ಕಂಗನಾ ರಣಾವತ್ ಜೊತೆ ಫ್ಲರ್ಟ್ ಮಾಡಿದ ಸಲ್ಮಾನ್ ಖಾನ್; ವಿಡಿಯೋ ವೈರಲ್

Samlan-Kangana: ಬಾಲಿವುಡ್​ನಲ್ಲಿ ಹಲವರ ವಿರೋಧ ಕಟ್ಟಿಕೊಂಡಿರುವ ನಟಿ ಕಂಗನಾ ರನೌತ್, ಹಠಾತ್ತನೆ ಸಲ್ಮಾನ್ ಖಾಣ್ ಜೊತೆ ಸ್ನೇಹ ಬೆಳೆಸಿದ್ದಾರೆ. ಬಿಗ್​ಬಾಸ್ ಶೋನಲ್ಲಿ ಕಂಗನಾ ಜೊತೆ ಫ್ಲರ್ಟ್ ಮಾಡಿದ್ದಾರೆ ಸಲ್ಮಾನ್ ಖಾನ್.

ಕಂಗನಾ ರಣಾವತ್ ಜೊತೆ ಫ್ಲರ್ಟ್ ಮಾಡಿದ ಸಲ್ಮಾನ್ ಖಾನ್; ವಿಡಿಯೋ ವೈರಲ್
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on:Oct 22, 2023 | 6:49 PM

ಬಾಲಿವುಡ್​ನ (Bollywood) ಸ್ಟಾರ್ ನಟಿ ಕಂಗನಾ ರಣಾವತ್ (Kagana Ranaut) ಅವರಿಗೆ ಬಾಲಿವುಡ್​ನಲ್ಲಿ ಬಹುತೇಕರನ್ನು ಕಂಡರೆ ಆಗುವುದಿಲ್ಲ. ಅವರು ಹಲವರ ಜೊತೆ ಮನಸ್ತಾಪ ಮಾಡಿಕೊಂಡಿದ್ದಾರೆ. ಸಲ್ಮಾನ್ ಖಾನ್ ಜೊತೆ ಕಂಗನಾ ದ್ವೇಷ ಕಟ್ಟಿಕೊಂಡಿದ್ದರು. ಆದರೆ, ಇತ್ತೀಚೆಗೆ ಅವರು ಮನಸ್ಸು ಬದಲಿಸಿದ್ದಾರೆ. ಅವರು ಸಲ್ಲು ಜೊತೆ ಫ್ರೆಂಡ್​ಶಿಪ್ ಬೆಳೆಸಿಕೊಂಡಿದ್ದಾರೆ. ಈಗ ವೈರಲ್ ಆಗಿರುವ ಹೊಸ ವಿಡಿಯೋ ಇದಕ್ಕೆ ಸಾಕ್ಷಿ. ಕಂಗನಾ ಜೊತೆ ಸಲ್ಮಾನ್ ಖಾನ್ ಫ್ಲರ್ಟ್ ಮಾಡಿದ್ದಾರೆ. ಇದಕ್ಕೆ ನಾಚುತ್ತಲೇ ಉತ್ತರ ನೀಡಿದ್ದಾರೆ ಕಂಗನಾ. ಸದ್ಯ, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಂಗನಾ ರಣಾವತ್ ನಟನೆಯ ‘ಧಾಕಡ್’ ಸಿನಿಮಾ ರಿಲೀಸ್ ಆಗಿ ಸೋಲು ಕಂಡಿದೆ. ಈ ಚಿತ್ರ ರಿಲೀಸ್​ಗೂ ಮೊದಲು ಸಲ್ಮಾನ್ ಖಾನ್ ಅವರು ಈ ಚಿತ್ರವನ್ನು ಬೆಂಬಲಿಸಿದ್ದರು. ಈ ಸಿನಿಮಾ ನೋಡುವಂತೆ ಅವರು ಕೋರಿದ್ದರು. ಇದು ಕಂಗನಾ ಖುಷಿಗೆ ಕಾರಣ ಆಗಿತ್ತು. ಇಂಡಸ್ಟ್ರಿಯಲ್ಲಿ ನಾನೊಬ್ಬನೇ ಅಲ್ಲ ಎಂದು ಅವರು ಖುಷಿಯಿಂದ ಹೇಳಿದ್ದರು. ಇದಾದ ಬಳಿಕ ಸಲ್ಮಾನ್ ಖಾನ್ ಹಾಗೂ ಕಂಗನಾ ರಣಾವತ್ ಅವರ ಮಧ್ಯೆ ಗೆಳೆತನ ಮೂಡಿದೆ.

ಸದ್ಯ ಸಲ್ಮಾನ್ ಖಾನ್ ಅವರು ‘ಬಿಗ್ ಬಾಸ್ ಹಿಂದಿ ಸೀಸನ್ 17’ ನಡೆಸಿಕೊಡುತ್ತಿದ್ದಾರೆ. ಈ ವೇದಿಕೆಗೆ ಕಂಗನಾ ರಣಾವತ್ ಅವರ ಆಗಮನ ಆಗಿದೆ. ‘ಎಲ್ಲರಿಗೂ ನಮಸ್ಕಾರ’ ಎನ್ನುತ್ತಾ ವೇದಿಕೆಗೆ ಬಂದಿದ್ದಾರೆ ಕಂಗನಾ ರಣಾವತ್. ಅವರ ಹಿಂದೆ ಸಲ್ಮಾನ್ ಖಾನ್ ಕೂಡ ಬಂದಿದ್ದಾರೆ. ‘ಹೇಗಿದ್ದೀರಿ’ ಎಂದು ಸಲ್ಮಾನ್ ಖಾನ್​ಗೆ ಕಂಗನಾ ಕೇಳಿದ್ದಾರೆ. ‘ನಾನು ಆರಾಮಾಗಿದ್ದೇನೆ’ ಎಂದು ಸಲ್ಮಾನ್ ಖಾನ್ ಉತ್ತರಿಸಿದ್ದಾರೆ. ನಂತರ ಇಬ್ಬರೂ ಪ್ರೀತಿಯಿಂದ ಹಗ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಸಲ್ಮಾನ್ ಖಾನ್​ಗೆ ಹೆದರಿದ್ರಾ ಕಂಗನಾ? ‘ಎಮರ್ಜೆನ್ಸಿ’ ಸಿನಿಮಾ ರಿಲೀಸ್ ದಿನಾಂಕ ಮುಂದಕ್ಕೆ

‘ಛೇಡಿಸಿದರೆ ಬಿಡಲ್ಲ’ ಎನ್ನುತ್ತಾರೆ ಕಂಗನಾ. ‘ನಿಮ್ಮ ಗೆಳೆಯನೇ ನಿಮ್ಮ ಜೊತೆ ಫ್ಲರ್ಟ್​ ಮಾಡಿದರೆ ಏನು ಮಾಡುತ್ತೀರಿ’ ಎಂದು ಸಲ್ಮಾನ್ ಖಾನ್ ಅವರು ನೇರ ಪ್ರಶ್ನೆ ಕೇಳುತ್ತಾರೆ. ‘ನಿಮ್ಮಂತೆ ಹುಡುಗ ಹ್ಯಾಂಡ್ಸಮ್ ಆಗಿದ್ದರೆ ಖುಷಿ ಆಗುತ್ತದೆ’ ಎಂದರು ಕಂಗನಾ. ‘ಫ್ಲರ್ಟ್ ಮಾಡಿದಾಗ ನಿಮ್ಮ ಉತ್ತರ ಏನಿರುತ್ತದೆ’ ಎಂದು ಕಂಗನಾಗೆ ಸಲ್ಮಾನ್ ಖಾನ್ ಕೇಳಿದರು. ಇದಕ್ಕೆ ಕಂಗನಾ, ‘ಅವನು ಏನು ಹೇಳಿದ ಅನ್ನೋದು ಮುಖ್ಯವಾಗುತ್ತದೆ’ ಎಂದರು. ನಂತರ ಇಬ್ಬರೂ ಫ್ಲರ್ಟ್ ಮಾಡಿದರು. ಸಲ್ಮಾನ್ ಖಾನ್ ಅವರು ಕಂಗನಾ ಅಂದವನ್ನು ಹೊಗಳಿದ್ದಾರೆ. ಅಲ್ಲದೆ, ಇಬ್ಬರೂ ಡ್ಯಾನ್ಸ್ ಮಾಡಿದ್ದಾರೆ.

View this post on Instagram

A post shared by ColorsTV (@colorstv)

ಕನ್ನಡದಲ್ಲಿ ಬಿಗ್ ಬಾಸ್ ಆರಂಭ ಆಗಿ ಒಂದು ವಾರದ ಬಳಿಕ ಹಿಂದಿಯಲ್ಲಿ ಬಿಗ್ ಬಾಸ್ ಶುರುವಾಗಿದೆ. ಈ ಬಾರಿಯೂ ಹಿಂದಿಯಲ್ಲಿ ಸಲ್ಮಾನ್ ಖಾನ್ ಅವರು ಬಿಗ್ ಬಾಸ್ ನಡೆಸಿಕೊಡುತ್ತಿದ್ದಾರೆ. ಶನಿವಾರ ಹಾಗೂ ಭಾನುವಾರ 9 ಗಂಟೆಗೆ ಬಿಗ್ ಬಾಸ್ ಪ್ರಸಾರ ಕಾಣುತ್ತದೆ.

ಸಿನಿಮಾ ವಿಚಾರಕ್ಕೆ ಬರೋದಾದರೆ ಸಲ್ಮಾನ್ ಖಾನ್ ಅವರು ‘ಟೈಗರ್ 3’ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ಸಲ್ಮಾನ್ ಖಾನ್​ಗೆ ಜೊತೆಯಾಗಿ ಕತ್ರಿನಾ ಕೈಫ್ ಅವರು ಕಾಣಿಸಿಕೊಂಡಿದ್ದಾರೆ. ದೀಪಾವಳಿ ಪ್ರಯುಕ್ತ ನವೆಂಬರ್ 12ರಂದು ‘ಟೈಗರ್ 3’ ರಿಲೀಸ್ ಆಗಲಿದೆ. ಕಂಗನಾ ರಣಾವತ್ ಅವರು ‘ಎಮರ್ಜೆನ್ಸಿ’ ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಈ ವರ್ಷವೇ ರಿಲೀಸ್ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಸಿನಿಮಾದ ರಿಲೀಸ್ ದಿನಾಂಕ ಮುಂದಿನ ವರ್ಷಕ್ಕೆ ಹೋಗಿದೆ. ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಹೇರಿದ್ದ ತುರ್ತುಪರಿಸ್ಥಿತಿ ಕುರಿತು ಈ ಸಿನಿಮಾ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:58 pm, Sun, 22 October 23

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ