AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೃತಿಕ್​ ಜೊತೆ ತೆರೆಮೇಲೆ ಲಿಪ್ ಲಾಕ್ ಮಾಡಿದ್ದಕ್ಕೆ ಐಶ್ವರ್ಯಾ ರೈಗೆ ಬಂದಿತ್ತು ಲೀಗಲ್ ನೋಟಿಸ್

‘ಧೂಮ್ 2’ ಸಿನಿಮಾದಲ್ಲಿ ಹೃತಿಕ್ ರೋಷನ್​ ಹಾಗೂ ಐಶ್ವರ್ಯಾ ರೈ ಬಚ್ಚನ್ ನಟಿಸಿದ್ದರು. ಇವರ ಮಧ್ಯೆ ಇಂಟಿಮೇಟ್ ದೃಶ್ಯವೊಂದಿತ್ತು. ಲಿಪ್ ಟು ಲಿಪ್ ಕಿಸ್ ಮಾಡುವ ದೃಶ್ಯ ನೋಡಿ ಅನೇಕರು ಐಶ್ವರ್ಯಾ ರೈ ಅವರನ್ನು ಟೀಕೆ ಮಾಡಿದ್ದರು. ಐಶ್ವರ್ಯಾ ರೈಗೆ ನೋಟಿಸ್ ಕೂಡ ಬಂದಿತ್ತು!  

ಹೃತಿಕ್​ ಜೊತೆ ತೆರೆಮೇಲೆ ಲಿಪ್ ಲಾಕ್ ಮಾಡಿದ್ದಕ್ಕೆ ಐಶ್ವರ್ಯಾ ರೈಗೆ ಬಂದಿತ್ತು ಲೀಗಲ್ ನೋಟಿಸ್
ಐಶ್ವರ್ಯಾ-ಹೃತಿಕ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Sep 11, 2023 | 12:10 PM

Share

ನಟಿ ಐಶ್ವರ್ಯಾ ರೈ (Aishwarya Rai) ಅವರು ಬಾಲಿವುಡ್​ನಲ್ಲಿ ಸಾಕಷ್ಟು ಬೇಡಿಕೆ ಹೊಂದಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಅವರು ಅನೇಕ ವಿವಾದ ಮಾಡಿಕೊಂಡಿದ್ದಾರೆ. ಹಲವು ವಿಚಾರಗಳಿಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಅದೇ ರೀತಿ ‘ಧೂಮ್ 2’ ಚಿತ್ರದಲ್ಲಿ ಹೃತಿಕ್ ರೋಷನ್ ಜೊತೆಗಿನ ಲಿಪ್ ಲಾಕ್ ವಿಚಾರಕ್ಕೂ ಅವರ ಕಡೆಯಿಂದ ಸ್ಪಷ್ಟನೆ ಬಂದಿತ್ತು. ‘ಕಿಸ್ ಮಾಡುವಾಗ ನನಗೆ ಮುಜುಗರ ಎನಿಸುತ್ತಿತ್ತು’ ಎಂದಿದ್ದರು ಐಶ್ವರ್ಯಾ ರೈ. ಅಚ್ಚರಿ ಎಂದರೆ ಈ ಕಿಸ್ ದೃಶ್ಯಕ್ಕಾಗಿ ಅವರಿಗೆ ಲೀಗಲ್ ನೋಟಿಸ್ ಕೂಡ ಬಂದಿತ್ತು.

2004ರಲ್ಲಿ ‘ಧೂಮ್’ ಸಿನಿಮಾ ರಿಲೀಸ್ ಆಯಿತು. ಜಾನ್ ಅಬ್ರಹಾಂ ಮೊದಲಾದವರು ನಟಿಸಿದ್ದರು. ಈ ಚಿತ್ರ ಯಶಸ್ಸು ಕಂಡಿತು. ಆ ಬಳಿಕ ‘ಧೂಮ್ 2’ ಸಿನಿಮಾ ಬಿಡುಗಡೆಗೊಂಡಿತು. ಹೃತಿಕ್ ರೋಷನ್​ ಹಾಗೂ ಐಶ್ವರ್ಯಾ ರೈ ಬಚ್ಚನ್ ಇದರಲ್ಲಿ ನಟಿಸಿದ್ದರು. ಇವರ ಮಧ್ಯೆ ಇಂಟಿಮೇಟ್ ದೃಶ್ಯವೊಂದಿತ್ತು. ಲಿಪ್ ಟು ಲಿಪ್ ಕಿಸ್ ಮಾಡುವ ದೃಶ್ಯ ನೋಡಿ ಅನೇಕರು ಐಶ್ವರ್ಯಾ ರೈ ಅವರನ್ನು ಟೀಕೆ ಮಾಡಿದ್ದರು. ಐಶ್ವರ್ಯಾ ರೈಗೆ ನೋಟಿಸ್ ಕೂಡ ಬಂದಿತ್ತು!

2012ರಲ್ಲಿ ಐಶ್ವರ್ಯಾ ರೈ ಸಂದರ್ಶನ ಒಂದರಲ್ಲಿ ಭಾಗಿ ಆಗಿದ್ದರು. ಈ ವೇಳೆ ಅವರು ‘ಧೂಮ್ 2’ ಚಿತ್ರದ ಬಗ್ಗೆ ಮಾತನಾಡಿದ್ದರು. ‘ನಾನು ಧೂಮ್ ಸಿನಿಮಾದಲ್ಲಿ ನಟಿಸಿದ್ದೆ. ಇದರಲ್ಲಿ ನಾನು ಲಿಪ್ ಲಾಕ್ ದೃಶ್ಯ ಮಾಡಿದ್ದೆ. ಇದಕ್ಕಾಗಿ ಅನೇಕರು ನೋಟಿಸ್ ಕಳುಹಿಸಿದ್ದರು’ ಎಂದಿದ್ದರು ಐಶ್ವರ್ಯಾ ರೈ. ‘ನೀವು ಅನೇಕರಿಗೆ ಮಾದರಿ. ಹೀಗಿರುವಾಗ ಈ ರೀತಿಯ ದೃಶ್ಯವನ್ನು ಹೇಗೆ ಮಾಡುತ್ತೀರಿ’ ಎಂದು ನೋಟಿಸ್​ನಲ್ಲಿ ಪ್ರಶ್ನೆ ಮಾಡಲಾಗಿತ್ತು. ‘ನಾನು ಕೇವಲ ನಟಿ. ನಾನು ನನ್ನ ಕೆಲಸ ಮಾಡುತ್ತಿದ್ದೇನೆ. ಎರಡು ಗಂಟೆ ಮೂವತ್ತು ನಿಮಿಷದ ಸಿನಿಮಾದಲ್ಲಿ ಕೆಲವೇ ಸೆಕೆಂಡ್​ನ ದೃಶ್ಯಕ್ಕೆ ನನ್ನನ್ನು ಪ್ರಶ್ನೆ ಮಾಡಲಾಗಿತ್ತು’ ಎಂದು ಅವರು ಹೇಳಿಕೊಂಡಿದ್ದಾರೆ.

ಹಾಲಿವುಡ್ ಸಿನಿಮಾ ಮಾಡಬೇಕು ಎಂಬುದು ಐಶ್ವರ್ಯಾ ಆಸೆ ಆಗಿತ್ತು. ಅವರಿಗೆ ಇಂಗ್ಲಿಷ್ ಸಿನಿಮಾದಲ್ಲಿ ನಟಿಸಲು  ಆಫರ್ ಕೂಡ ಬಂದಿತ್ತು. ಆದರೆ, ಕಿಸ್ಸಿಂಗ್ ದೃಶ್ಯ ಹಾಗೂ ಹಸಿಬಿಸಿ ದೃಶ್ಯ ಮಾಡಲು ಕಂಫರ್ಟ್ ಎನಿಸುವುದಿಲ್ಲ ಎಂಬ ಕಾರಣದಿಂದಲೇ ಅವರು ಹಲವು ಆಫರ್ ತಿರಸ್ಕರಿಸಿದ್ದರಂತೆ.

‘ನಾನು ತೆರೆಯ ಮೇಲೆ ಕಿಸ್ ಮಾಡುವುದನ್ನು ನನ್ನ ಪ್ರೇಕ್ಷಕರು ಸಹ ಸಹಿಸುವುದಿಲ್ಲ ಎಂಬುದು ನನಗೆ ಖಚಿತವಾಗಿತ್ತು. ನನಗೆ ಅದು ಮನವರಿಕೆಯಾಗಿತ್ತು. ಆದಾಗ್ಯೂ ಧೂಮ್ ಚಿತ್ರದಲ್ಲಿ ಆ ರೀತಿಯ ದೃಶ್ಯ ಮಾಡಲು ಓಕೆ ಎಂದೆ. ಆ ಸಿನಿಮಾಗೂ ಮೊದಲು ಬಹಳಷ್ಟು ಕಲಾವಿದರು ತೆರೆಮೇಲೆ ಕಿಸ್ ಮಾಡಿದ್ದಾರೆ. ಅವರು ನಿಮಿಷದವರೆಗೂ ತೆರೆಯ ಮೇಲೆ ಚುಂಬಿಸುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಭಾರತೀಯ ಸಂಸ್ಕೃತಿಯಲ್ಲಿ ಈ ರೀತಿಯ ದೃಶ್ಯವನ್ನು ಸಾರ್ವಜನಿಕ ತೋರಿಸುವುದು ಸಾಮಾನ್ಯ ವಿಚಾರ ಅಲ್ಲ. ತೆರೆಮೇಲೆ ಕಿಸ್ ಮಾಡಿ ಮುಜುಗರ ಪಟ್ಟಿಕೊಳ್ಳದೇ ಇರೋ ನಟ-ನಟಿಯರು ಕಡಿಮೆ. ನನಗೂ ಅದು ಮುಜುಗರ ಎನಿಸುತ್ತದೆ’ ಎಂದಿದ್ದರು ಐಶ್ವರ್ಯಾ ರೈ.

ಇದನ್ನೂ ಓದಿ: ‘ಪ್ರತಿ ದಿನ ಮೀನು ತಿಂದರೆ ನಿಮ್ಮ ಕಣ್ಣು ಐಶ್ವರ್ಯಾ ರೈ ರೀತಿ ಆಗುತ್ತದೆ’: ವಿವಾದ ಹುಟ್ಟಿಸಿದ ಸಚಿವರ ಹೇಳಿಕೆ

ಇತ್ತೀಚೆಗೆ ತೆರೆಗೆ ಬಂದ ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಚಿತ್ರದಲ್ಲಿ ಐಶ್ವರ್ಯಾ ರೈ ನಟಿಸಿದ್ದರು. ಕಾರ್ತಿ ಮೊದಲಾದ ಸ್ಟಾರ್ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದರು. ಸದ್ಯ ಅವರ ಯಾವುದೇ ಹೊಸ ಸಿನಿಮಾ ಘೋಷಣೆ ಆಗಿಲ್ಲ. ಮಗಳು ಆರಾಧ್ಯ ಆರೈಕೆಯಲ್ಲಿ ಅವರು ತೊಡಗಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:03 pm, Mon, 11 September 23

ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ