AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗದರ್​ 2’ ನಾನ್​-ಸ್ಟಾಪ್​ ಕಮಾಯಿ; 400 ಕೋಟಿ ರೂ. ಗಡಿ ಮುಟ್ಟಲಿದೆ ಸನ್ನಿ ಡಿಯೋಲ್​ ಸಿನಿಮಾ

ಮಲ್ಟಿಪ್ಲೆಕ್ಸ್​ ಮಾತ್ರವಲ್ಲದೇ ಏಕಪರದೆ ಚಿತ್ರಮಂದಿರಗಳಲ್ಲೂ ‘ಗದರ್​ 2’ ಸಿನಿಮಾ ಅತ್ಯುತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಎಲ್ಲ ವರ್ಗದ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಇದರಿಂದಾಗಿ ಈ ಚಿತ್ರ ಜಯಭೇರಿ ಬಾರಿಸಿದೆ. ಸನ್ನಿ ಡಿಯೋಲ್​ ಅಭಿಮಾನಿಗಳು ಎರಡು-ಮೂರು ಬಾರಿ ಸಿನಿಮಾ ನೋಡುವ ಮೂಲಕ ಇಷ್ಟು ದೊಡ್ಡ ಗೆಲುವಿಗೆ ಕಾರಣರಾಗುತ್ತಿದ್ದಾರೆ.

‘ಗದರ್​ 2’ ನಾನ್​-ಸ್ಟಾಪ್​ ಕಮಾಯಿ; 400 ಕೋಟಿ ರೂ. ಗಡಿ ಮುಟ್ಟಲಿದೆ ಸನ್ನಿ ಡಿಯೋಲ್​ ಸಿನಿಮಾ
‘ಗದರ್​ 2’ ಸಿನಿಮಾ ಪೋಸ್ಟರ್​
ಮದನ್​ ಕುಮಾರ್​
|

Updated on: Aug 21, 2023 | 5:32 PM

Share

ಸಿನಿಪ್ರಿಯರೆಲ್ಲರೂ ‘ಗದರ್​ 2’ ಸಿನಿಮಾ (Gadar 2 Movie) ಕುರಿತಾಗಿಯೇ ಮಾತನಾಡುತ್ತಿದ್ದಾರೆ. ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಮಾಡಿದ ಮೋಡಿ ಆ ರೀತಿ ಇದೆ. ಪ್ರತಿ ದಿನವೂ ಈ ಸಿನಿಮಾ ದೊಡ್ಡ ಮೊತ್ತದ ಕಲೆಕ್ಷನ್​ ಮಾಡುತ್ತಿದೆ. ಬಿಡುಗಡೆಯಾಗಿ 11 ದಿನ ಕಳೆದರೂ ಈ ಚಿತ್ರದ ಆರ್ಭಟ ಕಡಿಮೆ ಆಗಿಲ್ಲ. ಬಾಲಿವುಡ್​ನ ಖ್ಯಾತ ನಟ ಸನ್ನಿ ಡಿಯೋಲ್​ (Sunny Deol) ಅವರು ಈ ಸಿನಿಮಾದ ಗೆಲುವಿನಿಂದ ಮತ್ತೆ ಟ್ರ್ಯಾಕ್​ಗೆ ಮರಳಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಸಖತ್​ ಖುಷಿ ನೀಡಿದ್ದಾರೆ. ಶೀಘ್ರದಲ್ಲೇ ‘ಗದರ್​ 2’ ಸಿನಿಮಾ 400 ಕೋಟಿ ರೂಪಾಯಿ ಗಡಿ ಮುಟ್ಟಲಿದೆ. ಚಿತ್ರಕ್ಕೆ ಇಷ್ಟು ಒಳ್ಳೆಯ ರೆಸ್ಪಾನ್ಸ್​ ಸಿಗುತ್ತಿದ್ದರೂ ಕೂಡ ಚಿತ್ರತಂಡದವರು ಸುಮ್ಮನೆ ಕುಳಿತಿಲ್ಲ. ಅನೇಕ ಕಡೆಗಳಿಗೆ ತೆರಳಿ ಸಿನಿಮಾವನ್ನು ಪ್ರಚಾರ ಮಾಡುತ್ತಿದ್ದಾರೆ. ಸನ್ನಿ ಡಿಯೋಲ್​ ಮತ್ತು ಅಮೀಷಾ ಪಟೇಲ್​ (Ameesha Patel) ಅವರು ಸದ್ಯಕ್ಕೆ ಸೆಲೆಬ್ರೇಷನ್​ ಮೂಡ್​ನಲ್ಲಿ ಇದ್ದಾರೆ. ಚಿತ್ರತಂಡದವರೆಲ್ಲರೂ ಕೇಕ್​ ಕತ್ತರಿಸಿ ಸಂಭ್ರಮಿಸಿದ್ದಾರೆ.

ಸನ್ನಿ ಡಿಯೋಲ್​ ಅವರು ಆ್ಯಕ್ಷನ್​ ಹೀರೋ ಆಗಿ ಬಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರ ಯಾವ ಚಿತ್ರವೂ ಉತ್ತಮವಾಗಿ ಕಲೆಕ್ಷನ್​ ಮಾಡಿರಲಿಲ್ಲ. ಆದರೆ ‘ಗದರ್​ 2’ ಸಿನಿಮಾದಿಂದ ಸನ್ನಿ ಡಿಯೋಲ್​ ಅವರು ಎರಡನೇ ಇನ್ನಿಂಗ್ಸ್​ ಆರಂಭಿಸಿದಂತೆ ಆಗಿದೆ. ಯಾರೂ ನಿರೀಕ್ಷೆ ಮಾಡಿರದ ರೀತಿಯಲ್ಲಿ ಈ ಚಿತ್ರ ಹಣ ಬಾಚಿಕೊಳ್ಳುತ್ತಿದೆ. ಮೊದಲ ವೀಕೆಂಡ್​ನಲ್ಲಿ ಅಬ್ಬರಿಸಿದ ರೀತಿಯಲ್ಲೇ ಎರಡನೇ ವೀಕೆಂಡ್​ನಲ್ಲೂ ‘ಗದರ್​ 2’ ಸಿನಿಮಾ ಅತ್ಯುತ್ತಮವಾಗಿ ಕಲೆಕ್ಷನ್​ ಮಾಡುತ್ತಿದೆ ಎಂಬುದು ಗಮನಿಸಬೇಕಾದ ಅಂಶ.

‘ಗದರ್​ 2’ ಚಿತ್ರತಂಡದ ಸೆಲೆಬ್ರೇಷನ್​ ವಿಡಿಯೋ:

‘ಗದರ್​ 2’ ಸಿನಿಮಾಗೆ ಅನಿಲ್​ ಶರ್ಮಾ ಅವರು ನಿರ್ದೇಶನ ಮಾಡಿದ್ದಾರೆ. ಸನ್ನಿ ಡಿಯೋಲ್​ ಅವರಿಗೆ ಜೋಡಿಯಾಗಿ ಅಮೀಷಾ ಪಟೇಲ್​ ನಟಿಸಿದ್ದಾರೆ. ಅಮೀಷಾ ಪಟೇಲ್​ ಕೂಡ ಬಹಳ ವರ್ಷದ ಬಳಿಕ ಈ ರೀತಿಯ ಸಕ್ಸಸ್​ ಪಡೆದಿದ್ದಾರೆ. ಇದರಿಂದಾಗಿ ಅವರ ಜನಪ್ರಿಯತೆ ಹೆಚ್ಚಾಗಿದೆ. ಭಾರತ ಮಾತ್ರವಲ್ಲದೇ ವಿದೇಶದಲ್ಲೂ ಈ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಆ ಕಾರಣದಿಂದ ಇತ್ತೀಚೆಗೆ ದುಬೈಗೆ ತೆರಳಿ ಸನ್ನಿ ಡಿಯೋಲ್​ ಮತ್ತು ಅಮೀಷಾ ಪಟೇಲ್​ ಅವರು ಸಂಭ್ರಮಿಸಿದ್ದರು. ಈ ಚಿತ್ರದ ಟೋಟಲ್​ ಕಲೆಕ್ಷನ್​ ಎಷ್ಟಾಗಲಿದೆ ಎಂಬ ಕೌತುಕ ಎಲ್ಲರಲ್ಲೂ ಇದೆ. ಸದ್ಯಕ್ಕಂತೂ ‘ಗದರ್​ 2’ ಸಿನಿಮಾದ ಹವಾ ಕಡಿಮೆ ಆಗುವಂತೆ ಕಾಣುತ್ತಿಲ್ಲ.

ಇದನ್ನೂ ಓದಿ: ಸನ್ನಿ ಡಿಯೋಲ್ ಆಸ್ತಿ ಎಷ್ಟು? ಪ್ರತಿ ಚಿತ್ರಕ್ಕೆ ಪಡೆಯೋ ಸಂಭಾವನೆ ಎಷ್ಟು?

ಆಗಸ್ಟ್​ 11ರಿಂದ ಆಗಸ್ಟ್​ 20ರವರೆಗೆ ‘ಗದರ್​ 2’ ಸಿನಿಮಾ ಮಾಡಿದ ಒಟ್ಟು ಕಲೆಕ್ಷನ್​ 375 ಕೋಟಿ ರೂಪಾಯಿ. ಈ ಸಿನಿಮಾ ಪ್ರತಿ ದಿನವೂ ಬಹುಕೋಟಿ ರೂಪಾಯಿ ಕಲೆಕ್ಷನ್​ ಮಾಡುತ್ತಿದೆ. 400 ಕೋಟಿ ರೂಪಾಯಿ ಗಡಿ ಮುಟ್ಟಲು ಇನ್ನು 25 ಕೋಟಿ ರೂಪಾಯಿ ಮಾತ್ರ ಬಾಕಿ ಇದೆ. ಮಂಗಳವಾರದ (ಆಗಸ್ಟ್​ 22) ವೇಳೆಗೆ ಈ ಸಿನಿಮಾ 400 ಕೋಟಿ ರೂಪಾಯಿ ಕ್ಲಬ್​ ಸೇರಬಹುದು ಎಂದು ನಿರೀಕ್ಷಿಸಲಾಗಿದೆ. ಮಲ್ಟಿಪ್ಲೆಕ್ಸ್​ ಮಾತ್ರವಲ್ಲದೇ ಏಕಪರದೆ ಚಿತ್ರಮಂದಿರಗಳಲ್ಲೂ ಈ ಸಿನಿಮಾ ಅತ್ಯುತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಎಲ್ಲ ವರ್ಗದ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಇದರಿಂದಾಗಿ ಈ ಸಿನಿಮಾ ಜಯಭೇರಿ ಬಾರಿಸಿದೆ. ಸನ್ನಿ ಡಿಯೋಲ್​ ಅಭಿಮಾನಿಗಳು ಎರಡು-ಮೂರು ಬಾರಿ ಸಿನಿಮಾ ನೋಡುವ ಮೂಲಕ ಇಷ್ಟು ದೊಡ್ಡ ಗೆಲುವಿಗೆ ಕಾರಣರಾಗುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು