AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಈ ಮನಸ್ಥಿತಿಯಿಂದಲೇ ಮಹಿಳೆಯರು ಬಿಗ್ ಬಾಸ್ ಗೆಲ್ತಿಲ್ಲ’; ನೇರವಾಗಿ ಕ್ಲಾಸ್ ತೆಗೆದುಕೊಂಡ ಸುದೀಪ್

ಈ ವಾರ ಒಬ್ಬರು ಕ್ಯಾಪ್ಟನ್​ನ ಆಯ್ಕೆ ಮಾಡಬೇಕಿತ್ತು. ಈ ವೇಳೆ ಎಲ್ಲರೂ ಕೆಲವೇ ನಿಮಿಷಗಳಲ್ಲಿ ಕಾರ್ತಿಕ್ ಹಾಗೂ ವಿನಯ್ ಅವರನ್ನು ಆಯ್ಕೆ ಮಾಡಿದರು. ಈ ವಿಚಾರದಲ್ಲಿ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ.

‘ಈ ಮನಸ್ಥಿತಿಯಿಂದಲೇ ಮಹಿಳೆಯರು ಬಿಗ್ ಬಾಸ್ ಗೆಲ್ತಿಲ್ಲ’; ನೇರವಾಗಿ ಕ್ಲಾಸ್ ತೆಗೆದುಕೊಂಡ ಸುದೀಪ್
ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on:Oct 22, 2023 | 12:26 PM

ಕನ್ನಡ ಬಿಗ್ ಬಾಸ್ ಈಗಾಗಲೇ ಒಂಭತ್ತು ಸೀಸನ್​ಗಳನ್ನು ಪೂರ್ಣಗೊಳಿಸಿದೆ. ಈಗ 10ನೇ ಸೀಸನ್ ನಡೆಯುತ್ತಿದೆ. ಕಳೆದ ಒಂಭತ್ತು ವರ್ಷಗಳಲ್ಲಿ ಬಿಗ್ ಬಾಸ್​ನಲ್ಲಿ (Bigg Boss) ಗೆದ್ದಿದ್ದು ಕೇವಲ ಒಂದೇ ಒಂದು ಮಹಿಳೆ. ಅದು ಶ್ರುತಿ ಮಾತ್ರ. ಉಳಿದ ಎಲ್ಲಾ ವಿನ್ನರ್​ಗಳು ಪುರುಷರೇ. ಈ ವಿಚಾರ ಪ್ರತಿ ವರ್ಷ ಚರ್ಚೆಗೆ ಬರುತ್ತದೆ. ಮಹಿಳೆಯರು ಏಕೆ ವಿನ್ ಆಗೋಕೆ ಆಗಲ್ಲ ಎಂದು ಅನೇಕರು ಪ್ರಶ್ನೆ ಮಾಡುತ್ತಾರೆ. ಸುದೀಪ್ ಇದಕ್ಕೆ ಉತ್ತರ ಕಂಡು ಹಿಡಿದಿದ್ದಾರೆ. ಮನೆಯಲ್ಲಿರುವ ಮಹಿಳೆಯರು ನಡೆದುಕೊಂಡ ರೀತಿಯನ್ನು ಸುದೀಪ್ (Sudeep) ಖಂಡಿಸಿದ್ದಾರೆ.

ಈ ವಾರ ಒಬ್ಬರು ಕ್ಯಾಪ್ಟನ್​ನ ಆಯ್ಕೆ ಮಾಡಬೇಕಿತ್ತು. ಈ ವೇಳೆ ಎಲ್ಲರೂ ಕೆಲವೇ ನಿಮಿಷಗಳಲ್ಲಿ ಕಾರ್ತಿಕ್ ಹಾಗೂ ವಿನಯ್ ಅವರನ್ನು ಆಯ್ಕೆ ಮಾಡಿದರು. ಇದು ಸುದೀಪ್ ಕೋಪಕ್ಕೆ ಕಾರಣ ಆಗಿದೆ. ಯಾವುದೇ ಮಹಿಳಾ ಸ್ಪರ್ಧಿ ನಾನು ಕ್ಯಾಪ್ಟನ್ ಆಗುತ್ತೇನೆ ಎಂದು ಧ್ವನಿ ಎತ್ತಲೇ ಇಲ್ಲ. ಈ ವಿಚಾರದಲ್ಲಿ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಮಾಡೋಕೆ ಇಬ್ಬರ ಹೆಸರು ಬೇಕು ಎಂದರು ಸುದೀಪ್. ಆಗ ಎಲ್ಲರೂ ಸುಮಾರು ಐದು ನಿಮಿಷಗಳ ಕಾಲ ಚರ್ಚೆ ಮಾಡಿ ಇಬ್ಬರ ಹೆಸರನ್ನು ಆಯ್ಕೆ ಮಾಡಿದರು. ನಾಮಿನೇಷನ್ ವಿಚಾರ ಬಂದಾಗ ಐದು ನಿಮಿಷ ತೆಗೆದುಕೊಂಡವರು, ಕ್ಯಾಪ್ಟನ್ ಆಯ್ಕೆಯಲ್ಲಿ ಕೆಲವೇ ಸೆಕೆಂಡ್ ತೆಗೆದುಕೊಂಡಿದ್ದು ಏಕೆ ಎಂದು ಸುದೀಪ್ ಪ್ರಶ್ನೆ ಮಾಡಿದರು.

ಇದನ್ನೂ ಓದಿ: ಬಿಗ್​ಬಾಸ್ ಮನೆ ಮಂದಿಗೆ ತರಾಟೆ: ಹಿಂದೆಂದೂ ಬಳಸದ ಅಧಿಕಾರ ಬಳಸಿದ ಸುದೀಪ್

‘ನೀವೆಲ್ಲರೂ ಆಡೋಕೆ ಎಂದೇ ಬಿಗ್ ಬಾಸ್ ಮನೆಗೆ ಹೋಗಿದ್ದೀರಿ. ಹಾಗಿದ್ದರೂ ಬೇರೆಯವರಿಗೆ ಆಟವನ್ನು ಬಿಟ್ಟುಕೊಡೋದು ಏಕೆ? ಈ ರೀತಿಯ ನಡೆ ಸರಿ ಅಲ್ಲ. ಇಷ್ಟು ವರ್ಷದಲ್ಲಿ ಒಬ್ಬರೇ ಮಹಿಳಾ ಸ್ಪರ್ಧಿ ವಿನ್ ಆಗಿರೋದು. ಅದು ಶ್ರುತಿ ಅವರು. ನಿಮ್ಮ ಈ ಮನಸ್ಥಿತಿಯಿಂದಲೇ ಮಹಿಳೆಯರು ಬಿಗ್ ಬಾಸ್ ಗೆಲ್ಲುತ್ತಿಲ್ಲ’ ಎಂದು ಸುದೀಪ್ ಅವರು ಕ್ಲಾಸ್ ತೆಗೆದುಕೊಂಡರು. ಬಳಿಕ ಎಲ್ಲರೂ ತಪ್ಪನ್ನು ತಿದ್ದುಕೊಳ್ಳುವುದಾಗಿ ಹೇಳಿದ್ದಾರೆ. ಕಲರ್ಸ್ ಕನ್ನಡದಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಆಗುತ್ತಿದೆ. ಜಿಯೋದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:35 am, Sun, 22 October 23