ಆರು ಹೆತ್ತವಳಿಗೆ ಮೂರು ಹೆತ್ತವಳು ಹೇಳಿಕೊಟ್ಟಂಗಾಯ್ತು ಎಂದ ಡ್ರೋನ್ ಪ್ರತಾಪ್

ಡ್ರೋನ್ ಪ್ರತಾಪ್ ಅವರು ಆಗಾಗ ನಗೆಚಟಾಕಿ ಹಾರಿಸುತ್ತಿದ್ದಾರೆ. ಈಗ ದೊಡ್ಮನೆಯಲ್ಲಿ ಅವರು ಹೇಳಿರುವ ಗಾದೆ ಗಮನ ಸೆಳೆಯುತ್ತಿದೆ. ಈ ಗಾದೆ ಬಗ್ಗೆ ಡ್ರೋನ್ ಪ್ರತಾಪ್ ವಿವರಿಸಿದ್ದನ್ನು ಕೇಳಿ ನಮ್ರತಾ ಅವರು ಮನಪೂರ್ತಿಯಾಗಿ ನಕ್ಕಿದ್ದಾರೆ.

ಆರು ಹೆತ್ತವಳಿಗೆ ಮೂರು ಹೆತ್ತವಳು ಹೇಳಿಕೊಟ್ಟಂಗಾಯ್ತು ಎಂದ ಡ್ರೋನ್ ಪ್ರತಾಪ್
ಡ್ರೋನ್ ಪ್ರತಾಪ್
Follow us
ರಾಜೇಶ್ ದುಗ್ಗುಮನೆ
|

Updated on:Oct 18, 2023 | 8:13 AM

ಡ್ರೋನ್ ಪ್ರತಾಪ್ (Drone Prathap) ಅವರು ಮೊದಲ ವಾರ ಸಖತ್ ಡಲ್ ಆಗಿದ್ದರು. ಎರಡನೇ ವಾರದಲ್ಲಿ ಅವರು ಮೈಲೇಜ್ ಪಡೆದುಕೊಂಡಿದ್ದಾರೆ. ಮನೆಯ ಸದಸ್ಯರ ಜೊತೆ ಅವರು ಬೆರೆಯುವ ಪ್ರಯತ್ನ ಮಾಡುತ್ತಿದ್ದಾರೆ. ಡ್ರೋನ್ ಪ್ರತಾಪ್ ಅವರು ಆಗಾಗ ನಗೆಚಟಾಕಿ ಹಾರಿಸುತ್ತಿದ್ದಾರೆ. ಈಗ ದೊಡ್ಮನೆಯಲ್ಲಿ ಅವರು ಹೇಳಿರುವ ಗಾದೆ ಗಮನ ಸೆಳೆಯುತ್ತಿದೆ. ಈ ಗಾದೆ ಬಗ್ಗೆ ಡ್ರೋನ್ ಪ್ರತಾಪ್ ವಿವರಿಸಿದ್ದನ್ನು ಕೇಳಿ ನಮ್ರತಾ ಅವರು ಮನಪೂರ್ತಿಯಾಗಿ ನಕ್ಕಿದ್ದಾರೆ.

ಡ್ರೋನ್ ಪ್ರತಾಪ್ ಅವರನ್ನು ವರ್ತೂರ್ ಸಂತೋಷ್ ಹಾಗೂ ತುಕಾಲಿ ಸಂತೋಷ್ ಅವರು ಟೀಕೆ ಮಾಡಿದ್ದರು. ಟೀಕೆಯ ಸುರಿಮಳೆ ತಡೆಯಲು ಅವರು ಬಳಿ ಸಾಧ್ಯವಾಗಲೇ ಇಲ್ಲ. ವೀಕೆಂಡ್​ನಲ್ಲಿ ಈ ವಿಚಾರ ಚರ್ಚೆಗೆ ಬಂತು. ಸುದೀಪ್ ಅವರು ತುಕಾಲಿ ಸಂತೋಷ್​ಗೆ ಕ್ಲಾಸ್ ತೆಗೆದುಕೊಂಡರು. ಸುದೀಪ್ ಅವರು ತಮ್ಮ ಪರವಾಗಿ ನಿಂತಿದ್ದನ್ನು ಕೇಳಿ ಡ್ರೋನ್ ಪ್ರತಾಪ್ ಅವರು ಟ್ರ್ಯಾಕ್​ಗೆ ಮರಳಿದ್ದಾರೆ.

ಡ್ರೋನ್ ಪ್ರತಾಪ್, ನಮ್ರತಾ ಗೌಡ ಹಾಗೂ ಕಾರ್ತಿಕ್ ವಾಶ್​ರೂಂ ಬಳಿ ಇದ್ದರು. ನಮ್ರತಾ ಅವರು ವಾಶ್​ರೂಂನ ಕ್ಲೀನ್ ಮಾಡುತ್ತಿದ್ದರು. ಈ ವೇಳೆ ಕಾರ್ತಿಕ್ ಅವರು ‘ಏನಾದರೂ ಸಹಾಯ ಮಾಡಬೇಕೆ’ ಎಂದು ಕೇಳಿದರು. ಇದಕ್ಕೆ ‘ನೋ’ ಎನ್ನುವ ಉತ್ತರ ನಮ್ರತಾ ಕಡೆಯಿಂದ ಬಂತು. ಹೇಗೆ ಕ್ಲೀನ್ ಮಾಡಬೇಕು ಎನ್ನುವ ಬಗ್ಗೆ ನಮ್ರತಾಗೆ ಪಾಠ ಹೇಳಿಕೊಡಲು ಹೊರಟರು ಕಾರ್ತಿಕ್. ಆಗ ‘ಆರು ಹೆತ್ತವಳಿಗೆ ಮೂರು ಹೆತ್ತವಳು ಹೇಳಿಕೊಟ್ಟಂಗಾಯ್ತು’ ಎಂದರು ಪ್ರತಾಪ್. ಇದನ್ನು ಕೇಳಿ ಅಲ್ಲಿದ್ದವರು ನಕ್ಕರೂ.

ಇದನ್ನೂ ಓದಿ: ಹರಕೆ ಕುರಿಯಂತಾಗಿದ್ದ ಡ್ರೋನ್ ಪ್ರತಾಪ್ ಬೆಂಬಲಕ್ಕೆ ನಿಂತ ಸುದೀಪ್, ಕ್ಷಮೆ ಕೇಳಿದ ಸಂತೋಶ್

ಕಾರ್ತಿಕ್ ಅವರು ಈ ಗಾದೆಯ ವಿವರಣೆ ಕೇಳಿದರು. ಇದಕ್ಕೆ ಪ್ರತಾಪ್ ಉತ್ತರಿಸಿದ್ದಾರೆ. ‘ಒಬ್ಬಳು ಆರು ಮಗುವನ್ನು ಹೆತ್ತಿದ್ದಳಂತೆ. ಏಳನೇ ಮಗು ಡೆಲಿವರಿ ಆಗುವುದಿತ್ತಂತೆ. ಆಗ ಮೂರು ಹೆತ್ತವಳು ಮಗುವನ್ನು ಹಾಗೆ ಹೆರಬೇಕು, ಹೀಗೆ ಹೆರಬೇಕು ಎಂದೆಲ್ಲ ಹೇಳುತ್ತಿದ್ದಳಂತೆ. ನಿಮ್ಮ ಕಥೆಯೂ ಹಾಗೆಯೇ ಆಯ್ತು’ ಎಂದು ಪ್ರತಾಪ್ ವಿವರಣೆ ನೀಡಿದ್ದಾರೆ. ನಮ್ರತಾಗೆ ಕ್ಲೀನಿಂಗ್ ವಿಚಾರದಲ್ಲಿ ಸಾಕಷ್ಟು ಅನುಭವ ಇದೆ. ನಮ್ರತಾಗೆ ಗೊತ್ತಿದ್ದಷ್ಟು ಕಾರ್ತಿಕ್​ಗೆ ಗೊತ್ತಿಲ್ಲ ಎಂಬುದನ್ನು ವಿವರಿಸಲು ಈ ಗಾದೆ ಬಳಸಿದ್ದರು ಡ್ರೋನ್ ಪ್ರತಾಪ್. ದಿನದ 24 ಗಂಟೆಯೂ ‘ಜಿಯೋ ಸಿನಿಮಾ’ದಲ್ಲಿ ಈ ಕಾರ್ಯಕ್ರಮವನ್ನು ಉಚಿತವಾಗಿ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:34 am, Wed, 18 October 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ