AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಶ್ವರ್ಯಾ ರೈ ಮೇಲೆ ಸಲ್ಮಾನ್ ಖಾನ್​ಗೆ ಇತ್ತು ಅನುಮಾನ; ಸಂಬಂಧ ಮುರಿದು ಬೀಳಲು ಇದೇ ಕಾರಣ

ಕೆಲವು ವರದಿಗಳ ಪ್ರಕಾರ, ನವೆಂಬರ್ 2001ರಲ್ಲಿ ಸಲ್ಮಾನ್ ಅವರು ಐಶ್ವರ್ಯಾ ಮನೆಗೆ ಬಂದರು. ಆ ವೇಳೆ ಕೋಪದ ಭರದಲ್ಲಿ ಐಶ್ವರ್ಯಾ ಅವರ ಫ್ಲಾಟ್‌ನ ಕಿಟಕಿ ಗಾಜು ಹಾಗೂ ಪೀಠೋಪಕರಣಗಳನ್ನು ಒಡೆದಿದ್ದರು. ಇದರ ವಿರುದ್ಧ ಐಶ್ವರ್ಯಾ ತಂದೆ ಡಿಸೆಂಬರ್ 27ರಂದು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

ಐಶ್ವರ್ಯಾ ರೈ ಮೇಲೆ ಸಲ್ಮಾನ್ ಖಾನ್​ಗೆ ಇತ್ತು ಅನುಮಾನ; ಸಂಬಂಧ ಮುರಿದು ಬೀಳಲು ಇದೇ ಕಾರಣ
ಸಲ್ಮಾನ್-ಐಶ್ವರ್ಯಾ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Nov 01, 2023 | 1:07 PM

Share

ನಟಿ ಐಶ್ವರ್ಯಾ ರೈ (Aishwarya Rai) ಅವರು ಪ್ರಪಂಚದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. 1994ರಲ್ಲಿ ಐಶ್ವರ್ಯಾ ‘ವಿಶ್ವ ಸುಂದರಿ’ ಪಟ್ಟವನ್ನು ಪಡೆದರು. ಇಂದು (ನವೆಂಬರ್ 1) ಅವರು ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಬರುತ್ತಿವೆ. ಐಶ್ವರ್ಯಾ ಅವರ ನಟನೆಯ ಬಗ್ಗೆ ಯಾರೂ ಮಾತನಾಡುವಂತಿಲ್ಲ. ಇದರ ಜೊತೆಗೆ ವೈಯಕ್ತಿಕ ಕಾರಣದಿಂದಲೂ ಅವರು ಸುದ್ದಿಯಲ್ಲಿದ್ದಾರೆ. ಅವರು ಸಲ್ಮಾನ್ ಖಾನ್ ಜೊತೆ ರಿಲೇಶನ್​ಶಿಪ್​ನಲ್ಲಿದ್ದರು. ಇವರ ರಿಲೇಶನ್​ಶಿಪ್ ವಿಚಾರ ಅಭಿಮಾನಿಗಳ ವಲಯದಲ್ಲಿ ಹಾಟ್ ಟಾಪಿಕ್ ಆಗಿತ್ತು. ಈ ಇಬ್ಬರೂ ಸುಮಾರು ಎರಡು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದರು. 2002ರಲ್ಲಿ ಇವರು ಬೇರೆ ಆದರು. ಆ ವೇಳೆ ಸಲ್ಮಾನ್ ವಿರುದ್ಧ ಐಶ್ವರ್ಯಾ ಹಲವು ಆರೋಪಗಳನ್ನು ಮಾಡಿದ್ದರು.

1999ರ ಸಮಯದಲ್ಲಿ ಸಲ್ಮಾನ್ ಮತ್ತು ಐಶ್ವರ್ಯಾ ಸಂಬಂಧ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಹಮ್ ದಿಲ್ ದೇ ಚುಕೇ ಸನಮ್’ ಚಿತ್ರ 1999ರ ಜೂನ್ 18ರಂದು ರಿಲೀಸ್ ಆಯಿತು. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ನಟಿಸಿದ್ದರು. ಈ ಸಿನಿಮಾ ಸೆಟ್‌ನಲ್ಲಿ ಇಬ್ಬರ ಮಧ್ಯೆ ಪ್ರೀತಿ ಹುಟ್ಟಿತು. ಎರಡು ವರ್ಷಗಳ ಕಾಲ ಇವರು ಪರಸ್ಪರ ಗಾಢವಾಗಿ ಪ್ರೀತಿಸುತ್ತಿದ್ದರು. ಆದರೆ ನಂತರ ಅವರ ಸಂಬಂಧವು ಮುರಿದುಬಿತ್ತು. ಅವರು ಪರಸ್ಪರರ ಮುಖವನ್ನು ನೋಡಲು ಇಷ್ಟಪಡಲಿಲ್ಲ.

ಕೆಲವು ವರದಿಗಳ ಪ್ರಕಾರ, ನವೆಂಬರ್ 2001ರಲ್ಲಿ ಸಲ್ಮಾನ್ ಅವರು ಐಶ್ವರ್ಯಾ ಮನೆಗೆ ಬಂದರು. ಆ ವೇಳೆ ಕೋಪದ ಭರದಲ್ಲಿ ಐಶ್ವರ್ಯಾ ಅವರ ಫ್ಲಾಟ್‌ನ ಕಿಟಕಿ ಗಾಜು ಹಾಗೂ ಪೀಠೋಪಕರಣಗಳನ್ನು ಒಡೆದಿದ್ದರು. ಇದರ ವಿರುದ್ಧ ಐಶ್ವರ್ಯಾ ತಂದೆ ಡಿಸೆಂಬರ್ 27ರಂದು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಇಷ್ಟು ಮಾತ್ರವಲ್ಲದೆ ಅಭಿಷೇಕ್-ಐಶ್ವರ್ಯಾ ನಟನೆಯ ‘ಕುಚ್ ನಾ ಕಹೋ’ ಚಿತ್ರದ ಶೂಟಿಂಗ್ ವೇಳೆ ಐಶ್ವರ್ಯಾ ಅವರ ಕಾರನ್ನು ಸಲ್ಲು ಜಖಂಗೊಳಿಸಿದ್ದರು.

2002ರಲ್ಲಿ, ‘ಟೈಮ್ಸ್ ಆಫ್ ಇಂಡಿಯಾ’ಗೆ ನೀಡಿದ ಸಂದರ್ಶನದಲ್ಲಿ ಸಲ್ಮಾನ್ ಈ ಎರಡೂ ಘಟನೆಗಳನ್ನು ಒಪ್ಪಿಕೊಂಡಿದ್ದರು. ಸಲ್ಮಾನ್ ಕೂಡ ಐಶ್ವರ್ಯಾ ಮೇಲೆ ಕೈ ಎತ್ತಿದ್ದಾರೆ ಎನ್ನಲಾಗಿತ್ತು. ಐಶ್ವರ್ಯಾ ಅವರು ಕೈಗೆ ಪ್ಲಾಸ್ಟರ್ ಹಾಕಿಕೊಂಡು, ಕಣ್ಣಿಗೆ ಕಪ್ಪು ಕನ್ನಡಕ ಹಾಕಿಕೊಂಡು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸಿದ್ದು ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಆದರೆ ಬಿದ್ದು ಗಾಯಗೊಂಡಿರುವುದಾಗಿ ಐಶ್ವರ್ಯಾ ಆ ವೇಳೆ ಹೇಳಿದ್ದರು.

ಬ್ರೇಕಪ್ ನಂತರ ಇ-ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಐಶ್ವರ್ಯಾ ಮಾತನಾಡಿದ್ದರು. ‘ಬ್ರೇಕಪ್ ನಂತರ ಸಲ್ಮಾನ್ ನನಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದರು. ನಾನು ಸಹನಟನೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ ಎಂಬ ಅನುಮಾನ ಅವರಿಗೆ ಯಾವಾಗಲೂ ಇತ್ತು. ಅಭಿಷೇಕ್ ಬಚ್ಚನ್‌ನಿಂದ ಶಾರುಖ್ ಖಾನ್‌ವರೆಗೆ ನನ್ನ ಹೆಸರು ಸೇರಿಕೊಂಡಿದೆ. ಅನೇಕ ಬಾರಿ ಅವರು ನನ್ನ ಮೇಲೆ ಕೈ ಎತ್ತಿದರು’ ಎಂದು ಅವರು ಬೇಸರ ಹೊರಹಾಕಿದ್ದರು.

ಸಲ್ಮಾನ್ ತಮಗೆ ಮೋಸ ಮಾಡಿದ್ದಾರೆ ಮತ್ತು ಅದೇ ತಮ್ಮ ಬ್ರೇಕಪ್​​ಗೆ ಕಾರಣ ಎಂದು ಐಶ್ವರ್ಯಾ ಹೇಳಿದ್ದರು. ಮತ್ತೊಂದು ಸಂದರ್ಶನದಲ್ಲಿ ಐಶ್ವರ್ಯಾಗೆ ಸಲ್ಮಾನ್ ಜೊತೆಗಿನ ಬ್ರೇಕಪ್ ಬಗ್ಗೆ ಕೇಳಲಾಯಿತು. ಆ ಸಮಯದಲ್ಲಿ ಅವರು ಇದೆಲ್ಲವೂ ಮುಗಿದಿದೆ ಎಂದು ಹೇಳಿದ್ದರು. ‘ಈ ವಿಷಯ ಈಗ ಮುಗಿದಿದೆ. ನಾನು ಅದರ ಬಗ್ಗೆ ಯೋಚಿಸಲು ಬಯಸುವುದಿಲ್ಲ. ಅದರ ಬಗ್ಗೆ ಮಾತನಾಡುವುದರಿಂದ ದೂರ ಇದ್ದೇನೆ. ನಾನು ಆ ಸಮಸ್ಯೆಗಳಿಂದ ಮುಕ್ತಿ ಹೊಂದಿದ್ದೇನೆ. ಸಲ್ಮಾನ್ ನನ್ನ ಜೀವನದಲ್ಲಿ ದುಃಸ್ವಪ್ನವಾಗಿದ್ದರು. ಅದು ಮುಗಿದಿದ್ದಕ್ಕಾಗಿ ನಾನು ದೇವರಿಗೆ ಧನ್ಯವಾದ ಹೇಳುತ್ತೇನೆ’ ಎಂದಿದ್ದರು ಐಶ್ವರ್ಯಾ ರೈ.

ಇದನ್ನೂ ಓದಿ: ಐಶ್ವರ್ಯಾ ರೈ ಜನ್ಮದಿನ: ಈ ನಟಿಯ ಆಸ್ತಿ ಎಷ್ಟು ಕೋಟಿ ರೂಪಾಯಿ?

ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಪರಸ್ಪರ ಪ್ರೀತಿಸುತ್ತಿದ್ದರು. 2007ರ ಏಪ್ರಿಲ್ 20ರಂದು ಇವರು ಮದುವೆ ಆದರು. ಈ ದಂಪತಿಗೆ ಆರಾಧ್ಯ ಹೆಸರಿನ ಮಗಳಿದ್ದಾಳೆ. ಐಶ್ವರ್ಯಾ ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅವರ ನಟನೆಯ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ರಿಲೀಸ್ ಆಗಿ ಯಶಸ್ಸು ಕಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ರಾಜಕಾರಣಿಯಾಗಿರದಿದ್ದರೆ ಪರಮೇಶ್ವರ್ ಹೋಟೆಲ್ ಉದ್ಯಮಿಯಾಗುತ್ತಿದ್ದರೇ?
ರಾಜಕಾರಣಿಯಾಗಿರದಿದ್ದರೆ ಪರಮೇಶ್ವರ್ ಹೋಟೆಲ್ ಉದ್ಯಮಿಯಾಗುತ್ತಿದ್ದರೇ?
ಗೇಟ್​ ಹತ್ತಿ ಹಾರಿ ಜಮ್ಮು ಕಾಶ್ಮೀರದ ಸಿಎಂ ಒಮರ್ ಹೋಗಿದ್ದೆಲ್ಲಿಗೆ?
ಗೇಟ್​ ಹತ್ತಿ ಹಾರಿ ಜಮ್ಮು ಕಾಶ್ಮೀರದ ಸಿಎಂ ಒಮರ್ ಹೋಗಿದ್ದೆಲ್ಲಿಗೆ?
ರಾಜ್ಯದ ಅತಿ ಉದ್ದದ ಸಿಗಂದೂರು ತೂಗುಸೇತುವೆ ಲೋಕಾರ್ಪಣೆಗೊಳಿಸಿದ ಸಚಿವ ಗಡ್ಕರಿ
ರಾಜ್ಯದ ಅತಿ ಉದ್ದದ ಸಿಗಂದೂರು ತೂಗುಸೇತುವೆ ಲೋಕಾರ್ಪಣೆಗೊಳಿಸಿದ ಸಚಿವ ಗಡ್ಕರಿ
ಕೆನಡಾದ ರಸ್ತೆಯ ಪಕ್ಕದಲ್ಲಿ ನಿಂತು ಕಸ ಎಸೆದರೇ ಭಾರತೀಯ ದಂಪತಿ?
ಕೆನಡಾದ ರಸ್ತೆಯ ಪಕ್ಕದಲ್ಲಿ ನಿಂತು ಕಸ ಎಸೆದರೇ ಭಾರತೀಯ ದಂಪತಿ?
ಕುಟುಂಬಗಳಿಗೆ ಆರ್ಥಿಕ ನೆರವು ಮತ್ತು ಸಾಲ ತಾನೇ ಭರಿಸೋದಾಗಿ ಹೇಳಿದ ಸಚಿವ
ಕುಟುಂಬಗಳಿಗೆ ಆರ್ಥಿಕ ನೆರವು ಮತ್ತು ಸಾಲ ತಾನೇ ಭರಿಸೋದಾಗಿ ಹೇಳಿದ ಸಚಿವ
ಮಹಿಳೆ ಸ್ವಾವಲಂಬಿ ಮತ್ತು ಸ್ವಾಭಿಮಾನಿಯಾಗಲು ಶಕ್ತಿ ಯೋಜನೆ: ಸೌಮ್ಯ ರೆಡ್ಡಿ
ಮಹಿಳೆ ಸ್ವಾವಲಂಬಿ ಮತ್ತು ಸ್ವಾಭಿಮಾನಿಯಾಗಲು ಶಕ್ತಿ ಯೋಜನೆ: ಸೌಮ್ಯ ರೆಡ್ಡಿ