‘ನಾನು ಅಂದು ಸಾಕಷ್ಟು ಅಳುತ್ತೇನೆ’; ಮಗಳ ಮದುವೆ ಡೇಟ್ ತಿಳಿಸಿ ಭಾವುಕರಾದ ಆಮಿರ್ ಖಾನ್
ಆಮಿರ್ ಖಾನ್ ಅವರು ರೀನಾ ಅವರನ್ನು ಮದುವೆ ಆಗಿದ್ದರು. ಈ ದಂಪತಿಗೆ ಜನಿಸಿದವರು ಇರಾ. ಆ ಬಳಿಕ ಆಮಿರ್ ಹಾಗೂ ರೀನಾ ವಿಚ್ಛೇದನ ಪಡೆದುಕೊಂಡರು. ನೂಪುರ್ ಹಾಗೂ ಇರಾ 2020ರಿಂದ ಡೇಟಿಂಗ್ ಮಾಡುತ್ತಿದ್ದಾರೆ. 2021ರಲ್ಲಿ ಈ ವಿಚಾರವನ್ನು ಇವರು ಅಧಿಕೃತ ಮಾಡಿದರು.
ಆಮಿರ್ ಖಾನ್ ಮಗಳು ಇರಾ ಖಾನ್ (Ira Khan) ಹಾಗೂ ನೂಪುರ್ ಶಿಖಾರೆ ಇಬ್ಬರೂ ಬಹಳ ಸಮಯದಿಂದ ಡೇಟಿಂಗ್ ಮಾಡುತ್ತಿದ್ದರು. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಇಬ್ಬರೂ ಎಂಗೇಜ್ಮೆಂಟ್ ಮಾಡಿಕೊಂಡರು. ಈ ಸಮಾರಂಭದಲ್ಲಿ ಆಮಿರ್ ಖಾನ್, ಇಮ್ರಾನ್ ಖಾನ್, ಕಿರಣ್ ರಾವ್ ಮೊದಲಾದವರು ಹಾಜರಿ ಹಾಕಿದ್ದರು. ಇರಾ ಮದುವೆ ಡೇಟ್ ಬಗ್ಗೆ ಒಂದಷ್ಟು ಸುದ್ದಿಗಳು ಹರಿದಾಡಿದ್ದವು. ಈಗ ಸ್ವತಃ ಆಮಿರ್ ಖಾನ್ ಅವರು ಮಗಳ ಮದುವೆ ಯಾವಾಗ ಎನ್ನುವ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಮದುವೆ ದಿನ ಅವರು ಸಾಕಷ್ಟು ಕಣ್ಣೀರು ಹಾಕಲಿದ್ದಾರಂತೆ.
ಇರಾ ಹಾಗೂ ನೂಪುರ್ ಮದುವೆ ಮುಂದಿನ ವರ್ಷ ಜನವರಿ 3ರಂದು ನಡೆಯಲಿದೆ ಎಂದು ವರದಿ ಆಗಿತ್ತು. ಇದನ್ನು ನಿಜ ಎಂದು ಆಮಿರ್ ಖಾನ್ ಅವರು ಒಪ್ಪಿಕೊಂಡಿದ್ದಾರೆ. ‘ನಾನು ಸಾಕಷ್ಟು ಎಮೋಷನಲ್ ವ್ಯಕ್ತಿ. ಮದುವೆ ದಿನ ನಾನು ಸಾಕಷ್ಟು ಕಣ್ಣೀರು ಹಾಕುತ್ತೇನೆ. ಆ ದಿನ ಆಮಿರ್ ಖಾನ್ ಬಗ್ಗೆ ಕಾಳಜಿವಹಿಸಬೇಕು ಎಂದು ಎಲ್ಲರೂ ಈಗಲೇ ಮಾತನಾಡಿಕೊಳ್ಳುತ್ತಿದ್ದಾರೆ. ನನಗೆ ಕಣ್ಣೀರು ಹಾಗೂ ನಗುವನ್ನು ತಡೆದುಕೊಳ್ಳೋಕೆ ಆಗಲ್ಲ’ ಎಂಬುದು ಆಮಿರ್ ಖಾನ್ ಮಾತು.
‘ಇರಾ ಜನವರಿ 3ರಂದು ಮದುವೆ ಆಗುತ್ತಿದ್ದಾಳೆ. ಅವಳು ಆಯ್ಕೆ ಮಾಡಿರುವ ಹುಡುಗ ನಿಜಕ್ಕೂ ಚೆನ್ನಾಗಿದ್ದಾರೆ. ಅವನು ಲವ್ಲಿ ಬಾಯ್. ವೃತ್ತಿಯಲ್ಲಿ ಆತ ಟ್ರೇನರ್. ಆಕೆ ಖಿನ್ನತೆಗೆ ಒಳಗಾದಾಗ ನೂಪುರ್ ಅವಳ ಜೊತೆ ಇದ್ದ. ಭಾವನಾತ್ಮಕವಾಗಿ ಅವಳಿಗೆ ಬೆಂಬಲವಾಗಿ ನಿಂತಿದ್ದ. ಇಬ್ಬರೂ ಖುಷಿಯಿಂದ ಇರಲಿ ಎಂದು ಹಾರೈಸುತ್ತೇನೆ’ ಎಂದು ಆಮಿರ್ ಖಾನ್ ಹೇಳಿದ್ದಾರೆ.
ಆಮಿರ್ ಖಾನ್ ಅವರು ರೀನಾ ಅವರನ್ನು ಮದುವೆ ಆಗಿದ್ದರು. ಈ ದಂಪತಿಗೆ ಜನಿಸಿದವರು ಇರಾ. ಆ ಬಳಿಕ ಆಮಿರ್ ಹಾಗೂ ರೀನಾ ವಿಚ್ಛೇದನ ಪಡೆದುಕೊಂಡರು. ನೂಪುರ್ ಹಾಗೂ ಇರಾ 2020ರಿಂದ ಡೇಟಿಂಗ್ ಮಾಡುತ್ತಿದ್ದಾರೆ. 2021ರಲ್ಲಿ ಈ ವಿಚಾರವನ್ನು ಇವರು ಅಧಿಕೃತವಾಗಿ ಘೋಷಿಸಿದರು.
ಇದನ್ನೂ ಓದಿ: ಹಿಮಾಚಲ ಪ್ರದೇಶ ಪ್ರಕೃತಿ ವಿಕೋಪ: ಸಹಾಯ ಹಸ್ತ ಚಾಚಿದ ನಟ ಆಮಿರ್ ಖಾನ್
ಸದ್ಯ ಆಮಿರ್ ಖಾನ್ ನಟನೆಯಿಂದ ಬ್ರೇಕ್ ಪಡೆದಿದ್ದಾರೆ. ಅವರ ಹೊಸ ಸಿನಿಮಾ ಕುರಿತಂತೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಆಮಿರ್ ನಿರ್ಮಾಣದಲ್ಲೂ ಬ್ಯುಸಿ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ