ಮುಂಬೈನಲ್ಲಿ ನಡೆಯಿತು ಅಲ್ಲು ಅರ್ಜುನ್-ಅಟ್ಲಿ ಭೇಟಿ; ಹೊಸ ಚಿತ್ರಕ್ಕೆ ರೆಡಿ ಆದ ಜೋಡಿ?

ಅಲ್ಲು ಅರ್ಜುನ್ ಮುಂಬೈಗೆ ಹೋಗೋದು ಸಿನಿಮಾ ಪ್ರಮೋಷನ್​ಗೆ ಮಾತ್ರ. ಆ ರೀತಿಯ ಯಾವುದೇ ಕೆಲಸ ಇಲ್ಲದಿದ್ದರೂ ಅವರು ಮುಂಬೈಗೆ ತೆರಳಿದ್ದು ಏಕೆ ಎನ್ನುವ ಪ್ರಶ್ನೆ ಮೂಡಿತ್ತು. ಅದಕ್ಕೆ ಉತ್ತರ ಸಿಕ್ಕಿದೆ. ಅಟ್ಲಿ ಭೇಟಿಗೆಂದೇ ಅವರು ವಾಣಿಜ್ಯ ನಗರಿಗೆ ತೆರಳಿದ್ದರಂತೆ.

ಮುಂಬೈನಲ್ಲಿ ನಡೆಯಿತು ಅಲ್ಲು ಅರ್ಜುನ್-ಅಟ್ಲಿ ಭೇಟಿ; ಹೊಸ ಚಿತ್ರಕ್ಕೆ ರೆಡಿ ಆದ ಜೋಡಿ?
ಅಟ್ಲಿ-ಅಲ್ಲು ಅರ್ಜುನ್
Follow us
ರಾಜೇಶ್ ದುಗ್ಗುಮನೆ
|

Updated on: Sep 23, 2023 | 2:32 PM

ಅಲ್ಲು ಅರ್ಜುನ್ ಅವರು ಸದ್ಯ ‘ಪುಷ್ಪ 2’ ಸಿನಿಮಾ (Pushpa 2 Movie) ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಬ್ಯುಸಿ ಶೆಡ್ಯೂಲ್ ಮಧ್ಯೆಯೂ ಶುಕ್ರವಾರ (ಸೆಪ್ಟೆಂಬರ್ 23) ಅಲ್ಲು ಅರ್ಜುನ್ ಅವರು ಮುಂಬೈಗೆ ತೆರಳಿದ್ದಾರೆ. ಅಲ್ಲಿ ಅಟ್ಲಿ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ‘ಜವಾನ್’ ಸಿನಿಮಾ (Jawan Movie) ಮೂಲಕ ಅಟ್ಲಿ ಅವರು ದೊಡ್ಡ ಗೆಲುವು ಕಂಡಿದ್ದಾರೆ. ಅಟ್ಲಿ ಕೆಲಸವನ್ನು ಶ್ಲಾಘಿಸುವ ಕೆಲಸವನ್ನು ಅಲ್ಲು ಅರ್ಜುನ್ ಮಾಡಿದ್ದಾರೆ. ಇದರ ಜೊತೆಗೆ ಹೊಸ ಸಿನಿಮಾ ಮಾಡುವ ಬಗ್ಗೆಯೂ ಮಾತುಕತೆ ನಡೆದಿದೆ ಎನ್ನಲಾಗಿದೆ.

ಅಲ್ಲು ಅರ್ಜುನ್ ಅವರು ಕೆಲ ದಿನಗಳ ಹಿಂದೆ ‘ಜವಾನ್’ ಸಿನಿಮಾ ವೀಕ್ಷಿಸಿದ್ದಾರೆ. ಈ ಚಿತ್ರವನ್ನು ಹಾಡಿ ಹೊಗಳಿದ್ದರು. ಅಟ್ಲಿ ಅವರ ಕಾರ್ಯವೈಖರಿ ತುಂಬಾನೇ ಇಷ್ಟವಾಗಿದೆ. ಈ ಕಾರಣದಿಂದಲೇ ಅವರು ಮುಂಬೈಗೆ ತೆರಳಿದ್ದಾರೆ. ಅಲ್ಲು ಅರ್ಜುನ್ ಮುಂಬೈಗೆ ಹೋಗೋದು ಸಿನಿಮಾ ಪ್ರಮೋಷನ್​ಗೆ ಮಾತ್ರ. ಆ ರೀತಿಯ ಯಾವುದೇ ಕೆಲಸ ಇಲ್ಲದಿದ್ದರೂ ಅವರು ಮುಂಬೈಗೆ ತೆರಳಿದ್ದು ಏಕೆ ಎನ್ನುವ ಪ್ರಶ್ನೆ ಮೂಡಿತ್ತು. ಅದಕ್ಕೆ ಉತ್ತರ ಸಿಕ್ಕಿದೆ. ಅಟ್ಲಿ ಭೇಟಿಗೆಂದೇ ಅವರು ವಾಣಿಜ್ಯ ನಗರಿಗೆ ತೆರಳಿದ್ದರಂತೆ.

ಅಟ್ಲಿ ಮುಂಬೈನಲ್ಲಿ ಉಳಿದುಕೊಂಡಿರುವುದಕ್ಕೂ ಕಾರಣ ಇದೆ. ‘ಜವಾನ್’ ಯಶಸ್ಸಿನ ಬಳಿಕವೂ ಅಲ್ಲಿ ಚಿತ್ರದ ಪ್ರಚಾರ ಮಾಡುವ ಕೆಲಸ ಮಾಡಲಾಗುತ್ತಿದೆ. ಇದರಲ್ಲಿ ಅಟ್ಲಿ ಕೂಡ ಭಾಗಿ ಆಗುತ್ತಿದ್ದಾರೆ. ಹೀಗಾಗಿ, ಅವರು ಮುಂಬೈನಲ್ಲಿ ಉಳಿದುಕೊಂಡಿದ್ದಾರೆ. ಭೇಟಿ ವೇಳೆ ಮುಂದೆ ಸಾಧ್ಯವಾದಾಗ ಒಟ್ಟಾಗಿ ಸಿನಿಮಾ ಮಾಡುವ ನಿರ್ಧಾರಕ್ಕೆ ಇಬ್ಬರೂ ಬಂದಿದ್ದಾರೆ ಎನ್ನಲಾಗಿದೆ.

‘ಪುಷ್ಪ 2’ ಮಾತ್ರವಲ್ಲದೆ, ಇನ್ನೂ ಎರಡು ಸಿನಿಮಾಗಳನ್ನು ಅಲ್ಲು ಅರ್ಜುನ್ ಒಪ್ಪಿಕೊಂಡಿದ್ದಾರೆ. ಈ ಚಿತ್ರದ ಕೆಲಸದ ಮುಗಿದ ಬಳಿಕವೇ ಅಲ್ಲು ಅರ್ಜುನ್ ಹಾಗೂ ಅಟ್ಲಿ ಒಂದಾಗಬಹುದು. ಅಟ್ಲಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿರುವುದರಿಂದ ಅವರ ಮುಂದಿನ ಸಿನಿಮಾಗಳು ಹಲವು ಭಾಷೆಗಳಲ್ಲಿ ಸಿದ್ಧಗೊಳ್ಳಲಿದೆ.

ಇದನ್ನೂ ಓದಿ: ಅಟ್ಲಿ ವಿಚಾರದಲ್ಲಿ ನಯನತಾರಾಗಿಲ್ಲ ಮುನಿಸು; ಒಂದೇ ಪೋಸ್ಟ್​ನಿಂದ ಎಲ್ಲದಕ್ಕೂ ಉತ್ತರ

‘ಜವಾನ್’ ಸಿನಿಮಾ ಭಾರತದ ಬಾಕ್ಸ್ ಆಫೀಸ್​ನಲ್ಲಿ 530+ ಕೋಟಿ ರೂಪಾಯಿ ಗಳಿಕೆ ಮಾಡಿಕೊಂಡಿದೆ. ಶಾರುಖ್ ಖಾನ್​ಗೆ ಜೊತೆಯಾಗಿ ನಯನತಾರಾ, ದೀಪಿಕಾ ಪಡುಕೋಣೆ ನಟಿಸಿದ್ದಾರೆ. ವಿಜಯ್ ಸೇತುಪತಿ ವಿಲನ್ ಪಾತ್ರ ಮಾಡುತ್ತಿದ್ದಾರೆ. ಸದ್ಯ ಅಟ್ಲಿ ಅವರು ವರುಣ್ ಧವನ್ ಹಾಗೂ ಕೀರ್ತಿ ಸುರೇಶ್ ಒಟ್ಟಾಗಿ ನಟಿಸುತ್ತಿರುವ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ