Kangana Ranaut: ದೆಹಲಿಯಲ್ಲಿ ಮೊದಲ ಬಾರಿ ಮಹಿಳೆಯಿಂದ ರಾವಣ ದಹನ; ಇತಿಹಾಸ ಬರೆಯಲಿರುವ ಕಂಗನಾ ರಣಾವತ್
Ravan Dahan: ಕಳೆದ 50 ವರ್ಷಗಳಿಂದ ಪುರುಷರಿಂದಲೇ ರಾವಣ ದಹನ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಕಂಗನಾ ರಣಾವತ್ ಈ ಕೆಲಸ ಮಾಡಲಿದ್ದಾರೆ. ಕೆಂಪು ಕೋಟೆಯಲ್ಲಿ ನಡೆಯುವ ‘ಲವಕುಶ ರಾಮ್ಲೀಲಾ’ದಲ್ಲಿ ರಾವಣ ದಹನ ಮಾಡಿದ ಮೊದಲ ಮಹಿಳೆ ಎಂಬ ಖ್ಯಾತಿಗೆ ಅವರು ಪಾತ್ರರಾಗುತ್ತಿದ್ದಾರೆ. ಆ ಮೂಲಕ ಹೊಸ ಇತಿಹಾಸ ನಿರ್ಮಾಣ ಆಗಲಿದೆ.
ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಅವರು ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಈಗ ಅವರು ರಿಯಲ್ ಲೈಫ್ನಲ್ಲಿ ಇತಿಹಾಸ ಬರೆಯಲು ಸಜ್ಜಾಗಿದ್ದಾರೆ. ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯುವ ಲವಕುಶ ರಾಮ್ಲೀಲಾ (Lav Kush Ramleela) ಸಮಾರಂಭದಲ್ಲಿ ಅವರು ರಾವಣ ದಹನ ಮಾಡಲಿದ್ದಾರೆ. 50 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯಿಂದ ರಾವಣ ದಹನ (Ravan Dahan) ಆಗುತ್ತಿದೆ. ಆ ಮೂಲಕ ಕಂಗನಾ ರಣಾವತ್ ಅವರು ದಾಖಲೆ ಬರೆಯಲಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮಂಗಳವಾರ (ಅಕ್ಟೋಬರ್ 24) ಈ ಸಮಾರಂಭ ನಡೆಯಲಿದೆ.
ಕಳೆದ 50 ವರ್ಷಗಳಿಂದ ಪುರುಷರಿಂದಲೇ ರಾವಣ ದಹನ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಕಂಗನಾ ರಣಾವತ್ ಅವರು ಈ ಕೆಲಸ ಮಾಡಲಿದ್ದಾರೆ. ಕೆಂಪು ಕೋಟೆಯಲ್ಲಿ ನಡೆಯುವ ‘ಲವಕುಶ ರಾಮ್ಲೀಲಾ’ದಲ್ಲಿ ರಾವಣ ದಹನ ಮಾಡಿದ ಮೊದಲ ಮಹಿಳೆ ಎಂಬ ಖ್ಯಾತಿಗೆ ಕಂಗನಾ ಪಾತ್ರರಾಗುತ್ತಿದ್ದಾರೆ. ಕಳೆದ ವರ್ಷ ಪ್ರಭಾಸ್ ಅವರು ರಾವಣ ದಹನ ಮಾಡಿದ್ದರು. ಅದಕ್ಕೂ ಹಿಂದಿನ ವರ್ಷಗಳಲ್ಲಿ ನರೇಂದ್ರ ಮೋದಿ, ರಾಮತಾಥ್ ಕೋವಿಂದ್, ಅಜಯ್ ದೇವಗನ್, ಜಾನ್ ಅಬ್ರಾಹಂ ಮುಂತಾದವರು ಇದರಲ್ಲಿ ಭಾಗಿ ಆಗಿದ್ದರು.
View this post on Instagram
ಕಂಗನಾ ಅವರು ರಾವಣ ದಹನ ಮಾಡಲಿರುವ ಬಗ್ಗೆ ‘ಲವಕುಶ ರಾಮ್ಲೀಲಾ ಕಮಿಟಿ’ ಅಧ್ಯಕ್ಷ ಅರ್ಜುನ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ‘ಮಹಿಳೆಯರಿಗೆ ಸಮಾನ ಹಕ್ಕು ಸಿಗಬೇಕು ಎಂದು ನಮ್ಮ ಕಮಿಟಿ ಬಯಸುತ್ತದೆ. ಎಲ್ಲ ಕ್ಷೇತ್ರದಲ್ಲೂ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗುತ್ತಿದೆ. ಇನ್ನೂ ಸುಧಾರಣೆ ಆಗುವುದು ಬಾಕಿ ಇದೆ. ಮಹಿಳಾ ಮೀಸಲಾತಿ ಮಸೂದೆಯು ನಮ್ಮ ದೇಶ ಮತ್ತು ಸಮಾಜದ ಅಭಿವೃದ್ಧಿಗೆ ಸಹಕಾರಿ ಆಗಲಿದೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸಲ್ಮಾನ್ ಖಾನ್ಗೆ ಹೆದರಿದ್ರಾ ಕಂಗನಾ? ‘ಎಮರ್ಜೆನ್ಸಿ’ ಸಿನಿಮಾ ರಿಲೀಸ್ ದಿನಾಂಕ ಮುಂದಕ್ಕೆ
ಕಂಗನಾ ರಣಾವತ್ ನಟನೆಯ ‘ತೇಜಸ್’ ಸಿನಿಮಾ ಕೂಡ ಇದೇ ವಾರ ಬಿಡುಗಡೆ ಆಗುತ್ತಿದೆ. ಈ ಶುಕ್ರವಾರ (ಅ.27) ತೆರೆಕಾಣಲಿರುವ ಈ ಸಿನಿಮಾದ ಪ್ರಚಾರ ಕಾರ್ಯದಲ್ಲೂ ಕಂಗನಾ ಬ್ಯುಸಿ ಆಗಿದ್ದಾರೆ. ‘ನಮಸ್ಕಾರ ಗೆಳೆಯರೇ.. ಅಕ್ಟೋಬರ್ 24ರಂದು ರಾವಣ ದಹನ ಮಾಡಲು, ಕೆಟ್ಟದ್ದರ ಮೇಲೆ ಒಳ್ಳೆಯದರ ಗೆಲುವನ್ನು ಸ್ಥಾಪಿಸಲು ಬರುತ್ತಿದ್ದೇನೆ. ಇದರಲ್ಲಿ ನೀವೂ ಕೂಡ ಭಾಗಿಯಾಗಿ. ಹಾಗೆಯೇ, ಅಕ್ಟೋಬರ್ 27ರಂದು ನನ್ನ ‘ತೇಜಸ್’ ಸಿನಿಮಾ ರಿಲೀಸ್ ಆಗಲಿದೆ. ಆ ಸಿನಿಮಾದಲ್ಲಿ ಭಾರತೀಯ ವಾಯುಸೇನೆಯ ಕಥೆ ಇದೆ. ಅದನ್ನು ನೋಡಲು ಮರೆಯದಿರಿ. ಜೈ ಶ್ರೀರಾಮ್’ ಎಂದು ಕಂಗನಾ ರಣಾವತ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.