‘ಹನಿಮೂನ್ ಫೋಟೋ ಅಲ್ಲ’; ಬೋಲ್ಡ್ ಫೋಟೋ ಹಾಕಿ ಸ್ಪಷ್ಟನೆ ಕೊಟ್ಟ ನಟಿ
ಇತ್ತೀಚೆಗೆ ರಾಜಸ್ಥಾನದ ಉದಯಪುರದ ಲೀಲಾ ಪ್ಯಾಲೆಸ್ ಹೋಟೆಲ್ನಲ್ಲಿ ಪರಿಣೀತಿ-ರಾಘವ್ ಛಡ್ಡಾ ಅದ್ದೂರಿಯಾಗಿ ಮದುವೆ ಆಗಿದ್ದಾರೆ. ಮದುವೆ ಮುಗಿದ ಬಳಿಕ ಅವರು ಗರ್ಲ್ಸ್ ಜೊತೆ ಸೇರಿ ಒಂದು ಟ್ರಿಪ್ ತೆರಳಿದಂತಿದೆ. ಈ ಫೋಟೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಟಿ ಪರಿಣೀತಿ ಚೋಪ್ರಾ (Parineeti Chopra) ಅವರು ಇತ್ತೀಚೆಗಷ್ಟೇ ಮದುವೆ ಆಗಿದ್ದಾರೆ. ಆಪ್ ನಾಯಕ ರಾಘವ್ ಛಡ್ಡಾ ಅವರನ್ನು ಪರಿಣೀತಿ ವರಿಸಿದ್ದಾರೆ. ಮದುವೆ ಆದ ಬಳಿಕ ಅನೇಕ ಸೆಲೆಬ್ರಿಟಿಗಳು ವಿದೇಶಕ್ಕೆ ತೆರುತ್ತಾರೆ. ಮದುವೆ ಆದ ಕೆಲವೇ ದಿನಗಳಲ್ಲಿ ಪರಿಣೀತಿ ಅವರು ಬೀಚ್ಸೈಡ್ ಸ್ವಿಮಿಂಗ್ ಪೂಲ್ ಪಕ್ಕದಲ್ಲಿ ನಿಂತಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಅವರು ಹನಿಮೂನ್ ಫೋಟೋ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಪರಿಣೀತಿ ಚೋಪ್ರಾ ಹಾಗೂ ರಾಘವ್ ಛಡ್ಡಾ ಅವರು ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ಆಗುವ ಮೂಲಕ ಇವರು ತಮ್ಮ ಪ್ರೀತಿಗೆ ಹೊಸ ಅರ್ಥ ನೀಡಿದ್ದಾರೆ. ಇತ್ತೀಚೆಗೆ ರಾಜಸ್ಥಾನದ ಉದಯಪುರದ ಲೀಲಾ ಪ್ಯಾಲೆಸ್ ಹೋಟೆಲ್ನಲ್ಲಿ ಇವರು ಅದ್ದೂರಿಯಾಗಿ ಮದುವೆ ಆಗಿದ್ದಾರೆ. ಮದುವೆ ಮುಗಿದ ಬಳಿಕ ಅವರು ಗರ್ಲ್ಸ್ ಜೊತೆ ಸೇರಿ ಒಂದು ಟ್ರಿಪ್ ತೆರಳಿದಂತಿದೆ. ಈ ಫೋಟೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸಮುದ್ರ ತೀರದಲ್ಲಿರುವ ಸ್ವಿಮಿಂಗ್ಪೂಲ್ನಲ್ಲಿ ಬೋಲ್ಡ್ ಡ್ರೆಸ್ ಹಾಕಿ ನಿಂತಿದ್ದಾರೆ ಪರಿಣೀತಿ. ಅವರ ಕೈಯಲ್ಲಿ ಇನ್ನೂ ಮೆಹಂದಿ ಹಾಗೆಯೇ ಇದೆ. ಈ ಫೋಟೋ ನೋಡಿದ ಅನೇಕರು ಇದು ಅವರ ಹನಿಮೂನ್ ಸಂದರ್ಭದಲ್ಲಿ ತೆಗೆದ ಫೋಟೋ ಎಂದು ಭಾವಿಸಿದ್ದಾರೆ. ಈ ಕಾರಣಕ್ಕೆ ಇದಕ್ಕೆ ಅವರು ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ. ‘ಹನಿಮೂನ್ ಅಲ್ಲ. ಅತ್ತಿಗೆ ತೆಗೆದ ಫೋಟೋ’ ಎಂದು ಅವರು ಬರೆದುಕೊಂಡಿದ್ದಾರೆ.
View this post on Instagram
ಇದನ್ನೂ ಓದಿ: ಹೇಗಿತ್ತು ನೋಡಿ ಪರಿಣೀತಿ ಚೋಪ್ರಾ ಮದುವೆ; ಫೋಟೋ ಮೂಲಕ ವಿವರಿಸಿದ ನಟಿ
ಈ ಫೋಟೋಗೆ ಬಗೆಬಗೆಯಲ್ಲಿ ಕಮೆಂಟ್ಗಳು ಬಂದಿವೆ. ‘ನೀವು ಮೊದಲೇ ಹೇಳಿದ್ದು ಉತ್ತಮವಾಯಿತು. ಇಲ್ಲದಿದ್ದರೆ ನಾನಾ ರೀತಿಯಲ್ಲಿ ಈ ಫೋಟೋ ಬಗ್ಗೆ ಸುದ್ದಿ ಆಗುತ್ತಿತ್ತು’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಅನೇಕರು ‘ಪತಿಯನ್ನು ಬಿಟ್ಟು ಹೋದ್ರಾ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ