AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪ್ರತಿ ದಿನ ಮೀನು ತಿಂದರೆ ನಿಮ್ಮ ಕಣ್ಣು ಐಶ್ವರ್ಯಾ ರೈ ರೀತಿ ಆಗುತ್ತದೆ’: ವಿವಾದ ಹುಟ್ಟಿಸಿದ ಸಚಿವರ ಹೇಳಿಕೆ

‘ನೀವು ಐಶ್ವರ್ಯಾ ರೈ ಅವರನ್ನು ನೋಡಿದ್ದೀರಾ? ಅವರು ಪ್ರತಿ ದಿನ ಮೀನು ತಿನ್ನುತ್ತಿದ್ದರು. ಮೀನು ತಿನ್ನುವುದರಿಂದ ಎರಡು ಪ್ರಯೋಜನಗಳಿವೆ. ಮಹಿಳೆಯರು ಸ್ಲಿಮ್​ ಆಗುತ್ತಾರೆ ಮತ್ತು ಆಕರ್ಷಕವಾಗಿ ಕಾಣುತ್ತಾರೆ’ ಎಂದು ವಿಜಯ್ ಕುಮಾರ್ ಗವಿತ್ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಯಿಂದಾಗಿ ಚರ್ಚೆ ಶುರುವಾಗಿದೆ.

‘ಪ್ರತಿ ದಿನ ಮೀನು ತಿಂದರೆ ನಿಮ್ಮ ಕಣ್ಣು ಐಶ್ವರ್ಯಾ ರೈ ರೀತಿ ಆಗುತ್ತದೆ’: ವಿವಾದ ಹುಟ್ಟಿಸಿದ ಸಚಿವರ ಹೇಳಿಕೆ
ಐಶ್ವರ್ಯಾ ರೈ ಬಚ್ಚನ್​
ಮದನ್​ ಕುಮಾರ್​
|

Updated on: Aug 21, 2023 | 3:10 PM

Share

ಮಹಾರಾಷ್ಟ್ರದಲ್ಲಿ ಏಕನಾಥ್​ ಶಿಂಧೆ ಸರ್ಕಾರದ ಸಚಿವರು, ಶಾಸಕರು ದಿನವೂ ಒಂದಿಲ್ಲೊಂದು ಕಾರಣಕ್ಕೆ ಚರ್ಚೆಯಲ್ಲಿ ಇರುತ್ತಾರೆ. ಎರಡು ದಿನಗಳ ಹಿಂದೆ ಶಿಂಧೆ ಗುಂಪಿನ ಶಾಸಕ ಭರತ್ ಗೋಗವ್ಲೆ ಅವರು ಶಾಸಕರಿಗೆ ಸಚಿವ ಸ್ಥಾನ ಹೇಗೆ ಸಿಕ್ಕಿತು ಎಂಬುದನ್ನು ಬಹಿರಂಗಪಡಿಸುವ ಮೂಲಕ ಶಿಂಧೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಇದೀಗ ಬುಡಕಟ್ಟು ಅಭಿವೃದ್ಧಿ ಸಚಿವ ಡಾ. ವಿಜಯ್ ಕುಮಾರ್ ಗವಿತ್ (Vijaykumar Gavit) ಅವರು ಒಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. ‘ನಟಿ ಐಶ್ವರ್ಯಾ ರೈ (Aishwarya Rai Bachchan) ಮೀನು ತಿನ್ನುತ್ತಿದ್ದರು. ಆದ್ದರಿಂದ ಅವರ ಕಣ್ಣುಗಳು ಮತ್ತು ಚರ್ಮವು ಸುಂದರವಾಗಿದೆ. ಮೀನು (Fish) ತಿನ್ನುವ ಮೂಲಕ ನಿಮ್ಮ ಕಣ್ಣುಗಳನ್ನು ಸುಂದರವಾಗಿಸಿಕೊಳ್ಳಿ’ ಎಂದು ವಿಜಯ್ ಕುಮಾರ್ ಗವಿತ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಧುಲೆ ಜಿಲ್ಲೆಯ ಅಂತುರ್ಲಿಯಲ್ಲಿ ಬುಡಕಟ್ಟು ಮೀನುಗಾರಿಗೆ ಮೀನುಗಾರಿಕೆಯ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಬುಡಕಟ್ಟು ಅಭಿವೃದ್ಧಿ ಸಚಿವ ಡಾ. ವಿಜಯ್ ಕುಮಾರ್ ಗವಿತ್ ಈ ಹೇಳಿಕೆ ನೀಡಿದ್ದಾರೆ. ಆ ಸಮಯದಲ್ಲಿ, ಡಾ. ಸುಪ್ರಿಯಾ ಗವಿತ್ ಕೂಡ ಉಪಸ್ಥಿತರಿದ್ದರು.

ಇದನ್ನೂ ಓದಿ: ‘ಪೊನ್ನಿಯಿನ್​ ಸೆಲ್ವನ್​ 2’ಸಿನಿಮಾಗೆ ಐಶ್ವರ್ಯಾ ರೈ ಪಡೆದ ಸಂಭಾವನೆ ಎಷ್ಟು? ಬಚ್ಚನ್​ ಸೊಸೆಗೆ ಭಾರಿ ಬೇಡಿಕೆ

‘ಬಾಲಿವುಡ್​ನ ಖ್ಯಾತ ನಟಿ ಐಶ್ವರ್ಯಾ ರೈ ಅವರು ಪ್ರತಿ ದಿನ ಮೀನು ತಿನ್ನುವುದರಿಂದ ಸುಂದರವಾದ ಕಣ್ಣುಗಳನ್ನು ಹೊಂದಿದ್ದಾರೆ. ನೀವೂ ಕೂಡ ಪ್ರತಿ ದಿನ ಮೀನು ತಿಂದರೆ ನಿಮ್ಮ ಕಣ್ಣುಗಳು ಕೂಡ ಸುಂದರವಾಗಿರುತ್ತದೆ. ಯಾರಿಗೆ ಬೇಕಾದರೂ ಇದನ್ನು ಮನವರಿಕೆ ಮಾಡಿಕೊಡುತ್ತೇವೆ’ ಎಂದು ವಿಜಯ್​ ಕುಮಾರ್ ಗವಿತ್ ಹೇಳಿಕೆ ನೀಡಿದ್ದಾರೆ. ಅವರು ಈ ಹೇಳಿಕೆಯಿಂದ ಅಲ್ಲಿದ್ದವರ ಹುಬ್ಬೇರಿಸಿತು.

ಇದನ್ನೂ ಓದಿ: ಐಶ್ವರ್ಯಾ ರೈ ವರ್ತನೆ ಕಂಡು ಸ್ಟುಪಿಡ್​ ಎಂದ ವಿವೇಕ್​ ಅಗ್ನಿಹೋತ್ರಿ; ನಟಿಯಿಂದ ಆದ ತಪ್ಪೇನು?

‘ನೀವು ಐಶ್ವರ್ಯಾ ರೈ ಅವರನ್ನು ನೋಡಿದ್ದೀರಾ? ಅವರು ಪ್ರತಿ ದಿನ ಮೀನು ತಿನ್ನುತ್ತಿದ್ದರು. ಅವರ ಕಣ್ಣುಗಳನ್ನು ನೋಡಿದ್ದೀರಾ? ಮೀನು ತಿನ್ನುವುದರಿಂದ ಎರಡು ಪ್ರಯೋಜನಗಳಿವೆ. ಮಹಿಳೆಯರು ಸ್ಲಿಮ್​ ಆಗುತ್ತಾರೆ ಮತ್ತು ಆಕರ್ಷಕವಾಗಿ ಕಾಣುತ್ತಾರೆ. ಮೀನಿನಲ್ಲಿ ಇರುವ ಒಂದು ತೈಲದಿಂದ ಇದು ಸಾಧ್ಯ. ನಿಮ್ಮ ಕಣ್ಣು ಮತ್ತು ತ್ವಚೆ ಕಾಂತಿಯುತವಾಗಿ ಕಾಣುತ್ತವೆ’ ಎಂದು ವಿಜಯ್​ ಕುಮಾರ್ ಗವಿತ್ ಹೇಳಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ನವರು ಒಳ್ಳೆಯ ಅವಕಾಶಗಳನ್ನು ನೀಡುತ್ತಿಲ್ಲ: ಐಶ್ವರ್ಯಾ ರೈ

ಈ ಮೊದಲು ವಿಜಯ್​ ಕುಮಾರ್​ ಗವಿತ್​ ಅವರು ಎನ್​ಸಿಪಿ ಪಕ್ಷದ ಜೊತೆ ಗುರುತಿಸಿಕೊಂಡಿದ್ದರು. ಉದ್ಧವ್​ ಠಾಕ್ರೆ ಸರ್ಕಾರದಲ್ಲಿ ಅವರು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು. ನಂತರ ಅವರು ಬಿಜೆಪಿ ಸೇರಿಕೊಂಡರು. ಈಗ ಬುಡಕಟ್ಟು ಅಭಿವೃದ್ಧಿ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!