‘ಈ ವಾರವೂ ನೆಮ್ಮದಿ ಇಲ್ಲ’; ಸುದೀಪ್ ಕೊಟ್ಟ ಮಾತಿನ ಪೆಟ್ಟಿಗೆ ತುಕಾಲಿ ಸಂತೋಷ್​ಗೆ ನಡುಕ

‘ತುಕಾಲಿ’ ಸಂತೋಷ್, ವರ್ತೂರ್ ಸಂತೋಷ್ ಹಾಗೂ ರಕ್ಷಕ್ ಬುಲೆಟ್ ಮನೆಯಲ್ಲಿ ಯಾವಾಗಲೂ ಒಟ್ಟಾಗಿ ಇರುತ್ತಾರೆ. ಮನೆಯವರ ವಿಚಾರ ಇಟ್ಟುಕೊಂಡು ಅವರು ಚರ್ಚೆ ಮಾಡುತ್ತಾರೆ. ಈ ಬಗ್ಗೆ ಸುದೀಪ್ ಅವರು ಚರ್ಚಿಸಿದ್ದಾರೆ.

‘ಈ ವಾರವೂ ನೆಮ್ಮದಿ ಇಲ್ಲ’; ಸುದೀಪ್ ಕೊಟ್ಟ ಮಾತಿನ ಪೆಟ್ಟಿಗೆ ತುಕಾಲಿ ಸಂತೋಷ್​ಗೆ ನಡುಕ
ಸಂತೋಷ್-ರಕ್ಷಕ್
Follow us
ರಾಜೇಶ್ ದುಗ್ಗುಮನೆ
|

Updated on: Oct 22, 2023 | 12:34 PM

‘ತುಕಾಲಿ’ ಸಂತೋಷ್ ಅವರು ‘ಬಿಗ್ ಬಾಸ್ (Bigg Boss)​ ಮನೆಯಲ್ಲಿ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕಳೆದ ವಾರ ಅವರು ಮಾಡಿಕೊಂಡ ಎಡವಟ್ಟಿನಿಂದ ಸಾಕಷ್ಟು ತೊಂದರೆ ಆಗಿದೆ. ಅವರು ಡ್ರೋನ್ ಪ್ರತಾಪ್ ಅವರನ್ನು ಟಾರ್ಗೆಟ್ ಮಾಡಿದ್ದರು. ಈ ವಿಚಾರದಲ್ಲಿ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದರು. ಸಂತೋಷ್ ಅವರು ಈ ವಿಚಾರದಲ್ಲಿ ಬೇಸರ ಮಾಡಿಕೊಂಡಿದ್ದರು. ಈಗ ಈ ವಾರವೂ ಅವರಿಗೆ ನೆಮ್ಮದಿ ಇಲ್ಲ. ಸುದೀಪ್ ಅವರು ಸಂತೋಷ್ ಅವರ ಕಾಲೆಳೆದಿದ್ದಾರೆ. ಸದ್ಯ ಈ ಪ್ರೋಮೋ ಗಮನ ಸೆಳೆಯುತ್ತಿದೆ.

‘ತುಕಾಲಿ’ ಸಂತೋಷ್, ವರ್ತೂರ್ ಸಂತೋಷ್ ಹಾಗೂ ರಕ್ಷಕ್ ಬುಲೆಟ್ ಮನೆಯಲ್ಲಿ ಯಾವಾಗಲೂ ಒಟ್ಟಾಗಿ ಇರುತ್ತಾರೆ. ಮನೆಯವರ ವಿಚಾರ ಇಟ್ಟುಕೊಂಡು ಅವರು ಚರ್ಚೆ ಮಾಡುತ್ತಾರೆ. ಈ ಬಗ್ಗೆ ಸುದೀಪ್ ಅವರು ಚರ್ಚಿಸಿದ್ದಾರೆ. ರಕ್ಷಕ್, ಇಬ್ಬರು ಸಂತೋಷ್ ಅವರು ಕುಳಿತು ಏನು ಮಾತನಾಡುತ್ತಾರೆ ಎಂದು ನಮ್ರತಾಗೆ ಸುದೀಪ್ ಕೇಳಿದರು. ‘ಹಸ, ಕರ ಅಂತ ಮಾತನಾಡ್ತಾರೆ’ ಎಂದರು ನಮ್ರತಾ. ಇದಕ್ಕೆ ಸುದೀಪ್ ಅವರು ‘ಇಲ್ಲಿ ಹಸು ಯಾರು, ಕರು ಯಾರು’ ಎಂದು ಕೇಳಿದರು. ಈ ಮೂಲಕ ಅವರು ಮನೆಯವರ ಬಗ್ಗೆಯೇ ಚರ್ಚೆ ಮಾತನಾಡುತ್ತಾರೆ ಎಂದು ಪರೋಕ್ಷವಾಗಿ ಹೇಳಿದರು.

ಸುದೀಪ್ ಅವರು ಈ ಮಾತನ್ನು ಹೇಳುತ್ತಿದ್ದಂತೆ ತುಕಾಲಿ ಸಂತೋಷ್ ಅವರು ಚಿಂತೆಗೆ ಒಳಗಾದರು. ‘ಸರ್ ಈ ವಾರವೂ ನೆಮ್ಮದಿಯಿಂದ ಇರೋಕೆ ಬಿಡುತ್ತಿಲ್ಲವಲ್ಲ’ ಎಂದರು ಸಂತೋಷ್. ಇದನ್ನು ಕೇಳಿ ಸುದೀಪ್ ನಕ್ಕರು. ಸದ್ಯ ಕಲರ್ಸ್ ಕನ್ನಡದಲ್ಲಿ ಈ ಪ್ರೋಮೋ ವೈರಲ್ ಆಗುತ್ತಿದೆ.

ಇದನ್ನೂ ಓದಿ: ‘ಅತೀ ಸುರಕ್ಷಿತ ಮನೆ ಬಿಗ್ ಬಾಸ್’; ಸ್ಪರ್ಧಿಗಳಿಗೆ ಸುದೀಪ್ ಎಚ್ಚರಿಕೆ 

ಈ ಪ್ರೋಮೋದಲ್ಲಿ ಧನಂಜಯ್ ಕೂಡ ಕಾಣಿಸಿಕೊಂಡಿದ್ದಾರೆ. ಅವರು ಬಿಗ್ ಬಾಸ್ ವೇದಿಕೆ ಏರಿದ್ದಾರೆ. ಅವರ ನಿರ್ಮಾಣದ ‘ಟಗರು ಪಲ್ಯ’ ಶೀಘ್ರವೇ ರಿಲೀಸ್ ಆಗುತ್ತಿದೆ. ಈ ಸಿನಿಮಾದ ಪ್ರಚಾರದಲ್ಲಿ ಅವರು ಭಾಗಿ ಆಗುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ