‘ಹಾಲಿವುಡ್ ಸ್ಟುಡಿಯೋ ಜೊತೆ ಮಾತುಕತೆ ನಡೆಯುತ್ತಿದೆ’; ‘ಜವಾನ್’ ಬಳಿಕ ಹೆಚ್ಚಿತು ಅಟ್ಲಿ ಬೇಡಿಕೆ

ಭಾರತದ ಸಿನಿಮಾಗಳಲ್ಲಿ ನಟಿಸಿ ಆ ಬಳಿಕ ಹಾಲಿವುಡ್​ನಲ್ಲಿ ಗುರುತಿಸಿಕೊಂಡ ಅನೇಕರಿದ್ದಾರೆ. ಆದರೆ, ನಿರ್ದೇಶಕರು ಈ ರೀತಿಯ ಪ್ರಯತ್ನಕ್ಕೆ ಕೈ ಹಾಕಿಲ್ಲ. ಅಟ್ಲಿ ಅವರು ಹೀಗೊಂದು ಅಪರೂಪದ ಸಾಧನೆ ಮಾಡಲು ಮುಂದಾಗಿದ್ದಾರೆ.

‘ಹಾಲಿವುಡ್ ಸ್ಟುಡಿಯೋ ಜೊತೆ ಮಾತುಕತೆ ನಡೆಯುತ್ತಿದೆ’; ‘ಜವಾನ್’ ಬಳಿಕ ಹೆಚ್ಚಿತು ಅಟ್ಲಿ ಬೇಡಿಕೆ
ಅಟ್ಲಿ
Follow us
ರಾಜೇಶ್ ದುಗ್ಗುಮನೆ
|

Updated on: Oct 06, 2023 | 12:32 PM

ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ (Jawan Movie) ಸೂಪರ್ ಹಿಟ್ ಆಗಿದೆ. ಈ ಚಿತ್ರದಿಂದ ನಿರ್ದೇಶಕ ಅಟ್ಲಿ ಖ್ಯಾತಿ ವಿಶ್ವ ಮಟ್ಟಕ್ಕೆ ಹಬ್ಬಿದೆ. ಇಷ್ಟು ದಿನ ತಮಿಳಿನಲ್ಲಿ ಬ್ಯುಸಿ ಇದ್ದ ಅಟ್ಲಿ ಬಳಿಕ ಬಾಲಿವುಡ್​ಗೆ ಹಾರಿದರು. ಈಗ ಅವರು ಹಾಲಿವುಡ್​​ಗೆ ಹೋಗೋಕೆ ರೆಡಿ ಆಗಿದ್ದಾರೆ. ಅಲ್ಲಿನ ಸ್ಟುಡಿಯೋಗಳ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಅಟ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.

ಭಾರತದ ಸಿನಿಮಾಗಳಲ್ಲಿ ನಟಿಸಿ ಆ ಬಳಿಕ ಹಾಲಿವುಡ್​ನಲ್ಲಿ ಗುರುತಿಸಿಕೊಂಡ ಅನೇಕರಿದ್ದಾರೆ. ಆದರೆ, ನಿರ್ದೇಶಕರು ಈ ರೀತಿಯ ಪ್ರಯತ್ನಕ್ಕೆ ಕೈ ಹಾಕಿಲ್ಲ. ಅಟ್ಲಿ ಅವರು ಹೀಗೊಂದು ಅಪರೂಪದ ಸಾಧನೆ ಮಾಡಲು ಮುಂದಾಗಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡುತ್ತಾ ಅವರು ಈ ವಿಚಾರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

‘ಸಿನಿಮಾಗೆ ಯಾವುದೇ ವರ್ಗೀಕರಣ ಇಲ್ಲ. ಶಾರುಖ್ ಅವರದ್ದು ಇದೇ ವಿಷನ್. ಅವರಿಗೆ ಈ ರೀತಿಯ ಮನಸ್ಥಿತಿ ಇರಲಿಲ್ಲ ಎಂದಾಗಿದ್ದರೆ ಅವರು ನನ್ನನ್ನು ಕರೆಯುತ್ತಲೇ ಇರಲಿಲ್ಲ. ಒಂದು ದೇಶದ ಸಿನಿಮಾ ಎಂಬ ಮನಸ್ಥಿತಿ ಇರಬೇಕು ಎಂಬುದು ಶಾರುಖ್ ಖಾನ್ ಅಭಿಪ್ರಾಯ. ನಾನು ಪ್ರೇಕ್ಷಕರಿಗೆ ಧನ್ಯವಾದ ಹೇಳಬಯಸುತ್ತೇನೆ. ಈ ಮೊದಲು ಪ್ರೇಕ್ಷಕರು ದಕ್ಷಿಣದ ಮಸಾಲಾಯುಕ್ತ ಸಿನಿಮಾ ಎನ್ನುತ್ತಿದ್ದರು. ನನಗೆ ಅದೇನು ಎಂಬುದೇ ಗೊತ್ತಿರಲಿಲ್ಲ. ದಕ್ಷಿಣದಲ್ಲಿ ಮಾಡಿದ್ದನ್ನೇ ಇಲ್ಲಿಯೂ (ಬಾಲಿವುಡ್) ಮಾಡಿದೆ.  ಪ್ರೇಕ್ಷಕರಿಗೆ ಕೆಟ್ಟದ್ದು ಯಾವುದು, ಒಳ್ಳೆಯದು ಯಾವುದು ಅನ್ನೋದು ಗೊತ್ತಿದೆ’ ಎಂದಿದ್ದಾರೆ ಅಟ್ಲಿ.

ಇದನ್ನೂ ಓದಿ: ಮುಂಬೈನಲ್ಲಿ ನಡೆಯಿತು ಅಲ್ಲು ಅರ್ಜುನ್-ಅಟ್ಲಿ ಭೇಟಿ; ಹೊಸ ಚಿತ್ರಕ್ಕೆ ರೆಡಿ ಆದ ಜೋಡಿ?

‘ಹಾಲಿವುಡ್​ನಲ್ಲೂ ಸಿನಿಮಾಗೆ ವರ್ಗೀಕರಣ ಇಲ್ಲ. ಎರಡು ದಿನಗಳ ಹಿಂದೆ ಹಾಲಿವುಡ್​ ಸ್ಟುಡಿಯೋದ ಜೊತೆ ಮಾತುಕತೆ ನಡೆಸಿದೆ. ಅವರು ನನ್ನನ್ನು ಡೈರೆಕ್ಟರ್ ಎಂದು ಮಾತ್ರ ಗುರುತಿಸಿದರು. ನಾನು ತಮಿಳು ಸಿನಿಮಾ ನಿರ್ದೇಶಕ ಎಂದೆಲ್ಲ ಪರಿಗಣನೆಗೆ ತೆಗೆದುಕೊಂಡಿಲ್ಲ. ನಾನು ಹಾಲಿವುಡ್ ಸಿನಿಮಾ ಮಾಡುತ್ತೇನೆ ಎನ್ನುವುದಿಲ್ಲ. ನಾವು ಹಾಲಿವುಡ್ ಸಿನಿಮಾ ಮಾಡುತ್ತೇವೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ