AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಜಕೇಸರಿ ಯೋಗದಲ್ಲಿ ಜನಿಸಿದ ಧ್ರುವ ಸರ್ಜಾ ಮಗು; ಪ್ರತಿಕ್ರಿಯೆ ನೀಡಿದ ಸುಂದರ್​ ರಾಜ್​

ಗಜಕೇಸರಿ ಯೋಗದಲ್ಲಿ ಜನಿಸಿದ ಧ್ರುವ ಸರ್ಜಾ ಮಗು; ಪ್ರತಿಕ್ರಿಯೆ ನೀಡಿದ ಸುಂದರ್​ ರಾಜ್​

ಮದನ್​ ಕುಮಾರ್​
|

Updated on: Sep 18, 2023 | 3:29 PM

Share

ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲೇ ಧ್ರುವ ಸರ್ಜಾ-ಪ್ರೇರಣಾ ದಂಪತಿಯ ಮಗು ಜನಿಸಿರುವುದು ಕುಟುಂಬಕ್ಕೆ ಖುಷಿ ನೀಡಿದೆ. ಮಗುವನ್ನು ನೋಡಲು ಮೇಘನಾ ರಾಜ್​, ಸುಂದರ್​ ರಾಜ್​ ಮುಂತಾದವರು ಆಗಮಿಸಿದ್ದಾರೆ. ‘ಬಹಳ ದಿನಗಳಿಂದ ನಮ್ಮಲ್ಲಿ ಕವಿದಿದ್ದ ವಾತಾವರಣ ಮರೆಯಾಗಿ, ಬಿಳಿ ಮೋಡಗಳು ಬಂದಿವೆ. ದೇವರು ಇದ್ದಾನೆ ಎಂಬುದನ್ನು ಇದು ಸೂಚಿಸುತ್ತದೆ’ ಎಂದು ಸುಂದರ್ ರಾಜ್​ ಹೇಳಿದ್ದಾರೆ.

ನಟ ಧ್ರುವ ಸರ್ಜಾ (Dhruva Sarja) ಅವರ ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣ ಆಗಿದೆ. ಅವರ ಪತ್ನಿ ಪ್ರೇರಣಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲೇ ಮಗು ಜನಿಸಿರುವುದು ಇಡೀ ಕುಟುಂಬಕ್ಕೆ ಖುಷಿ ನೀಡಿದೆ. ಮಗುವನ್ನು ನೋಡಲು ಮೇಘನಾ ರಾಜ್​, ಸುಂದರ್​ ರಾಜ್​, ಪ್ರಮೀಳಾ ಜೋಶಾಯ್​ ಮುಂತಾದವರು ಆಗಮಿಸಿದ್ದಾರೆ. ಈ ವೇಳೆ ಸುಂದರ್​ ರಾಜ್​ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ಈಗಾಗಲೇ ಅವರ ಮನೆಗೆ ಗೌರಿ ಬಂದಾಯಿತು. ಈಗ ಗಣೇಶ ಬಂದಿದ್ದಾನೆ. ಯಾವುದೇ ಹೊಸ ಪರ್ವ ಬಂದಾಗ ಕುಟುಂಬಕ್ಕೆ ಸಂತೋಷ ನೀಡುತ್ತದೆ. ಈ ಮಗು ಗಜಕೇಸರಿ ಯೋಗದಲ್ಲಿ (Gajakesari Yoga) ಹುಟ್ಟಿದೆ. ಬಹಳ ದಿನಗಳಿಂದ ನಮ್ಮಲ್ಲಿ ಕವಿದಿದ್ದ ವಾತಾವರಣ ಮರೆಯಾಗಿ, ಬಿಳಿ ಮೋಡಗಳು ಬಂದಿವೆ. ಇದನ್ನು ನಾವು ನಿರೀಕ್ಷಿಸಿದ್ದೆವು. ದೇವರು ಇದ್ದಾನೆ ಎಂಬುದನ್ನು ಇದು ಸೂಚಿಸುತ್ತದೆ’ ಎಂದು ಸುಂದರ್ ರಾಜ್​ (Sundar Raj) ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More