AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಬಿಗ್ ಬಾಸ್ ತ್ರಿಮೂರ್ತಿಗಳ ಬಣ್ಣ ಬಯಲು ಮಾಡಿದ ಕಿಚ್ಚ ಸುದೀಪ್

ಕಳೆದ ವಾರ ಟಾಸ್ಕ್​ ನಡೆಯುವಾಗ ಸಿಕ್ಕ ಗ್ಯಾಪ್​ನಲ್ಲಿ ಇಬ್ಬರು ಸಂತೋಷ್ ಹಾಗೂ ರಕ್ಷಕ್ ಹರಟೆ ಹೊಡಯುತ್ತಾ ಬೀನ್ ಬ್ಯಾಗ್​ಮೇಲೆ ಕುಳಿತಿದ್ದರು. ಆಗ ಮನೆಯವರ ಬಗ್ಗೆ ಮಾತನಾಡಿದ್ದಾರೆ. ಭಾಗ್ಯಶ್ರೀ, ಸಂಗೀತಾ, ಕಾರ್ತಿಕ್ ಮೊದಲಾದವರು ಕುರಿತು ಇಲ್ಲಸಲ್ಲದ ಚರ್ಚೆ ಮಾಡಿದ್ದಾರೆ.

Bigg Boss Kannada: ಬಿಗ್ ಬಾಸ್ ತ್ರಿಮೂರ್ತಿಗಳ ಬಣ್ಣ ಬಯಲು ಮಾಡಿದ ಕಿಚ್ಚ ಸುದೀಪ್
ಬಿಗ್ ಬಾಸ್
Follow us
ರಾಜೇಶ್ ದುಗ್ಗುಮನೆ
|

Updated on:Oct 23, 2023 | 10:56 AM

ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ನ್ನು ನಡೆಸಿಕೊಡುತ್ತಿದ್ದಾರೆ. ‘ಸೂಪರ್ ಸಂಡೆ ವಿತ್ ಸುದೀಪ’ ಕಾರ್ಯಕ್ರಮದಲ್ಲಿ ಸಖತ್ ಮನರಂಜನೆ ಇರುತ್ತದೆ. ಕಳೆದ ವಾರವೂ ಸಖತ್ ಫನ್ ಇತ್ತು. ಸುದೀಪ್ ಅವರು ನಗುತ್ತಲೇ ಎಲ್ಲರ ಕಾಲೆಳೆದಿದ್ದಾರೆ. ದೊಡ್ಮನೆಯಲ್ಲಿ ತ್ರಿಮೂರ್ತಿಗಳ ಗುಂಪು ತಯಾರಾಗಿದೆ. ತುಕಾಲಿ ಸಂತೋಷ್ (Tukali Santosh), ವರ್ತೂರು ಸಂತೋಷ್ ಹಾಗೂ ಬುಲೆಟ್ ರಕ್ಷಕ್ ಅವರು ಈ ಗುಂಪಿನಲ್ಲಿದ್ದಾರೆ. ಅವರು ಮನೆಯವರ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಈಗ ಸುದೀಪ್ ಅವರು ಇವರ ಬಣ್ಣ ಬಯಲು ಮಾಡಿದ್ದಾರೆ.

ಕಳೆದ ವಾರ ಟಾಸ್ಕ್​ ನಡೆಯುವಾಗ ಸಿಕ್ಕ ಗ್ಯಾಪ್​ನಲ್ಲಿ ಇಬ್ಬರು ಸಂತೋಷ್ ಹಾಗೂ ರಕ್ಷಕ್ ಹರಟೆ ಹೊಡಯುತ್ತಾ ಬೀನ್ ಬ್ಯಾಗ್​ಮೇಲೆ ಕುಳಿತಿದ್ದರು. ಆಗ ಮನೆಯವರ ಬಗ್ಗೆ ಮಾತನಾಡಿದ್ದಾರೆ. ಭಾಗ್ಯಶ್ರೀ, ಸಂಗೀತಾ, ಕಾರ್ತಿಕ್ ಮೊದಲಾದವರು ಕುರಿತು ಇಲ್ಲಸಲ್ಲದ ಚರ್ಚೆ ಮಾಡಿದ್ದಾರೆ. ಅಲ್ಲಿ ಏನು ಚರ್ಚೆ ನಡೆದಿದೆ ಎನ್ನುವ ವಿಚಾರ ಮನೆಯವರಿಗೆ ಗೊತ್ತಿರಲಿಲ್ಲ. ಈ ಕುರಿತು ಸುದೀಪ್ ಮಾತನಾಡಿದ್ದಾರೆ.

ಮೂವರನ್ನು ಬೀನ್ ಬ್ಯಾಗ್​ಮೇಲೆ ಕೂರಿಸಿದ್ದಾರೆ ಸುದೀಪ್. ‘ನೀವು ಯಾವ ಯಾವ ವಿಚಾರಗಳನ್ನು ಮಾತನಾಡಿದ್ದೀರಿ ಎಂಬ ಬಗ್ಗೆ ಮತ್ತೊಮ್ಮೆ ಮಾತನಾಡಬೇಕು. ಒಂದೊಮ್ಮೆ ನೀವು ಈ ಮೊದಲು ಆಡಿದ ಮಾತು ಹಾಗೂ ಈಗ ಆಡಿರುವ ಮಾತಿಗೆ ಸ್ವಲ್ಪ ಹೋಲಿಕೆ ಇದ್ದರೂ ನಾನು ನಿಮ್ಮನ್ನು ಬಿಟ್ಟುಬಿಡುತ್ತೇವೆ’ ಎಂದರು ಸುದೀಪ್.

ಭಾಗ್ಯಶ್ರೀ ಅವರು ನಿಧಾನಕ್ಕೆ ಟಾಸ್ಕ್ ಆಡಿದ್ದರು. ಆ ಘಟನೆ ಬಗ್ಗೆ ತುಕಾಲಿ ಸಂತೋಷ್ ಅವರು ಭಾಗ್ಯಶ್ರೀಯನ್ನು ಅಣಕಿಸಿದ್ದರು. ‘ಆ ಯಮ್ಮ ಜಾತ್ರೆಗೆ ಹೋಗಿ ಕಡ್ಲೆಪುರಿ ತೆಗೆದುಕೊಂಡು ಮಾರಿದಷ್ಟು ಸ್ಲೋ ಆಗಿ ಆಟ ಆಡಿದ್ದರು’ ಎಂದಿದ್ದರು ಸಂತು. ಈ ವಿಚಾರ ಭಾಗ್ಯಶ್ರೀಗೆ ಗೊತ್ತಿಲ್ಲ. ಈ ಬಗ್ಗೆ ಸುದೀಪ್ ಹಿಂಟ್ ನೀಡಿದ್ದಾರೆ. ಎಲ್ಲರಿಗೂ ಸಂತೋಷ್ ಏನು ಹೇಳಿದ್ದರು ಎನ್ನುವ ಬಗ್ಗೆ ಕುತೂಹಲ ಮೂಡಿದೆ.

ಇದನ್ನೂ ಓದಿ: ‘ಈ ವಾರವೂ ನೆಮ್ಮದಿ ಇಲ್ಲ’; ಸುದೀಪ್ ಕೊಟ್ಟ ಮಾತಿನ ಪೆಟ್ಟಿಗೆ ತುಕಾಲಿ ಸಂತೋಷ್​ಗೆ ನಡುಕ

ಮನೆಯಲ್ಲಿ ಗುಂಪುಗಾರಿಕೆ ಶುರು ಮಾಡಿದರೆ ಮುಳುವಾದ ಉದಾಹರಣೆ ಸಾಕಷ್ಟಿದೆ. ಇದೇ ಕಾರಣ ಇಟ್ಟುಕೊಂಡು ನಾಮಿನೇಷನ್ ಮಾಡಲಾಗುತ್ತದೆ. ಈ ವಾರದ ನಾಮಿನೇಷನ್​ಗೆ ಈ ವಿಚಾರ ಚರ್ಚೆಯ ಕೇಂದ್ರ ಬಿಂದು ಆದರೂ ಅಚ್ಚರಿ ಏನಿಲ್ಲ. ಕಲರ್ಸ್ ಕನ್ನಡದಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಆಗುತ್ತಿದೆ. ಜಿಯೋದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:05 am, Mon, 23 October 23