ವರ್ತೂರು ಸಂತೋಷ್ ಧರಿಸಿದ್ದು ಹುಲಿ ಉಗುರು ಅನ್ನೋದು ಸಾಬೀತು, ಶೀಘ್ರವೇ ಕೋರ್ಟ್​ಗೆ ಹಾಜರು

ಬೆಂಗಳೂರಿನ ರಾಮೋಹಳ್ಳಿ ಅರಣ್ಯಾಧಿಕಾರಿಗಳಿಂದ ಈ  ಕಾರ್ಯಾಚರಣೆ ನಡೆದಿದೆ. ಸುಮೊಟೋ ಕೇಸ್ ದಾಖಲಿಸಿ ಕಾರ್ಯಾಚರಣೆ ಮಾಡಲಾಗಿತ್ತು. ಇನ್ನಷ್ಟು ಮಾಹಿತಿ ಪಡೆಯಲು ಸಂತೋಷ್ ಅವರನ್ನು ಕೋರ್ಟ್​​ಗೆ ಹಾಜರುಪಡಿಸಲಾಗುತ್ತಿದೆ.

ವರ್ತೂರು ಸಂತೋಷ್ ಧರಿಸಿದ್ದು ಹುಲಿ ಉಗುರು ಅನ್ನೋದು ಸಾಬೀತು, ಶೀಘ್ರವೇ ಕೋರ್ಟ್​ಗೆ ಹಾಜರು
ವರ್ತೂರು ಸಂತೋಷ್
Follow us
ರಾಜೇಶ್ ದುಗ್ಗುಮನೆ
| Updated By: Digi Tech Desk

Updated on:Oct 26, 2023 | 12:38 PM

ಬಿಗ್ ಬಾಸ್ ಮನೆಯಲ್ಲಿದ್ದ ವರ್ತೂರು ಸಂತೋಷ್ (Vartur Santosh) ಅವರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾನುವಾರ (ಅಕ್ಟೋಬರ್ 22) ಸಂಜೆ ಅವರನ್ನು ಅರಣ್ಯಾಧಿಕಾರಿಗಳು ಬಿಗ್ ಬಾಸ್ ಮನೆಯಲ್ಲೇ ಬಂಧಿಸಿದ್ದಾರೆ. ಅವರು ಕತ್ತಿಗೆ ಹಾಕಿದ್ದ ಚೈನ್​ನಲ್ಲಿ ಹುಲಿಯ ಉಗುರಿನ ಪೆಂಡೆಂಟ್ ಇತ್ತು. ಇದು ಚರ್ಚೆ ಹುಟ್ಟುಹಾಕಿತ್ತು. ಈಗ ಅವರನ್ನು ಬಂಧಿಸಿ, ಪರಿಶೀಲಿಸಿದಾಗ ಇದು ಹುಲಿ ಉಗುರು ಎಂಬುದು ಖಚಿತವಾಗಿದೆ. ಶೀಘ್ರವೇ ಅವರನ್ನು ಕೋರ್ಟ್​ಗೆ ಹಾಜರುಪಡಿಸಲಾಗುತ್ತಿದೆ.

ಈ ಬಗ್ಗೆ ಟಿವಿ9 ಕನ್ನಡಕ್ಕೆ ಉಪ ಅರಣ್ಯಾಧಿಕಾರಿ ರವೀಂದ್ರ ಹೇಳಿಕೆ ನೀಡಿದ್ದಾರೆ. ‘ವರ್ತೂರು ಸಂತೋಷ್ ಧರಿಸಿದ್ದು ಹುಲಿ ಉಗುರು ಎಂಬುದು ಖಚಿತವಾಗಿದೆ. ಜಿಲ್ಲಾಧಿಕಾರಿ ಕೊಟ್ಟ ಮಾಹಿತಿ ಮೇಲೆ ಅವರನ್ನು ಬಂಧಿಸಿದ್ದೇವೆ. ತಪಾಸಣೆ ಮಾಡಿದ ಮೇಲೆ ಅದು ಹುಲಿ ಉಗುರು ಎಂದು ಸಾಬೀತಾಗಿದೆ. ಬಿಗ್ ಬಾಸ್ ಮನೆಗೆ ಹೋಗಿ ಅವರನ್ನ ಬಂಧಿಸಿ ಕರೆತಂದಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನ ರಾಮೋಹಳ್ಳಿ ಅರಣ್ಯಾಧಿಕಾರಿಗಳಿಂದ ಈ  ಕಾರ್ಯಾಚರಣೆ ನಡೆದಿದೆ. ಸುಮೊಟೋ ಕೇಸ್ ದಾಖಲಿಸಿ ಕಾರ್ಯಾಚರಣೆ ಮಾಡಲಾಗಿತ್ತು. ಇನ್ನಷ್ಟು ಮಾಹಿತಿ ಪಡೆಯಲು ಸಂತೋಷ್ ಅವರನ್ನು ಕೋರ್ಟ್​​ಗೆ ಹಾಜರುಪಡಿಸಲಾಗುತ್ತಿದೆ. ವೈಲ್ಡ್ ಲೈಫ್ ಪ್ರೊಟೆಕ್ಷನ್ ಆ್ಯಕ್ಟ್ ಅಡಿಯಲ್ಲಿ ಈ ಬಂಧನ ನಡೆದಿದೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲೇ ವರ್ತೂರು ಸಂತೋಷ್​ ಅರೆಸ್ಟ್; ಮಾಡಿದ ಕ್ರೈಮ್ ಏನು?

ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಎರಡು ಎಲಿಮಿನೇಷನ್ ನಡೆದಿದೆ. ಈಗ ವರ್ತೂರು ಸಂತೋಷ್ ಅವರು ಕೂಡ ಎಲಿಮಿನೇಟ್ ಆಗಿದ್ದಾರೆ ಎಂದೇ ಪರಿಗಣಿಸಬಹುದು. ಅವರು ಮತ್ತೆ ಬಿಗ್ ಬಾಸ್​ ಮನೆಗೆ ಬರೋದು ಅನುಮಾನ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:52 am, Mon, 23 October 23

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು