ಸಲ್ಮಾನ್ ಖಾನ್​ಗೆ ಹೆದರಿದ್ರಾ ಕಂಗನಾ? ‘ಎಮರ್ಜೆನ್ಸಿ’ ಸಿನಿಮಾ ರಿಲೀಸ್ ದಿನಾಂಕ ಮುಂದಕ್ಕೆ

ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಆಧರಿಸಿ ‘ಎಮರ್ಜೆನ್ಸಿ’ ಸಿನಿಮಾ ಸಿದ್ಧಗೊಂಡಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾದಿದ್ದರು. ಆದರೆ, ಸಿನಿಮಾದ ರಿಲೀಸ್ ದಿನಾಂಕ ವಿಳಂಬ ಆಗುತ್ತಲೇ ಇದೆ.

ಸಲ್ಮಾನ್ ಖಾನ್​ಗೆ ಹೆದರಿದ್ರಾ ಕಂಗನಾ? ‘ಎಮರ್ಜೆನ್ಸಿ’ ಸಿನಿಮಾ ರಿಲೀಸ್ ದಿನಾಂಕ ಮುಂದಕ್ಕೆ
ಸಲ್ಮಾನ್-ಕಂಗನಾ
Follow us
ರಾಜೇಶ್ ದುಗ್ಗುಮನೆ
|

Updated on: Oct 17, 2023 | 7:52 AM

ನಟಿ ಕಂಗನಾ ರಣಾವತ್ ಅವರು ವಿವಾದದ ಮೂಲಕ ಆಗಾಗ ಸುದ್ದಿ ಆಗುತ್ತಾರೆ. ಇದರ ಜೊತೆಗೆ ಸಿನಿಮಾ ವಿಚಾರದಲ್ಲೂ ಅವರ ಹೆಸರು ಚರ್ಚೆಗೆ ಬರುತ್ತದೆ. ಅವರ ನಿರ್ದೇಶನದ ‘ಎಮರ್ಜೆನ್ಸಿ’ ನವೆಂಬರ್ 24ರಂದು ರಿಲೀಸ್ ಆಗಬೇಕಿತ್ತು. ಆದರೆ, ಈಗ ಸಿನಿಮಾದ ರಿಲೀಸ್ ದಿನಾಂಕ ಮುಂದಕ್ಕೆ ಹೊಗಿದೆ. ಈ ಬಗ್ಗೆ ಅವರು ಬರೆದುಕೊಂಡಿದ್ದಾರೆ. ‘ಟೈಗರ್ 3’ ರಿಲೀಸ್ ಆಗುತ್ತಿರುವುದರಿಂದಲೇ ಕಂಗನಾ (Kangana Ranaut) ಸಿನಿಮಾದ ರಿಲೀಸ್ ದಿನಾಂಕ ವಿಳಂಬ ಆಗಿದೆ ಎನ್ನುವ ಮಾತು ಕೇಳಿ ಬಂದಿದೆ. ಈ ಬಗ್ಗೆ ಅವರ ಕಡೆಯಿಂದ ಅಧಿಕೃತ ಘೋಷಣೆ ಆಗಬೇಕಿದೆ.

ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಆಧರಿಸಿ ‘ಎಮರ್ಜೆನ್ಸಿ’ ಸಿನಿಮಾ ಸಿದ್ಧಗೊಂಡಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾದಿದ್ದರು. ಆದರೆ, ಸಿನಿಮಾದ ರಿಲೀಸ್ ದಿನಾಂಕ ವಿಳಂಬ ಆಗುತ್ತಲೇ ಇದೆ. ಈಗ ರಿಲೀಸ್ ದಿನಾಂಕ 2024ಕ್ಕೆ ಮುಂದೂಡಿಕೆ ಆದ ಬಗ್ಗೆ ಕಂಗನಾ ಮಾಹಿತಿ ಹಂಚಿಕೊಂಡಿದ್ದಾರೆ.

‘ಗೆಳೆಯರೇ ನಾನು ಒಂದು ಪ್ರಮುಖ ಅನೌನ್ಸ್​ಮೆಂಟ್ ಮಾಡಬೇಕಿದೆ. ಕಲಾವಿದನಾಗಿ ನಾನು ಕಲಿತ ವಿಚಾರ ಮತ್ತು ಗಳಿಸಿದ ಹಣ ಎಮರ್ಜೆನ್ಸಿ ಸಿನಿಮಾ ಮೇಲೆ ಹಾಕಿದ್ದೇನೆ. ಎಮರ್ಜೆನ್ಸಿ ಎನ್ನುವುದು ನನಗೆ ಕೇವಲ ಚಿತ್ರವಲ್ಲ, ಅದು ಓರ್ವ ವ್ಯಕ್ತಿಯಾಗಿ ನನ್ನ ಯೋಗ್ಯತೆ ಮತ್ತು ಪಾತ್ರದ ಪರೀಕ್ಷೆ. ಟೀಸರ್​ಗೆ ಪಡೆದ ಒಳ್ಳೆಯ ಪ್ರತಿಕ್ರಿಯೆ ನಮಗೆಲ್ಲರಿಗೂ ಹೊಸ ಹುರುಪು ನೀಡಿದೆ. ನಾವು ನವೆಂಬರ್ 24ರಂದು ಸಿನಿಮಾ ರಿಲೀಸ್ ಮಾಡುತ್ತೇವೆ ಎಂದು ಹೇಳಿದ್ದೆವು. ಆದರೆ, ಕಾರಣಾಂತರಗಳಿಂದ ರಿಲೀಸ್ ದಿನಾಂಕ 2024ಕ್ಕೆ ಮುಂದೂಡಲ್ಪಟ್ಟಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಬಿಗ್ ಬಾಸ್’ನಲ್ಲಿ ನಿರೂಪಕ ಸಲ್ಮಾನ್ ಖಾನ್ ಹಾಗೂ ಸ್ಪರ್ಧಿಗಳು ಪಡೆದ ಸಂಭಾವನೆ ಎಷ್ಟು ಕೋಟಿ ರೂಪಾಯಿ?

ಸಲ್ಮಾನ್ ಖಾನ್ ನಟನೆಯ ‘ಟೈಗರ್ 3’ ಸಿನಿಮಾ ದೀಪಾವಳಿ ಸಂದರ್ಭದಲ್ಲೇ ರಿಲೀಸ್ ಆಗುತ್ತಿದೆ. ಈ ಕ್ಲ್ಯಾಶ್ ತಪ್ಪಿಸುವ ಕಾರಣದಿಂದಲೇ ಕಂಗನಾ ಅವರು ‘ಟೈಗರ್ 3’ ಸಿನಿಮಾದ ರಿಲೀಸ್ ದಿನಾಂಕವನ್ನು ಮುಂದೂಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ಅವರ ನಟನೆಯ ‘ಚಂದ್ರಮುಖಿ 2’ ಸಿನಿಮಾ ರಿಲೀಸ್ ಆಗಿ ಮಿಶ್ರಪ್ರತಿಕ್ರಿಯೆ ಪಡೆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ