ಹೇಗಿತ್ತು ನೋಡಿ ಪರಿಣೀತಿ ಚೋಪ್ರಾ ಮದುವೆ; ಫೋಟೋ ಮೂಲಕ ವಿವರಿಸಿದ ನಟಿ
Parineeti Chopra Wedding Photos: ಉದಯಪುರದ ಲೀಲಾ ಪ್ಯಾಲೇಸ್ ಹೋಟೆಲ್ನಲ್ಲಿ ಮದುವೆ ಆಗಿದ್ದಾರೆ. ಅನೇಕ ಸೆಲೆಬ್ರಿಟಿಗಳು ಮದುವೆಗೆ ಹಾಜರಿ ಹಾಕಿದ್ದರು. ಎಲ್ಲರೂ ಬಂದು ನವ ದಂಪತಿಯನ್ನು ಹಾರೈಸಿದ್ದಾರೆ. ಅದ್ದೂರಿಯಾಗಿ ಮದುವೆ ಸಮಾರಂಭ ಜರುಗಿದೆ.
Updated on: Sep 25, 2023 | 11:02 AM

ಪರಿಣೀತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ವಿವಾಹ ಅದ್ದೂರಿಯಾಗಿ ನೆರವೇರಿದೆ. ಈಗ ಇಬ್ಬರೂ ಪತಿ-ಪತ್ನಿ ಆಗಿದ್ದಾರೆ. ಸೆಪ್ಟೆಂಬರ್ 24ರಂದು ಈ ಜೋಡಿ ಮದುವೆ ಆಗಿದ್ದಾರೆ. ಈ ಫೋಟೋಗಳನ್ನು ಪರಿಣೀತಿ ಅವರು ಹಂಚಿಕೊಂಡಿದ್ದಾರೆ.

ಉದಯಪುರದ ಲೀಲಾ ಪ್ಯಾಲೇಸ್ ಹೋಟೆಲ್ನಲ್ಲಿ ಮದುವೆ ಆಗಿದ್ದಾರೆ. ಅನೇಕ ಸೆಲೆಬ್ರಿಟಿಗಳು ಮದುವೆಗೆ ಹಾಜರಿ ಹಾಕಿದ್ದರು. ಎಲ್ಲರೂ ಬಂದು ನವ ದಂಪತಿಯನ್ನು ಹಾರೈಸಿದ್ದಾರೆ. ಅದ್ದೂರಿಯಾಗಿ ಮದುವೆ ಸಮಾರಂಭ ಜರುಗಿದೆ.

ರಾಘವ್ ಚಡ್ಡಾ ಹಾಗೂ ಪರಿಣೀತಿ ಚೋಪ್ರಾ ಅವರು ಸೆಪ್ಟೆಂಬರ್ 22ರಂದು ಉದಯಪುರಕ್ಕೆ ಆಗಮಿಸಿದ್ದರು. ಮದುವೆಗೂ ಮೊದಲು ಮೆಹಂದಿ, ಅರಿಶಿಣ ಶಾಸ್ತ್ರಗಳು ನಡೆದಿವೆ. ಆ ಬಳಿಕ ಮದುವೆ ಕಾರ್ಯ ನಡೆಯಿತು.

ಪರಿಣೀತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಅವರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈಗ ಇವರ ಪ್ರೀತಿಗೆ ಹೊಸ ಅರ್ಥ ನೀಡಿದ್ದಾರೆ. ಸಿನಿಮಾ ಕೆಲಸಗಳಿಂದ ಇವರು ಬ್ರೇಕ್ ಪಡೆದಿದ್ದು, ಸ್ವಲ್ಪ ದಿನ ಪತಿಯ ಜೊತೆ ಸುತ್ತಾಡಲಿದ್ದಾರೆ.

ಲೀಲಾ ಪ್ಯಾಲೇಸ್ ಹೋಟೆಲ್ ಸಮೀಪದ ಸರೋವರದ ಮಧ್ಯೆ ಈ ಮದುವೆ ನಡೆದಿದೆ. ಈ ಜೋಡಿ ಬೋಟ್ ಮೂಲಕ ಮಂಟಪಕ್ಕೆ ತೆರಳಿತು. ಮಧ್ಯಾಹ್ನ 3:30ರ ಸುಮಾರಿಗೆ ಇಬ್ಬರೂ ಮದುವೆ ಆದರು. 4 ಗಂಟೆಗೆ ಸಪ್ತಪದಿ ತುಳಿದರು.

ಈ ಮದುವೆಗೆ ಹಲವು ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ. ಹರ್ಭಜನ್ ಸಿಂಗ್, ಸಾನಿಯಾ ಮಿರ್ಜಾ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗ್ವಂತ್ ಮಾನ್ ಈ ಮದುವೆಗೆ ಹಾಜರಿ ಹಾಕಿದ್ದಾರೆ.



















