ಫ್ಯಾಮಿಲಿ ಫೋಟೋದಿಂದ ಅತ್ತೆ, ನಾದಿನಿ ಮಗಳನ್ನು ಹೊರಗಿಟ್ಟ ಐಶ್ವರ್ಯಾ ರೈ; ಕುಟುಂಬದಲ್ಲಿ ಬಿರುಕು?

ಅತ್ತೆ ಜಯಾ ಬಚ್ಚನ್​ ಮತ್ತು ನಾದಿನಿಯ ಮಗಳು ನವ್ಯಾ ನವೇಲಿ ನಂದಾ ಅವರನ್ನು ಐಶ್ವರ್ಯಾ ರೈ ಬಚ್ಚನ್​ ಅವರು ಫ್ಯಾಮಿಲಿ ಫೋಟೋದಿಂದ ಹೊರಗಿಟ್ಟಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ವಿಷಯವೇ ಹಾಟ್​ ಟಾಪಿಕ್ ಆಗಿದೆ. ಒಂದು ವರ್ಗದ ನೆಟ್ಟಿಗರು ಐಶ್ವರ್ಯಾ ರೈ ಅವರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಫ್ಯಾಮಿಲಿ ಫೋಟೋದಿಂದ ಅತ್ತೆ, ನಾದಿನಿ ಮಗಳನ್ನು ಹೊರಗಿಟ್ಟ ಐಶ್ವರ್ಯಾ ರೈ; ಕುಟುಂಬದಲ್ಲಿ ಬಿರುಕು?
ಆರಾಧ್ಯ​, ಅಮಿತಾಭ್​ ಬಚ್ಚನ್​, ಐಶ್ವರ್ಯಾ ರೈ
Follow us
ಮದನ್​ ಕುಮಾರ್​
|

Updated on: Oct 12, 2023 | 12:12 PM

ಸೆಲೆಬ್ರಿಟಿಗಳು ಏನೇ ಮಾಡಿದರೂ ಅದನ್ನು ಜನರು ಬಹಳ ಸೂಕ್ಷ್ಮವಾಗಿ ಗಮನಿಸುತ್ತಾರೆ. ಸಿನಿಮಾಗಳಲ್ಲಿ ಮಾತ್ರವಲ್ಲದೇ ಅವರ ಖಾಸಗಿ ಜೀವನದಲ್ಲಿ ಆಗುವ ಬೆಳವಣಿಗೆಗಳನ್ನು ಕೂಡ ಗಮನಿಸಲಾಗುತ್ತದೆ. ಎಲ್ಲದರ ಮೇಲೂ ನೆಟ್ಟಿಗರು ಕಣ್ಣಿಟ್ಟಿರುತ್ತಾರೆ. ನಟಿ ಐಶ್ವರ್ಯಾ ರೈ ಬಚ್ಚನ್​ ಅವರ ಕುಟುಂಬದಲ್ಲಿ (Aishwarya Rai Birthday) ಆಗಿರುವ ಸಣ್ಣ ಪುಟ್ಟ ಕಿರಿಕ್​ಗಳು ಕೂಡ ಈಗ ಬೆಳಕಿಗೆ ಬಂದಿವೆ. ಅದಕ್ಕೆ ಸಾಕ್ಷಿ ಎಂಬಂತೆ ಒಂದು ಫೋಟೋ ವೈರಲ್​ ಆಗಿದೆ. ಫ್ಯಾಮಿಲಿ ಫೋಟೋದಿಂದ ಅತ್ತೆ ಜಯಾ ಬಚ್ಚನ್​ (Jaya Bachchan) ಮತ್ತು ನಾದಿನಿಯ ಮಗಳು ನವ್ಯಾ ನವೇಲಿ ನಂದಾ ಅವರನ್ನು ಐಶ್ವರ್ಯಾ ರೈ ಬಚ್ಚನ್​ (Aishwarya Rai Bachchan) ಹೊರಗಿಟ್ಟಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ವಿಷಯವೇ ಹಾಟ್​ ಟಾಪಿಕ್ ಆಗಿದೆ.

ಅಮಿತಾಭ್​ ಬಚ್ಚನ್​ ಅವರು ಅಕ್ಟೋಬರ್​ 11ರಂದು ಜನ್ಮದಿನ ಆಚರಿಸಿಕೊಂಡರು. ಆ ಸಂದರ್ಭದಲ್ಲಿ ಕ್ಲಿಕ್ಕಿಸಿದ ಫೋಟೋದಲ್ಲಿ ಅಮಿತಾಭ್​ ಬಚ್ಚನ್​ ಜೊತೆ ಆರಾಧ್ಯಾ ಬಚ್ಚನ್​, ಜಯಾ ಬಚ್ಚನ್​, ನವ್ಯಾ ನವೇಲಿ ನಂದಾ, ಅಗಸ್ತ್ಯ ನಂದಾ ಕೂಡ ಇದ್ದರು. ಆದರೆ ಆ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುವಾಗ ಜಯಾ, ನವ್ಯಾ ಮತ್ತು ಅಗಸ್ತ್ಯ ಅವರನ್ನು ಐಶ್ವರ್ಯಾ ರೈ ಕ್ರಾಪ್​ ಮಾಡಿದ್ದಾರೆ! ಇದು ಹಲವು ಅನುಮಾನಗಳಿಗೆ ಕಾರಣ ಆಗಿದೆ. ಐಶ್ವರ್ಯಾ ರೈ ಅವರು ಬೇಕಂತಲೇ ಈ ರೀತಿ ಮಾಡಿದ್ದಾರೆ ಎಂಬುದು ನೆಟ್ಟಿಗರ ವಾದ.

ಒಂದು ವರ್ಗದ ನೆಟ್ಟಿಗರು ಐಶ್ವರ್ಯಾ ರೈ ಅವರ ನಡೆಯಲ್ಲಿ ಸಮರ್ಥಿಸಿಕೊಂಡಿದ್ದಾರೆ. ಯಾಕೆಂದರೆ, ಈ ಹಿಂದೆ ಪ್ಯಾರಿಸ್​ ಫ್ಯಾಷನ್​ ವೀಕ್​ನ ಫೋಟೋಗಳನ್ನು ಹಂಚಿಕೊಳ್ಳುವಾಗ ನವ್ಯಾ ಮತ್ತು ಅವರ ತಾಯಿ ಶ್ವೇತಾ ಬಚ್ಚನ್​ ಅವರು ಅದೇ ಇವೆಂಟ್​ನಲ್ಲಿ ತಮ್ಮ ಜೊತೆ ಭಾಗಿ ಆಗಿದ್ದ ಐಶ್ವರ್ಯಾರ ಹೆಸರನ್ನು ಟ್ಯಾಗ್​ ಮಾಡಿರಲಿಲ್ಲ. ಅದು ಬಹಳ ಚರ್ಚೆಗೆ ಕಾರಣ ಆಗಿತ್ತು. ಅದಕ್ಕೆ ತಕ್ಕ ಉತ್ತರ ನೀಡಬೇಕು ಎಂಬ ಉದ್ದೇಶದಿಂದಲೇ ಐಶ್ವರ್ಯಾ ರೈ ಅವರು ಈಗ ನಾದಿನಿಯ ಕುಟುಂಬದವರನ್ನು ಫ್ಯಾಮಿಲಿ ಫೋಟೋದಲ್ಲಿ ಕ್ರಾಪ್​ ಮಾಡಿದ್ದಾರೆ ಎಂಬುದು ನೆಟ್ಟಿಗರ ವಾದ.

ಹೃತಿಕ್​ ಜೊತೆ ತೆರೆಮೇಲೆ ಲಿಪ್ ಲಾಕ್ ಮಾಡಿದ್ದಕ್ಕೆ ಐಶ್ವರ್ಯಾ ರೈಗೆ ಬಂದಿತ್ತು ಲೀಗಲ್ ನೋಟಿಸ್

ಐಶ್ವರ್ಯಾ ರೈ ಅವರು ಈಗ ಸಿನಿಮಾಗಳ ಜೊತೆಯಲ್ಲಿ ಕುಟುಂಬದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಮಗಳ ಆರೈಕೆಯಲ್ಲಿ ಅವರು ತೊಡಗಿಕೊಂಡಿದ್ದಾರೆ. ಹಾಗಾಗಿ ಸಿನಿಮಾಗಳ ಆಯ್ಕೆಯಲ್ಲಿ ಅವರು ಹೆಚ್ಚು ಚ್ಯೂಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾಗಳನ್ನು ಮಾತ್ರ ಒಪ್ಪಿಕೊಳ್ಳುತ್ತಾರೆ. ಈ ವರ್ಷ ಅವರು ನಟಿಸಿದ ‘ಪೊನ್ನಿಯಿನ್​ ಸೆಲ್ವನ್​ 2’ ಸಿನಿಮಾ ಗೆದ್ದು ಬೀಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?