ಸೋಮವಾರವೂ ತಗ್ಗಲಿಲ್ಲ ‘ಜವಾನ್’ ಕಲೆಕ್ಷನ್; 300 ಕೋಟಿ ಕ್ಲಬ್ ಸೇರಿದ ಶಾರುಖ್ ಸಿನಿಮಾ

ಹೈ ಬಜೆಟ್ ಸಿನಿಮಾಗಳು ಬಿಡುಗಡೆ ಆದ ದಿನ, ವಾರಾಂತ್ಯದಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತವೆ. ಆದರೆ, ಸೋಮವಾರ ಚಿತ್ರ ಎಷ್ಟು ಗಳಿಕೆ ಮಾಡಿತು ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ‘ಜವಾನ್’ ಸಿನಿಮಾ ವಾರದ ಮೊದಲ ದಿನವಾದ ಸೋಮವಾರ 30 ಕೋಟಿ ರೂಪಾಯಿ ಬಾಚಿಕೊಂಡು ನಿರ್ಮಾಪಕರ ಮೊಗದಲ್ಲಿ ನಗು ಮೂಡಿಸಿದೆ.

ಸೋಮವಾರವೂ ತಗ್ಗಲಿಲ್ಲ ‘ಜವಾನ್’ ಕಲೆಕ್ಷನ್; 300 ಕೋಟಿ ಕ್ಲಬ್ ಸೇರಿದ ಶಾರುಖ್ ಸಿನಿಮಾ
ಶಾರುಖ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 12, 2023 | 7:40 AM

ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ (Jawan Movie) ಸೋಮವಾರದ (ಸೆಪ್ಟೆಂಬರ್ 11) ಪರೀಕ್ಷೆಯಲ್ಲಿ ಪಾಸ್ ಆಗಿದೆ. ಈ ಚಿತ್ರ ವಾರದ ಮೊದಲ ದಿನ 30 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಚಿತ್ರದ ಅಬ್ಬರ ಮುಂದುವರಿದಿದೆ. ಮುಂದಿನ ವಾರ ಗಣೇಶ ಚತುರ್ಥಿ ಪ್ರಯಕ್ತ ಸಾಲು ಸಾಲು ರಜೆಗಳು ಬರುತ್ತಿವೆ. ಇದು ಚಿತ್ರತಂಡಕ್ಕೆ ಸಹಕಾರಿ ಆಗಲಿದೆ. ಈ ಚಿತ್ರ ಅನಾಯಾಸವಾಗಿ 500 ಕೋಟಿ ಕ್ಲಬ್ ಸೇರಲಿದೆ. ಈ ಚಿತ್ರದ ಮೂಲಕ ಶಾರುಖ್ ಖಾನ್ (Shah Rukh Khan) ಅವರು ಮತ್ತೊಂದು ಗೆಲುವು ಕಂಡಿದ್ದಾರೆ.

ಹೈ ಬಜೆಟ್ ಸಿನಿಮಾಗಳು ಬಿಡುಗಡೆ ಆದ ದಿನ, ವಾರಾಂತ್ಯದಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತವೆ. ಆದರೆ, ಸೋಮವಾರ ಚಿತ್ರ ಎಷ್ಟು ಗಳಿಕೆ ಮಾಡಿತು ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ‘ಜವಾನ್’ ಸಿನಿಮಾ ವಾರದ ಮೊದಲ ದಿನವಾದ ಸೋಮವಾರ 30 ಕೋಟಿ ರೂಪಾಯಿ ಬಾಚಿಕೊಂಡು ನಿರ್ಮಾಪಕರ ಮೊಗದಲ್ಲಿ ನಗು ಮೂಡಿಸಿದೆ. ಈ ಸಿನಿಮಾ ಸೋಮವಾರ ಹಿಂದಿ, ತಮಿಳು ಹಾಗೂ ತೆಲುಗು ವರ್ಷನ್​ನಿಂದ 30 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 316 ಕೋಟಿ ರೂಪಾಯಿ ಆಗಿದೆ.

‘ಜವಾನ್’ ಸಿನಿಮಾ ಕಲೆಕ್ಷನ್ ವಿವರ:

ಗುರುವಾರ (ಸೆಪ್ಟೆಂಬರ್ 7): 75 ಕೋಟಿ ರೂಪಾಯಿ. (ಹಿಂದಿ 65 ಕೋಟಿ ರೂಪಾಯಿ. ತಮಿಳು-ತೆಲುಗು 10 ಕೋಟಿ ರೂಪಾಯಿ)

ಶುಕ್ರವಾರ (ಸೆಪ್ಟೆಂಬರ್ 8): 53.23ಕೋಟಿ ರೂಪಾಯಿ. (ಹಿಂದಿ 46.23 ಕೋಟಿ ರೂಪಾಯಿ. ತಮಿಳು-ತೆಲುಗು 7 ಕೋಟಿ ರೂಪಾಯಿ)

ಶನಿವಾರ (ಸೆಪ್ಟೆಂಬರ್ 9): 77.83 ಕೋಟಿ ರೂಪಾಯಿ. (ಹಿಂದಿ 68.72 ಕೋಟಿ ರೂಪಾಯಿ. ತಮಿಳು-ತೆಲುಗು 9.11 ಕೋಟಿ ರೂಪಾಯಿ)

ಇದನ್ನೂ ಓದಿ: ಅಂಡರ್ವಲ್ಡ್ ಮುಂದೆ ಮಂಡಿಯೂರದ ಏಕೈಕ ಬಾಲಿವುಡ್ ಸ್ಟಾರ್ ಶಾರುಖ್ ಖಾನ್

ಭಾನುವಾರ (ಸೆಪ್ಟೆಂಬರ್ 10): 80.1 ಕೋಟಿ ರೂಪಾಯಿ. (ಹಿಂದಿ 71.63 ಕೋಟಿ ರೂಪಾಯಿ. ತಮಿಳು-ತೆಲುಗು 8.47 ಕೋಟಿ ರೂಪಾಯಿ)

ಸೋಮವಾರ (ಸೆಪ್ಟೆಂಬರ್ 11): 30 ಕೋಟಿ ರೂಪಾಯಿ. ಒಟ್ಟೂ ಕಲೆಕ್ಷನ್ 316 ಕೋಟಿ ರೂಪಾಯಿ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್