ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ: ಅಧ್ಯಕ್ಷ ಸ್ಥಾನ ಪಡೆಯಲು ನಡೆದಿದೆ ಹಣಾಹಣಿ

ಕಳೆದ ಬಾರಿ ಭಾ.ಮ. ಹರೀಶ್​ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಈಗ ಎನ್​ಎಂ ಸುರೇಶ್​, ಶಿಲ್ಪಾ ಶ್ರೀನಿವಾಸ್​, ಎ. ಗಣೇಶ್​ ಹಾಗೂ ಮಾರ್ಸ್​ ಸುರೇಶ್​ ಅವರ ನಡುವೆ ಸ್ಪರ್ಧೆ ಏರ್ಪಟ್ಟಿದೆ. ರೇಸ್​ ಕೋರ್ಸ್​ ಬಳಿ ಇರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ವಾಣಿಜ್ಯ ಮಂಡಳಿಯ ಚುನಾವಣೆ ನಡೆಯಲಿದೆ.

ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ: ಅಧ್ಯಕ್ಷ ಸ್ಥಾನ ಪಡೆಯಲು ನಡೆದಿದೆ ಹಣಾಹಣಿ
ಎನ್​ಎಂ ಸುರೇಶ್​, ಎ. ಗಣೇಶ್​, ಮಾರ್ಸ್​ ಸುರೇಶ್​, ಶಿಲ್ಪಾ ಶ್ರೀನಿವಾಸ್​
Follow us
|

Updated on: Sep 23, 2023 | 1:11 PM

ಕನ್ನಡ ಚಿತ್ರರಂಗದ ಅನೇಕ ಚಟುವಟಿಕೆಗಳಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೇ (​Karnataka ​Film Chamber of Commerce) ಕೇಂದ್ರ ಸ್ಥಾನ. ಸಿನಿಮಾ ನೋಂದಣಿಯಿಂದ ಹಿಡಿದು ಸ್ಯಾಂಡಲ್​ವುಡ್​ನಲ್ಲಿನ ತಕರಾರುಗಳನ್ನು ಬಗೆಹರಿಸುವ ಕಾಯಕದ ತನಕ ಅನೇಕ ಸಂಗತಿಗಳು ಫಿಲ್ಮ್​ ಚೇಂಬರ್​ನಲ್ಲಿ ನಡೆಯುತ್ತವೆ. ಮಂಡಳಿಯ ಅಧ್ಯಕ್ಷರಾದವರ ಮೇಲೆ ಸಾಕಷ್ಟು ಜವಾಬ್ದಾರಿ ಇರುತ್ತದೆ. ಪ್ರತಿ ಬಾರಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಾಗಲೂ ಸಖತ್​ ಪೈಪೋಟಿ ನಿರ್ಮಾಣ ಆಗುತ್ತದೆ. 2023ನೇ ಸಾಲಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ (​Film Chamber Elections) ಇಂದು (ಸೆಪ್ಟೆಂಬರ್​ 23) ನಡೆಯುತ್ತಿದೆ. ಕನ್ನಡ ಚಿತ್ರರಂಗದ ಅನೇಕರು ಬಂದು ಮತ ಚಲಾಯಿಸಲಿದ್ದಾರೆ. ಈ ಬಾರಿ ಅಧ್ಯಕ್ಷ ಸ್ಥಾನಕ್ಕಾಗಿ ಎನ್​ಎಂ ಸುರೇಶ್​ (NM Suresh), ಶಿಲ್ಪಾ ಶ್ರೀನಿವಾಸ್​, ಎ. ಗಣೇಶ್​ ಹಾಗೂ ಮಾರ್ಸ್​ ಸುರೇಶ್​ ಅವರ ನಡುವೆ ಹಣಾಹಣಿ ನಡೆಯುತ್ತಿದೆ. ಇವರ ಪೈಕಿ ಯಾರು ಅಧ್ಯಕ್ಷ ಸ್ಥಾನಕ್ಕೆ ಏರುತ್ತಾರೆ ಎಂಬುದನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ.

ಬೆಂಗಳೂರಿನ ರೇಸ್​ ಕೋರ್ಸ್​ ಬಳಿ ಇರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ನಡೆಯಲಿದೆ. ಬೆಳಗ್ಗೆ ಸರ್ವ ಸದ್ಯಸ್ಯರ ಸಭೆ ನಡೆದಿದ್ದು, ಇದರಲ್ಲಿ ಅನೇಕರು ಭಾಗಿ ಆಗಿದ್ದಾರೆ. ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಫಿಲ್ಮ್​ ಚೇಂಬರ್ ಎಲೆಕ್ಷನ್​ ಶುರುವಾಗಲಿದೆ. ಸಂಜೆ ಆರು ಗಂಟೆ ತನಕ ವೋಟಿಂಗ್​ಗೆ ಅವಕಾಶ ಇರಲಿದೆ. ನಂತರ ಮತ ಎಣಿಕೆ ಆರಂಭ ಆಗಲಿದೆ. ರಾತ್ರಿ 8 ಗಂಟೆ ಸುಮಾರಿಗೆ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.

ಇದನ್ನೂ ಓದಿ: ‘ಯಾವ ಕೆಲಸ ಮಾಡೋಕೂ ನಾನು ರೆಡಿ’: ವಾಣಿಜ್ಯ ಮಂಡಳಿ ಚುನಾವಣೆ ಕುರಿತು ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ

ಕಳೆದ ವರ್ಷ ಭಾ.ಮ. ಹರೀಶ್​ ಅವರು ವಾಣಿಜ್ಯ ಮಂಡಳಿಗೆ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಅವರ ಅವಧಿ ಮುಗಿದಿದ್ದರೂ ಕೂಡ ಚುನಾವಣೆ ನಡೆಸಿಲ್ಲ ಎಂದು ಕೆಲವರು ಆಕ್ಷೇಪ ಎತ್ತಿದ್ದರು. ಈಗ ಚುನಾವಣೆ ನಡೆಯುತ್ತಿದೆ. ನಿರ್ಮಾಪಕರು, ಪ್ರದರ್ಶಕರು ಹಾಗೂ ವಿತರಕರ ವಲಯದಿಂದ ಅನೇಕರು ಬಂದು ಮತ ಚಲಾಯಿಸಲಿದ್ದಾರೆ. 1600 ಸದಸ್ಯರು ಭಾಗಿ ಆಗಲಿದ್ದಾರೆ. ಚಿತ್ರರಂಗಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳು ಇವೆ. ಸಬ್ಸಿಡಿ ವಿಳಂಬ, ಪೈರಸಿ ಕಾಟ, ಸಂಭಾವನೆ ತಾರತಮ್ಯ, ಚಿತ್ರೀಕರಣಕ್ಕೆ ಸಿಂಗಲ್​ ವಿಂಡೋ ಅನುಮತಿ ಸಿಗದೇ ಇರುವುದು ಸೇರಿದಂತೆ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮಂಡಳಿ ಪ್ರಯತ್ನಿಸಬೇಕಿದೆ.

ಇದನ್ನೂ ಓದಿ: ‘ನಾನು ಆಡಂಬರ ಮಾಡಲ್ಲ, ಸುಳ್ಳು ಆಶ್ವಾಸನೆ ಕೊಡಲ್ಲ’: ಫಿಲ್ಮ್​ ಚೇಂಬರ್​ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎನ್​ಎಂ ಸುರೇಶ್​ ಹೇಳಿಕೆ

ನಿರ್ಮಾಪಕರು, ಪ್ರದರ್ಶಕರು ಹಾಗೂ ವಿತರಕರ ವಲಯದ ಪೈಕಿ ಪ್ರತಿ ಬಾರಿ ಒಂದೊಂದು ವಲಯಕ್ಕೆ ಅಧ್ಯಕ್ಷ ಸ್ಥಾನ ಮೀಸಲಾಗಿರುತ್ತದೆ. ಈ ಬಾರಿ ವಿತರಕರ ವಲಯದಿಂದ ಅಧ್ಯಕ್ಷರು ಆಯ್ಕೆ ಆಗಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ವಿತರಕರಾಗಿ ಹಲವು ವರ್ಷಗಳ ಅನುಭವ ಹೊಂದಿರುವ ಮಾರ್ಸ್​ ಸುರೇಶ್​, ಎ. ಗಣೇಶ್​, ಶಿಲ್ಪಾ ಶ್ರೀನಿವಾಸ್​ ಹಾಗೂ ಎನ್​ಎಂ ಸುರೇಶ್​ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ನೀಡುತ್ತಿದ್ದಾರೆ. ಬೇರೆ ಬೇರೆ ಕಾರ್ಯಯೋಜನೆಗಳನ್ನು ಮುಂದಿಟ್ಟುಕೊಂಡು ಅಧ್ಯಕ್ಷ ಸ್ಥಾನಕ್ಕಾಗಿ ಈ ಅಭ್ಯರ್ಥಿಗಳು ಮತ ಯಾಚಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
‘ವಿನೋದ್​ಗೆ ಅದೇ ಹೇಳ್ತೀನಿ..’: ಲೀಲಾವತಿ ನಿಧನಕ್ಕೆ ಶಿವಣ್ಣ ಪ್ರತಿಕ್ರಿಯೆ
‘ವಿನೋದ್​ಗೆ ಅದೇ ಹೇಳ್ತೀನಿ..’: ಲೀಲಾವತಿ ನಿಧನಕ್ಕೆ ಶಿವಣ್ಣ ಪ್ರತಿಕ್ರಿಯೆ
ಸರ್ವವಸ್ವವೇ ಆಗಿದ್ದ ತಾಯಿ ಅಗಲಿಕೆ: ವಿನೋದ್ ರಾಜ್ ದುಃಖತಪ್ತ ಮಾತುಗಳು
ಸರ್ವವಸ್ವವೇ ಆಗಿದ್ದ ತಾಯಿ ಅಗಲಿಕೆ: ವಿನೋದ್ ರಾಜ್ ದುಃಖತಪ್ತ ಮಾತುಗಳು
ಪ್ರತಿಭಟನೆಗೆ ಅಡ್ಡಿಪಡಿಸುವ ಪೊಲೀಸರು ನಮಗೆ ಅನ್ನ ನೀಡುತ್ತಾರೆಯೇ? ಶಾಲಾ ಬಾಲಕ
ಪ್ರತಿಭಟನೆಗೆ ಅಡ್ಡಿಪಡಿಸುವ ಪೊಲೀಸರು ನಮಗೆ ಅನ್ನ ನೀಡುತ್ತಾರೆಯೇ? ಶಾಲಾ ಬಾಲಕ
ತಾಳಿ ಕಟ್ಟಿಸಿಕೊಳ್ಳಲು ಒಲ್ಲೆನೆಂದ ಯುವತಿಗೆ ರೂ. 4.70 ಲಕ್ಷ ವಧುದಕ್ಷಿಣೆ?
ತಾಳಿ ಕಟ್ಟಿಸಿಕೊಳ್ಳಲು ಒಲ್ಲೆನೆಂದ ಯುವತಿಗೆ ರೂ. 4.70 ಲಕ್ಷ ವಧುದಕ್ಷಿಣೆ?
ಬೆಂಗಳೂರಲ್ಲಿ ಅನಾಮತ್ತಾಗಿ ಉರುಳಿದ ಸೆಲ್ ಪೋನ್ ಟವರ್, ಪ್ರಾಣಹಾನಿ ಇಲ್ಲ
ಬೆಂಗಳೂರಲ್ಲಿ ಅನಾಮತ್ತಾಗಿ ಉರುಳಿದ ಸೆಲ್ ಪೋನ್ ಟವರ್, ಪ್ರಾಣಹಾನಿ ಇಲ್ಲ
ಸಿದ್ದರಾಮಯ್ಯ ಸಿಎಂ ಆದರೆ ಬರ ಯಡಿಯೂರಪ್ಪ ಆದರೆ ಅತಿವೃಷ್ಟಿ: ಜ್ಞಾನೇಂದ್ರ
ಸಿದ್ದರಾಮಯ್ಯ ಸಿಎಂ ಆದರೆ ಬರ ಯಡಿಯೂರಪ್ಪ ಆದರೆ ಅತಿವೃಷ್ಟಿ: ಜ್ಞಾನೇಂದ್ರ
ಉಡುಪಿ ಕಾರ್ಟೂನ್ ಹಬ್ಬಕ್ಕೆ ವಿಭಿನ್ನವಾಗಿ ಶುಭ ಕೋರಿದ ಮರಳು ಶಿಲ್ಪ ಕಲಾವಿದ
ಉಡುಪಿ ಕಾರ್ಟೂನ್ ಹಬ್ಬಕ್ಕೆ ವಿಭಿನ್ನವಾಗಿ ಶುಭ ಕೋರಿದ ಮರಳು ಶಿಲ್ಪ ಕಲಾವಿದ
ಬೆಂಗಳೂರಿನಲ್ಲಿ ಕಟ್ಟಡ ಸಹಿತ ಧರೆಗುರುಳಿದ ಮೊಬೈಲ್ ಟವರ್, ವಿಡಿಯೋ ಇಲ್ಲಿದೆ
ಬೆಂಗಳೂರಿನಲ್ಲಿ ಕಟ್ಟಡ ಸಹಿತ ಧರೆಗುರುಳಿದ ಮೊಬೈಲ್ ಟವರ್, ವಿಡಿಯೋ ಇಲ್ಲಿದೆ
ಬಿಗ್ ಬಾಸ್​ನಲ್ಲಿ ಹದಗೆಟ್ಟಿತು ವರ್ತೂರು ಸಂತೋಷ್​-ತನಿಷಾ ಫ್ರೆಂಡ್​ಶಿಪ್
ಬಿಗ್ ಬಾಸ್​ನಲ್ಲಿ ಹದಗೆಟ್ಟಿತು ವರ್ತೂರು ಸಂತೋಷ್​-ತನಿಷಾ ಫ್ರೆಂಡ್​ಶಿಪ್
ಯಡಿಯೂರಪ್ಪರನ್ನು ಟೀಕಿಸುವ ನೈತಿಕತೆ ಬಸನಗೌಡ ಪಾಟೀಲ್ ಗಿಲ್ಲ: ರೇಣುಕಾಚಾರ್ಯ
ಯಡಿಯೂರಪ್ಪರನ್ನು ಟೀಕಿಸುವ ನೈತಿಕತೆ ಬಸನಗೌಡ ಪಾಟೀಲ್ ಗಿಲ್ಲ: ರೇಣುಕಾಚಾರ್ಯ