AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್ ಖಾನ್ ಒಬ್ಬ ಸುಳ್ಳುಗಾರ: ಬಾಲಿವುಡ್ ಹಿರಿಯ ನಟ

Salman Khan: 'ಕುಚ್​ ಕುಚ್ ಹೋತಾ ಹೈ' ಸಿನಿಮಾ ಬಗ್ಗೆ ಸಲ್ಮಾನ್ ಖಾನ್ ಮಾತನಾಡಿರುವ ಹಳೆಯ ವಿಡಿಯೋ ಒಂದರಲ್ಲಿ ಸಲ್ಮಾನ್ ಖಾನ್ ಸುಳ್ಳು ಹೇಳಿದ್ದಾರೆ ಎಂದು ಬಾಲಿವುಡ್​ನ ಮಾಜಿ ನಾಯಕ ನಟರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಲ್ಮಾನ್ ಖಾನ್ ಒಬ್ಬ ಸುಳ್ಳುಗಾರ: ಬಾಲಿವುಡ್ ಹಿರಿಯ ನಟ
ಮಂಜುನಾಥ ಸಿ.
|

Updated on: Oct 24, 2023 | 4:21 PM

Share

ಸಲ್ಮಾನ್ ಖಾನ್ (Salman Khan) ಬಾಲಿವುಡ್​ನಲ್ಲಿ ಗೆಳೆಯರನ್ನು ಹೊಂದಿರುವಷ್ಟೆ ವಿರೋಧಿಗಳನ್ನು ಸಹ ಹೊಂದಿದ್ದಾರೆ. ಸಲ್ಮಾನ್ ಖಾನ್ ಬಗ್ಗೆ ಆಗಾಗ್ಗೆ ಒಬ್ಬರಲ್ಲ ಒಬ್ಬರು ಋಣಾತ್ಮಕವಾಗಿ ಮಾತನಾಡುತ್ತಲೇ ಇರುತ್ತಾರೆ. ಇದೀಗ ಬಾಲಿವುಡ್​ನ ಮಾಜಿ ನಾಯಕ ನಟರೊಬ್ಬರು, ಸಲ್ಮಾನ್ ಖಾನ್ ಒಬ್ಬ ಸುಳ್ಳುಗಾರ ಎಂದು ಕರೆದಿದ್ದಾರೆ. ‘ಕುಚ್​ ಕುಚ್ ಹೋತಾ ಹೈ’ ಸಿನಿಮಾದ ಬಗ್ಗೆ ಮಾತನಾಡುತ್ತಾ ಸಲ್ಮಾನ್ ಖಾನ್ ಹೇಳಿದ ಮಾತುಗಳ ಬಗ್ಗೆ ಆ ಹಿರಿಯ ನಟ ಆಕ್ಷೇಪ ಎತ್ತಿದ್ದಾರೆ.

‘ಕುಚ್​ ಕುಚ್ ಹೋತಾ ಹೈ’ ಸಿನಿಮಾ ಬಿಡುಗಡೆ ಆಗಿ 25 ವರ್ಷಗಳಾಗಿವೆ. ಸಿನಿಮಾದಲ್ಲಿ ಸಲ್ಮಾನ್ ಖಾನ್ ಸಹ ನಟಿಸಿದ್ದು, ಸಿನಿಮಾ ಬಗ್ಗೆ ಸಲ್ಮಾನ್ ಖಾನ್ ಈ ಹಿಂದೆ ಕಾಫಿ ವಿತ್ ಕರಣ್ ಶೋನಲ್ಲಿ ಆಡಿದ್ದ ಮಾತುಗಳು ಇದೀಗ ಮತ್ತೆ ವೈರಲ್ ಆಗಿವೆ. ಅಂದು ಸಲ್ಮಾನ್ ಖಾನ್ ಆಡಿದ್ದ ಮಾತುಗಳ ಬಗ್ಗೆ ಬಾಲಿವುಡ್​ನ ಮಾಜಿ ನಾಯಕ ನಟ ಚಂದ್ರಚೂರ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ಸಲ್ಮಾನ್ ಖಾನ್ ಒಬ್ಬ ಸುಳ್ಳುಗಾರ ಎಂದಿದ್ದಾರೆ.

ಕಾಫಿ ವಿತ್ ಕರಣ್​ನಲ್ಲಿ ಈ ಹಿಂದೆ ಮಾತನಾಡಿದ್ದ ಸಲ್ಮಾನ್ ಖಾನ್, ”ಕುಚ್​ ಕುಚ್ ಹೋತಾ ಹೈ ಸಿನಿಮಾದ ಅಮನ್ ಪಾತ್ರವನ್ನು ಯಾರೂ ಮಾಡಲು ತಯಾರಿರಲಿಲ್ಲ, ಕೆಲವರನ್ನು ಕೇಳಿ ಇಲ್ಲ ಅನಿಸಿಕೊಂಡ ಬಳಿಕ ನನ್ನ ಬಳಿ ನೀನು (ಕರಣ್ ಜೋಹರ್) ಬಂದೆ. ಸೈಫ್ ಅನ್ನು ಕೇಳಿದ್ದೆ, ಚಂದ್ರಚೂಡ್ ಸಿಂಗ್ ಅನ್ನು ಕೇಳಿದ್ದೆ. ಅವರಿಬ್ಬರೂ ಆ ಸಮಯದಲ್ಲಿ ಯಾವ ಸಿನಿಮಾ ಮಾಡದಿದ್ದರೂ ಸಹ ನಿನ್ನ (ಕರಣ್) ಸಿನಿಮಾದಲ್ಲಿ ನಟಿಸಲು ಒಪ್ಪಿರಲಿಲ್ಲ. ಆದರೆ ಕರಣ್ ಪ್ರತಿಭೆಯ ಬಗ್ಗೆ ನನಗೆ ನಂಬಿಕೆ ಇತ್ತು ಹಾಗಾಗಿ ಅಮನ್ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡೆ” ಎಂದಿದ್ದಾರೆ ಸಲ್ಮಾನ್ ಖಾನ್.

ಇದನ್ನೂ ಓದಿ:ಸಲ್ಮಾನ್ ಖಾನ್​ಗೆ ಹೆದರಿದ್ರಾ ಕಂಗನಾ? ‘ಎಮರ್ಜೆನ್ಸಿ’ ಸಿನಿಮಾ ರಿಲೀಸ್ ದಿನಾಂಕ ಮುಂದಕ್ಕೆ

ಸಲ್ಮಾನ್​ ಖಾನ್​ರ ಈ ಮಾತುಗಳನ್ನು ಖಂಡಿಸಿರುವ ಚಂದ್ರಚೂಡ್ ಸಿಂಗ್ ಆತ ಒಬ್ಬ ಸುಳ್ಳುಗಾರ ಎಂದಿದ್ದಾರೆ. ರೆಡಿಟ್ ಸಾಮಾಜಿಕ ಜಾಲತಾಣದಲ್ಲಿ ‘ಸಲ್ಮಾನ್ ಖಾನ್ ಒಬ್ಬ ಸುಳ್ಳುಗಾರ’ ಎಂದು ಚಂದ್ರಚೂಡ್ ಸಿಂಗ್ ಬರೆದಿದ್ದಾರೆ. ಬಳಿಕ ಬಳೆಕಾರರೊಬ್ಬರ ಕಮೆಂಟ್​ಗೆ ಪ್ರತಿಕ್ರಿಯೆ ನೀಡಿ, ”ನನ್ನ ಬಳಿ ‘ಜೋಶ್’, ‘ದಾಗ್; ದಿ ಫೈರ್’, ‘ಕ್ಯಾ ಕೆಹನಾ’, ‘ಸಿಲ್​ ಸಿಲಾ ಹೈ ಪ್ಯಾರ್ ಕಾ’ ಇನ್ನೂ ಕೆಲವು ಸಿನಿಮಾಗಳು ಇದ್ದವು. ‘ಕುಚ್ ಕುಚ್ ಹೋತಾ ಹೈ’ ಸಿನಿಮಾದಲ್ಲಿ ನಟಿಸಲು ಇಷ್ಟವಿಲ್ಲದೆ ಬಿಟ್ಟೆ” ಎಂದಿದ್ದಾರೆ. ಆ ಮೂಲಕ ತಮ್ಮ ಬಳಿ ಆ ಸಮಯದಲ್ಲಿ ಸಿನಿಮಾಗಳು ಇರಲಿಲ್ಲ ಎಂಬುದು ಸುಳ್ಳು ಎಂದಿದ್ದಾರೆ.

ಸೈಫ್ ಅಲಿ ಖಾನ್ ಬಳಿ ಸಹ ಆ ಸಮಯದಲ್ಲಿ ಸಿನಿಮಾಗಳು ಇರಲಿಲ್ಲ ಎಂಬರ್ಥದ ಮಾತುಗಳನ್ನು ಸಲ್ಮಾನ್ ಖಾನ್ ಆಡಿದ್ದರು. ಆದರೆ ‘ಕುಚ್ ಕುಚ್ ಹೋತಾ ಹೈ’ ಸಿನಿಮಾ ಬಿಡುಗಡೆ ಆದ ವರ್ಷ ಸೈಫ್ ಅಲಿ ಖಾನ್​ ನಟನೆಯ ನಾಲ್ಕು ಸಿನಿಮಾಗಳು ಬಿಡುಗಡೆ ಆಗಿದ್ದವು. ‘ಕುಚ್​ ಕುಚ್ ಹೋತಾ ಹೈ’ ಸಿನಿಮಾ ಕರಣ್ ಜೋಹರ್ ನಿರ್ದೇಶನದ ಮೊದಲ ಸಿನಿಮಾ. ಆ ಸಿನಿಮಾದಲ್ಲಿ ಶಾರುಖ್ ಖಾನ್, ಕಾಜಲ್, ರಾಣಿ ಮುಖರ್ಜಿ ನಟಿಸಿದ್ದರು. ಸಲ್ಮಾನ್ ಖಾನ್ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?