Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಯಾವ ಕೆಲಸ ಮಾಡೋಕೂ ನಾನು ರೆಡಿ’: ವಾಣಿಜ್ಯ ಮಂಡಳಿ ಚುನಾವಣೆ ಕುರಿತು ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ

‘ಯಾವ ಕೆಲಸ ಮಾಡೋಕೂ ನಾನು ರೆಡಿ’: ವಾಣಿಜ್ಯ ಮಂಡಳಿ ಚುನಾವಣೆ ಕುರಿತು ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ

ಮದನ್​ ಕುಮಾರ್​
|

Updated on: Sep 22, 2023 | 4:13 PM

ಸೆಪ್ಟೆಂಬರ್​ 23ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ನಡೆಯಲಿದೆ. ಈ ಬಾರಿ ಉಪಾಧ್ಯಕ್ಷೆ ಸ್ಥಾನಕ್ಕೆ ಹಿರಿಯ ನಟಿ ಪ್ರಮೀಳಾ ಜೋಶಾಯ್​ ಅವರು ಸ್ಪರ್ಧಿಸುತ್ತಿದ್ದಾರೆ. ಚುನಾವಣೆಗೂ ಮುನ್ನ ಅವರು ಒಂದಷ್ಟು ಭರವಸೆಗಳನ್ನು ನೀಡಿದ್ದಾರೆ. ‘ನನಗೆ ಒಂದು ಅವಕಾಶ ಕೊಡಿ’ ಎಂದು ಚಿತ್ರರಂಗದವರಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.

ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದ ಪ್ರಮೀಳಾ ಜೋಶಾಯ್​ (Pramila Joshai) ಅವರು ನಂತರ ನಾಯಕಿಯಾಗಿಯೂ ಅಭಿನಯಿಸಿದರು. ಚಿತ್ರರಂಗದಲ್ಲಿ ಅವರಿಗೆ 50 ವರ್ಷಗಳ ಅನುಭವ ಇದೆ. ಈಗ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber of Commerce) ಚುನಾವಣೆಯಲ್ಲಿ ಉಪಾಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಈ ಕುರಿತು ಮಾಹಿತಿ ನೀಡಲು ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಲಾಯಿತು. ಕಲಾವಿದರ ಸಂಘದ ಕಾರ್ಯಕಾರಿ ಸಮಿತಿಯಲ್ಲಿ ಅನೇಕ ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಅವರಿಗೆ ಇದೆ. ‘ನಾನು ಯಾವ ಕೆಲಸ ಮಾಡೋಕೂ ರೆಡಿ. ಚಿತ್ರರಂಗದ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ಸಾಕಷ್ಟು ಅನುಭವ ಇದೆ. ಏನು ಬಂದರೂ ನಾನು ಎದುರಿಸೋಕೆ ಸಿದ್ಧ. ಪ್ರತಿಭಟನೆಗಳು ನಡೆದಾಗ ನಮ್ಮ ಕುಟುಂಬದವರು ಭಾಗಿ ಆಗಿದ್ದೇವೆ’ ಎಂದು ಪ್ರಮೀಳಾ ಜೋಶಾಯ್​ ಹೇಳಿದ್ದಾರೆ. ತಾವು ಯಾವ ರೀತಿ ಕೆಲಸ ಮಾಡುತ್ತೇವೆ ಎಂಬುದನ್ನು ಸುದ್ದಿಗೋಷ್ಠಿಯಲ್ಲಿ ಅವರು ವಿವರಿಸಿದ್ದಾರೆ. ಆ ವಿಡಿಯೋ ಇಲ್ಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.