ಸ್ಟಾರ್ ಹೀರೋ, ದೊಡ್ಡ ನಿರ್ಮಾಪಕರು; ಆದರೂ ಸೆಟ್ಟೇರಲಿಲ್ಲ ಈ ಚಿತ್ರಗಳು
ಕೆಲವೊಮ್ಮೆ ಅಂದುಕೊಂಡಂತೆ ಯಾವುದೂ ನಡೆಯುವುದಿಲ್ಲ. ಸ್ಟಾರ್ ಹೀರೋ, ದೊಡ್ಡ ನಿರ್ಮಾಪಕರು ಇದ್ದ ಹೊರತಾಗಿಯೂ ಸಿನಿಮಾ ಸೆಟ್ಟೇರುವುದಿಲ್ಲ. ಆ ಸಾಲಿನಲ್ಲಿ ಬಾಲಿವುಡ್ನ ಹಲವು ಸಿನಿಮಾಗಳಿವೆ. ಸಲ್ಮಾನ್ ಖಾನ್ ಸೇರಿದಂತೆ ಅನೇಕರ ಸಿನಿಮಾಗಳು ಈ ಸಾಲಿನಲ್ಲಿವೆ. ಹಾಗಾದರೆ, ಅರ್ಧಕ್ಕೆ ನಿಂತ ದೊಡ್ಡ ಬಜೆಟ್ ಚಿತ್ರಗಳು ಯಾವವು ಎನ್ನುವ ಬಗ್ಗೆ ಇಲ್ಲಿದೆ ವಿವರ.
ಇತ್ತೀಚೆಗೆ ಬಿಗ್ ಬಜೆಟ್ ಸಿನಿಮಾಗಳಿಗೆ ಬರಗಾಲವಿಲ್ಲ. ಸ್ಟಾರ್ ಹೀರೋ ನಟಿಸೋಕೆ ರೆಡಿ ಇದ್ದರೆ ನೂರಾರು ಕೋಟಿ ರೂಪಾಯಿ ಹೂಡಲು ನಿರ್ಮಾಪಕರು ರೆಡಿ ಇರುತ್ತಾರೆ. ಆದರೆ, ಕೆಲವೊಮ್ಮೆ ಅಂದುಕೊಂಡಂತೆ ಯಾವುದೂ ನಡೆಯುವುದಿಲ್ಲ. ಸ್ಟಾರ್ ಹೀರೋ, ದೊಡ್ಡ ನಿರ್ಮಾಪಕರು ಇದ್ದ ಹೊರತಾಗಿಯೂ ಸಿನಿಮಾ ಸೆಟ್ಟೇರುವುದಿಲ್ಲ. ಆ ಸಾಲಿನಲ್ಲಿ ಬಾಲಿವುಡ್ನ ಹಲವು ಸಿನಿಮಾಗಳಿವೆ. ಸಲ್ಮಾನ್ ಖಾನ್ (Salman Khan) ಸೇರಿದಂತೆ ಅನೇಕರ ಸಿನಿಮಾಗಳು ಈ ಸಾಲಿನಲ್ಲಿವೆ. ಹಾಗಾದರೆ, ಅರ್ಧಕ್ಕೆ ನಿಂತ ದೊಡ್ಡ ಬಜೆಟ್ ಚಿತ್ರಗಳು ಯಾವವು ಎನ್ನುವ ಬಗ್ಗೆ ಇಲ್ಲಿದೆ ವಿವರ.
ಇನ್ಶಾಅಲ್ಲಾ
ಸಲ್ಮಾನ್ ಖಾನ್ ಹಾಗೂ ಆಲಿಯಾ ಭಟ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆದರೆ, ಇವರು ಒಟ್ಟಿಗೆ ನಟಿಲ್ಲ. ‘ಇನ್ಶಾಅಲ್ಲಾ’ ಸಿನಿಮಾದಲ್ಲಿ ಇವರು ಒಟ್ಟಾಗಿ ನಟಿಸಬೇಕಿತ್ತು. ಸಂಜಯ್ ಲೀಲಾ ಬನ್ಸಾಲಿ ಈ ಚಿತ್ರವನ್ನು ನಿರ್ಮಾಣ ಮಾಡಿ, ನಿರ್ದೇಶನ ಮಾಡಬೇಕಿತ್ತು. ಆದರೆ, ಸಿನಿಮಾದ ಕಥೆಯ ವಿಚಾರದಲ್ಲಿ ಸಲ್ಮಾನ್ ಖಾನ್ ಹಾಗೂ ಸಂಜಯ್ ಲೀಲಾ ಬನ್ಸಾಲಿಗೆ ಹೊಂದಾಣಿಕೆ ಆಗಿಲ್ಲ. ಈ ಕಾರಣದಿಂದ ಸಿನಿಮಾ ಸೆಟ್ಟೇರಲೇ ಇಲ್ಲ. ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣ ಸಂಸ್ಥೆ ಕಡೆಯಿಂದಲೇ ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ.
ತಖ್ತ್
ಕರಣ್ ಜೋಹರ್ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಅವರ ನಿರ್ಮಾಣದ ‘ತಖ್ತ್’ ಸಿನಿಮಾ ಸೆಟ್ಟೇರಬೇಕಿತ್ತು. ಆದರೆ, ಕೊರೊನಾ ಕಾರಣದಿಂದ ಸಿನಿಮಾ ಮುಂದಕ್ಕೆ ಹೋಯಿತು. ಆದರೆ, ಆ ಬಳಿಕ ಅವರು ಈ ಸಿನಿಮಾ ಬಗ್ಗೆ ಮಾತನಾಡಲಿಲ್ಲ. ಮಲ್ಟಿ ಸ್ಟಾರರ್ ಸಿನಿಮಾ ಮಾಡೋಕೆ ಕರಣ್ ಜೋಹರ್ ಎತ್ತಿದ ಕೈ. ಈ ಚಿತ್ರದಲ್ಲಿ ಕರೀನಾ ಕಪೂರ್ ಖಾನ್. ರಣವೀರ್ ಸಿಂಗ್, ಆಲಿಯಾ ಭಟ್, ಜಾನ್ವಿ ಕಪೂರ್, ಭೂಮಿ ಪಡ್ನೇಕರ್, ವಿಕ್ಕಿ ಕೌಶಲ್, ಅನಿಲ್ ಕಪೂರ್ ಮೊದಲಾದವರು ನಟಿಸಬೇಕಿತ್ತು.
ಶೂಬೈಟ್
ಅಮಿತಾಭ್ ಬಚ್ಚನ್ ಅವರ ವಯಸ್ಸು 80 ದಾಟಿದೆ. ಈ ವಯಸ್ಸಿನಲ್ಲೂ ಅವರು ಹಲವು ಸಿನಿಮಾ ಒಪ್ಪಿಕೊಂಡು ಮಾಡುತ್ತಿದ್ದಾರೆ. ಅವರು ‘ಶೂಬೈಟ್’ ಹೆಸರಿನ ಸಿನಿಮಾ ಮಾಡಬೇಕಿತ್ತು. ಆದರೆ, ಸಿನಿಮಾ ಸೆಟ್ಟೇರಲಿಲ್ಲ.
‘ದೋಸ್ತಾನಾ 2’
‘ದೋಸ್ತಾನ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅಭಿಷೇಕ್ ಬಚ್ಚನ್, ಜಾನ್ ಅಬ್ರಾಹಂ ಹಾಗೂ ಪ್ರಿಯಾಂಕಾ ಚೋಪ್ರಾ ಈ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾಗೆ ಸೀಕ್ವೆಲ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕಾರ್ತಿಕ್ ಆರ್ಯನ್, ಜಾನ್ವಿ ಕಪೂರ್ ಹಾಗೂ ಲಕ್ಷ್ಯ ಅವರು ಮುಖ್ಯಭೂಮಿಕೆಯಲ್ಲಿ ನಟಿಸಬೇಕಿತ್ತು. ಆದರೆ, ಸಿನಿಮಾ ಸೆಟ್ಟೇರಲಿಲ್ಲ. ಕರಣ್ ಜೋಹರ್ ಅವರು ಸಿನಿಮಾ ನಿರ್ಮಾಣ ಮಾಡಬೇಕಿತ್ತು. ಆದರೆ, ಕರಣ್-ಕಾರ್ತಿಕ್ ಮಧ್ಯೆ ಹೊಂದಾಣಿಕೆ ಆಗಿಲ್ಲ.
ದಿ ಇಮ್ಮಾರ್ಟಲ್ ಅಶ್ವತ್ಥಾಮ
ವಿಕ್ಕಿ ಕೌಶಲ್ ಹಾಗೂ ನಿರ್ದೇಶಕ ಆದಿತ್ಯ ಧಾರ್ ಅವರು ‘ದಿ ಇಮ್ಮಾರ್ಟಲ್ ಅಶ್ವತ್ಥಾಮ’ ಸಿನಿಮಾ ಮಾಡಬೇಕಿತ್ತು. ಇವರು ‘ಉರಿ’ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಆದರೆ, ಈ ಸಿನಿಮಾ ಸೆಟ್ಟೇರಲೇ ಇಲ್ಲ. ಬಳಿಕ ರಣವೀರ್ ಸಿಂಗ್ ಹಾಗೂ ಯಶ್ಗೂ ಚಿತ್ರದ ಆಫರ್ ನೀಡಲಾಗಿತ್ತು. ಆದರೆ, ಅವರು ಕೂಡ ಸಿನಿಮಾ ಒಪ್ಪಿಕೊಳ್ಳಲಿಲ್ಲ. ಈ ಚಿತ್ರ ಸೆಟ್ಟೇರುವ ಮೊದಲೇ ನಿರ್ಮಾಪಕರು 30 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ ಎನ್ನಲಾಗಿದೆ.
ಬಿಜು ಬವ್ರಾ ರಿಮೇಕ್
ಸಂಜಯ್ ಲೀಲಾ ಬನ್ಸಾಲಿ ಅವರು 1952ರ ಹಿಂದಿಯ ‘ಬಿಜು ಬವ್ರಾ’ ಚಿತ್ರವನ್ನು ರಿಮೇಕ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದರು. ರಣವೀರ್ ಸಿಂಗ್ ಈ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ, ಬಜೆಟ್ ವಿಚಾರದಲ್ಲಿ ಹೊಂದಾಣಿಕೆ ಆಗದ ಕಾರಣಕ್ಕೆ ಸಿನಿಮಾ ಸೆಟ್ಟೇರಿಲ್ಲ.
ಇದನ್ನೂ ಓದಿ: ನಟನೆಯಿಂದ ಮಾತ್ರವಲ್ಲ, ಈ ಸೆಲೆಬ್ರಿಟಿಗಳಿಗೆ ಸೈಡ್ ಬಿಸ್ನೆಸ್ನಿಂದ ಬರುತ್ತಿದೆ ಕೋಟಿ ಕೋಟಿ ಹಣ
ಸಂಜಯ್ ಲೀಲಾ ಜೊತೆ ಸಂಜಯ್ ದತ್ ಸಿನಿಮಾ
ರಾಜ್ಕುಮಾರ್ ಹಿರಾನಿ ಅವರು ತಮ್ಮ ಕೈಚಳಕ ತೋರಿಸಿದ್ದಾರೆ. ಸಂಜಯ್ ದತ್ ಜೊತೆ ಅವರು ಮೂರನೇ ಬಾರಿ ಒಂದಾಗಬೇಕಿತ್ತು. ಈ ಚಿತ್ರದ ಟೀಸರ್ ಕೂಡ ರಿಲೀಸ್ ಆಗಿತ್ತು. ಆದರೆ, ಆ ಬಳಿಕ ಸಿನಿಮಾ ಬಗ್ಗೆ ಅಪ್ಡೇಟ್ ಸಿಕ್ಕಿಲ್ಲ. ಈ ಚಿತ್ರವೂ ಸೆಟ್ಟೇರುವುದಿಲ್ಲ ಎನ್ನಲಾಗುತ್ತಿದೆ. ಸದ್ಯ ರಾಜ್ಕುಮಾರ್ ಹಿರಾನಿ ‘ಡಂಕಿ’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಶಾರುಖ್ ಖಾನ್ ಚಿತ್ರದ ಹೀರೋ.
ದಸ್
ಸಲ್ಮಾನ್ ಖಾನ್ ಹಾಗೂ ಸಂಜಯ್ ದತ್ ಅವರು ‘ದಸ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸಬೇಕಿತ್ತು. ಮುಕುಲ್ ಆನಂದ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದರು. ಶೇ.8ರಷ್ಟು ಶೂಟಿಂಗ್ ಕೂಡ ಆಗಿತ್ತು ಆದರೆ, ಮುಕುಲ್ ಆನಂದ್ ಮೃತಪಟ್ಟಿದ್ದರಿಂದ ಸಿನಿಮಾ ಅರ್ಧಕ್ಕೆ ನಿಂತಿತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:02 am, Mon, 11 September 23