AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಲುಕ್​ನಲ್ಲಿ ಬಂದ ಸಲ್ಮಾನ್ ಖಾನ್; ಅಭಿಮಾನಿಗಳಿಗೆ ನೆನಪಾಯ್ತು ‘ಹುಚ್ಚ’ ಸಿನಿಮಾ

ಸಲ್ಮಾನ್ ಖಾನ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅವರು ಬ್ಲ್ಯಾಕ್ ಪ್ಯಾಂಟ್ ಹಾಗೂ ಬ್ಲ್ಯಾಕ್ ಶರ್ಟ್ ಧರಿಸಿದ್ದರು. ಈ ವೇಳೆ ಗಮನ ಸೆಳೆದಿದ್ದು ಅವರ ಹೇರ್​ಸ್ಟೈಲ್. ಅವರ ಹೊಸ ಸ್ಟೈಲ್ ನೋಡಿ ಅಭಿಮಾನಿಗಳು ಅಚ್ಚರಿಗೊಂಡರು.

ಹೊಸ ಲುಕ್​ನಲ್ಲಿ ಬಂದ ಸಲ್ಮಾನ್ ಖಾನ್; ಅಭಿಮಾನಿಗಳಿಗೆ ನೆನಪಾಯ್ತು ‘ಹುಚ್ಚ’ ಸಿನಿಮಾ
ಸಲ್ಮಾನ್ ಖಾನ್
ರಾಜೇಶ್ ದುಗ್ಗುಮನೆ
|

Updated on: Aug 21, 2023 | 11:16 AM

Share

ನಟ ಸಲ್ಮಾನ್ ಖಾನ್ (Salman Khan) ಅವರು ಏನೇ ಮಾಡಿದರೂ ಸುದ್ದಿ ಆಗುತ್ತದೆ. ಅವರು ಆಗಾಗ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಪಾಪರಾಜಿಗಳು ಕ್ಯಾಮೆರಾ ಹಿಡಿದು ನಿಲ್ಲುತ್ತಾರೆ. ಆಗಸ್ಟ್ 20ರಂದು ಸಲ್ಲುಗಾಗಿ ಕಾದು ನಿಂತಿದ್ದ ಅಭಿಮಾನಿಗಳು ಹಾಗೂ ಪಾಪರಾಜಿಗಳಿಗೆ ಒಂದು ಅಚ್ಚರಿ ಕಾದಿತ್ತು. ಸಲ್ಮಾನ್ ಖಾನ್ ಅವರು ಹೊಸ ಲುಕ್​ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ತಲೆಕೂದಲನ್ನು ಅವರು ಚಿಕ್ಕದಾಗಿ ಕತ್ತರಿಸಿಕೊಂಡಿದ್ದಾರೆ. ಈ ಲುಕ್ ಸಾಕಷ್ಟು ಗಮನ ಸೆಳೆದಿದೆ.

ಸಲ್ಮಾನ್ ಖಾನ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅವರು ಬ್ಲ್ಯಾಕ್ ಪ್ಯಾಂಟ್ ಹಾಗೂ ಬ್ಲ್ಯಾಕ್ ಶರ್ಟ್ ಧರಿಸಿದ್ದರು. ಈ ವೇಳೆ ಗಮನ ಸೆಳೆದಿದ್ದು ಅವರ ಹೇರ್​ಸ್ಟೈಲ್. ಅವರ ಹೊಸ ಸ್ಟೈಲ್ ನೋಡಿ ಅಭಿಮಾನಿಗಳು ಅಚ್ಚರಿಗೊಂಡರು. ಅಭಿಮಾನಿಗಳಿಗೆ ‘ತೆರೆ ನಾಮ್’ ಸಿನಿಮಾ ನೆನಪಾಗಿದೆ.

1999ರಲ್ಲಿ ಬಂದ ತಮಿಳಿನ ‘ಸೇತು’ ಚಿತ್ರ ಕನ್ನಡಕ್ಕೆ ‘ಹುಚ್ಚ’ ಎಂದು ರಿಮೇಕ್ ಮಾಡಲಾಯಿತು. ಸುದೀಪ್ ಅವರು ಮುಖ್ಯಭೂಮಿಕೆ ನಿರ್ವಹಿಸಿದ್ದರು. ಬಳಿಕ ಸಿನಿಮಾ ಹಿಂದಿಯಲ್ಲಿ ‘ತೆರೆ ನಾಮ್’ ಎಂದು ರಿಮೇಕ್ ಆಯಿತು. ಇದರಲ್ಲಿ ಸಲ್ಮಾನ್ ಖಾನ್ ಅವರು ಮುಖ್ಯಭೂಮಿಕೆ ನಿರ್ವಹಿಸಿದ್ದರು. ಈ ಚಿತ್ರದಲ್ಲಿ ಬಾಲ್ಡ್ ಲುಕ್ ಬರುತ್ತದೆ. ಈಗ ಸಲ್ಮಾನ್ ಖಾನ್ ನೋಡಿದ ಅನೇಕರು ‘ತೆರೆ ನಾಮ್’ ಚಿತ್ರಕ್ಕೆ ಸೀಕ್ವೆಲ್ ಬರುತ್ತಿದೆಯೇ ಎಂದು ಕಾಲೆಳೆದಿದ್ದಾರೆ.

‘ತೆರೆ ನಾಮ್ 2’ ಸ್ಕ್ರಿಪ್ಟ್ ಸಿದ್ಧವಾಗಿದೆ. ಸಲ್ಲು ಈ ಚಿತ್ರಕ್ಕೆ ಹೀರೋ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ‘ತೆರೆ ನಾಮ್ ಚಿತ್ರಕ್ಕೆ ಸೀಕ್ವೆಲ್ ಬರುತ್ತಿದೆ’ ಎಂದು ಬರೆದುಕೊಂಡಿದ್ದಾರೆ. ‘ಭಾಯ್ ಲುಕ್ ಸೂಪರ್ ಆಗಿದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಅತಿಯಾದ ಕೋಪದ ಕಾರಣಕ್ಕೆ ಬಿಗ್​ ಬಾಸ್​ ನಿರೂಪಣೆಯಿಂದ ಹೊರನಡೆದ್ರಾ ಸಲ್ಮಾನ್​ ಖಾನ್​?

ಸದ್ಯ ಸಲ್ಮಾನ್ ಖಾನ್ ಅವರು ‘ಟೈಗರ್ 3’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಸಲ್ಮಾನ್ ಖಾನ್, ಕತ್ರಿನಾ ಕೈಫ್, ಇಮ್ರಾನ್ ಹಶ್ಮಿ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ದೀಪಾವಳಿಗೆ ರಿಲೀಸ್ ಆಗುವ ಸಾಧ್ಯತೆ ಇದೆ. ಇತ್ತೀಚೆಗೆ ರಿಲೀಸ್ ಆದ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಸದ್ದು ಮಾಡಲು ವಿಫಲವಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ