ಸನ್ನಿ ಡಿಯೋಲ್ ಆಸ್ತಿ ಎಷ್ಟು? ಪ್ರತಿ ಚಿತ್ರಕ್ಕೆ ಪಡೆಯೋ ಸಂಭಾವನೆ ಎಷ್ಟು?

ಸನ್ನಿ ಡಿಯೋಲ್ ಅವರ ‘ಸನ್ನಿ ವಿಲ್ಲಾ’ ಬಂಗಲೆ ಸಾಕಷ್ಟು ಐಷಾರಾಮಿ ಆಗಿದೆ. ಇಲ್ಲಿ ಈಜುಕೊಳ, ಸಣ್ಣದಾದ ಥಿಯೇಟರ್, ಹೆಲಿಪ್ಯಾಡ್, ಗಾರ್ಡನ್ ಸೇರಿದಂತೆ ಅನೇಕ ವ್ಯವಸ್ಥೆ ಇದೆ. ಇನ್ನು ವಿಶಾಲವಾದ ಜಾಗ ಇರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ಮರಗಿಡಗಳನ್ನು ಬೆಳೆಯಲಾಗಿದೆ.

ಸನ್ನಿ ಡಿಯೋಲ್ ಆಸ್ತಿ ಎಷ್ಟು? ಪ್ರತಿ ಚಿತ್ರಕ್ಕೆ ಪಡೆಯೋ ಸಂಭಾವನೆ ಎಷ್ಟು?
ಸನ್ನಿ ಡಿಯೋಲ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Aug 21, 2023 | 12:41 PM

ಸನ್ನಿ ಡಿಯೋಲ್ (Sunny Deol) ಅವರು ಹಲವು ದಶಕಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ವಯಸ್ಸು 65 ದಾಟಿದರೂ ಭರ್ಜರಿ ಆ್ಯಕ್ಷನ್ ಮೆರೆಯುತ್ತಾರೆ. ಅವರ ನಟನೆಯ ‘ಗದರ್ 2’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದ ಮೂಲಕ ಅವರು ವೃತ್ತಿಜೀವನದಲ್ಲಿ ದೊಡ್ಡ ಯಶಸ್ಸು ಕಂಡಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ 350+ ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮಧ್ಯೆ ಅವರ ಐಷಾರಾಮಿ ಬಂಗಲೆ ಹರಾಜು ವಿಚಾರ ಸುದ್ದಿ ಆಗಿದೆ. ಸನ್ನಿ ಅವರ ಒಟ್ಟೂ ಆಸ್ತಿ ಎಷ್ಟು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಸುದ್ದಿ ಆದ ಬಂಗಲೆ ವಿಚಾರ

ಸನ್ನಿ ಡಿಯೋಲ್ ಅವರು ಮುಂಬೈನ ಜುಹು ಭಾಗದಲ್ಲಿ ಭವ್ಯ ಬಂಗಲೆ ಹೊಂದಿದ್ದಾರೆ. ಇದರ ಮೌಲ್ಯ 50 ಕೋಟಿ ರೂಪಾಯಿಗೂ ಅಧಿಕ ಆಗಿದೆ. ಈ ಮೊದಲು ಸನ್ನಿ ಡಿಯೋಲ್ ಅವರು ಬ್ಯಾಂಕ್ ಆಫ್ ಬರೋಡಾದಿಂದ 55 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಈ ಸಾಲ ಪಡೆಯಲು ಅವರು ಬಂಗಲೆಯನ್ನು ಅಡ ಇಟ್ಟಿದ್ದರು. ಆದರೆ, ಈಗ ಸಾಲ ಹಿಂದಿರುಗಿಸದ ಕಾರಣ ಈ ಬಂಗಲೆಯನ್ನು ಹರಾಜು ಹಾಕಲು ಬ್ಯಾಂಕ್​ನವರು ಮುಂದಾಗಿದ್ದಾರೆ. ಸದ್ಯ ತಾಂತ್ರಿಕ ಕಾರಣದಿಂದ ಈ ಪ್ರಕ್ರಿಯೆ ನಿಂತಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಲಾಗಿದೆ.

ಇದನ್ನೂ ಓದಿ: ಸನ್ನಿ ಡಿಯೋಲ್ ಮನೆ ಹರಾಜನ್ನು ಹಿಂಪಡೆದ ಬ್ಯಾಂಕ್; ತಾಂತ್ರಿಕ ಸಮಸ್ಯೆಯ ಕಾರಣ ನೀಡಿದ ಅಧಿಕಾರಿಗಳು

ಸನ್ನಿ ಡಿಯೋಲ್ ಅವರ ‘ಸನ್ನಿ ವಿಲ್ಲಾ’ ಬಂಗಲೆ ಸಾಕಷ್ಟು ಐಷಾರಾಮಿ ಆಗಿದೆ. ಇಲ್ಲಿ ಈಜುಕೊಳ, ಸಣ್ಣದಾದ ಥಿಯೇಟರ್, ಹೆಲಿಪ್ಯಾಡ್, ಗಾರ್ಡನ್ ಸೇರಿದಂತೆ ಅನೇಕ ವ್ಯವಸ್ಥೆ ಇದೆ. ಇನ್ನು ವಿಶಾಲವಾದ ಜಾಗ ಇರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ಮರಗಿಡಗಳನ್ನು ಬೆಳೆಯಲಾಗಿದೆ. ಇದರ ಮೌಲ್ಯ 55 ಕೋಟಿ ರೂಪಾಯಿಗೂ ಅಧಿಕವಾಗಿದೆ.

ಕೆಲವು ಮಾಧ್ಯಮ ವರದಿಗಳ ಪ್ರಕಾರ, ಸನ್ನಿ ಡಿಯೋಲ್ ಒಟ್ಟೂ ಆಸ್ತಿ 120 ಕೋಟಿ ರೂಪಾಯಿ ಎನ್ನಲಾಗಿದೆ. ರೇಂಜ್ ರೋವರ್, ಪೋರ್ಷಾ, ಆಡಿ ಎ8 ಅಂಥ ಐಷಾರಾಮಿ ಕಾರುಗಳು ಇವರ ಬಳಿ ಇವೆ. ಇನ್ನು ಪ್ರತಿ ಚಿತ್ರಕ್ಕೆ ಅವರು ಸುಮಾರು 5ರಿಂದ 6 ಕೋಟಿ ರೂ ಸಂಭಾವನೆ ಪಡೆಯುತ್ತಾರೆ. ಇತ್ತೀಚೆಗೆ ರಿಲೀಸ್ ಆದ ‘ಗದರ್ 2’ ಚಿತ್ರಕ್ಕಾಗಿ ಅವರು ಹೆಚ್ಚಿನ ಕಾಲ್​​ಶೀಟ್ ನೀಡಿದ್ದರು. ಈ ಸಿನಿಮಾಗೆ ಅವರು 20 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಸಂಸದರಾಗಿರುವುದರಿಂದ ಸಂಬಳವೂ ಸಿಗುತ್ತಿದೆ.

‘ಗದರ್ 2’ ಕಲೆಕ್ಷನ್ ಬಗ್ಗೆ

‘ಗದರ್ 2’ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಬಂಗಾರದ ಬೆಳೆ ತೆಗೆದಿದೆ. ಯಾರೂ ಊಹಿಸದ ರೀತಿಯಲ್ಲಿ ಸಿನಿಮಾ ಕಲೆಕ್ಷನ್ ಮಾಡುತ್ತಿದೆ. ಈ ಚಿತ್ರ ಎರಡನೇ ಭಾನುವಾರ (ಆಗಸ್ಟ್​ 20) 41 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಒಟ್ಟೂ ಗಳಿಕೆ 377 ಕೋಟಿ ರೂಪಾಯಿ ಆಗಿದೆ. ಇಂದಿನ (ಆಗಸ್ಟ್ 21) ಗಳಿಕೆ ಸೇರಿದರೆ ಸಿನಿಮಾದ ಕಲೆಕ್ಷನ್ 400 ಕೊಟಿ ರೂಪಾಯಿ ದಾಟಲಿದೆ. ‘ಪಠಾಣ್’ ಸಿನಿಮಾದ ಗಳಿಕೆಯನ್ನೂ ಚಿತ್ರ ಹಿಂದಿಕ್ಕುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್