AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಂಡರ್ವಲ್ಡ್ ಮುಂದೆ ಮಂಡಿಯೂರದ ಏಕೈಕ ಬಾಲಿವುಡ್ ಸ್ಟಾರ್ ಶಾರುಖ್ ಖಾನ್’

Shah Rukh Khan: 90 ರ ದಶಕದಲ್ಲಿ ಬಾಲಿವುಡ್​ ಅನ್ನು ತನ್ನ ಕಪಿಮುಷ್ಠಿಯಲ್ಲಿ ಇರಿಸಿಕೊಂಡಿತ್ತು ಭೂಗತ ಲೋಕ. ಸ್ಟಾರ್ ನಟರನ್ನು ತನ್ನಿಚ್ಚೆಯಂತೆ ಕುಣಿಸುತ್ತಿದ್ದ ಭೂಗತ ಪಾತಕಿಗಳು, ಆದರೆ ಶಾರುಖ್ ಖಾನ್ ಮಾತ್ರ ಈ ಪಾತಕಿಗಳ ಎದುರು ಮಂಡಿ ಊರಿರಲಿಲ್ಲ.

'ಅಂಡರ್ವಲ್ಡ್ ಮುಂದೆ ಮಂಡಿಯೂರದ ಏಕೈಕ ಬಾಲಿವುಡ್ ಸ್ಟಾರ್ ಶಾರುಖ್ ಖಾನ್'
ಜವಾನ್
ಮಂಜುನಾಥ ಸಿ.
|

Updated on: Sep 09, 2023 | 11:26 PM

Share

ಶಾರುಖ್ ಖಾನ್ (Shah Rukh Khan) ನಟನೆಯ ‘ಜವಾನ್‘ (Jawan) ಸಿನಿಮಾ ಎರಡು ದಿನದ ಹಿಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾ ವಿಶ್ವದೆಲ್ಲೆಡೆ ಅತ್ಯದ್ಭುತ ಪ್ರದರ್ಶನ ಕಾಣುತ್ತಿದೆ. ಬಿಡುಗಡೆ ಆದ ಎರಡೇ ದಿನದಲ್ಲಿ 100 ಕೋಟಿಗೂ ಹೆಚ್ಚು ಹಣವನ್ನು ಕೇವಲ ಭಾರತ ಒಂದರಲ್ಲೇ ಕಲೆಕ್ಷನ್ ಮಾಡಿದೆ. ಸಿನಿಮಾದಲ್ಲಿ ಪವರ್​ಫುಲ್ ಪಾತ್ರದಲ್ಲಿ ಶಾರುಖ್ ಖಾನ್ ಕಾಣಿಸಿಕೊಂಡಿದ್ದಾರೆ. ಯಾರಿಗೂ ಹೆದರದ, ನೇರ ವ್ಯಕ್ತಿತ್ವದ, ಯಾರ ಮುಂದೆಯೂ ಮಂಡಿಯೂರದ, ದುಷ್ಟರನ್ನು ಸಂಹಾರ ಮಾಡುವ ಪಾತ್ರದಲ್ಲಿ ಶಾರುಖ್ ಖಾನ್ ಕಾಣಿಸಿಕೊಂಡಿದ್ದಾರೆ. ಸಿನಿಮಾ ನೋಡಿದ ಬಾಲಿವುಡ್​ನ ಹಿರಿಯ ನಿರ್ದೇಶಕರೊಬ್ಬರು, ಹಳೆಯ ನೆನಪುಗಳಿಗೆ ಜಾರಿದ್ದು, ‘ಜವಾನ್’ ಸಿನಿಮಾದ ನಾಯಕನಿಗೂ ಶಾರುಖ್ ಖಾನ್ ನಿಜ ವ್ಯಕ್ತಿತ್ವಕ್ಕೂ ಸಾಮ್ಯತೆ ಇದೆ ಎಂದಿದ್ದು, ಉದಾಹರಣೆಯನ್ನೂ ನೀಡಿದ್ದಾರೆ.

90 ದಶಕ ಬಾಲಿವುಡ್​ ಪಾಲಿಗೆ ಸುವರ್ಣಯುಗ. ಹಲವು ಅತ್ಯುತ್ತಮ ಸಿನಿಮಾಗಳು ಈ ಅವಧಿಯಲ್ಲಿ ಬಾಲಿವುಡ್​ನಲ್ಲಿ ನಿರ್ಮಾಣಗೊಂಡವು. ಆದರೆ ಅದರ ಜೊತೆಗೆ ಇದೇ ದಶಕದಲ್ಲಿ ಬಾಲಿವುಡ್​, ಅಂಡರ್ವಲ್ಡ್​ನ ಕಪಿಮುಷ್ಠಿಗೆ ಸಹ ಸಿಲುಕಿಕೊಂಡಿತ್ತು. ಅಬು ಸಲೇಂ, ದಾವೂದ್ ಇಬ್ರಾಹಿಂ, ಚೋಟಾ ಶಕೀಲ್ ಸೇರಿದಂತೆ ಹಲವು ಭೂಗತ ಲೋಕದ ಪಾತಕಿಗಳು ಬಾಲಿವುಡ್​ಗೆ ಕಾಲಿಟ್ಟು ಇಲ್ಲಿನ ವ್ಯವಹಾರದ ಮೇಲೆ ಹಿಡಿತ ಸಾಧಿಸಿದರು. ಬಾಲಿವುಡ್ ಸ್ಟಾರ್ ನಟರನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಿದ್ದರು.

ಸಲ್ಮಾನ್ ಖಾನ್, ಸಂಜಯ್ ದತ್, ಅನಿಲ್ ಕಪೂರ್, ರಾಮ್ ಗೋಪಾಲ್ ವರ್ಮಾ ಇನ್ನೂ ಹಲವಾರು ಮಂದಿ ಸ್ಟಾರ್ ನಟ, ನಿರ್ದೇಶಕರನ್ನು ಭೂಗತ ಲೋಕದ ಪಾತಕಿಗಳು ತಮ್ಮ ಹಿಡಿತದಲ್ಲಿ ಇರಿಸಿಕೊಂಡಿದ್ದರು. ಬಾಲಿವುಡ್ ಸಿನಿಮಾಗಳಿಗೆ ತಮ್ಮ ಕಪ್ಪು ಹಣವನ್ನು ತೊಡಗಿಸಿದರು, ತಾವು ಹೇಳಿದವರಿಗೆ ಪಾತ್ರ ನೀಡುವಂತೆ ನಿರ್ಮಾಪಕರು, ನಿರ್ದೇಶಕರ ಮೇಲೆ ಒತ್ತಡಗಳನ್ನು ಹೇರಿದ್ದರು, ತಮ್ಮ ಮಾತು ಕೇಳದ ನಿರ್ಮಾಪಕರಿಗೆ ಗುಂಡು ಹೊಡೆದು ಕೊಂದ ಉದಾಹರಣೆಗಳೂ ಸಹ ಇದೆ. ಅನಿಲ್ ಕಪೂರ್ ಸೇರಿದಂತೆ ಹಲವು ಬಾಲಿವುಡ್ ನಟರು ಭೂಗತ ಪಾತಕಿಗಳೊಟ್ಟಿಗೆ ಇರುವ ಚಿತ್ರಗಳು ಈಗಲೂ ಇವೆ.

ಇದನ್ನೂ ಓದಿ:ಹೇಗಿದೆ ಜವಾನ್ ಸಿನಿಮಾದ ಫಸ್ಟ್ ಹಾಫ್? ಶಾರುಖ್ ಖಾನ್-ಅಟ್ಲಿ ಕಾಂಬಿನೇಷನ್‌ನಲ್ಲಿ ಏನೆಲ್ಲ ಇದೆ?

ಆದರೆ ಭೂಗತ ಪಾತಕಿಗಳು ಹಾಗೂ ಬಾಲಿವುಡ್ ಕುರಿತಾಗಿ ಸುದ್ದಿ ಬಂದಾಗ ಆ ಪಟ್ಟಿಯಲ್ಲಿ ಶಾರುಖ್ ಖಾನ್ ಹೆಸರು ಕೇಳುವುದಿಲ್ಲ. ಇದೀಗ ಹಳೆಯ ನಿರ್ದೇಶಕ ಸಂಜಯ್ ಗುಪ್ತಾ ಆ ಬಗ್ಗೆ ಟ್ವೀಟ್ ಒಂದನ್ನು ಮಾಡಿದ್ದಾರೆ, ”ನಾನು ‘ಜವಾನ್’ ಸಿನಿಮಾ ನೋಡಿದೆ. ಈ ಒಂದು ವಿಷಯವನ್ನು ಹಂಚಿಕೊಳ್ಳಬೇಕು ಎನಿಸಿತು. 90ರ ದಶಕದಲ್ಲಿ ಭೂಗತ ಲೋಕದ ಪಾತಕಿಗಳು ಬಾಲಿವುಡ್ ಸ್ಟಾರ್ ನಟರನ್ನು ತಮ್ಮಿಷ್ಟದಂತೆ ಕುಣಿಸುತ್ತಿರುವಾಗ ಶಾರುಖ್ ಖಾನ್ ಮಾತ್ರ ಅವರ ಮುಂದೆ ಮಂಡಿ ಊರಿರಲಿಲ್ಲ. ”ಗುಂಡು ಹೊಡೆಯುವುದಾದರೆ ಹೊಡಿ, ನೀನು ಹೇಳಿದಂತೆ ಮಾಡಲು ಆಗುವುದಿಲ್ಲ. ನಾನು ಪಠಾಣ್” ಎಂದು ಅಬ್ಬರಿಸಿದ್ದ. ಇಂದಿಗೂ ಶಾರುಖ್ ಖಾನ್ ಹಾಗೆಯೇ ಇದ್ದಾರೆ” ಎಂದಿದ್ದಾರೆ ಸಂಜಯ್.

90ರ ದಶಕದಲ್ಲಿ ಬಾಲಿವುಡ್ ಸಂಪೂರ್ಣವಾಗಿ ಭೂಗತ ಲೋಕದ ಕಪಿಮುಷ್ಠಿಯಲ್ಲಿತ್ತು. ಸಿನಿಮಾ ಪಾರ್ಟಿಗಳಲ್ಲಿ ಭೂಗತ ಪಾತಕಿಗಳು ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿದ್ದರು. ಸಿನಿಮಾ ನಾಯಕಿಯರೊಟ್ಟಿಗೆ ಈ ಪಾತಕಿಗಳು ಆತ್ಮೀಯ ಬಂಧ ಹೊಂದಿದ್ದರು. ತಮ್ಮ ಮೆಚ್ಚಿನ ನಟಿಯರಿಗೆ ಹೆಚ್ಚು ಸಿನಿಮಾಗಳು ಸಿಗುವಂತೆ ಮಾಡುತ್ತಿದ್ದರು. ಸಿನಿಮಾ ನಿರ್ಮಾಪಕರಿಗೆ ಬೆದರಿಕೆ ಹಾಕಿ ಸಿನಿಮಾ ಲಾಭದಲ್ಲಿ ಪಾಲು ಪಡೆಯುತ್ತಿದ್ದರು. ಆದರೆ 90ರ ದಶಕದ ಬಳಿಕ ಬಾಲಿವುಡ್​ ಮೇಲೆ ಮಾಫಿಯಾದ ಹಿಡಿತ ಕೈತಪ್ಪಿತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ