AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜವಾನ್​’ ಚಿತ್ರವನ್ನು ಗೆಲ್ಲಿಸಲೇಬೇಕು ಅಂತ ಪಣತೊಟ್ಟ ಶಾರುಖ್​ ಖಾನ್​ ಅಭಿಮಾನಿಗಳು; ಇಲ್ಲಿದೆ ದೊಡ್ಡ ಪ್ಲ್ಯಾನ್​

ಶಾರುಖ್​ ಖಾನ್​ ನಟನೆಯ ‘ಜವಾನ್​’ ಸಿನಿಮಾಗೆ ಬಹುದೊಡ್ಡ ಓಪನಿಂಗ್​ ನೀಡಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಅದಕ್ಕಾಗಿ ಅವರು ಒಂದು ಮಸ್ತ್​ ಪ್ಲ್ಯಾನ್​ ಮಾಡಿದ್ದಾರೆ. ಲಕ್ಷಾಂತರ ಅಭಿಮಾನಿಗಳು ಮೊದಲ ದಿನ ಮೊದಲ ಶೋ ನೋಡುವ ಮೂಲಕ ಈ ಸಿನಿಮಾವನ್ನು ಅದ್ದೂರಿಯಾಗಿ ಸ್ವಾಗತಿಸಲು ಸಜ್ಜಾಗಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ಜವಾನ್​’ ಚಿತ್ರವನ್ನು ಗೆಲ್ಲಿಸಲೇಬೇಕು ಅಂತ ಪಣತೊಟ್ಟ ಶಾರುಖ್​ ಖಾನ್​ ಅಭಿಮಾನಿಗಳು; ಇಲ್ಲಿದೆ ದೊಡ್ಡ ಪ್ಲ್ಯಾನ್​
ಶಾರುಖ್​ ಖಾನ್​
ಮದನ್​ ಕುಮಾರ್​
|

Updated on: Sep 04, 2023 | 4:19 PM

Share

ಸೆಪ್ಟೆಂಬರ್​ 7ರಂದು ಬಿಡುಗಡೆ ಆಗಲಿರುವ ‘ಜವಾನ್​’ ಸಿನಿಮಾ (Jawan Movie) ಬಗ್ಗೆ ಸಿನಿಪ್ರಿಯರೆಲ್ಲರೂ ಚರ್ಚೆ ಮಾಡುತ್ತಿದ್ದಾರೆ. ಈ ವರ್ಷ ಬಿಡುಗಡೆ ಆಗುತ್ತಿರುವ ಶಾರುಖ್​ ಖಾನ್​ (Shah Rukh Khan) ಅವರ ಎರಡನೇ ಸಿನಿಮಾ ಇದು. ‘ಪಠಾಣ್​’ ಸೂಪರ್​ ಹಿಟ್​ ಆದ ರೀತಿಯಲ್ಲೇ ‘ಜವಾನ್​’ ಕೂಡ ಗೆಲ್ಲಲಿದೆ ಎಂಬುದು ಅಭಿಮಾನಿಗಳ ನಂಬಿಕೆ. ಅದಕ್ಕೆ ತಕ್ಕಂತೆಯೇ ಒಂದಷ್ಟು ಪ್ರಯತ್ನಗಳು ಕೂಡ ನಡೆಯುತ್ತಿವೆ. ಮೊದಲ ದಿನ ಈ ಸಿನಿಮಾಗೆ ಬಹುದೊಡ್ಡ ಓಪನಿಂಗ್​ ನೀಡಲು ಶಾರುಖ್​ ಖಾನ್​ ಫ್ಯಾನ್ಸ್​ (Shah Rukh Khan fans) ನಿರ್ಧರಿಸಿದ್ದಾರೆ. ಅದಕ್ಕಾಗಿ ಅವರು ಒಂದು ಮಸ್ತ್​ ಪ್ಲ್ಯಾನ್​ ಮಾಡಿದ್ದಾರೆ. ಲಕ್ಷಾಂತರ ಅಭಿಮಾನಿಗಳು ಮೊದಲ ದಿನ ಮೊದಲ ಶೋ ನೋಡುವ ಮೂಲಕ ‘ಜವಾನ್​’ ಸಿನಿಮಾವನ್ನು ಅದ್ದೂರಿಯಾಗಿ ಸ್ವಾಗತಿಸಲು ಸಜ್ಜಾಗಿದ್ದಾರೆ. ಇದರಲ್ಲಿ ಎರಡು ಅಭಿಮಾನಿ ಸಂಘಗಳು ಭಾಗಿ ಆಗುತ್ತಿವೆ.

ಶಾರುಖ್​ ಖಾನ್​ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಆ ಪೈಕಿ ‘ಎಸ್​ಆರ್​ಕೆ ಯೂನಿವರ್ಸ್​’ ಮತ್ತು ‘ಎಸ್​ಆರ್​ಕೆ ವಾರಿಯರ್ಸ್​ ಎಫ್​ಸಿ’ ತಂಡಗಳು ಸಖತ್​ ಆ್ಯಕ್ಟೀವ್​ ಆಗಿವೆ. ಮಾಧ್ಯಮಗಳಲ್ಲಿ ವರದಿ ಆಗಿರುವ ಪ್ರಕಾರ, ‘ಎಸ್​ಆರ್​ಕೆ ವಾರಿಯರ್ಸ್​ ಎಫ್​ಸಿ’ ತಂಡವು ಭಾರತದ 200ಕ್ಕೂ ಹೆಚ್ಚು ನಗರಗಳಲ್ಲಿ ‘ಜವಾನ್​’ ಸಿನಿಮಾದ ಫಸ್ಟ್​ ಡೇ ಫಸ್ಟ್​ ಶೋ ಅನ್ನು ಒಂದು ಹಬ್ಬದ ರೀತಿಯಲ್ಲಿ ಸಂಭ್ರಮಿಸಲು ಸಜ್ಜಾಗಿದೆ. ಈ ಟೀಮ್​ನಿಂದ ಅಂದಾಜು 60 ಸಾವಿರ ಜನರು ಈ ಚಿತ್ರವನ್ನು ಫಸ್ಟ್​ ಡೇ ಫಸ್ಟ್​ ಶೋ ನೋಡಲಿದ್ದಾರೆ. ಅದಕ್ಕಾಗಿ ಈಗಾಗಲೇ ಟಿಕೆಟ್​ ಬುಕಿಂಗ್​ ಮಾಡಲಾಗಿದೆ.

ಇದನ್ನೂ ಓದಿ: ‘ಶಾರುಖ್​ ಖಾನ್​ಗೆ ಹೇಳಿ ಜವಾನ್​ ಚಿತ್ರದ ಟಿಕೆಟ್​ ಕೊಡಿಸಿ ಪ್ಲೀಸ್​’: ವಿವೇಕ್​ ಅಗ್ನಿಹೋತ್ರಿ ಬಹಿರಂಗ ಮನವಿ

‘ಎಸ್​ಆರ್​ಕೆ ಯೂನಿವರ್ಸ್​’ ತಂಡ ಕೂಡ ಸುಮ್ಮನೆ ಕುಳಿತಿಲ್ಲ. ಈ ಅಭಿಮಾನಿ ಸಂಘದ ವತಿಯಿಂದ ಬರೊಬ್ಬರಿ 85 ಸಾವಿರ ಜನರು ಮೊದಲ ದಿನವೇ ‘ಜವಾನ್​’ ಸಿನಿಮಾ ನೋಡಲಿದ್ದಾರೆ. ಅದಕ್ಕಾಗಿ ಸಕಲ ಸಿದ್ಧತೆ ನಡೆದಿದೆ. ಈಗಾಗಲೇ ಈ ಚಿತ್ರದ ಟಿಕೆಟ್​ ಬುಕಿಂಗ್​ ಶುರುವಾಗಿದೆ. ಕೆಲವು ಕಡೆಗಳಲ್ಲಿ ಚಿತ್ರದ ಟಿಕೆಟ್​ ಬೆಲೆ 2 ಸಾವಿರ ರೂಪಾಯಿ ದಾಟಿದ್ದರೂ ಜನರು ಮುಗಿಬಿದ್ದು ಖರೀದಿಸಿದ್ದಾರೆ. ಹಾಗಾಗಿ ಈ ಸಿನಿಮಾ ಬ್ಲಾಕ್​ ಬಸ್ಟರ್​ ಆಗುವ ಎಲ್ಲ ಸೂಚನೆ ಕಾಣಿಸಿದೆ.

ಇದನ್ನೂ ಓದಿ: ‘ಜವಾನ್​ ಚಿತ್ರ 500 ಕೋಟಿ ರೂಪಾಯಿ ಕಲೆಕ್ಷನ್​​ ಮಾಡಲಿದೆ’: ಭವಿಷ್ಯ ನುಡಿದ ಮನೋಜ್​ ದೇಸಾಯಿ

‘ಜವಾನ್​’ ಸಿನಿಮಾದಲ್ಲಿ ಶಾರುಖ್​ ಖಾನ್​ ಜೊತೆ ದೀಪಿಕಾ ಪಡುಕೋಣೆ, ನಯನತಾರಾ, ವಿಜಯ್​ ಸೇತುಪತಿ, ಸಾನ್ಯಾ ಮಲ್ಹೋತ್ರಾ ಮುಂತಾದವರು ನಟಿಸಿದ್ದಾರೆ. ಅಟ್ಲಿ ಅವರು ನಿರ್ದೇಶನ ಮಾಡಿರುವುದರಿಂದ ನಿರೀಕ್ಷೆ ಹೆಚ್ಚಾಗಿದೆ. ಇತ್ತೀಚೆಗಷ್ಟೇ ಈ ಸಿನಿಮಾ ಟ್ರೇಲರ್​ ಬಿಡುಗಡೆಯಾಗಿ ಹೈಪ್​ ಸೃಷ್ಟಿ ಮಾಡಿದೆ. ಫ್ಯಾಮಿಲಿ ಪ್ರೇಕ್ಷಕರಿಗೆ ಮತ್ತು ಆ್ಯಕ್ಷನ್​ ಪ್ರಿಯರನ್ನು ಗಮನದಲ್ಲಿ ಇಟ್ಟುಕೊಂಡು ಈ ಸಿನಿಮಾ ಮಾಡಿದಂತಿದೆ. ಶಾರುಖ್​ ಖಾನ್​ ಅವರ ಒಡೆತನದಲ್ಲಿರುವ ‘ರೆಡ್​ ಚಿಲ್ಲೀಸ್​ ಎಂಟರ್​ಟೇನ್ಮೆಂಟ್​’ ಸಂಸ್ಥೆ ಮೂಲಕ ‘ಜವಾನ್​’ ನಿರ್ಮಾಣ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ