AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shah Rukh Khan: ‘ಮಲ್ಲಿಕಾ ಶೆರಾವತ್​ ಜತೆ ನಾನು ಆಟ ಆಡಬಹುದಾ?’: ಶಾರುಖ್​ ಖಾನ್​ ಹಳೇ ವಿಡಿಯೋ ವೈರಲ್​

Koffee With Karan: ‘ಮಲ್ಲಿಕಾ ಶೆರಾವತ್​ ಮೇಲೆ ಆರ್ಯನ್​ ಖಾನ್​ಗೆ ಕ್ರಶ್​ ಆದರೆ ಆತನಿಗೆ ನಿಮ್ಮ ಸಲಹೆ ಏನು?’ ಎಂದು ಶಾರುಖ್​ ಖಾನ್​ಗೆ ಕರಣ್​ ಜೋಹರ್​ ಪ್ರಶ್ನೆ ಮಾಡುತ್ತಾರೆ. ಈ ವಿಡಿಯೋ ಈ ವೈರಲ್​ ಆಗಿದೆ.

Shah Rukh Khan: ‘ಮಲ್ಲಿಕಾ ಶೆರಾವತ್​ ಜತೆ ನಾನು ಆಟ ಆಡಬಹುದಾ?’: ಶಾರುಖ್​ ಖಾನ್​ ಹಳೇ ವಿಡಿಯೋ ವೈರಲ್​
ಮಲ್ಲಿಕಾ ಶೆರಾವತ್, ಶಾರುಖ್ ಖಾನ್
ಮದನ್​ ಕುಮಾರ್​
|

Updated on: May 18, 2023 | 11:54 AM

Share

ಕರಣ್​ ಜೋಹರ್​ ನಡೆಸಿಕೊಡುವ ‘ಕಾಫಿ ವಿತ್​ ಕರಣ್​’ (Koffee With Karan) ಶೋನಲ್ಲಿ ತುಂಬ ಬೋಲ್ಡ್​ ಆದಂತಹ ಪ್ರಶ್ನೆಗಳನ್ನು ಕೇಳಲಾಗುತ್ತದೆ. ವಿವಾದಗಳಿಂದಲೂ ಈ ಕಾರ್ಯಕ್ರಮ ಸುದ್ದಿ ಆಗಿದ್ದುಂಟು. ಇದರ ಹಳೇ ಎಪಿಸೋಡ್​ಗಳನ್ನು ಇಟ್ಟುಕೊಂಡು ಕೂಡ ಜನರು ಟ್ರೋಲ್​ ಮಾಡುತ್ತಾರೆ. ಈಗ ಶಾರುಖ್​ ಖಾನ್​ (Shah Rukh Khan) ಅವರ ಒಂದು ವಿಡಿಯೋ ವೈರಲ್​ ಆಗಿದೆ. ಈ ಹಿಂದೆ ಶಾರುಖ್​ ಖಾನ್​, ರಾಣಿ ಮುಖರ್ಜಿ ಮತ್ತು ಕಾಜೋಲ್​ ಅವರು ಜೊತೆಯಾಗಿ ‘ಕಾಫಿ ವಿತ್​ ಕರಣ್​’ ಶೋನಲ್ಲಿ ಭಾಗಿ ಆಗಿದ್ದರು. ಆಗ ಅವರಿಗೆ ಮಲ್ಲಿಕಾ ಶೆರಾವತ್ (Mallika Sherawat)​ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಶಾರುಖ್​ ಖಾನ್​ ನೀಡಿದ್ದ ಉತ್ತರ ಅಸಭ್ಯವಾಗಿದೆ ಎಂದು ಕೆಲವರು ಈಗ ತಕರಾರು ತೆಗೆದಿದ್ದಾರೆ. ಕೆಲವರು ಶಾರುಖ್​ ಪರವಾಗಿ ಕಮೆಂಟ್​ ಮಾಡುತ್ತಿದ್ದಾರೆ. ಇನ್ನೂ ಕೆಲವರು ನೇರವಾಗಿ ಕರಣ್​ ಜೋಹರ್​ ಅವರನ್ನು ದೂಷಿಸುತ್ತಿದ್ದಾರೆ.

ಏನಿದೆ ವೈರಲ್​ ವಿಡಿಯೋದಲ್ಲಿ?

‘ಒಂದು ವೇಳೆ ಮಲ್ಲಿಕಾ ಶೆರಾವತ್​ ಮೇಲೆ ಆರ್ಯನ್​ ಖಾನ್​ಗೆ ಕ್ರಶ್​ ಆದರೆ ಆತನಿಗೆ ನಿಮ್ಮ ಸಲಹೆ ಏನು?’ ಎಂದು ಶಾರುಖ್​ ಖಾನ್​ಗೆ ಕರಣ್​ ಜೋಹರ್​ ಪ್ರಶ್ನೆ ಮಾಡುತ್ತಾರೆ. ‘ಆಕೆ ಇನ್ನೂ ತುಂಬ ಚಿಕ್ಕವಳು. ಅವಳ ಜೊತೆ ಆರ್ಯನ್​ ಖಾನ್​ಗೆ ಕ್ರಶ್​ ಆದರೆ ಆಟ ಆಡುತ್ತಾನೆ. ನಾನೂ ಕೂಡ ಅವಳ ಜೊತೆ ಸ್ವಲ್ಪ ಹೊತ್ತು ಆಟ ಆಡಬಹುದಾ ಅಂತ ಕೇಳುತ್ತೇನೆ’ ಎಂದು ಶಾರುಖ್​ ಖಾನ್​ ಉತ್ತರಿಸಿದ್ದರು.

ಇದನ್ನೂ ಓದಿ
Image
Shah Rukh Khan Birthday: ಶಾರುಖ್​​ ಜನ್ಮದಿನ; 2023ರ ವರ್ಷ ಪೂರ್ತಿ ಆಗಲಿದೆ ಕಿಂಗ್​ ಖಾನ್ ಸಿನಿಮಾ ಉತ್ಸವ​​
Image
Shah Rukh Khan: ವಿರಾಟ್​ ಕೊಹ್ಲಿ ಪರಾಕ್ರಮದಿಂದ ಪಾಕ್​ಗೆ ಸೋಲು; ಶಾರುಖ್​ ಖಾನ್​ ಹೇಳಿದ್ದೇನು?
Image
Shah Rukh Khan: 20 ಲಕ್ಕಿ ಅಭಿಮಾನಿಗಳಿಗೆ ಸ್ಟಾರ್​ ಹೋಟೆಲ್​ನಲ್ಲಿ ರೂಂ ಬುಕ್​ ಮಾಡಿ ಭೇಟಿಯಾದ ಶಾರುಖ್​ ಖಾನ್​
Image
SRK: ತಮ್ಮದೇ ಶರ್ಟ್​ ಜತೆ ಮಾತನಾಡಿಕೊಂಡ ಶಾರುಖ್​; ಗಂಡನ ಪರಿಸ್ಥಿತಿ ಕಂಡು ಗೌರಿ ಖಾನ್​ ಗಲಿಬಿಲಿ
View this post on Instagram

A post shared by SRK ARMY (@srk__army_)

ಶಾರುಖ್​ ಖಾನ್​ ನೀಡಿದ ಈ ಉತ್ತರ ಕೇಳಿ ಕಾಜೋಲ್​ ಮತ್ತು ರಾಣಿ ಮುಖರ್ಜಿ ಅವರು ಬಿದ್ದಿ ಬಿದ್ದು ನಗುತ್ತಾರೆ. ‘ಇವರು ಕೆಟ್ಟ ಮನಸ್ಥಿತಿಯವರು’ ಎಂದು ಶಾರುಖ್​ ಖಾನ್​ ಹೇಳುತ್ತಾರೆ. ಈ ವಿಡಿಯೋ ಈಗ ವೈರಲ್​ ಆಗಿದೆ. ‘ಇದರಲ್ಲಿ ನಿಜಕ್ಕೂ ಕೆಟ್ಟ ಮನಸ್ಥಿತಿ ಇರುವುದು ಕರಣ್​ ಜೋಹರ್​ಗೆ. ಅವರು ಕೆಟ್ಟ ಪ್ರಶ್ನೆ ಕೇಳಿದ್ದಾರೆ’ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: ‘ಡಾನ್ 3’ ಚಿತ್ರದಿಂದ ಹೊರನಡೆದ ಶಾರುಖ್ ಖಾನ್; ಸಂಭಾವನೆ ವಿಚಾರದಲ್ಲಿ ಕಿರಿಕ್?

ಪ್ರಸ್ತುತ ‘ಡಂಕಿ’ ಮತ್ತು ‘ಜವಾನ್​’ ಚಿತ್ರದ ಕೆಲಸಗಳಲ್ಲಿ ಶಾರುಖ್ ಖಾನ್​ ಬ್ಯುಸಿ ಆಗಿದ್ದಾರೆ. ‘ಜವಾನ್’​ ಸಿನಿಮಾ ಸೆಪ್ಟೆಂಬರ್​ 7ರಂದು ಬಿಡುಗಡೆ ಆಗಲಿದೆ. ಈ ಚಿತ್ರಕ್ಕೆ ಕಾಲಿವುಡ್​ನ ಖ್ಯಾತ ನಿರ್ದೇಶಕ ಅಟ್ಲಿ ಕುಮಾರ್​ ನಿರ್ದೇಶನ ಮಾಡುತ್ತಿದ್ದಾರೆ. ರಾಜ್​ಕುಮಾರ್​ ಹಿರಾನಿ ಅವರ ನಿರ್ದೇಶನದಲ್ಲಿ ‘ಡಂಕಿ’ ಸಿನಿಮಾ ಮೂಡಿಬರುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್