ನಟನೆಯಿಂದ ಮಾತ್ರವಲ್ಲ, ಈ ಸೆಲೆಬ್ರಿಟಿಗಳಿಗೆ ಸೈಡ್ ಬಿಸ್ನೆಸ್ನಿಂದ ಬರುತ್ತಿದೆ ಕೋಟಿ ಕೋಟಿ ಹಣ
ಸೆಲೆಬ್ರಿಟಿಗಳು ಸಿನಿಮಾ ನಿರ್ಮಾಣ, ಬಟ್ಟೆ ಬ್ರ್ಯಾಂಡ್ ಸೇರಿ ಹಲವು ರೀತಿಯಲ್ಲಿ ಹಣ ಮಾಡುತ್ತಾರೆ. ಬಾಲಿವುಡ್ನ ಈ ಸೆಲೆಬ್ರಿಟಿಗಳು ವಿವಿಧ ಮೂಲಗಳಿಂದ ಭರ್ಜರಿ ಹಣ ಮಾಡುತ್ತಿದ್ದಾರೆ. ಆ ಸಾಲಿನಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್ ಮೊದಲಾದ ಸ್ಟಾರ್ಸ್ಗಳಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಸೆಲೆಬ್ರಿಟಿಗಳಿಗೆ ಒಮ್ಮೆ ಜನಪ್ರಿಯತೆ ಸಿಕ್ಕರೆ ಸಾಕು, ನಂತರ ಹಲವು ಸಿನಿಮಾ ಆಫರ್ಗಳು ಬರುತ್ತವೆ. ಹಲವು ಬ್ರ್ಯಾಂಡ್ಗಳು ಪ್ರಮೋಷನ್ಗೆ ಬರುವಂತೆ ಆಹ್ವಾನ ನಿಡುತ್ತವೆ. ಇದರಿಂದಲೂ ಸಾಕಷ್ಟು ಹಣ ಬರುತ್ತದೆ. ಹಾಗಂತ ಇಷ್ಟನ್ನೇ ನಂಬಿಕೊಂಡು ಅವರು ಇರುವುದಿಲ್ಲ. ಇದರ ಜೊತೆಗೆ ಉದ್ಯಮದ ಕಡೆಗೂ ಸೆಲೆಬ್ರಿಟಿಗಳು ಒಲವು ತೋರುತ್ತಾರೆ. ಸಿನಿಮಾ ನಿರ್ಮಾಣ, ಬಟ್ಟೆ ಬ್ರ್ಯಾಂಡ್ ಸೇರಿ ಹಲವು ರೀತಿಯಲ್ಲಿ ಹಣ ಮಾಡುತ್ತಾರೆ. ಬಾಲಿವುಡ್ನ ಈ ಸೆಲೆಬ್ರಿಟಿಗಳು ವಿವಿಧ ಮೂಲಗಳಿಂದ ಭರ್ಜರಿ ಹಣ ಮಾಡುತ್ತಿದ್ದಾರೆ. ಆ ಸಾಲಿನಲ್ಲಿ ಶಾರುಖ್ ಖಾನ್ (Shah Rukh Khan), ಸಲ್ಮಾನ್ ಖಾನ್ ಮೊದಲಾದ ಸ್ಟಾರ್ಸ್ಗಳಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಶಾರುಖ್ ಖಾನ್
ಶಾರುಖ್ ಖಾನ್ ಅವರ ಒಟ್ಟೂ ಅಸ್ತಿ 1600 ಕೋಟಿ ರೂಪಾಯಿಗೂ ಅಧಿಕವಾಗಿದೆ. ಅವರು ಸಿನಿಮಾಗಾಗಿ ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅಷ್ಟೇ ಅಲ್ಲ, ಅವರು ಹಲವು ಉದ್ಯಮ ಹೊಂದಿದ್ದಾರೆ. ಐಪಿಎಲ್ನಲ್ಲಿ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಒಡೆತನ ಹೊಂದಿದ್ದಾರೆ. ಅವರು ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಇದರ ಅಡಿಯಲ್ಲಿ ಸಿನಿಮಾ ನಿರ್ಮಾಣ ಆಗುತ್ತದೆ. ‘ಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್ ಮೂಲಕ ಶಾರುಖ್ ಖಾನ್ ಪತ್ನಿ ಗೌರಿ ನಿರ್ಮಾಣ ಮಾಡುತ್ತಿದ್ದಾರೆ.
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ ಅವರಿಗೆ ಭರ್ಜರಿ ಬೇಡಿಕೆ ಇದೆ. ಅವರ ಹೆಸರಲ್ಲಿ ಬಟ್ಟೆ ಬ್ರ್ಯಾಂಡ್ ಇದ್ದು, ಇದಕ್ಕೆ ಆಲ್ ಅಬೌಟ್ ಯೂ ಎಂದು ಹೆಸರು ಇಡಲಾಗಿದೆ. ಯೋಗರ್ಟ್ ಕಂಪನಿ ಒಂದರ ಮೇಲೆ ಅವರು ಹೂಡಿಕೆ ಮಾಡಿದ್ದಾರೆ. ಇದರ ಜೊತೆಗೆ ಹಲವು ಕಂಪನಿಗಳಲ್ಲಿ ಅವರು ಇನ್ವೆಸ್ಟ್ ಮಾಡಿದ್ದಾರೆ.
ಕತ್ರಿನಾ ಕೈಫ್
‘ಟೈಗರ್ 3’ ನಟಿ ಕತ್ರಿನಾ ಕೈಫ್ಗೆ ಬಾಲಿವುಡ್ನಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದೆ. ‘Kay ಬ್ಯೂಟಿ’ ಹೆಸರಿನ ಬ್ರ್ಯಾಂಡ್ ಹೊಂದಿದ್ದಾರೆ. ನೈಕಾ ಕಂಪನಿ ಮೇಲೆ ಅವರು ಹೂಡಿಕೆ ಮಾಡಿದ್ದಾರೆ. ಇದರಿಂದಲೂ ಅವರಿಗೆ ಭರ್ಜರಿ ಹಣ ಸಿಗುತ್ತಿದೆ.
ಆಲಿಯಾ ಭಟ್
‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಹಿಟ್ ಆಗಿದೆ. ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ‘ಈದ್-ಎ-ಮಮ್ಮಾ’ ಮೇಲೆ ಬ್ರ್ಯಾಂಡ್ನ ಅವರು ಆರಂಭಿಸಿದ್ದಾರೆ. ಮಕ್ಕಳ ಬಟ್ಟೆ ಇಲ್ಲಿ ಸಿಗುತ್ತದೆ. ನೈಕಾ ಕಂಪನಿ ಮೇಲೆ ಅವರು ಹೂಡಿಕೆ ಮಾಡಿದ್ದಾರೆ.
ಅಜಯ್ ದೇವಗನ್
ಅಜಯ್ ದೇವಗನ್ ಅವರು ಬಾಲಿವುಡ್ನ ಶ್ರೇಷ್ಠ ನಾಯಕರಲ್ಲಿ ಒಬ್ಬರು. ದೊಡ್ಡ ದೊಡ್ಡ ಬಿಸ್ನೆಸ್ನಲ್ಲಿ ಅವರು ಹೂಡಿಕೆ ಮಾಡಿದ್ದಾರೆ. ಅವರು ಸಿನಿಮಾ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಅಜಯ್ ದೇವಗನ್ ಫಿಲ್ಮ್ಸ್ ಹಾಗೂ ವಿಎಫ್ಎಕ್ಸ್ ಸ್ಟುಡಿಯೋ ಹೊಂದಿದ್ದಾರೆ. ಇತ್ತೀಚೆಗೆ ಅವರು ಥಿಯೇಟರ್ ಬಿಸ್ನೆಸ್ ಕೂಡ ಆರಂಭಿಸಿದ್ದಾರೆ. ಎನ್ವೈ ಥಿಯೇಟರ್ ಚೈನ್ ಆರಂಭಿಸಿದ್ದರು.
ಟ್ವಿಂಕಲ್ ಖನ್ನಾ
ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಓರ್ವ ಯಶಸ್ವಿ ಉದ್ಯಮಿ ಕೂಡ ಹೌದು. ಅವರು ಡಿಸೈನಿಂಗ್ ಕಂಪನಿ ಹೊಂದಿದ್ದು, ದಿ ವೈಟ್ ವಿಂಡೋ ಎಂದು ಇದಕ್ಕೆ ಹೆಸರು ಇಟ್ಟಿದ್ದಾರೆ. ಅವರು ನಿರ್ಮಾಣ ಸಂಸ್ಥೆ ಕೂಡ ಹೊಂದಿದ್ದಾರೆ. ಅವರು ಬರಹಗಾರ್ತಿ ಕೂಡ ಹೌದು.
ಶಿಲ್ಪಾ ಶೆಟ್ಟಿ
ನಟಿ ಶಿಲ್ಪಾ ಶೆಟ್ಟಿ ಅವರಿಗೆ ಬಾಲಿವುಡ್ನಲ್ಲಿ ಈಗಲೂ ಬೇಡಿಕೆ ಇದೆ. 2019ರಲ್ಲಿ ಅವರು ರೆಸ್ಟೋರೆಂಟ್ ಮೇಲೆ ಹೂಡಿಕೆ ಮಾಡಿದರು. ಇದಲ್ಲದೆ ಅವರ ಹಲವು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅವರ ಪತಿ ರಾಜ್ ಕುಂದ್ರಾ ದೊಡ್ಡ ಉದ್ಯಮಿ.
ಸುನೀಲ್ ಶೆಟ್ಟಿ
ನಟ ಸುನೀಲ್ ಶೆಟ್ಟಿ ನಟನೆಯಲ್ಲಿ ಚ್ಯೂಸಿ ಆಗಿದ್ದಾರೆ. ಅವರು ತಮ್ಮದೇ ಆದ ರೆಸ್ಟೋರೆಂಟ್ ಚೈನ್ ಹೊಂದಿದ್ದಾರೆ. ಪಾಪ್ಕಾರ್ನ್ ಎಂಟರ್ಟೇನ್ಮೆಂಟ್ ಹೆಸರಿನ ನಿರ್ಮಾಣ ಸಂಸ್ಥೆ ಕೂಡ ಇದೆ. ರಿಯಲ್ ಎಸ್ಟೇಟ್ ಬಿಸ್ನೆಸ್ ಕೂಡ ಹೊಂದಿದ್ದಾರೆ.
ಅರ್ಜುನ್ ರಾಮ್ಪಾಲ್
ಅರ್ಜುನ್ ರಾಮ್ಪಾಲ್ ಅವರು ನಟನೆಯಲ್ಲಿ ತೊಡಗಿಕೊಂಡಿದ್ದಾರೆ. ಹಲವು ಸಿನಿಮಾ ಮಾಡುತ್ತಿದ್ದಾರೆ. ಅವರು ದೆಹಲಿಯಲ್ಲಿ ರೆಸ್ಟೋರೆಂಟ್ ಹೊಂದಿದ್ದಾರೆ. ಇದರ ಇಂಟೀರಿಯರ್ ಡಿಸೈನ್ ಮಾಡಿದ್ದು ಗೌರಿ ಖಾನ್ ಅನ್ನೋದು ವಿಶೇಷ. ಚೇಸಿಂಗ್ ಗಣೇಶ ಹೆಸರಿನ ಮ್ಯಾನೇಜ್ಮೆಂಟ್ ಕಂಪನಿ ಕೂಡ ಅವರು ಹೊಂದಿದ್ದಾರೆ.
ಇದನ್ನೂ ಓದಿ: ಶಾರುಖ್ ಖಾನ್ ನಿವಾಸದ ಎದುರು ಭಾರೀ ಪ್ರತಿಭಟನೆ; ಮನ್ನತ್ಗೆ ಬಿಗಿ ಭದ್ರತೆ ನೀಡಿದ ಪೊಲೀಸರು
ಲಾರಾ ದತ್ತ
ಮಿಸ್ ವರ್ಲ್ಡ್ ಆಗಿದ್ದ ಲಾರಾ ದತ್ತ ಅವರಿಗೆ ಚಿತ್ರರಂಗದಲ್ಲಿ ಭರ್ಜರಿ ಬೇಡಿಕೆ ಇದೆ. ಅವರು ಸೀರೆ ಬಿಸ್ನೆಸ್ ಮೇಲೆ ಹೂಡಿಕೆ ಮಾಡಿದ್ದಾರೆ. ‘ಭೀಗಿ ಬಸಂತಿ’ ಹೆಸರಿನ ನಿರ್ಮಾಣ ಸಂಸ್ಥೆಯನ್ನು ಅವರು ಹೊಂದಿದ್ದಾರೆ.
ಸಲ್ಮಾನ್ ಖಾನ್
ಸಲ್ಮಾನ್ ಖಾನ್ ‘ಟೈಗರ್ 3’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅವರು ಬೀಯಿಂಗ್ ಹ್ಯೂಮನ್ ಬಟ್ಟೆ ಬ್ರ್ಯಾಂಡ್ ಹೊಂದಿದ್ದಾರೆ. ಅವರು ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ ಅವರು ಜಿಮ್ ಕೂಡ ನಡೆಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ