‘ಅತೀ ಸುರಕ್ಷಿತ ಮನೆ ಬಿಗ್ ಬಾಸ್’; ಸ್ಪರ್ಧಿಗಳಿಗೆ ಸುದೀಪ್ ಎಚ್ಚರಿಕೆ

‘ಅತೀ ಸುರಕ್ಷಿತ ಮನೆ ಎಂದರೆ ಅದು ಬಿಗ್ ಬಾಸ್. ಇಲ್ಲಿ ಯಾರಿಗೂ ಏನೂ ಆಗುವುದಿಲ್ಲ’ ಎಂದರು ಸುದೀಪ್. ಈ ಮಾತನ್ನು ಮನೆಯವರು ಕೂಡ ಒಪ್ಪಿಕೊಂಡರು.

‘ಅತೀ ಸುರಕ್ಷಿತ ಮನೆ ಬಿಗ್ ಬಾಸ್’; ಸ್ಪರ್ಧಿಗಳಿಗೆ ಸುದೀಪ್ ಎಚ್ಚರಿಕೆ
ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on:Oct 22, 2023 | 12:26 PM

ಬಿಗ್ ಬಾಸ್ (Bigg Boss) ಮನೆಯಲ್ಲಿ ಈ ವಾರ ಹೆಚ್ಚು ಬಳಕೆ ಆದ ಶಬ್ದ ‘ಥ್ರೆಟ್​’. ವಿನಯ್ ಅವರಿಂದ ಥ್ರೆಟ್ ಆಗುತ್ತಿದೆ ಎಂದು ಸಂಗೀತಾ ಹೇಳುತ್ತಲೇ ಬಂದರು. ವಿನಯ್ ಜೋರಾಗಿ ಮಾತನಾಡಿದ್ದೇ ಇದಕ್ಕೆ ಕಾರಣ. ವೀಕೆಂಡ್​ನಲ್ಲಿ ಈ ವಿಚಾರ ಚರ್ಚೆಗೆ ಬಂದಿದೆ. ಸುದೀಪ್ ಅವರು ಮನೆ ಮಂದಿಗೆ ಬುದ್ಧಿವಾದ ಹೇಳಿದ್ದಾರೆ. ಈ ರೀತಿಯ ಪದ ಬಳಕೆ ಮಾಡುವ ಮೊದಲು ಎಚ್ಚರಿಕೆಯಿಂದ ಇರಿ ಎಂದು ಹೇಳಿದ್ದಾರೆ ಸುದೀಪ್.

ವಿನಯ್ ಅವರು ಜೋರು ಧ್ವನಿಯಲ್ಲಿ ಮಾತನಾಡಿದ್ದರು. ಇದರಿಂದ ಅಸಮಾಧಾನಗೊಂಡ ಸಂಗೀತಾ ಅವರು ನಮಗೆ ನಿಮ್ಮ ಮಾತುಗಳಿಂದ ಭಯ ಆಗುತ್ತಿದೆ ಎಂದರು. ನಾನು ಯಾರಿಗೂ ಥ್ರೆಟ್ ಮಾಡುತ್ತಿಲ್ಲ ಎಂದು ವಿನಯ್ ಹೇಳಿದರು. ಸಂಗೀತಾ ಅವರ ಮಾತಿನಿಂದ ಪ್ರಭಾವಿತರಾದ ತನಿಶಾ ಕೂಡ ಥ್ರೆಟ್ ಶಬ್ದ ಬಳಕೆ ಮಾಡಿದರು. ಈ ಬಗ್ಗೆ ಸುದೀಪ್ ಮಾತನಾಡಿದರು.

‘ಇಲ್ಲಿ ಯಾರಿಗೂ ಥ್ರೆಟ್ ಇಲ್ಲ. ಒಂದೊಮ್ಮೆ ಥ್ರೆಟ್ ಬಂತು ಎಂದರೆ ಅಂಥವರಿಗೆ ಡೋರ್ ಓಪನ್ ಆಗುತ್ತದೆ. ಅವರು ನೇರವಾಗಿ ಮನೆಯಿಂದ ಹೋಗುತ್ತಾರೆ. ಮಾತನಾಡುವ ಮೊದಲು ಎಚ್ಚರಿಕೆ ಇರಲಿ. ಅತೀ ಸುರಕ್ಷಿತ ಮನೆ ಎಂದರೆ ಅದು ಬಿಗ್ ಬಾಸ್. ಇಲ್ಲಿ ಯಾರಿಗೂ ಏನೂ ಆಗುವುದಿಲ್ಲ’ ಎಂದರು ಸುದೀಪ್. ಈ ಮಾತನ್ನು ಮನೆಯವರು ಕೂಡ ಒಪ್ಪಿಕೊಂಡರು.

ಇದನ್ನೂ ಓದಿ: ‘ಈ ಮನಸ್ಥಿತಿಯಿಂದಲೇ ಮಹಿಳೆಯರು ಬಿಗ್ ಬಾಸ್ ಗೆಲ್ತಿಲ್ಲ’; ನೇರವಾಗಿ ಕ್ಲಾಸ್ ತೆಗೆದುಕೊಂಡ ಸುದೀಪ್

‘ಬಿಗ್ ಬಾಸ್’ ರಿಯಾಲಿಟಿ ಶೋ ಹಲವು ದೇಶಗಳಲ್ಲಿ, ಹಲವು ಭಾಷೆಗಳಲ್ಲಿ ನಡೆಯುತ್ತಿದೆ. ಒಂದೊಂದು ದೇಶದಿಂದ ಒಂದು ಹೆಸರಿನಿಂದ ಶೋನ ಕರೆಯಲಾಗುತ್ತದೆ. ಇಲ್ಲಿ ಒಬ್ಬರ ಮೇಲೆ ಹಲ್ಲೆ ನಡೆದರೆ ಅಂಥವರನ್ನು ಮನೆಯಿಂದ ಹೊರಗೆ ಕಳುಹಿಸಲಾಗುತ್ತದೆ. ಈ ಕಾರಣಕ್ಕೆ ಸ್ಪರ್ಧಿಗಳು ಹೆಚ್ಚು ಸುರಕ್ಷಿತ ಎನಿಸಿಕೊಳ್ಳುತ್ತಾರೆ. ಈ ಮೊದಲು ಕೈ ಮಾಡಿ ದೊಡ್ಮನೆಯಿಂದ ಹೊರ ಹೋದ ಅನೇಕರಿದ್ದಾರೆ. ಕಲರ್ಸ್ ಕನ್ನಡದಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಆಗುತ್ತಿದೆ. ಜಿಯೋದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:37 am, Sun, 22 October 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್