ಆ ಒಂದು ಸಿನಿಮಾ ಬಿಟ್ಟಿದ್ದಕ್ಕೆ ಇನ್ನೂ ವಿಷಾದ ಹೊಂದಿದ್ದಾರೆ ನಟಿ ಕಂಗನಾ ರಣಾವತ್

‘ಕಂಗನಾ’ ಅವರು ‘ಚಂದ್ರಮುಖಿ 2’ ಚಿತ್ರದ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಈ ವೇಳೆ ತೆಲುಗು ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ಸಿಕ್ಕ ಆಫರ್ ರಿಜೆಕ್ಟ್ ಮಾಡಿ ಈಗಲೂ ಅದಕ್ಕೆ ಮರುಗುತ್ತಿದ್ದಾರೆ.­ ಅದು ಮಹೇಶ್ ಬಾಬು ನಟನೆಯ ‘ಪೋಕಿರಿ’ ಸಿನಿಮಾ.

ಆ ಒಂದು ಸಿನಿಮಾ ಬಿಟ್ಟಿದ್ದಕ್ಕೆ ಇನ್ನೂ ವಿಷಾದ ಹೊಂದಿದ್ದಾರೆ ನಟಿ ಕಂಗನಾ ರಣಾವತ್
ಕಂಗನಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Sep 26, 2023 | 2:02 PM

ನಟಿ ಕಂಗನಾ ರಣಾವತ್ (Kangana Ranaut) ಅವರು ನಟನೆಯ ಮೂಲಕ ಗುರುತಿಸಿಕೊಂಡಿದ್ದಾರೆ. ಸಾಲು ಸಾಲು ಫ್ಲಾಪ್ ನೀಡಿದರೂ ಅವರ ವೃತ್ತಿ ಜೀವನಕ್ಕೆ ದೊಡ್ಡ ಹಿನ್ನಡೆ ಏನೂ ಆಗಿಲ್ಲ. ನಟನೆಯ ಮೂಲಕ ತಮ್ಮನ್ನು ತಾವು ಸಾಬೀತು ಮಾಡಿಕೊಂಡ ಕಂಗನಾಗೆ ಹಲವು ಆಫರ್​ಗಳು ಬರುತ್ತಿವೆ. ಅವರು ಸದ್ಯ ‘ಚಂದ್ರಮುಖಿ 2’ ಚಿತ್ರದ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಈ ವೇಳೆ ತೆಲುಗು ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ಸಿಕ್ಕ ಆಫರ್ ರಿಜೆಕ್ಟ್ ಮಾಡಿ ಈಗಲೂ ಅದಕ್ಕೆ ಮರುಗುತ್ತಿದ್ದಾರೆ.­ ಅದು ಮಹೇಶ್ ಬಾಬು ನಟನೆಯ ‘ಪೋಕಿರಿ’ ಸಿನಿಮಾ.

2006ರಲ್ಲಿ ರಿಲೀಸ್ ಆದ ‘ಪೋಕಿರಿ’ ಚಿತ್ರ ಮಹೇಶ್ ಬಾಬು ಅವರ ವೃತ್ತಿಜೀವನದಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು. ಮಹೇಶ್ ಬಾಬು ಜನಪ್ರಿಯತೆ ಸಾಕಷ್ಟು ಹೆಚ್ಚಾಯಿತು. ‘ಒಕ್ಕಡು’ ಬಳಿಕ ಸಾಧಾರಣ ಗೆಲುವು ಕಾಣುತ್ತಿದ್ದ ಮಹೇಶ್ ಬಾಬು, ‘ಪೋಕಿರಿ’ ಸಿನಿಮಾದಿಂದ ಮತ್ತೆ ಪುಟಿದೆದ್ದರು. ಮಹೇಶ್ ಬಾಬು ಅಭಿನಯವನ್ನು ಜನರು ಮೆಚ್ಚಿಕೊಂಡರು. ಈ ಚಿತ್ರದಲ್ಲಿ ಮಹೇಶ್ ಬಾಬುಗೆ ಜೊತೆಯಾಗಿ ನಟಿಸಿದ್ದು ನಟಿ ಇಲಿಯಾನಾ ಡಿಕ್ರ್ಯೂಸ್. ನಿರ್ದೇಶಕರು ಈ ಆಫರ್​ನ ಮೊದಲು ಕೊಟ್ಟಿದ್ದು ಕಂಗನಾ ರಣಾವತ್​ಗೆ. ಈ ಆಫರ್ ಬಿಟ್ಟ ವಿಚಾರದಲ್ಲಿ ಕಂಗನಾಗೆ ಬೇಸರ ಇದೆ.

ನಿರ್ದೇಶಕ ಪುರಿ ಜಗನ್ನಾಥ್ ಅವರು ‘ಪೋಕಿರಿ’ ಚಿತ್ರದಲ್ಲಿ ಕಂಗನಾ ರಣಾವತ್ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡುವ ಆಲೋಚನೆಯಲ್ಲಿ ಇದ್ದರು. ಆದರೆ, ಇದನ್ನು ಅವರು ನಿರಾಕರಿಸಿದ್ದರು. ಈ ಬಗ್ಗೆ ಅವರಿಗೆ ಬೇಸರ ಇದೆ. ಅದು ಈಗಲೂ ಕಂಗನಾ ಅವರನ್ನು ಕಾಡುತ್ತಿದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.

‘ಪುರಿ ಜಗನ್ನಾಥ್ ಅವರು ಒಳ್ಳೆಯ ವ್ಯಕ್ತಿ. ನನ್ನಲ್ಲಿರುವ ಟ್ಯಾಲೆಂಟ್​ನ ಅವರು ಗುರುತಿಸಿದ್ದರು. ನಾನು ದೊಡ್ಡ ಸ್ಟಾರ್ ಆಗುವೆ ಎಂದು ಅವರು ಭವಿಷ್ಯ ನುಡಿದಿದ್ದರು. 2005ರಲ್ಲಿ ನನಗೆ ‘ಗ್ಯಾಂಗ್​ಸ್ಟರ್’ ಹಾಗೂ ‘ಪೋಕಿರಿ’ ಸಿನಿಮಾ ಆಫರ್ ಬಂತು. ಇಬ್ಬರಿಗೂ ಅಕ್ಟೋಬರ್ ತಿಂಗಳ ಡೇಟ್ಸ್ ಬೇಕಿತ್ತು. ನಾನು ಪೋಕಿರಿ ಸಿನಿಮಾನ ಬಿಟ್ಟು, ಗ್ಯಾಂಗ್​​ಸ್ಟರ್ ಆಯ್ಕೆ ಮಾಡಿಕೊಂಡೆ. ನಾನು ಆ ಸಿನಿಮಾ ಮಾಡಿಲ್ಲ ಎನ್ನುವ ಬಗ್ಗೆ ಬೇಸರ ಇದೆ’ ಎಂದಿದ್ದಾರೆ ಕಂಗನಾ ರಣಾವತ್.

ಇದನ್ನೂ ಓದಿ: ‘ಜವಾನ್​’ ಅಬ್ಬರಕ್ಕೆ ಹೆದರಿದ ಕಂಗನಾ ರಣಾವತ್​? ಮುಂದಕ್ಕೆ ಹೋಯ್ತು ‘ಚಂದ್ರಮುಖಿ 2’ ಬಿಡುಗಡೆ ದಿನಾಂಕ

‘ಬಾಲಿವುಡ್​ಗೆ ನನ್ನನ್ನು ಭರಿಸಲು ಸಾಧ್ಯವಿಲ್ಲ’ ಎಂಬರ್ಥದಲ್ಲಿ ಮಹೇಶ್ ಬಾಬು ಅವರು ಮಾತನಾಡಿದ್ದರು. ಇದು ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ಅನೇಕರು ಅವರ ಹೇಳಿಕೆಯನ್ನು ಟೀಕಿಸಿದ್ದರು. ಆದರೆ, ಕಂಗನಾ ಅವರು ಈ ವಿಚಾರದಲ್ಲಿ ಮಹೇಶ್ ಬಾಬು ಅವರನ್ನು ಬೆಂಬಲಿಸಿದ್ದರು. ಮಹೇಶ್ ಬಾಬು ಹೇಳಿದ್ದು ಸರಿ ಇದೆ ಎಂದಿದ್ದ ಕಂಗನಾ, ಈ ವಿಚಾರದಲ್ಲಿ ವಿವಾದ ಸೃಷ್ಟಿ ಮಾಡುವ ಅಗತ್ಯವೇ ಇಲ್ಲ ಎಂದಿದ್ದರು. ಈ ಮೂಲಕ ಅವರು ಮಹೇಶ್ ಬಾಬು ಪರ ಬ್ಯಾಟ್ ಬೀಸಿದ್ದರು.

ಕಂಗನಾ ರಣಾವತ್ ಅವರು ‘ಚಂದ್ರಮುಖಿ 2’ ಚಿತ್ರದಲ್ಲಿ ನಟಿಸಿದ್ದಾರೆ. ರಾಘವ ಲಾರೆನ್ಸ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪಿ. ವಾಸು ನಿರ್ದೇಶನದ ‘ಚಂದ್ರಮುಖಿ 2’ ಸೆಪ್ಟೆಂಬರ್ 28 ರಂದು ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:55 pm, Tue, 26 September 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ