AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐದೇ ವಾರದಲ್ಲಿ ಸಿಕ್ಸ್ ಪ್ಯಾಕ್ ಮಾಡಿದ ಹೃತಿಕ್; ಇದಕ್ಕೆಲ್ಲಾ ಗರ್ಲ್​​ಫ್ರೆಂಡ್ ಕಾರಣ

ಹೃತಿಕ್ ರೋಷನ್ ಅವರು ಫಿಟ್ನೆಸ್​ಗೆ ಸಾಕಷ್ಟು ಆದ್ಯತೆ ನೀಡುತ್ತಾರೆ. ಆದರೂ ಇತ್ತೀಚೆಗೆ ಅವರ ಸಿಕ್ಸ್ ಪ್ಯಾಕ್​ ಮಾಯ ಆಗಿತ್ತು. ಈಗ ಅದು ಮರಳಿ ಬಂದಿದೆ. ಅದೂ ಕೂಡ ಕೇವಲ ಐದು ವಾರಗಳಲ್ಲಿ ಎಂಬುದು ವಿಶೇಷ. ಇದಕ್ಕೆಲ್ಲ ಅವರು ಧನ್ಯವಾದ ಹೇಳಿದ್ದು ಗರ್ಲ್​ಫ್ರೆಂಡ್ ಸಬಾ ಆಜಾದ್​ಗೆ. ಆ ಬಗ್ಗೆ ಇಲ್ಲಿದೆ ಪೂರ್ತಿ ಮಾಹಿತಿ..

ಐದೇ ವಾರದಲ್ಲಿ ಸಿಕ್ಸ್ ಪ್ಯಾಕ್ ಮಾಡಿದ ಹೃತಿಕ್; ಇದಕ್ಕೆಲ್ಲಾ ಗರ್ಲ್​​ಫ್ರೆಂಡ್ ಕಾರಣ
ಹೃತಿಕ್​ ರೋಷನ್​
Follow us
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​

Updated on: Oct 17, 2023 | 8:42 PM

ಹೃತಿಕ್ ರೋಷನ್ (Hrithik Roshan) ಅವರು ಬಾಲಿವುಡ್​ನ ಸ್ಟಾರ್ ಹೀರೋ. ಅವರು ಹಿಂದಿಯಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಫಿಟ್ನೆಸ್​ಗೆ ಸಾಕಷ್ಟು ಆದ್ಯತೆ ನೀಡುತ್ತಾರೆ. ಅವರು ಎಂದಿಗೂ ವರ್ಕೌಟ್ ಮಿಸ್ ಮಾಡಿದವರಲ್ಲ. ಅವರು ಇತ್ತೀಚೆಗೆ ಫಿಟ್ನೆಸ್​ಗೆ ಹೆಚ್ಚು ಆದ್ಯತೆ ಕೊಟ್ಟಿಲ್ಲ ಎನಿಸುತ್ತದೆ. ಈ ಕಾರಣದಿಂದಲೇ ಅವರ ಸಿಕ್ಸ್ ಪ್ಯಾಕ್​ (Six Pack) ಮಾಯ ಆಗಿತ್ತು. ಈಗ ಅದು ಮರಳಿ ಬಂದಿದೆ. ಅದೂ ಐದು ವಾರಗಳಲ್ಲಿ. ಇದಕ್ಕೆಲ್ಲ ಅವರು ಧನ್ಯವಾದ ಹೇಳಿದ್ದು ಗರ್ಲ್​ಫ್ರೆಂಡ್ (Saba Azad) ಸಬಾ ಆಜಾದ್​ಗೆ. ಸದ್ಯ ಇನ್​ಸ್ಟಾಗ್ರಾಮ್​ನಲ್ಲಿ ಅವರು ಹಂಚಿಕೊಂಡಿರುವ ಪೋಸ್ಟ್ ಗಮನ ಸೆಳೆಯುತ್ತಿದೆ.

ಹೃತಿಕ್ ರೋಷನ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಡ್ಯಾನ್ಸ್​ನಲ್ಲಿ ಮಾಸ್ಟರ್ ಕೂಡ ಹೌದು. ಇನ್ನು ಅವರು ಸದಾ ಸಿಕ್ಸ್ ಪ್ಯಾಕ್​ನಲ್ಲಿ ಮಿಂಚುತ್ತಾರೆ. ಆಗಸ್ಟ್ ತಿಂಗಳಲ್ಲಿ ಹೃತಿಕ್ ಅವರ ಸಿಕ್ಸ್ ಪ್ಯಾಕ್​ ಮಾಯ ಆಗಿತ್ತು. ಆದರೆ, ಅಕ್ಟೋಬರ್ 7 ಎನ್ನುವವರೆಗೆ ಅವರು ಮತ್ತೆ ಸಿಕ್ಸ್ ಪ್ಯಾಕ್ ಮಾಡಿದ್ದಾರೆ. ಎರಡೂ ಫೋಟೋನ ಹೋಲಿಕೆ ಮಾಡಿ ಹೊಸ ಪೋಸ್ಟ್ ಮಾಡಿದ್ದಾರೆ.

‘ಆರಂಭದಿಂದ ಕೊನೆಯವರೆಗೆ ಬೇಕಾಗಿದ್ದು ಐದು ವಾರ. ನನ್ನ ದೇಹದ ಎಲ್ಲಾ ಭಾಗಗಳಿಗೆ ಧನ್ಯವಾದ. ನೀವು ಒಳ್ಳೆಯ ಫೈಟ್​ನ ಇಷ್ಟಪಡುತ್ತೀರಿ. ಲವ್​ ಯೂ ಆಲ್. ಈಗ ವಿಶ್ರಾಂತಿ ಮತ್ತು ಚೇತರಿಸಿಕೊಳ್ಳುವ ಸಮಯ. ಪ್ರೀತಿ ಪಾತ್ರರಿಗೆ, ಪ್ರಮುಖ ಕೆಲಸಗಳಿಗೆ, ಪಾರ್ಟಿಗಳಿಗೆ ನೋ ಎನ್ನೋದು ಕಷ್ಟದ ಕೆಲಸ. ರಾತ್ರಿ 9 ಗಂಟೆಗೆ ಸರಿಯಾಗಿ ಮಲಗೋದು ಮತ್ತೂ ಕಷ್ಟದ ಕೆಲಸ. ಸುಲಭದ ವಿಚಾರ ಎಂದರೆ ಒಂದೇ ರೀತಿಯ ಮನಸ್ಥಿತಿಯ ಪಾರ್ಟ್ನರ್​ನ ಹೊಂದುವುದು. ಸಬಾ ಥ್ಯಾಂಕ್ಯೂ. ಕ್ರಿಸ್ ಅವರಂಥ ಮೆಂಟರ್ ಸಿಕ್ಕಿದ್ದು ಅದೃಷ್ಟ. ಎಲ್ಲರಿಗೂ ನನ್ನ ಧನ್ಯವಾದ’ ಎಂದು ಅವರು ಬರೆದುಕೊಂಡಿದ್ದಾರೆ.

ಐಷಾರಾಮಿ ಕಾರು ಬಿಟ್ಟು ಮೆಟ್ರೋ ಏರಿದ ಹೃತಿಕ್; ಇದು ಪಬ್ಲಿಸಿಟಿ ಸ್ಟಂಟ್ ಅಲ್ಲ

ಇನ್ನು, ಅವರು ವಿಶೇಷ ಟಿಪ್ಪಣಿ ಕೂಡ ಬರೆದಿದ್ದಾರೆ. ‘ನಾನು ನನ್ನ ಸಿನಿಮಾ ಪಾತ್ರಕ್ಕಾಗಿ ಇದನ್ನೆಲ್ಲ ಮಾಡುತ್ತೇನೆ. ನನಗೆ ಚಾಲೆಂಜ್ ಎಂದರೆ ಇಷ್ಟ’ ಎಂದು ಅವರು ಬರೆದುಕೊಂಡಿದ್ದಾರೆ. ಈ ಮೂಲಕ ಸಿಕ್ಸ್ ಕಳೆದುಕೊಂಡಿದ್ದು ಮತ್ತು ಅದನ್ನು ಮರಳಿ ಪಡೆದಿದ್ದು ಸಿನಿಮಾಗಾಗಿಯೇ ಎನ್ನುವ ಪ್ರಶ್ನೆ ಮೂಡಿದೆ. ಹೃತಿಕ್ ರೋಷನ್ ಅವರು ಸದ್ಯ ‘ಫೈಟರ್’ ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ದೀಪಿಕಾ ಪಡುಕೋಣೆ ನಾಯಕಿ. ಅನಿಲ್ ಕಪೂರ್ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ. 2024ರ ಜನವರಿ 25ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ. ಆ್ಯಕ್ಷನ್ ಸಿನಿಮಾಗಳನ್ನು ಮಾಡಿ ಫೇಮಸ್ ಆದ ಸಿದ್ದಾರ್ಥ್ ಆನಂದ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಒಂದೇ ಸಿನಿಮಾದಲ್ಲಿ ಜೂ. ಎನ್​ಟಿಆರ್​, ಶಾರುಖ್​ ಖಾನ್​, ಸಲ್ಮಾನ್​, ಹೃತಿಕ್​ ರೋಷನ್​?

ಹೃತಿಕ್ ರೋಷನ್ ಅವರು ಸುಸ್ಸಾನೆ ಖಾನ್ ಅವರನ್ನು 2000ನೇ ಇಸ್ವಿಯಲ್ಲಿ ಮದುವೆ ಆದರು. ಆ ಬಳಿಕ ಅವರಿಂದ 2014ರಲ್ಲಿ ವಿಚ್ಛೇದನ ಪಡೆದರು. ಇದಾದ ಬಳಿಕ ಹಲವು ಬಾರಿ ಇವರು ಒಟ್ಟಾಗಿ ಕಾಣಿಸಿಕೊಂಡಿದ್ದೆ. ಈಗ ಸಬಾ ಜೊತೆ ಹೃತಿಕ್ ಹಾಯಾಗಿ ಸುತ್ತಾಟ ನಡೆಸುತ್ತಿದ್ದಾರೆ. ಇಬ್ಬರೂ ಶೀಘ್ರವೇ ಮದುವೆ ಆಗಲಿ ಎಂಬುದು ಫ್ಯಾನ್ಸ್ ಕೋರಿಕೆ. ಇಬ್ಬರ ಮಧ್ಯೆ 12 ವರ್ಷ ವಯಸ್ಸಿನ ಅಂತರ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪರೀಕ್ಷೆ ಬರೆಯುವ ಆಸೆಗೆ ಪೋಷಕ ಮತ್ತು ಪತಿ ಮನೆಯವರಿಂದ ಆಕ್ಷೇಪಣೆ ಇಲ್ಲ
ಪರೀಕ್ಷೆ ಬರೆಯುವ ಆಸೆಗೆ ಪೋಷಕ ಮತ್ತು ಪತಿ ಮನೆಯವರಿಂದ ಆಕ್ಷೇಪಣೆ ಇಲ್ಲ
ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು: ವಿಡಿಯೋ ನೋಡಿ
ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು: ವಿಡಿಯೋ ನೋಡಿ
ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆ ಸಮೂಹದ ಮೇಲೆ ಈಡಿ ದಾಳಿ ನಡೆದಿದೆ
ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆ ಸಮೂಹದ ಮೇಲೆ ಈಡಿ ದಾಳಿ ನಡೆದಿದೆ
ಪರಮೇಶ್ವರ್ ಸಂಸ್ಥೆಗಳ ಮೇಲೆ ಇಡಿ ದಾಳಿ: ಡಿಸಿಎಂ ಡಿಕೆಶಿ ಹೇಳಿದ್ದೇನು ನೋಡಿ
ಪರಮೇಶ್ವರ್ ಸಂಸ್ಥೆಗಳ ಮೇಲೆ ಇಡಿ ದಾಳಿ: ಡಿಸಿಎಂ ಡಿಕೆಶಿ ಹೇಳಿದ್ದೇನು ನೋಡಿ
ಪುನರಾಭಿವೃದ್ಧಿಗೊಂಡ 103 ರೈಲ್ವೆ ನಿಲ್ದಾಣಗಳ ಉದ್ಘಾಟಿಸಿದ ಪ್ರಧಾನಿ ಮೋದಿ
ಪುನರಾಭಿವೃದ್ಧಿಗೊಂಡ 103 ರೈಲ್ವೆ ನಿಲ್ದಾಣಗಳ ಉದ್ಘಾಟಿಸಿದ ಪ್ರಧಾನಿ ಮೋದಿ
Video: ಪಾಕಿಸ್ತಾನದ ಗೃಹ ಸಚಿವ ಹಸನ್ ಮನೆಗೆ ಬೆಂಕಿ
Video: ಪಾಕಿಸ್ತಾನದ ಗೃಹ ಸಚಿವ ಹಸನ್ ಮನೆಗೆ ಬೆಂಕಿ
ಪೊಲೀಸ್ ಉನ್ನತ ಹುದ್ದೆಗೆ ನೇಮಕಗೊಂಡವರು ಹೆಚ್​ಎಂ ಭೇಟಿಯಾಗೋದು ಶಿಷ್ಟಾಚಾರ
ಪೊಲೀಸ್ ಉನ್ನತ ಹುದ್ದೆಗೆ ನೇಮಕಗೊಂಡವರು ಹೆಚ್​ಎಂ ಭೇಟಿಯಾಗೋದು ಶಿಷ್ಟಾಚಾರ
ಒಳ್ಳೆಯ ಕೆಲಸ ಮಾಡಿದವರನ್ನು ಅಭಿನಂದಿಸಲೇಬೇಕು: ಬಸನಗೌಡ ಯತ್ನಾಳ್
ಒಳ್ಳೆಯ ಕೆಲಸ ಮಾಡಿದವರನ್ನು ಅಭಿನಂದಿಸಲೇಬೇಕು: ಬಸನಗೌಡ ಯತ್ನಾಳ್
ಪ್ರಶಸ್ತಿ ಸ್ವೀಕರಿಸಲು ಕೊಡೆ ಹಿಡಿದು ಬಂದ ಸೂರ್ಯಕುಮಾರ್ ಯಾದವ್
ಪ್ರಶಸ್ತಿ ಸ್ವೀಕರಿಸಲು ಕೊಡೆ ಹಿಡಿದು ಬಂದ ಸೂರ್ಯಕುಮಾರ್ ಯಾದವ್
ಚಾರ್ಮಾಡಿಯಲ್ಲಿ ಕಾಡಾನೆ ಜತೆ ಸೆಲ್ಫೀ ಕ್ಲಿಕ್ಕಿಸಲು ಮುಂದಾದ ಪ್ರಯಾಣಿಕ
ಚಾರ್ಮಾಡಿಯಲ್ಲಿ ಕಾಡಾನೆ ಜತೆ ಸೆಲ್ಫೀ ಕ್ಲಿಕ್ಕಿಸಲು ಮುಂದಾದ ಪ್ರಯಾಣಿಕ