ತಗ್ಗುತ್ತಲೇ ಇದೆ ‘ಲಿಯೋ’ ಸಿನಿಮಾ ಕಲೆಕ್ಷನ್; ಮೂರು ದಿನಕ್ಕೆ ಗಳಿಸಿದ್ದೆಷ್ಟು?
ಗುರುವಾರ (ಅಕ್ಟೋಬರ್ 19) ‘ಲಿಯೋ’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರ ಮೊದಲ ದಿನ ತಮಿಳುನಾಡಿನಲ್ಲಿ ಗಳಿಕೆ ಮಾಡಿದ್ದು 27 ಕೋಟಿ ರೂಪಾಯಿ. ಎರಡನೇ ದಿನ ಚಿತ್ರದ ಕಲೆಕ್ಷನ್ 15.95 ಕೋಟಿ ರೂಪಾಯಿ ಬಾಚಿಕೊಂಡಿದೆ. ಮೂರನೇ ದಿನ 13.32 ಕೋಟಿ ರೂಪಾಯಿ ಆಗಿದೆ.
ದಳಪತಿ ವಿಜಯ್ (Thalapathy Vijay) ನಟನೆಯ ‘ಲಿಯೋ’ ಸಿನಿಮಾಗೆ ಜನರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಈ ಸಿನಿಮಾ ಮೊದಲ ದಿನ ಭರ್ಜರಿ ಗಳಿಕೆ ಮಾಡಿತ್ತು. ಆದರೆ ಸಿನಿಮಾ ಉತ್ತಮವಾಗಿಲ್ಲ ಎನ್ನುವ ಅಭಿಪ್ರಾಯ ಕೆಲವರಿಂದ ವ್ಯಕ್ತವಾಯಿತು. ಈ ಕಾರಣಕ್ಕೋ ಏನೋ ಸಿನಿಮಾದ ಗಳಿಕೆ ತಗ್ಗುತ್ತಿದೆ. ಈ ಚಿತ್ರ ಮೂರು ದಿನಕ್ಕೆ ಎಷ್ಟು ಗಳಿಕೆ ಮಾಡಿದೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಇಲ್ಲಿದೆ ಮಾಹಿತಿ.
ಗುರುವಾರ (ಅಕ್ಟೋಬರ್ 19) ‘ಲಿಯೋ’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರ ಮೊದಲ ದಿನ ತಮಿಳುನಾಡಿನಲ್ಲಿ ಗಳಿಕೆ ಮಾಡಿದ್ದು 27 ಕೋಟಿ ರೂಪಾಯಿ. ಎರಡನೇ ದಿನ ಚಿತ್ರದ ಕಲೆಕ್ಷನ್ 15.95 ಕೋಟಿ ರೂಪಾಯಿ ಬಾಚಿಕೊಂಡಿದೆ. ಮೂರನೇ ದಿನ 13.32 ಕೋಟಿ ರೂಪಾಯಿ ಆಗಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 56.90 ಕೋಟಿ ರೂಪಾಯಿ ಆಗಿದೆ.
ವಿವಿಧ ರಾಜ್ಯಗಳಲ್ಲೂ ‘ಲಿಯೋ’ ಸಿನಿಮಾ ಕಲೆಕ್ಷನ್ ಮಾಡುತ್ತಿದೆ. ಹೀಗಾಗಿ, ಭಾರತದಲ್ಲಿ ಈ ಚಿತ್ರದ ಗಳಿಕೆ 140 ಕೋಟಿ ರೂಪಾಯಿ ದಾಟಿದೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಎಷ್ಟು ಕೋಟಿ ರೂಪಾಯಿ ಬಾಚಿಕೊಳ್ಳುತ್ತದೆ ಎನ್ನಲಾಗಿದೆ.
ಇದನ್ನೂ ಓದಿ: ರೇಟಿಂಗ್ ವಿಚಾರದಲ್ಲಿ ‘ಲಿಯೋ’, ‘ಭಗವಂತ್ ಕೇಸರಿ’ ಚಿತ್ರಗಳನ್ನು ಹಿಂದಿಕ್ಕಿದ ‘ಘೋಸ್ಟ್’
‘ಲಿಯೋ’ ಚಿತ್ರಕ್ಕೆ ಲೋಕೇಶ್ ಕನಗರಾಜ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಅನೇಕರಿಗೆ ಇದು ಲೋಕೇಶ್ ಕನಗರಾಜ್ ಅವರ ಸಿನಿಮಾ ಅಲ್ಲ ಎನ್ನುವ ಭಾವನೆ ಮೂಡಿದೆ. ಅರ್ಜುನ್ ಸರ್ಜಾ, ತ್ರಿಶಾ ಕೃಷ್ಣನ್, ಗೌತಮ್ ಮೆನನ್, ಪ್ರಿಯಾ ಆನಂದ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಲೋಕೇಶ್ ಕನಗರಾಜ್ ಯೂನಿವರ್ಸ್ ಅಡಿಯಲ್ಲಿ ಈ ಸಿನಿಮಾ ಮೂಡಿಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:35 am, Sun, 22 October 23