‘ಕಾಂಪ್ರಮೈಸ್ ಆಗುವಂತೆ ಹೇಳಿದ್ದರು’; ಮಲ್ಲಿಕಾ ಶೆರಾವತ್ ಎದುರಿಸಿದ ಕಷ್ಟ ಒಂದೆರಡಲ್ಲ..
ಹೀರೋಗಳು ಮಲ್ಲಿಕಾ ಶೆರಾವತ್ ಹಿಂದೆ ಬಿದ್ದಿದ್ದರಂತೆ. ‘ತೆರೆಮೇಲೆ ಇಂಟಿಮೇಟ್ ದೃಶ್ಯ ಮಾಡೋಕೆ ರೆಡಿ ಇರುತ್ತೀರಿ. ತೆರೆ ಹಿಂದೆ ಅದೇ ರೀತಿ ಮಾಡೋಕೆ ಸಮಸ್ಯೆ ಏನು’ ಎಂದು ಕೆಲ ಹೀರೋಗಳು ಮಲ್ಲಿಕಾರನ್ನು ಪ್ರಶ್ನಿಸಿದ್ದರಂತೆ. ‘ನಾನು ಕಾಂಪ್ರಮೈಸ್ ಆಗಲು ಎಂದಿಗೂ ಒಪ್ಪಿಲ್ಲ. ಹಾಗಾಗಿ ನನಗೆ ಹಲವು ಆಫರ್ಗಳು ತಪ್ಪಿತು’ ಎಂದಿದ್ದರು ಮಲ್ಲಿಕಾ.
ಮಲ್ಲಿಕಾ ಶೆರಾವತ್ (Mallika Sherawat) ಅವರು ಬಾಲಿವುಡ್ನ ಬೇಡಿಕೆಯ ನಟಿ ಆಗಿದ್ದರು. ಆದರೆ, ಅವರು ಚಿತ್ರರಂಗವನ್ನು ತೊರೆದರು. ಇಂದು (ಅಕ್ಟೋಬರ್ 24) ಅವರ ಜನ್ಮದಿನ (Mallika Sherawat Birthday). ಈ ವಿಶೇಷ ದಿನದಂದು ಅವರ ಪಾತ್ರಗಳನ್ನು ನೆನಪಿಸಿಕೊಳ್ಳಲಾಗುತ್ತಿದೆ. ಈಗ ಅವರು ಬಣ್ಣದ ಲೋಕದ ಜೊತೆಗಿನ ನಂಟನ್ನು ಅವರು ಪೂರ್ತಿಯಾಗಿ ಕಡಿದುಕೊಂಡಿದ್ದಾರೆ. ಅವರು ಹಲವು ಸಂದರ್ಭದಲ್ಲಿ ತಮ್ಮ ನೋವನ್ನು ಹೇಳಿಕೊಂಡಿದ್ದುಂಟು. ಅವರು ನೀಡಿರುವ ಹೇಳಿಕೆಗಳು ಸಾಕಷ್ಟು ವಿವಾದ ಹುಟ್ಟುಹಾಕಿದ್ದವು. ಮಲ್ಲಿಕಾ ಶೆರಾವತ್ ಅವರು ನೀಡಿದ ಹೇಳಿಕೆಗಳ ಬಗ್ಗೆ ಇಲ್ಲಿದೆ ವಿವರ.
ದೀಪಿಕಾ ಜೊತೆ ಹೋಲಿಕೆ: ‘ಗೆಹರಾಯಿಯಾ’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಬೋಲ್ಡ್ ಆಗಿ ನಟಿಸಿದ್ದರು. ಈ ಬಗ್ಗೆ ಮಲ್ಲಿಕಾ ಮಾತನಾಡಿದ್ದರು. ‘ನಾನು ಇದನ್ನು 15 ವರ್ಷಗಳ ಹಿಂದೇ ಮಾಡಿದ್ದೆ. ಅಂದಿನವರ ಮನಸ್ಥಿತಿ ಒಪ್ಪಿಕೊಳ್ಳುವ ರೀತಿಯಲ್ಲಿ ಇರಲಿಲ್ಲ’ ಎಂದಿದ್ದರು. ಈ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಮಲ್ಲಿಕಾ ಹಲವು ಬೋಲ್ಡ್ ಪಾತ್ರಗಳನ್ನು ಮಾಡಿದ್ದಾರೆ.
ಮಾನಸಿಕ ಕಿರುಕುಳ: ಮಲ್ಲಿಕಾ ಶೆರಾವತ್ ಅವರಿಗೆ ಮಾನಸಿಕ ಕಿರುಕುಳ ಆಗಿತ್ತಂತೆ. ‘ಕೆಲವು ಮಾಧ್ಯಮಗಳು, ಇಂಡಸ್ಟ್ರಿಯವರು ನನಗೆ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ನನ್ನ ದೇಹ ಹಾಗೂ ಗ್ಲಾಮರ್ ಬಗ್ಗೆ ಜನರು ಮಾತನಾಡಿದರು. ನಟನೆಯ ಬಗ್ಗೆ ಯಾರೂ ಮಾತನಾಡಲಿಲ್ಲ’ ಎಂದು ಅವರು ಬೇಸರ ಹೊರಹಾಕಿದ್ದರು.
ಕಾಂಪ್ರಮೈಸ್ ಆಗೋಕೆ ಕರೆದಿದ್ದರು: ಚಿತ್ರರಂಗದಲ್ಲಿ ಮೊದಲಿನಿಂದಲೂ ಕಾಸ್ಟಿಂಗ್ ಕೌಚ್ ಇದೆ. ಮಲ್ಲಿಕಾ ಶರಾವತ್ ಮಾಡಿರುವ ಬೋಲ್ಡ್ ಪಾತ್ರ ನೋಡಿ ಅನೇಕರು ಅವರನ್ನು ಬೇರೆಯದೇ ದೃಷ್ಟಿಯಲ್ಲಿ ನೋಡುತ್ತಿದ್ದರು. ‘ನಾನು ಕಾಂಪ್ರಮೈಸ್ ಆಗಲು ಎಂದಿಗೂ ಒಪ್ಪಿಲ್ಲ. ಈ ಕಾರಣದಿಂದಲೇ ನನಗೆ ಹಲವು ಆಫರ್ಗಳು ತಪ್ಪಿತು’ ಎಂದಿದ್ದರು ಮಲ್ಲಿಕಾ.
ಇದನ್ನೂ ಓದಿ: ‘ಮಲ್ಲಿಕಾ ಶೆರಾವತ್ ಜತೆ ನಾನು ಆಟ ಆಡಬಹುದಾ?’: ಶಾರುಖ್ ಖಾನ್ ಹಳೇ ವಿಡಿಯೋ ವೈರಲ್
ಓಂ ಪುರಿ ಜೊತೆ ಬೋಲ್ಡ್ ಸೀನ್: ‘ಡರ್ಟಿ ಪಾಲಿಟಿಕ್ಸ್’ ಸಿನಿಮಾದಲ್ಲಿ ಓಂ ಪುರಿ ಹಾಗು ಮಲ್ಲಿಕಾ ಒಟ್ಟಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಮಲ್ಲಿಕಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಓಂ ಪುರಿ ಜೊತೆ ಬೋಲ್ಡ್ ಆಗಿ ಕಾಣಿಸಿಕೊಳ್ಳುವಾಗ ಅವರಿಗೆ ಮುಜುಗರ ಆಗಿತ್ತಂತೆ.
ಹೀರೋಗಳು ಹಿಂದೆ ಬಿದ್ದಿದ್ದರು: ಹೀರೋಗಳು ಮಲ್ಲಿಕಾ ಶರಾವತ್ ಹಿಂದೆ ಬಿದ್ದಿದ್ದರಂತೆ. ‘ತೆರೆಮೇಲೆ ಇಂಟಿಮೇಟ್ ದೃಶ್ಯ ಮಾಡೋಕೆ ರೆಡಿ ಇರುತ್ತೀರಿ. ಆದರೆ, ತೆರೆ ಹಿಂದೆ ಅದೇ ರೀತಿ ಮಾಡೋಕೆ ಸಮಸ್ಯೆ ಏನು’ ಎಂದು ಕೆಲ ಹೀರೋಗಳು ಮಲ್ಲಿಕಾರನ್ನು ಪ್ರಶ್ನಿಸಿದ್ದರಂತೆ.
ಲಾಸ್ ಏಂಜಲೀಸ್ಗೆ ಹೋಗಿದ್ದರ ಬಗ್ಗೆ: ಮಲ್ಲಿಕಾ ಅವರು ಲಾಸ್ ಏಂಜಲೀಸ್ನಲ್ಲಿ ಸೆಟಲ್ ಆಗಿದ್ದಾರೆ. ಇದಕ್ಕೆ ಕಾರಣ ನೀಡಿದ್ದರು. ‘ಅಮೆರಿಕದಲ್ಲಿ ಮಹಿಳೆಯರಿಗೆ ಸಾಕಷ್ಟು ಸ್ವಾಂತಂತ್ರ್ಯ ಇದೆ. ಭಾರತದಲ್ಲಿ ಮಹಿಳೆಯರಿಗೆ ಹಿಂಜರಿಕೆ ಜಾಸ್ತಿ’ ಎಂದು ಅವರು ಅಭಿಪ್ರಾಯಪಟ್ಟಿದ್ದರು.
ಇದನ್ನೂ ಓದಿ: ‘ಕೆಲವು ಹೆಂಗಸರ ಕಾಟ ತಾಳಲಾರದೆ ದೇಶ ಬಿಟ್ಟು ಹೋದೆ’: ಮಲ್ಲಿಕಾ ಶೆರಾವತ್ ತೆರೆದಿಟ್ಟ ಕಹಿ ಸತ್ಯ
ರಿಯಾ ಪರವಾಗಿ ಧ್ವನಿ ಎತ್ತಿದ್ದರು: 2020ರಲ್ಲಿ ಸುಶಾಂತ್ ಸಿಂಗ್ ರಜಪೂತ್ ನಿಧನದ ಬಳಿಕ ರಿಯಾ ಚರ್ಕವರ್ತಿ ಅವರನ್ನು ಬಂಧಿಸಲಾಯಿತು. ಅನೇಕರು ಅವರ ಮೇಲೆ ಗೂಬೆ ಕೂರಿಸಿದರು. ಸುಶಾಂತ್ ಗರ್ಲ್ಫ್ರೆಂಡ್ ಆಗಿದ್ದರು ಎನ್ನುವ ಕಾರಣಕ್ಕೆ ರಿಯಾ ಸಾಕಷ್ಟು ತೊಂದರೆ ಅನುಭವಿಸಿದರು. ಇದು ಸರಿ ಅಲ್ಲ ಎಂದು ಮಲ್ಲಿಕಾ ಅಭಿಪ್ರಾಯಪಟ್ಟಿದ್ದರು.
ಗ್ಯಾಂಗ್ ರೇಪ್ ಬಗ್ಗೆ: ‘ಈ ದೇಶದ ಮಹಿಳೆಯರು ಮತ್ತು ಮಕ್ಕಳಿಗೆ ಆಗುತ್ತಿರುವುದು ಸಂಪೂರ್ಣವಾಗಿ ನಾಚಿಕೆಗೇಡಿನ ಸಂಗತಿ ಎಂದು ನಾನು ಭಾವಿಸುತ್ತೇನೆ. ಗಾಂಧಿಯ ನೆಲವಾಗಿದ್ದು ಇದು ಗ್ಯಾಂಗ್ ರೇಪಿಸ್ಟ್‌ಗಳ ನಾಡಾಗಿದೆ’ ಎಂದು ಬೇಸರ ಹೊರಹಾಕಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.