್ರಿಟಿಗಳು ವಿಶ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ