ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ನಟಿಸೋಕೆ ರೆಡಿ ಆದ ನಯನತಾರಾ    

‘ಜವಾನ್’ ಸಿನಿಮಾ ಮೂಲಕ ನಯನತಾರಾ ಬಾಲಿವುಡ್​ಗೆ ಕಾಲಿಟ್ಟರು. ಹಿಂದಿ ಚಿತ್ರರಂಗದಲ್ಲಿ ಅವರಿಗೆ ಜನಪ್ರಿಯತೆ ಹೆಚ್ಚಿದೆ. ಸಿನಿಮಾ ಕಥೆ ಕೇಳಿದ್ದು, ಅವರಿಗೆ ಇಷ್ಟವಾಗಿದೆ. ಈ ವರ್ಷ ಮಾರ್ಚ್ ತಿಂಗಳಲ್ಲೇ ಬನ್ಸಾಲಿ ಕಚೇರಿ ಸಮೀಪ ನಯನತಾರಾ ಕಾಣಿಸಿಕೊಂಡಿದ್ದರು.  

ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ನಟಿಸೋಕೆ ರೆಡಿ ಆದ ನಯನತಾರಾ     
ನಯನತಾರಾ-ಸಂಜಯ್ ಲೀಲಾ ಬನ್ಸಾಲಿ
Follow us
ರಾಜೇಶ್ ದುಗ್ಗುಮನೆ
|

Updated on: Oct 10, 2023 | 2:57 PM

ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಅವರಿಗೆ ಸಿನಿಮಾ ಮೇಲಿರುವ ಪ್ರೀತಿ ಎಂಥದ್ದು ಎಂಬುದನ್ನು ಮತ್ತೆ ಬಿಡಿಸಿ ಹೇಳಬೇಕಿಲ್ಲ. ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಅವರು ‘ಬೈಜು ಬವ್ರಾ’ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಈ ಮಧ್ಯೆ ಅವರು ನಯನತಾರಾ ಜೊತೆ ಮಾತುಕತೆ ಪ್ರಾರಂಭಿಸಿದ್ದಾರೆ.

ನಯನತಾರಾ ಅವರು ‘ಬೈಜು ಬವ್ರಾ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದಕ್ಕಾಗಿ ನಯನತಾರಾ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ ಮೂಲಕ ಅವರು ಬಾಲಿವುಡ್​ಗೆ ಕಾಲಿಟ್ಟರು. ಹಿಂದಿ ಚಿತ್ರರಂಗದಲ್ಲಿ ಅವರಿಗೆ ಜನಪ್ರಿಯತೆ ಹೆಚ್ಚಿದೆ. ಸಿನಿಮಾ ಕಥೆ ಕೇಳಿದ್ದು, ಅವರಿಗೆ ಇಷ್ಟವಾಗಿದೆ. ಈ ವರ್ಷ ಮಾರ್ಚ್ ತಿಂಗಳಲ್ಲೇ ಬನ್ಸಾಲಿ ಕಚೇರಿ ಸಮೀಪ ನಯನತಾರಾ ಕಾಣಿಸಿಕೊಂಡಿದ್ದರು.

1952ರಲ್ಲಿ ವಿಜಯ್ ಭಟ್ ಅವರು ‘ಬೈಜು ಬವ್ರಾ’ ಸಿನಿಮಾ ನಿರ್ದೇಶನ ಮಾಡಿದ್ದರು. ಭರತ್ ಭೂಷಣ್-ಮೀನಾ ಕುಮಾರಿ ನಟಿಸಿದ್ದರು. ಈ ಸಿನಿಮಾದ  ಕಥೆ ಬೈಜು ಎಂಬ ವ್ಯಕ್ತಿಯನ್ನು ಆಧರಿಸಿದೆ. ಸಂಗೀತ ಸ್ಪರ್ಧೆಯಲ್ಲಿ ತಾನ್ಸೇನ್​ನ ಸೋಲಿಸಬೇಕು ಎಂದು ಪಣ ತೊಡುವ ಬೈಜುನ ಕಥೆ ಇದು. ಈ ಚಿತ್ರದ ರಿಮೇಕ್​ ಇದು ಎನ್ನಲಾಗಿದೆ.

ಇದನ್ನೂ ಓದಿ: ‘ಹಾಲಿವುಡ್ ಸ್ಟುಡಿಯೋ ಜೊತೆ ಮಾತುಕತೆ ನಡೆಯುತ್ತಿದೆ’; ‘ಜವಾನ್’ ಬಳಿಕ ಹೆಚ್ಚಿತು ಅಟ್ಲಿ ಬೇಡಿಕೆ

‘ಗಂಗೂಬಾಯಿ ಕಾಠಿಯಾವಾಡಿ’ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ ಕೊನೆಯ ಸಿನಿಮಾ. ಇದಾದ ಬಳಿಕ ಅವರ ನಿರ್ದೇಶನದ ಯಾವುದೇ ಹೊಸ ಸಿನಿಮಾ ರಿಲೀಸ್ ಆಗಿಲ್ಲ. ಸದ್ಯ ಅವರು ಪಾತ್ರದ ಆಯ್ಕೆಯಲ್ಲಿ ಬ್ಯುಸಿ ಇದ್ದಾರೆ.

‘ಜವಾನ್’ ಬಳಿಕ ನಯನತಾರಾಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿತು ನಿಜ. ಆದಾಗ್ಯೂ ಅವರು ಹೊಸಬರ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಮೂಲಕ ಅನೇಕರಿಗೆ ಮಾದರಿ ಆಗಿದ್ದಾರೆ. ನಯನತಾರಾ ಅವರ ಈ ಗುಣ ಅನೇಕರಿಗೆ ಇಷ್ಟವಾಗಿದೆ.  ‘ಮಣ್ಣಂಗಟ್ಟಿ’ ಸಿನಿಮಾದಲ್ಲಿ ನಯನತಾರಾ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ‘ಸಿನ್ಸ್ 1960’ ಎನ್ನುವ ಅಡಿಬರಹ ಇದೆ. ಈ ಚಿತ್ರವನ್ನು ಯೂಟ್ಯೂಬರ್ ಡ್ಯೂಡ್ ವಿಕ್ಕಿ ನಿರ್ದೇಶಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ