AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aamir Khan: ‘ಸಿತಾರೆ ಜಮೀನ್​ ಪರ್​’: ಹೊಸ ಸಿನಿಮಾ ಘೋಷಿಸಿದ ನಟ ಆಮಿರ್​ ಖಾನ್​

Sitare Zameen Par: ಸ್ವತಃ ಆಮಿರ್ ಖಾನ್​ ಅವರು ಈ ವಿಚಾರವನ್ನು ಬಾಯಿ ಬಿಟ್ಟಿದ್ದಾರೆ. 2007ರಲ್ಲಿ ಬಿಡುಗಡೆ ಆಗಿದ್ದ‘ತಾರೆ ಜಮೀನ್​ ಪರ್​’ ಸಿನಿಮಾದ ರೀತಿಯ ಇನ್ನೊಂದು ಕಥೆಯನ್ನು ಇಟ್ಟುಕೊಂಡು ‘ಸಿತಾರೆ ಜಮೀನ್​ ಪರ್​’ ಎಂದು ಹೊಸ ಸಿನಿಮಾ ಮಾಡಲು ಆಮಿರ್ ಖಾನ್​ ಮುಂದಾಗಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.

Aamir Khan: ‘ಸಿತಾರೆ ಜಮೀನ್​ ಪರ್​’: ಹೊಸ ಸಿನಿಮಾ ಘೋಷಿಸಿದ ನಟ ಆಮಿರ್​ ಖಾನ್​
ಆಮಿರ್ ಖಾನ್
ಮದನ್​ ಕುಮಾರ್​
|

Updated on: Oct 11, 2023 | 1:10 PM

Share

ಬಾಲಿವುಡ್​ನಲ್ಲಿ ನಟ ಆಮಿರ್​ ಖಾನ್​ (Aamir Khan) ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ಸಿನಿಮಾಗಳಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಹಾಗಿದ್ದರೂ ಕೂಡ ಇತ್ತೀಚಿನ ವರ್ಷಗಳಲ್ಲಿ ಆಮಿರ್ ಖಾನ್​ ಅವರಿಗೆ ನಿರೀಕ್ಷಿತ ಪ್ರಮಾಣದ ಗೆಲುವು ಸಿಕ್ಕಿಲ್ಲ. ‘ಲಾಲ್​ ಸಿಂಗ್ ಛಡ್ಡಾ’ ಸಿನಿಮಾ ಹೀನಾಯವಾಗಿ ಸೋತ ಬಳಿಕ ಅವರು ಕೊಂಚ ಸೈಲೆಂಟ್​ ಆಗಿಬಿಟ್ಟಿದ್ದರು. ಹೊಸ ಸಿನಿಮಾ (Aamir Khan New Movie) ಅನೌನ್ಸ್​ ಮಾಡಲು ಅವರು ಹೆಚ್ಚು ಸಮಯ ತೆಗೆದುಕೊಂಡರು. ಈಗ ಮುಂದಿನ ಸಿನಿಮಾ ಬಗ್ಗೆ ಆಮಿರ್​ ಖಾನ್​ ಅವರು ಮಾಹಿತಿ ಬಿಟ್ಟುಕೊಟ್ಟಿದ್ದಾರೆ. ಅವರು ನಟಿಸಲಿರುವ ಈ ಚಿತ್ರಕ್ಕೆ ‘ಸಿತಾರೆ ಜಮೀನ್​ ಪರ್​’ (Sitare Zameen Par) ಎಂದು ಹೆಸರು ಇಡಲಾಗಿದೆ. ಅಲ್ಲದೇ ಈ ಸಿನಿಮಾದ ಕಾನ್ಸೆಪ್ಟ್​ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆಮಿರ್ ಖಾನ್​ ಅವರು ಈ ವಿಚಾರವನ್ನು ಬಾಯಿ ಬಿಟ್ಟಿದ್ದಾರೆ. 2007ರಲ್ಲಿ ಆಮಿರ್ ಖಾನ್​ ನಿರ್ದೇಶನ ಮಾಡಿ ನಟಿಸಿದ್ದ ‘ತಾರೆ ಜಮೀನ್​ ಪರ್​’ ಸಿನಿಮಾ ಬಿಡುಗಡೆ ಆಗಿತ್ತು. ಓದಲು-ಬರೆಯಲು ಕಷ್ಟಪಡುವ ಬಾಲಕನ ಪಾತ್ರವನ್ನು ಕೇಂದ್ರವಾಗಿ ಇಟ್ಟುಕೊಂಡು ಆ ಸಿನಿಮಾ ಮಾಡಲಾಗಿತ್ತು. ಈಗ ಅಂಥದ್ದೇ ಕಾನ್ಸೆಪ್ಟ್​ ಇರುವಂತಹ ಕಥೆಯನ್ನು ಇಟ್ಟುಕೊಂಡು ‘ಸಿತಾರೆ ಜಮೀನ್​ ಪರ್​’ ಎಂದು ಸಿನಿಮಾ ಮಾಡಲು ಆಮಿರ್ ಖಾನ್​ ಮುಂದಾಗಿದ್ದಾರೆ.

ಹೊಸ ಹೇರ್​ ಸ್ಟೈಲ್​ನಲ್ಲಿ ಕಾಣಿಸಿಕೊಂಡ ಆಮಿರ್​ ಖಾನ್​; ಅಭಿಮಾನಿಗಳಿಗೆ ಬೇರೆ ಚಿಂತೆ

‘ನಾನು ಈ ವಿಚಾರದ ಬಗ್ಗೆ ಬಹಿರಂಗವಾಗಿ ಈವರೆಗೂ ಮಾತನಾಡಿಲ್ಲ. ಈಗ ಹೆಚ್ಚೇನೂ ಹೇಳಲು ಸಾಧ್ಯವಿಲ್ಲ. ಆದರೆ ಈ ಸಿನಿಮಾದ ಟೈಟಲ್​ ಏನು ಎಂಬುದನ್ನು ಹೇಳುತ್ತೇನೆ. ‘ಸಿತಾರೆ ಜಮೀನ್​ ಪರ್​’ ಎಂದು ಹೆಸರು ಇಟ್ಟಿದ್ದೇನೆ. ನಿಮಗೆ ನನ್ನ ‘ತಾರೆ ಜಮೀನ್​ ಪರ್​’ ಸಿನಿಮಾ ನೆನಪಿರಬಹುದು. ಈಗ ಅದಕ್ಕಿಂತಲೂ 10 ಪಟ್ಟು ಮುಂದುವರಿದ ಒಂದು ಥೀಮ್​ ಇಟ್ಟುಕೊಂಡು ಹೊಸ ಸಿನಿಮಾ ಮಾಡುತ್ತೇನೆ. ಅಂದು ‘ತಾರೆ ಜಮೀನ್​ ಪರ್’ ಸಿನಿಮಾ ಎಮೋಷನಲ್​ ಆಗಿತ್ತು. ನಿಮ್ಮನ್ನೆಲ್ಲ ಅಳಿಸಿತ್ತು. ಆದರೆ ಈಗ ‘ಸಿತಾರೆ ಜಮೀನ್ ಪರ್​’ ಚಿತ್ರ ನಿಮ್ಮನ್ನು ನಗಿಸುತ್ತದೆ ಮತ್ತು ಮನರಂಜನೆ ನೀಡುತ್ತದೆ’ ಎಂದು ಆಮಿರ್ ಖಾನ್​ ಹೇಳಿದ್ದಾರೆ.

ಆಮಿರ್​ ಖಾನ್​ ಮಗಳು ಇರಾ ಖಾನ್​ ಮದುವೆ ತಯಾರಿ ಹೇಗಿದೆ?

‘ನಮ್ಮೆಲ್ಲರಲ್ಲೂ ದೌರ್ಲಬ್ಯಗಳಿವೆ. ಅದೇ ರೀತಿ ನಮಗೆ ನಮ್ಮದೇ ಆದಂತಹ ಸಾಮರ್ಥ್ಯಗಳು ಕೂಡ ಇವೆ. ಬೇರೆ ಬೇರೆ ಸಮಸ್ಯೆಗಳನ್ನು ಹೊಂದಿರುವ 9 ಹುಡುಗರು ನನ್ನ ಪಾತ್ರಕ್ಕೆ ಸಹಾಯ ಮಾಡುತ್ತಾರೆ’ ಎಂದು ಹೇಳುವ ಮೂಲಕ ಕಥೆಯ ಬಗ್ಗೆಯೂ ಆಮಿರ್ ಖಾನ್​ ಅವರು ಸುಳಿವು ಬಿಟ್ಟುಕೊಟ್ಟಿದ್ದಾರೆ. ಇದಲ್ಲದೇ ನಿರ್ಮಾಪಕನಾಗಿಯೂ ಆಮಿರ್​ ಖಾನ್ ಅವರು ಬ್ಯುಸಿ ಆಗಿದ್ದಾರೆ. ಮೂರು ಸಿನಿಮಾಗಳನ್ನು ಅವರು ಒಟ್ಟಿಗೆ ನಿರ್ಮಿಸುತ್ತಿದ್ದಾರೆ. ಮುಂದಿನ ವರ್ಷ ಅವರ ಮಗಳ ಮದುವೆ ನಡೆಯಲಿದ್ದು, ಅದರ ತಯಾರಿಯಲ್ಲೂ ಅವರು ತೊಡಗಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!