ಅಮಿತಾಭ್ ಬಚ್ಚನ್ ಆಸ್ತಿ ಎಷ್ಟು ಕೋಟಿ ರೂಪಾಯಿ? ಅವರ ಬಳಿ ಎಷ್ಟು ಕಾರುಗಳಿವೆ ಗೊತ್ತಾ?

ಅಮಿತಾಭ್ ನಟ ಮಾತ್ರನಲ್ಲ. ಅವರು ನಿರ್ಮಾಪಕ, ಹಿನ್ನೆಲೆ ಗಾಯಕ ಹಾಗೂ ಟೆಲಿವಿಷನ್ ಹೋಸ್ಟ್ ಕೂಡ ಹೌದು. ಅವರು ರಾಜಕೀಯದಲ್ಲೂ ಕೆಲ ಕಾಲ ಇದ್ದರು. ಹಲವು ರೀತಿಯ ಪಾತ್ರಗಳನ್ನು ಮಾಡಿ ಅವರು ಗಮನ ಸೆಳೆದಿದ್ದಾರೆ. ಅವರ ಮೊದಲ ಸಂಭಾವನೆ 500 ರೂಪಾಯಿ ಆಗಿತ್ತು. ಈಗ ಅವರು ಪ್ರತಿ ಚಿತ್ರಕ್ಕೆ ಕೋಟಿ ಕೋಟಿ ಹಣ ಪಡೆಯುತ್ತಾರೆ.

ಅಮಿತಾಭ್ ಬಚ್ಚನ್ ಆಸ್ತಿ ಎಷ್ಟು ಕೋಟಿ ರೂಪಾಯಿ? ಅವರ ಬಳಿ ಎಷ್ಟು ಕಾರುಗಳಿವೆ ಗೊತ್ತಾ?
ಅಮಿತಾಭ್
Follow us
| Updated By: ರಾಜೇಶ್ ದುಗ್ಗುಮನೆ

Updated on:Oct 11, 2023 | 8:31 AM

ಅಮಿತಾಭ್ ಬಚ್ಚನ್ (Amitabh Bachchan) ಅವರು ಭಾರತ ಕಂಡ ಮಹಾನ್ ಕಲಾವಿದರಲ್ಲಿ ಒಬ್ಬರು. ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ವಿವಿಧ ರೀತಿಯ ಸಿನಿಮಾಗಳಲ್ಲಿ ನಟಿಸಿ ಅವರು ಗಮನ ಸೆಳೆದಿದ್ದಾರೆ. ಅವರಿಗೆ ಇಂದು (ಅಕ್ಟೋಬರ್ 11) 81ನೇ ವರ್ಷದ ಹುಟ್ಟುಹಬ್ಬ. ಸೋಶಿಯಲ್ ಮೀಡಿಯಾದಲ್ಲಿ ಅಮಿತಾಭ್​​ಗೆ ಶುಭಾಶಯಗಳು ಬರುತ್ತಿವೆ. ಈ ನಟನಿಗೆ ದೇವರು ಆರೋಗ್ಯ ಹಾಗೂ ಆಯಸ್ಸು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಅಮಿತಾಭ್ ಬಚ್ಚನ್ ಕಾರ್ ಕಲೆಕ್ಷನ್, ನೆಟ್​ವರ್ತ್​, ಪ್ರಾಪರ್ಟಿ ಬಗ್ಗೆ ಇಲ್ಲಿದೆ ವಿವರ.

ಅಮಿತಾಭ್ ನಟ ಮಾತ್ರನಲ್ಲ. ಅವರು ನಿರ್ಮಾಪಕ, ಹಿನ್ನೆಲೆ ಗಾಯಕ ಹಾಗೂ ಟೆಲಿವಿಷನ್ ಹೋಸ್ಟ್ ಕೂಡ ಹೌದು. ಅವರು ರಾಜಕೀಯದಲ್ಲೂ ಕೆಲ ಕಾಲ ಇದ್ದರು. ಹಲವು ರೀತಿಯ ಪಾತ್ರಗಳನ್ನು ಮಾಡಿ ಅವರು ಗಮನ ಸೆಳೆದಿದ್ದಾರೆ. ಅವರ ಮೊದಲ ಸಂಭಾವನೆ 500 ರೂಪಾಯಿ ಆಗಿತ್ತು. ಈಗ ಅವರು ಪ್ರತಿ ಚಿತ್ರಕ್ಕೆ ಕೋಟಿ ಕೋಟಿ ಹಣ ಪಡೆಯುತ್ತಾರೆ. ಅವರ ಜರ್ನಿ ಬಗ್ಗೆ ಇಲ್ಲಿದೆ ವಿವರ.

ಅಮಿತಾಭ್ ಬಚ್ಚನ್ 1942ರಲ್ಲಿ ಅಲಹಾಬಾದ್​ನಲ್ಲಿ ಜನಿಸಿದರು. ಖ್ಯಾತ ಕವಿ ಹರಿವಂಶ್ ರೈ ಬಚ್ಚನ್ ಹಾಗೂ ಸಾಮಾಜಿಕ ಕಾರ್ಯಕರ್ತೆ ತೇಜಿ ಬಚ್ಚನ್ ಮಗನಾಗಿ ಅವರು ಹುಟ್ಟಿದರು. 1969ರಲ್ಲಿ ಅಮಿತಾಭ್ ನಟನೆಗೆ ಕಾಲಿಟ್ಟರು. ‘ಭುವನ್ ಸೋಮ’ ಅವರು ನಟಿಸಿದ ಮೊದಲ ಸಿನಿಮಾ. ಆ ಬಳಿಕ ‘ಜಂಜೀರ್’, ‘ರೋಟಿ ಕಪಡಾ ಔರ್ ಮಕಾನ್, ‘ದೀವಾರ್’, ‘ಶೋಲೆ’ ಸಿನಿಮಾಗಳಲ್ಲಿ ನಟಿಸಿ ಅವರು ಆ್ಯಂಗ್ರಿ ಯಂಗ್ ಮ್ಯಾನ್ ಎನ್ನುವ ಖ್ಯಾತಿ ಪಡೆದರು. ‘ಅಮರ್ ಅಕ್ಬರ್ ಆ್ಯಂಟೋನಿ’ ‘ಡಾನ್’ ಮೊದಲಾದ ಸೂಪರ್ ಹಿಟ್ ಚಿತ್ರಗಳನ್ನು ಅವರು ನಿಡಿದರು. 90ರ ದಶಕದಲ್ಲಿ ಅವರು ಚಿತ್ರರಂಗದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿರಲಿಲ್ಲ. ಇದೇ ವೇಳೆ ಅವರು ಬಿಸ್ನೆಸ್​ನಲ್ಲಿ ನಷ್ಟ ಅನುಭವಿಸಿದರು. ಅವರು ಜೀರೋ ಆದರು. 2000ನೇ ಇಸವಿಯಲ್ಲಿ ರಿಲೀಸ್ ಆದ ‘ಮೊಹಬ್ಬತೇ’ ಚಿತ್ರದ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದರು. ವೃತ್ತಿ ಜೀವನದಲ್ಲಿ ಅವರು ಎರಡನೇ ಇನ್ನಿಂಗ್ಸ್ ಆರಂಭಿಸಿದರು ಎಂದರೂ ತಪ್ಪಾಗಲಾರದು.

ಅಮಿತಾಭ್ ಬಚ್ಚನ್ ಅವರ ಒಟ್ಟೂ ಆಸ್ತಿ 3,190 ಕೋಟಿ ರೂಪಾಯಿ. ಅವರು ದುಬಾರಿ ಕಾರು, ಹಲವು ಪ್ರಾಪರ್ಟಿ, ರಿಯಲ್​ ಎಸ್ಟೇಟ್ ಮೇಲೆ ಹೂಡಿಕೆ ಮಾಡಿದ್ದಾರೆ. ಶಾರುಖ್ ಖಾನ್ ಆಸ್ತಿ 6000 ಕೋಟಿ ರೂಪಾಯಿ ಮೇಲಿದೆ.

ಅಮಿತಾಭ್ ಆದಾಯದ ಮೂಲ

ಅಮಿತಾಭ್ ಬಚ್ಚನ್ ಅವರು ಪ್ರತಿ ಚಿತ್ರಕ್ಕೆ 6 ಕೋಟಿ ಪಡೆಯುತ್ತಾರೆ. ‘ಬ್ರಹ್ಮಾಸ್ತ್ರ’ ಚಿತ್ರಕ್ಕಾಗಿ ಅವರು 10 ಕೋಟಿ ರೂಪಾಯಿ ಪಡೆದಿದ್ದಾರೆ. ಪೋಷಕ ಪಾತ್ರದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಹೀಗಾಗಿ ಅವರಿಗೆ ಬೇಡಿಕೆ ಕುಗ್ಗಿಲ್ಲ. ಬ್ರ್ಯಾಂಡ್ ಪ್ರಚಾರಕ್ಕೆ ಅವರು 5-8 ಕೋಟಿ ರೂಪಾಯಿ ಪಡೆಯುತ್ತಾರೆ. ಮ್ಯಾಗಿ, ಇಮಾಮಿ, ಡಾಬರ್ ಚವನ್​ಪ್ರಾಶ್, ಡಾಕ್ಟರ್​ ಫಿಕ್ಸಿಟ್, ಕ್ಯಾಡ್ಬರಿ, ಟಾಟಾ ಸ್ಕೈ, ಕಲ್ಯಾಣ್ ಜ್ಯುವೆಲರ್ಸ್, ಫ್ಲಿಪ್​ಕಾರ್ಟ್, ಸೈಕಲ್ ಅಗರಬತ್ತಿ, ತನಿಷ್ಕ್​ ಸೇರಿ ಅನೇಕ ಬ್ರ್ಯಾಂಡ್​ಗಳನ್ನು ಅವರು ಪ್ರಚಾರ ಮಾಡಿದ್ದಾರೆ.  ಕೌನ್ ಬನೇಗಾ ಕರೋಡ್ಪತಿ ಶೋನ ಅವರು ನಡೆಸಿಕೊಡುತ್ತಿದ್ದಾರೆ.

ಪ್ರಾಪರ್ಟಿ

ಅಮಿತಾಭ್ ಬಚ್ಚನ್ ಅವರು ಮುಂಬೈನ ಜಲ್ಸಾದಲ್ಲಿ ಮನೆ ಹೊಂದಿದ್ದಾರೆ. ಇದನ್ನು ನೋಡಲು ಅಭಿಮಾನಿಗಳು ಆಗಮಿಸುತ್ತಾರೆ. ಪ್ರತಿ ವೀಕೆಂಡ್ ಅವರು ಫ್ಯಾನ್ಸ್​ನ ಭೇಟಿ ಆಗುತ್ತಾರೆ. ಈ ಬಂಗಲೆ ಮೌಲ್ಯ 112 ಕೋಟಿ ರೂಪಾಯಿ. ಜುಹು ಮೊದಲಾದ ಕಡೆಗಳಲ್ಲಿ ಅವರು ಬಂಗಲೆ ಹೊಂದಿದ್ದಾರೆ.

ಇದನ್ನೂ ಓದಿ: ಮಹಿಳೆಯರ ಒಳ ಉಡುಪಿನ ಬಗ್ಗೆ ಪ್ರಶ್ನೆ ಮಾಡಿದ್ದ ಅಮಿತಾಭ್ ಬಚ್ಚನ್; ಸಖತ್ ಟ್ರೋಲ್ ಆದ ನಟ

ಐಷಾರಾಮಿ ಕಾರುಗಳು

ರೇಂಜ್ ರೋವರ್, ಬೆಂಟ್ಲಿ, ರೋಲ್ಸ್ ರಾಯ್ಸ್ ಪ್ಯಾಂಟಂ ಮೊದಲಾದ ಕಾರಿನ ಕಲೆಕ್ಷನ್ ಇವರ ಬಳಿ ಇದೆ. ಲಕ್ಷದಿಂದ ಆರಂಭ ಆಗಿ 10 ಕೋಟಿ ರೂಪಾಯಿ ಬೆಲೆಯ ಕಾರುಗಳು ಇವರ ಬಳಿ ಇವೆ. ಪ್ರೈವೈಟ್ ಜೆಟ್ ಹೊಂದಿರುವ ಇವರು ಹಲವು ಕಡೆಗಳಲ್ಲಿ ಇದರಲ್ಲೇ ಪ್ರಯಾಣಿಸುತ್ತಾರೆ. ಅಕ್ಷಯ್ ಕುಮಾರ್, ಅಜಯ್ ದೇವಗನ್, ಶಾರುಖ್ ಖಾನ್ ಸೇರಿ ಅನೇಕರು ಖಾಸಗಿ ವಿಮಾನ ಹೊಂದಿದ್ದಾರೆ. ಅಮಿತಾಭ್ ಹೊಂದಿರುವ ಜೆಟ್​ನ ಬೆಲೆ 260 ಕೋಟಿ ರೂಪಾಯಿ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:08 am, Wed, 11 October 23

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ